Śrīraṅgapaṭṭaṇa

Transcription
Transliteration
Translation
ಜಗತ್ತಿನ ಹಳೆಯ ಭೂಭಾಗಗಳಲ್ಲಿ ದಕ್ಷಿಣ ಭಾರತವೂ ಒಂದುjagattina haḷeya bhūbhāgagaḷalli dakṣiṇa bhāratavū onduSouth India is one of the oldest terrains of the world ಅದರಲ್ಲಿ ಮೈಸೂರಿನ ಪ್ರದೇಶ ತೀರಾ ಹಳೇದು ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಅಂತ ಒಂದು ಇದೆadaralli maisūrina pradēśa tīrā haḷēdu maisūrinalli cāmuṇḍi beṭṭa anta ondu ideMysore region is still older.There is one Chamundi hill there ಅದರ ಆಯಸ್ಸು ಎಷ್ಟು ಅಂತ ಕೇಳಿದಾಗ ಭೂಗರ್ಭಶಾಸ್ತ್ರದಲ್ಲಿ ಪರಿಣಿತರಾದವರು ಹೇಳ್ತಾರೆadara āyassu eṣṭu anta kēḷidāga bhūgarbhaśāstradalli pariṇitarādavaru hēḷtāreis aged about 760 million years as per the geologists. 76000 ಕೋಟಿ ವರ್ಷ ಅಂತ ಅದಕ್ಕಿಂತ ಹಳೇದು ನಮ್ಮ ಕರಿಘಟ್ಟ76000 kōṭi varṣa anta adakkinta haḷēdu namma karighaṭṭaKarighatta hills are much older than Chamundi hills. ಚಾಮುಂಡಿ ಬೆಟ್ಟ ಮತ್ತು ಕರಿಘಟ್ಟ ಇವರೆಲ್ಲ ಹಿಮಾಲಾಯ ಪರ್ವತದ ತಾತ ಮುತ್ತಾತರಿಂದರುcāmuṇḍi beṭṭa mattu karighaṭṭa ivarella himālāya parvatada tāta muttātarindaruThese hills are like grandparents to Himalayas. ಅಂತಹ ಹಳಮೆ ಇರೊ ಪ್ರದೇಶ ಇದುantaha haḷame iro pradēśa iduIt is such an ancient terrain. ನಾವು ಈಗ ನಿಂತಿರೋದು ಶ್ರಿರಂಗ ಪಟ್ಟಣ Island ನಲ್ಲಿnāvu īga nintirōdu śriraṅga paṭṭaṇa Island nalliNow, we are standing on Sri Rangapatna Island. ಇದು ಕಾವೇರಿಯಿಂದ ಆವರಿಸಲ್ಪಟ್ಟಿದೆ.idu kāvēriyinda āvarisalpaṭṭide.It is enclosed by cauvery from all sides ಮೂರುವರೆ ಮೈಲಿ ಉದ್ದ ಎರಡೂವರೆ ಮೈಲಿ ಅಗಲ ಇದೆ ಈ ಪ್ರದೇಶmūruvare maili udda eraḍūvare maili agala ide ī pradēśaThis area is Three and a half miles length and two and a half mile width. ಇದರಲ್ಲಿ ಅತ್ಯಂತ ಹಳೆಯ ಸ್ಮಾರಕ ರಂಗನಾಥ ಸ್ವಾಮಿಯ ದೇವಸ್ಥಾನidaralli atyanta haḷeya smāraka raṅganātha svāmiya dēvasthānaSri Ranganatha Swamy temple is the oldest archaeological monument in this area. ಇಲ್ಲಿ ಅನೇಕ ಜನ ರಾಜರು ಆಳಿದ್ದಾರೆilli anēka jana rājaru āḷiddāreMany kings have ruled from here ಗಂಗರು, ಹೋಯ್ಸಳರು ಮುಂತಾದವರೆಲ್ಲಾ ಆಳಿದ್ದಾರೆgaṅgaru, hōysaḷaru muntādavarellā āḷiddāreincluding Gangas and Hoysalas. ಈಗ ಇರುವ ಆ ದೇವಸ್ಥಾನ 1200 ವರ್ಷದಷ್ಟು ಹಳೇದುīga iruva ā dēvasthāna 1200 varṣadaṣṭu haḷēduThe present temple is nearly 1200 years old ಅದಕ್ಕೆ ಮೇಲುಕೋಟೆ ಶಾಸನದಲ್ಲಿ ನಿಮಿಗೆ ಉಲೇಖ ಸಿಗುತ್ತದೆ.adakke mēlukōṭe śāsanadalli nimige ulēkha siguttade.It finds a mention in Melukote lithograph. ಆ ದೇವಸ್ಥಾನ ಬಿಟ್ಟರೆ ಹೋಯ್ಸಳರ ಕಾಲದ, ಗಂಗರ ಕಾಲದ ಅನೇಕ ದೇವಸ್ಥಾನಗಳು ಇಲ್ಲಿ ಇವೆā dēvasthāna biṭṭare hōysaḷara kālada, gaṅgara kālada anēka dēvasthānagaḷu illi iveBesides this temple, we find many temples of Hoysala and Ganga periods ಜೈನರ ಕಾಲದ ದೇವಸ್ಥಾನನೂ ಇದೆ.jainara kālada dēvasthānanū ide.Jain period temples are also there. 1800 ರ ಒಂದು Church ಇದೆ.1800 ra ondu Church ide.There is a Church built in 18th century ಅಲ್ಲದೇ ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಎಲ್ಲಾ ಧರ್ಮದ ಸ್ಮಾರಕಗಳು ಈ ಪ್ರಧೇಶದಲ್ಲಿ ಇರೋದನ್ನ ನಾವು ನೋಡಬಹುದು.alladē musliṁ, hindū, kriściyan ellā dharmada smārakagaḷu ī pradhēśadalli irōdanna nāvu nōḍabahudu.We can also see monuments of Muslim, Christian and Hindus religion ಇದು ಇದರ ಹಳಮೆಯ ವಿಚಾರidu idara haḷameya vicāraThis is about its antiquity. ಮತ್ತೆ ಕಾವೇರಿಯಿಂದ ಸುತಲ್ಪಟ್ಟಿರುವುದರಿಂದ ಇದನ್ನ ಪವಿತ್ರವಾದ ಪ್ರದೇಶ ಅಂತ ಪ್ರಪಂಚದ ಬೇರೆ ಬೇರೆ ಭಾಗದಿಂದ ಇಲ್ಲಿಗೆ ಭಕ್ತರು ಬರ್ತಾರೆ.matte kāvēriyinda sutalpaṭṭiruvudarinda idanna pavitravāda pradēśa anta prapañcada bēre bēre bhāgadinda illige bhaktaru bartāre.Since it is covered by river Cauvery it is considered as holy place and devotees from different parts of the world come here. ಅದಲ್ಲದೇ, ಒಡೆಯ ಎನ್ನುವ ಮಾತಿಗೆ ಒಡೆಯ ಎನ್ನುವುದು ರಾಜ ಅಲ್ಲ ಅವನು, ಒಬ್ಬ ಅಧಿಕಾರಿadalladē, oḍeya ennuva mātige oḍeya ennuvudu rāja alla avanu, obba adhikāriThe word ‘Odeya’ doesnot indicate, ‘king’, It means an officer. ಒಡೆಯರ್ ಅನ್ನುವುದು ಅದಕ್ಕೆ ಗೌರವ ಕೊಡೊದಕ್ಕಾಗಿ ಒಡೆಯರ್ ಅನ್ನುವ ಪದವನ್ನ ಬಳಸಿದ್ದಾರೆoḍeyar annuvudu adakke gaurava koḍodakkāgi oḍeyar annuva padavanna baḷasiddāreIt has become ‘Odeyar’ now to show respect. ಹಿಂದೆ ಇದು ವಿಜಯನಗರ ಸಾಮ್ರಜ್ಯಕ್ಕೆ ಸೇರಿತ್ತುhinde idu vijayanagara sāmrajyakke sērittuPreviously, it belonged to Vijayanagara Kingdom. ಅಲ್ಲಿಯು ಒಬ್ಬ ಅಧಿಕಾರಿ ಲಾರ್ಡ್ ..... ಕೊನೆಯ ಘಟ್ಟದ ಅಧಿಕಾರಿಯನ್ನ ಒಡೆಯ ಅಂತಿದ್ದರು.alliyu obba adhikāri lārḍ ..... koneya ghaṭṭada adhikāriyanna oḍeya antiddaru.A British officer used to call cheer of Sri Rangapatna as ‘odeya’. ಅವನಿಗೆ ಸೆರಿರ್ತಿದ್ದು 33 ಹಳ್ಳಿಗಳು ಅಥವಾ ಊರುಗಳು ಮಾತ್ರavanige serirtiddu 33 haḷḷigaḷu athavā ūrugaḷu mātraHe would take care of only 33 villages or towns ಅಷ್ಟಕ್ಕೆ ಅವನು ಮೇಲಧಿಕಾರಿ ಆಗಿರುತಿದ್ದaṣṭakke avanu mēladhikāri āgirutiddaHe oversee those places ಅದನ್ನು ವಹಿಸಿಕೊಂಡು 80000 ಮೈಲಿಗೆ ವಿಸ್ತರಿಸಿದವರು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್adannu vahisikoṇḍu 80000 mailige vistarisidavaru haidarāli mattu ṭippu sultānHyderali and Tippu Sultan took over this area and extended it to 80,000 villages. ಅವರು ಶ್ರೀರಂಗ ಪಟ್ಟಣದ ಕೀರ್ತಿಯನ್ನ ಎಲ್ಲಾ ಕಡೆಗೆ ಹಬ್ಬುವಂತೆ ಮಾಡಿದರುavaru śrīraṅga paṭṭaṇada kīrtiyanna ellā kaḍege habbuvante māḍidaruThus they spread the Sri Rangapatna Kingdom everywhere. ಆ ರೀತಿಯಲ್ಲಿ ಇದಕ್ಕೆ ಐತಿಹಾಸಿಕ ಪ್ರಾಮುಕ್ಯತೆಯೂ ಇದೆ.ā rītiyalli idakke aitihāsika prāmukyateyū ide.This is how this place got historical importance ಆದರೆ 1610 ರಲ್ಲೇ ರಾಜ ಒಡೆಯರ್ ಎನ್ನುವವರುādare 1610 rallē rāja oḍeyar ennuvavaru ವಿಜಯ ನಗರ ಸಾಮ್ರಜ್ಯದ ಜೊತೆಯಲ್ಲಿ ಸಂಬಂದವನ್ನ ಕಡಿದುಕೊಂಡು ಸ್ವತಂತ್ರ್ಯವನ್ನ ಘೋಷಿಸಿಕೊಂಡರುvijaya nagara sāmrajyada joteyalli sambandavanna kaḍidukoṇḍu svatantryavanna ghōṣisikoṇḍaruBut, around 1610 A.D. Raja odeyar discontinued his relationship with Vijayanagar empire and declared Independence. ಅದಾದ ಮೇಲೆ ಇಲ್ಲಿ ಕೋಟೆ ಕೊತ್ತಲುಗಳನ್ನು ನಿರ್ಮಿಸುವ ಅವಕಾಶ ಬಂತುadāda mēle illi kōṭe kottalugaḷannu nirmisuva avakāśa bantuLater, forts and palaces were built in this area. ಟಿಪ್ಪು ಸುಲ್ತಾನ್ ಇಲ್ಲಿ ಕೋಟೆ ಕಟ್ಟಲಿಲ್ಲ ತಪ್ಪು ಕಲ್ಪನೆ ಅದು.ṭippu sultān illi kōṭe kaṭṭalilla tappu kalpane adu.Tippu Sultan did not construct and fort here. It is a wrong notion. ಮೋದಲನೇ ಸುತ್ತಿನ ಕೋಟೆಯನ್ನ ಒಬ್ಬ ರಾಜ ಕಟ್ಟುತ್ತಾನೆmōdalanē suttina kōṭeyanna obba rāja kaṭṭuttāneThe first layer of the fort was built by a king ಎರಡನೆಯದನ್ನ ಒಬ್ಬ ರಾಜ ಕಟ್ಟುತ್ತಾನೆ ಮೂರನೆಯದನ್ನೂ ಒಬ್ಬ ರಾಜ ಕಟ್ಟುತ್ತಾನೆeraḍaneyadanna obba rāja kaṭṭuttāne mūraneyadannū obba rāja kaṭṭuttāneand the second and third layers were constructed by subsequent kings ಆದರೆ ಇಷ್ಟು Strong ಆಗಿ ಇರಲಿಲ್ಲ,ādare iṣṭu Strong āgi iralilla,But, it was not that strong. ಅದಕ್ಕೆ ಕಲ್ಲುಗಳನ್ನು ಕಟ್ಟಿಸಿದವನು ಎತ್ತರವಾದ ಬಾಗಿಲಗಳನ್ನ ಮಾಡಿಸಿದವನು ಆನೆ ಬಾಗಿಲುಗಳು ಆನೆ........adakke kallugaḷannu kaṭṭisidavanu ettaravāda bāgilagaḷanna māḍisidavanu āne bāgilugaḷu āne........The height was increased and elephant doors were placed by another king ನಮ್ಮ ಒಬ್ಬ ಪಾಶ್ಚಾತ್ಯ ಹೇಳುವ ಹಾಗೆ ಭಾರತೀಯರ ದೌರ್ಬಲ್ಯ ಏನು ಅಂತ ಹೇಳಿದರೆnamma obba pāścātya hēḷuva hāge bhāratīyara daurbalya ēnu anta hēḷidareAs stated by a westerner, the weakness of Indians is ಅವರು ಆನೆ ಮೇಲೆ ಅಂಬಾರಿಯಲ್ಲಿ ಕುಳಿತು ಕೋಟೆ ಬಾಗಿಲಲ್ಲಿ ಹಾಯ್‍ಕೊಂಡು ಹೊರಟು ಹೋಗಬೇಕುavaru āne mēle ambāriyalli kuḷitu kōṭe bāgilalli hāy‍koṇḍu horaṭu hōgabēkuthat they should pass through fort entrance door while seated in Ambari placed on elephant. ಅಲ್ಲಿ ಇಳಿದು ಬಿಟ್ಟರೆ ಅವಮಾನ ಅದುalli iḷidu biṭṭare avamāna aduIf he had to get down there, it was considered as an insult. ಹೀಗಾಗಿ ಎತ್ತರವಾದ ಕೋಟೆಗಳನ್ನ, ಕೋಟೆ ಬಾಗಿಲುಗಳನ್ನ ಕಟ್ಟುಸ್ತಾರೆhīgāgi ettaravāda kōṭegaḷanna, kōṭe bāgilugaḷanna kaṭṭustāreThat’s why tall forts and entrance doors were constructed. ಅದು ಒಂದು ರೀತಿ ರಾಜ್ಯ ಹೋಗೊದಕ್ಕೂ ಕಾರಣ ಆಯ್ತುadu ondu rīti rājya hōgodakkū kāraṇa āytuIt was, in a way responsible for losing the kingdom. ಅನೇಕ ನಮ್ಮ ದೇಶದ ಸಾಮ್ರಜ್ಯಗಳು ಮುಳುಗೊದಕ್ಕೆ ಕಾರಣanēka namma dēśada sāmrajyagaḷu muḷugodakke kāraṇaThat was also the reason for the fall of many empires of our country. ಈ ಎತ್ತರವಾದ ಕೋಟೆಗಳ Control ಮಾಡೋಕೆ ಆಗಲ್ಲī ettaravāda kōṭegaḷa Control māḍōke āgallaIt is not possible to control these tall forts. ದೊಡ್ಡ ದೊಡ್ಡ ಬಾಗಿಲು ಬೇಕು 16 18 ಜನ ಸೇರ್ಕೊಂಡು ಆ ಚಕ್ರ ತಿರಗಿಸಬೇಕು ಬಾಗಿಲನ್ನ ಬಿಡಬೇಕು ಎತ್ತಬೇಕುdoḍḍa doḍḍa bāgilu bēku 16 18 jana sērkoṇḍu ā cakra tiragisabēku bāgilanna biḍabēku ettabēkuTall doors had to be moved by rotating the wheel by 16 to 18 people. ಶ್ರಿರಂಗಪಟ್ಟಣದಲ್ಲೂ ಅದೇ Problem ಬಂದು ಆ ಶ್ರೀರಂಗ ಪಟ್ಟಣ ಹೋಗಿದ್ದುśriraṅgapaṭṭaṇadallū adē Problem bandu ā śrīraṅga paṭṭaṇa hōgidduSame problem was there in Sri Rangapatna and that’s why it fell. ಇಂಥ ಅನೇಕ ಐತಿಹಾಸಿಕ ಘಟನೆಗಳು ಇದೆ.intha anēka aitihāsika ghaṭanegaḷu ide.There are many such historical events. ಜೊತೆಗೆ ನಮ್ಮಲ್ಲಿ ಬೇಕಾದಷ್ಟು ಮೂಡನಂಬಿಕೆ ಇದೆ.jotege nammalli bēkādaṣṭu mūḍanambike ide.Added to that we have many superstitions. ಶ್ರೀರಂಗ ಪಟ್ಟಣಕ್ಕೆ ಸುತ್ತ ಬ್ರಿಟಿಷರು ಬಂದು ಮುತ್ತಿಗೆ ಹಾಕಿ ಸುಮಾರು 15 20 ದಿವಸ ಇಲ್ಲಿ ಇದ್ದರುśrīraṅga paṭṭaṇakke sutta briṭiṣaru bandu muttige hāki sumāru 15 20 divasa illi iddaruBritishers surrounded the fort to attack it and camped for 15-20 days ಯಾವ ದಿವಸ ಇಲ್ಲಿ Attack ಮಾಡಬೇಕು ಅನೊದನ್ನ ಅನೇಕ ಸಾರಿ ಜನರಲ್ ಜೊತೆ ಅವನು ವೆಲೆಸ್ಲಿ Governor general ಆಗಿದ್ದವನು ಸಂವಾದ ನಡೆಸುತ್ತಾನೆyāva divasa illi Attack māḍabēku anodanna anēka sāri janaral jote avanu velesli Governor general āgiddavanu saṁvāda naḍesuttāneGovernor General Lord Wellesley discussed many times with general about the day of attack. ಆ ಸಂವಾದದಲ್ಲಿ ಒಂದು ಮಾತು ಹೇಳುತ್ತಾನೆ General ಸಭೆ ಅದುā saṁvādadalli ondu mātu hēḷuttāne General sabhe aduHe says in that assembly. It was a general assembly ಆ General ಸಭೆಲಿ ಈ ಮಾತು ಹೇಳಿದಾನೆ ಅವನುā General sabheli ī mātu hēḷidāne avanuGeneral says in that assembly ನನ್ನನ್ನ ನಿಮ್ಮನ್ನ ಈ ಪ್ರಪಂಚ ಮರೆಯುತ್ತೆ ಟಿಪ್ಪು ಸುಲ್ತಾನನ್ನ ಮರೆಯೊದಿಲ್ಲ ಅವನ ಬಗ್ಗೆ ಬಹಳ ಹುಷಾರ್ ಆಗಿ ವ್ಯವಹಾರ ಮಾಡಿnannanna nimmanna ī prapañca mareyutte ṭippu sultānanna mareyodilla avana bagge bahaḷa huṣār āgi vyavahāra māḍi“world will forget me and you. But, will never forget Tippu Sultan. Be careful while transacting with him.” Foreignವರೆಲ್ಲ ಅವನ ಬಗ್ಗೆ ತಿಳ್ಕಂಡಿದಾರೆ ನಮ್ಮವರೆ ಅವನ ಬಗ್ಗೆ ದೂರುತಾ ಇದಾರೆ ಇದು ಪರಿಸ್ಥಿತಿForeignvarella avana bagge tiḷkaṇḍidāre nammavare avana bagge dūrutā idāre idu paristhitiForeigners had understood him well. But, our own people are complaining this is the situation now. ಶ್ರೀರಂಗ ಪಟ್ಟಣ ಕರ್ನಾಟಕದ ವಿಶಿಷ್ಟ ಚಾರಿತ್ರಿಕ ಪಟ್ಟಣಗಳಲ್ಲಿ ಒಂದುśrīraṅga paṭṭaṇa karnāṭakada viśiṣṭa cāritrika paṭṭaṇagaḷalli onduSri Rangapatna is one of the distinct historical cities of Karnataka. ಇಲ್ಲಿ ಗಂಗ ಅರಸರಿಂದ ಹಿಡಿದು ಹೊಯ್ಸಳರು, ವಿಜಯನಗರದ ಅರಸರು, ಒಡೆಯರ್ ದೊರೆಗಳು, ಟಿಪ್ಪು ಇವರು ಸೇರಿದಂಗೆilli gaṅga arasarinda hiḍidu hoysaḷaru, vijayanagarada arasaru, oḍeyar doregaḷu, ṭippu ivaru sēridaṅge ಐದು ಮನೆತನಗಳು ಇಲ್ಲಿ ಆಳ್ವಿಕೆ ಮಾಡಿರುವುದರಿಂದaidu manetanagaḷu illi āḷvike māḍiruvudarinda ಇದು ಪ್ರಮುಖವಾದಂತಹ ಐತಿಹಾಸಿಕ ಪಟ್ಟಣidu pramukhavādantaha aitihāsika paṭṭaṇaIt is a major capital for many rulers of Ganga, Hoysala, Vijayanagar, Odeyar and Tippu Sultan;s dynasties. ಅದರ ಜೋತೆಗೆ ಇದು ಪ್ರಾಕೃತಿಕವಾಗಿ ಕಾವೇರಿ ನದಿಯ ಮಧ್ಯೆ ಇರೊದರಿಂದadara jōtege idu prākṛtikavāgi kāvēri nadiya madhye irodarindaAs it is located naturally in the Cauvery river as an island, it has a beautiful Setting also. ಅತ್ಯತ್ತಮವಾದ ದ್ವೀಪ ಕೂಡ ಹೌದುatyattamavāda dvīpa kūḍa hauduIt is a great island too ಆ ಕಾರಣಕ್ಕಾಗಿ ರಾಜರು ಇದನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರುā kāraṇakkāgi rājaru idanna rājadhāniyannāgi māḍikoṇḍu āḷvike māḍidaruFor this reason, the Kings ruled from here as their Capital. ಏನು ಕ್ರಿಸ್ತ ಶಕ ಒಂಭತ್ತನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗೂ ಕೂಡ ಒಂದಲ್ಲ ಒಂದು ರಾಜರು ಆಳ್ವಿಕೆ ಮಾಡಿದ ಕಾರಣಕ್ಕಾಗಿēnu krista śaka ombhattanē śatamānadinda hadineṇṭanē śatamānadavaregū kūḍa ondalla ondu rājaru āḷvike māḍida kāraṇakkāgiIt was ruled continuously from ninth century to eighteenth century by one King or the other ಆಯಾ ಕಾಲಘಟ್ಟದ ಕುರುಹುಗಳು ಶ್ರೀರಂಗ ಪಟ್ಟಣದ ಒಡಲಲ್ಲಿ ಇವತ್ತಿಗೂ ಇದ್ದಾವೆ.āyā kālaghaṭṭada kuruhugaḷu śrīraṅga paṭṭaṇada oḍalalli ivattigū iddāve.and relics of those periods are available even today in the bowels or Sri Rangapatna. ಗಂಗ ಅರಸರು ಇಲ್ಲಿ ರಂಗನಾಥಸ್ವಾಮಿ ದೇವಸ್ಥಾನವನ್ನ ನಿರ್ಮಾಣ ಮಾಡಿದರು.gaṅga arasaru illi raṅganāthasvāmi dēvasthānavanna nirmāṇa māḍidaru.Ganga kings constructed Ranganatha Swamy temple here ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 125 ಕೀಲೊಮಿಟರ್ ದೂರ ಇರುವ ಶ್ರೀರಂಗ ಪಟ್ಟಣkarnāṭakada rājadhāni beṅgaḷūrininda 125 kīlomiṭar dūra iruva śrīraṅga paṭṭaṇaSri Rangapatna is situated at about 125 Km. from Bangalore. ಎಡಭಾಗಕ್ಕೆ ಹೊರಳಿದರೆ ರಂಗನಾಥಸ್ವಾಮಿ ದೇವಸ್ಥಾನ ನಮಿಗೆ ಸಿಗುತ್ತೆ ಅಲ್ಲಿeḍabhāgakke horaḷidare raṅganāthasvāmi dēvasthāna namige sigutte alliRanganatha Swamy temple is located towards left of the road ಆ ರಾಜಗೋಪುರವನ್ನ ವಿಜಯನಗರ ಅರಸರೇ ಕಟ್ಟಿದ್ದುā rājagōpuravanna vijayanagara arasarē kaṭṭidduThe Rajagopura of the temple was built by Vijayanagara kings. ನಂತರ ಹೈದರಾಲಿ ಕೂಡ ಒಂದು ಮಂಟಪವನ್ನ ಕಟ್ಟಿದರು. ಇದು ಬಹಳ ವಿಶಿಷ್ಟವಾದಂತಹದ್ದುnantara haidarāli kūḍa ondu maṇṭapavanna kaṭṭidaru. idu bahaḷa viśiṣṭavādantahadduLater, Hyderali too built a Mantap there. It is very special ಒಬ್ಬ ಮುಸ್ಲಿಂ ದೊರೆ ಹಿಂದೂ ದೇವಸ್ಥಾನದಲ್ಲಿ ಮಂಟಪ ಕಟ್ಟಿರುವಂತದ್ದುobba musliṁ dore hindū dēvasthānadalli maṇṭapa kaṭṭiruvantadduthat a Muslim king constructed a Mantap in a hindu temple ಅದರ ಜೊತೆಗೆ ಗಂಗಾಧರೇಶ್ವರ ದೇವಸ್ಥಾನ ಇದೆ. ನಗರೇಶ್ವರ ದೇವಸ್ಥಾನ ಇದೆ, ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಇದೆ.adara jotege gaṅgādharēśvara dēvasthāna ide. nagarēśvara dēvasthāna ide, lakṣmī narasiṁha svāmi dēvasthāna ide.Besides this temple, Gangadhareshwara temple is also there, Nagareshwara temple is there and also Lakshmi Narasimha Swamy temple. ಇದು ಒಂದು ಕಾಲಗಟ್ಟಕ್ಕೆ ಸಂಬಂಧಪಟ್ಟಿದ್ದರೆ ನಂತರದಲ್ಲಿ ಒಡೆಯರ್ ದೊರೆಗಳು ಹೆಚ್ಚಿನ ಅಭಿವೃದ್ಧಿಯನ್ನ ಮಾಡಿದರುidu ondu kālagaṭṭakke sambandhapaṭṭiddare nantaradalli oḍeyar doregaḷu heccina abhivṛddhiyanna māḍidaruThis is upto one period of time.Later, Odeyar kings did lot of development. ಇಲ್ಲಿ ಕೋಟೆಯನ್ನ ಕಟ್ಟಿದರು ಸುಮಾರು ಶ್ರೀರಂಗಪಟ್ಟಣದಲ್ಲಿ ನಾವು 6.5 Kilometers ದೂರದ ಸುತ್ತಳತೆಯ ಕೋಟೆಯನ್ನ ನೋಡ್ತೇವೆilli kōṭeyanna kaṭṭidaru sumāru śrīraṅgapaṭṭaṇadalli nāvu 6.5 Kilometers dūrada suttaḷateya kōṭeyanna nōḍtēveThey built the fort. Today, we can see the fort over 6.5 kilo meter circumference. ಈ ಕೋಟೆ ಕಾಲದಿಂದ ಕಾಲಕ್ಕೆ ಅಭಿವೃದ್ಧಿ ಆಗಿದೆ, ಇದು ಮೂರು ಸುತ್ತಿನ ಕೋಟೆ.ī kōṭe kāladinda kālakke abhivṛddhi āgide, idu mūru suttina kōṭe.This fort is improved from time to time. This is a three layered fort. ಕೋಟೆಯ ಪಕ್ಕದಲ್ಲಿ ಕಂದಕ ಇದೆ, ಅದರ ಸುತ್ತಲೂ ಕೂಡ ಶಸ್ತ್ರಾಗಾರಗಳು ಇದಾವೆ.kōṭeya pakkadalli kandaka ide, adara suttalū kūḍa śastrāgāragaḷu idāve.There is a trench around the fort. Armouries are there all around ಕಂದಕ ನೋಡಲಿಕ್ಕೆ ಬಯಸುವವರು ಶಸ್ತ್ರಾಗಾರಗಳನ್ನು ಕೂಡ ನೋಡಬಹುದುkandaka nōḍalikke bayasuvavaru śastrāgāragaḷannu kūḍa nōḍabahuduThose who wish to see the trenches can also see the armouries. ಅದರ ಜತೆಗೆ ಮದ್ದಿನ ಮನೆಗಳು ಇದಾವೆ ಇಲ್ಲಿadara jatege maddina manegaḷu idāve illiThere are ammunition centres also nearby. ನಾವೇನು ಶಸ್ತ್ರಾಗಾರ ಅಂತ ಕರೆಯುತ್ತೇವೆ 11 ಶಸ್ತ್ರಾಗಾರಗಳು ಶ್ರೀರಂಗಪಟ್ಟಣದ ಈ ದ್ವೀಪದ ಒಳಗಡೆ ಇದಾವೆ ಅದನ್ನು ನೋಟಬಹುದು,nāvēnu śastrāgāra anta kareyuttēve 11 śastrāgāragaḷu śrīraṅgapaṭṭaṇada ī dvīpada oḷagaḍe idāve adannu nōṭabahudu,What we call as Shastragaras. There are some 11 of them which are situated within Sri Rangapatna island. ಅದರ ಜೊತೆಗೆ ಟಿಪ್ಪು ಕಾಲದಲ್ಲಿ ಆಗಿರುವಂತ ಮಸೀದಿಯನ್ನ ನೋಡಬಹುದುadara jotege ṭippu kāladalli āgiruvanta masīdiyanna nōḍabahuduA masjid of Tippu Sultan’s period can also be seen here. ಟಿಪ್ಪುಸುಲ್ತಾನ್ ರಾಜ್ಯಭಾರ ಮಾಡಿದಂತ ಲಾಲ್ ಮಾಲ್ ಏನಿದೆṭippusultān rājyabhāra māḍidanta lāl māl ēnideThere is Lal Mahal from where Tip Sultan ruled. ಆ ಆರಮನೆಯ ಅವಶೇಷಗಳು ಇಲ್ಲಿ ಇನ್ನೂ ಕೂಡ ಇದಾವೆ.ā āramaneya avaśēṣagaḷu illi innū kūḍa idāve.Ruins of the palace are still there ಅವಶೇಷಗಳು ಕೂಡ ಕಣ್ಣು ತುಂಬಿಕೊಳ್ಳಬಹುದು.avaśēṣagaḷu kūḍa kaṇṇu tumbikoḷḷabahudu.The ruins are a sight for your eyes ಅದರ ಜೊತೆಗೆ ಅಲ್ಲಿಂದ ಸ್ವಲ್ಪ ಬಲಕ್ಕೆ ಉರುಳಿದರೆadara jotege allinda svalpa balakke uruḷidare ಟಿಪ್ಪು ಸುಲ್ತಾನನ ಬೇಸಿಗೆ ಆರಮನೆ ಸಿಗುತ್ತೆ ನಮಿಗೆṭippu sultānana bēsige āramane sigutte namigeIf one takes a right turn there one can visit the summer palace of Tippu Sultan. ಇದು ಈ ಅರಮನೆಯ ವೈಶಿಷ್ಟ್ಯ ಏನು ಅಂದರೆ ಬೇಸಿಗೆ ಅರಮನೆಯದ್ದುidu ī aramaneya vaiśiṣṭya ēnu andare bēsige aramaneyaddu ಶೇಕಡ 90 ಭಾಗ ಮರದಿಂದ ನಿರ್ಮಾಣ ಮಾಡಿರುವಂತ ಅರಮನೆśēkaḍa 90 bhāga maradinda nirmāṇa māḍiruvanta aramaneSpeciality of this Summer palace is that ninety percent of it is made of wood. ಈಗ ಅದು ಏಕವ್ಯಕ್ತಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಾಗಿದೆ.īga adu ēkavyakti vastu saṅgrahālayavāgi mārpaḍāgide.Now, it is preserved as a museum devoted to one person ಇದನ್ನ Archeological Survey of Indiaದವರು ಅಂದರೆ ಭಾರತೀಯ ಪುರತತ್ವ ಮತ್ತು ಸರ್ವೇಕ್ಷಣದವರು ನಿರ್ವಹಣೆ ಮಾಡ್ತಾ ಇದಾರೆidanna Archeological Survey of Indiadavaru andare bhāratīya puratatva mattu sarvēkṣaṇadavaru nirvahaṇe māḍtā idāreThis is maintained by Archaeological survey of India (ASI) ಈ Archeological Survey of India ಗೆ ಶ್ರೀರಂಗಪಟ್ಟಣದಲ್ಲಿ ಹತ್ತು ಸ್ಮಾರಕಗಳು ಸೇರ್ಪಡೆಯಾಗುತ್ತೆī Archeological Survey of India ge śrīraṅgapaṭṭaṇadalli hattu smārakagaḷu sērpaḍeyāgutteTen monuments of Sri Rangapatna belong to ASI and we maintained by the department. ಅಷ್ಟೂ ಸ್ಮಾರಕಗಳನ್ನ ಇಲಾಖೆ ನೋಡ್ಕೊಳ್ತಾ ಇದೆ.aṣṭū smārakagaḷanna ilākhe nōḍkoḷtā ide.All the monuments are managed by the ASI ಅದನ್ನ ಹೊರತು ಪಡಿಸಿದರೆ ಕೋಟೆ, ಕoದಕ, ದೇವಾಲಾಯಗಳನ್ನadanna horatu paḍisidare kōṭe, kaodaka, dēvālāyagaḷanna ಕಂದಕ ಇದನ್ನೆಲ್ಲಾ ರಾಜ್ಯ ಪ್ರಾಚ್ಯ ವಸ್ತು ಇಲಾಖೆ ನೋಡಿಕೊಳ್ತಾ ಇದೆ.kandaka idannellā rājya prācya vastu ilākhe nōḍikoḷtā ide.Besides them, the fort, trench and temples are managed by the state Archaeological department. ಹಾಗೆ ನಾವು ಬೇಸಿಗೆ ಅರಮನೆ ಅಲ್ಲಿಂದ ನೋಡಿಕೊಂಡು ಮುಂದೆ ಬಂದರೆhāge nāvu bēsige aramane allinda nōḍikoṇḍu munde bandare ಟಿಪ್ಪು ಸಮಾಧಿ ಸ್ಥಳ ಸಿಗುತ್ತೆ, ಟಿಪ್ಪು ಸುಲ್ತಾನ್ 1799 ಮೇ 04 ಏನು ನಿಧನರಾಗ್ತಾರೆ ಯುದ್ದದಲ್ಲಿ ವೀರ ಮರಣವನ್ನ ಅಪ್ಪುತ್ತಾರೆṭippu samādhi sthaḷa sigutte, ṭippu sultān 1799 mē 04 ēnu nidhanarāgtāre yuddadalli vīra maraṇavanna apputtāreAfter visiting summer palace, one can visit Tippu’s tomb. Tippu sultan died valiantly in a war with Brithishers on 4th May 1799. ನಂತರ ಬ್ರಿಟಿಷರೇ ಅವರನ್ನ ತಗೊಂಡು ಬಂದು ಕಾವೇರಿ ನದಿ ದಡದಲ್ಲಿ ಅವರನ್ನ ಮಣ್ಣು ಮಾಡ್ತಾರೆnantara briṭiṣarē avaranna tagoṇḍu bandu kāvēri nadi daḍadalli avaranna maṇṇu māḍtāreHe was buried by Britishers on the banks of the river Cauvery ಅಲ್ಲಿ ಈ ಮೊದಲೇ ಇದಂತ ಹೈದರಾಲಿ ಘೋರಿ ಅದರ ಪಕ್ದಲೇ ಟಿಪ್ಪುಸುಲ್ತಾನರನ್ನ ಸಮಾಧಿ ಮಾಡಿದಾರೆalli ī modalē idanta haidarāli ghōri adara pakdalē ṭippusultānaranna samādhi māḍidāreTipu Sultan's tomb is built next to Hyderali's tomb. ಅವರ ತಾಯಿ ಮತ್ತೆ ತಂದೆ ಇಬ್ಬರ ಸಮಾಧಿ ಪಕ್ಕದಲ್ಲೇ ಟಿಪ್ಪು ಸುಲ್ತಾನ್ ಸಮಾಧಿ ಕೂಡ ಇದೆ.avara tāyi matte tande ibbara samādhi pakkadallē ṭippu sultān samādhi kūḍa ide.Tipu Sultan's tomb is build besides his parents' tombs ಅದನ್ನ ನಾವು ಗುಂಬಜ್ ಅಂತ ಕರೆಯುತ್ತೇವೆ. ಬಹಳ ಅತ್ಯತ್ತಮವಾದ ಸ್ಮಾರಕ ನೋಡಬಹುದು ಸುತ್ತಲೂ ಉದ್ಯಾನ ಇದೆ.adanna nāvu gumbaj anta kareyuttēve. bahaḷa atyattamavāda smāraka nōḍabahudu suttalū udyāna ide.It is called Gumbaz. It is one of the best monuments.It is surrounded by garden. ಅದರಿಂದ ಒಂದೂವರೆ ಎರಡು ಕಿಲೋಮೀಟರ್ ಮುಂದೆ ಹೋದರೆ ಸಂಗಮ ಸಿಗುತ್ತೆadarinda ondūvare eraḍu kilōmīṭar munde hōdare saṅgama sigutteAt a distance of nearly two kilometres from there, we can witness the Sangama ಕಾವೇರಿ ನದಿಯ ಎರಡು ಕವಲುಗಳು ಸೇರುತ್ತೆ ಅದರ ಜೊತೆಗೆ ಲೋಕಪಾವನಿ ನದಿ ಸೇರಿಕೊಳ್ಳುತ್ತೆkāvēri nadiya eraḍu kavalugaḷu sērutte adara jotege lōkapāvani nadi sērikoḷḷutteor the confluence of two branches or river Cauvery. River Lokapavani also joins there. ಈ ಸಂಗಮ ಸ್ಥಾನ ಅದು, ಅದೂ ಕೂಡ ಒಂದು ಪ್ರಕೃತಿ ತಾಣವೂ ಹೌದು ಪ್ರವಾಸಿ ತಾಣವೂ ಹೌದುī saṅgama sthāna adu, adū kūḍa ondu prakṛti tāṇavū haudu pravāsi tāṇavū hauduIt is a beautiful nature spot and also a tourist centre. ಇನ್ನೂ ಶ್ರಿರಂಗಪಟ್ಟಣದ ಪಕ್ಕದಲ್ಲೇ ಪಶ್ಚಿಮವಾಹಿನಿ ಅಂತ ಬರುತ್ತೆ, ಆ ಪಶ್ಚಿಮವಾಹಿನಿ ಶ್ರದ್ದಾ ಕೇಂದ್ರ ಅಂತ ಕರೆಯುತ್ತಾರೆ ಅದನ್ನinnū śriraṅgapaṭṭaṇada pakkadallē paścimavāhini anta barutte, ā paścimavāhini śraddā kēndra anta kareyuttāre adannaVery close to Sri Rangapatna, the western branch of the river Cauvery called Paschimavahini is there. It is being visited as a Shraddha Kendra ಯಾತಕ್ಕೆ ಕರೆಯುತ್ತಾರೆ ಅಂದರೆ ಧಾರ್ಮಿಕ ನಂಬಿಕೆ ಇದೆ ಒಂದುyātakke kareyuttāre andare dhārmika nambike ide onduIt is called so for religious reasons ಎಲ್ಲಿ ನದಿ ಪಶ್ಚಿಮಾಭಿಕವಾಗಿ ಹರಿಯುತ್ತೊ ಅದು ಪುಣ್ಯ ಕ್ಷೇತ್ರ ಅಂತ ಹೇಳಿelli nadi paścimābhikavāgi hariyutto adu puṇya kṣētra anta hēḷiwith the belief that the western flow of the river is considered to be holy ಆ ಕಾರಣಕ್ಕೆ ಪಿಂಡ ಪ್ರಧಾನ ಮಾಡುವಂತವರು ಈ ರೀತಿ ಏನೆಲ್ಲಾ ಶ್ರಾದ್ದ ಕಾರ್ಯಗಳನ್ನ ಮಾಡ್ತಾರೊā kāraṇakke piṇḍa pradhāna māḍuvantavaru ī rīti ēnellā śrādda kāryagaḷanna māḍtāroFor this reason, PindaPradan (rites for the deceased) is performed to the deceased here. ಅವರೆಲ್ಲರೂ ಕೂಡ ಪಶ್ಚಿಮವಾಹಿನಿಗೆ ಬಂದು ಅಸ್ತಿಯನ್ನ ವಿಸರ್ಜನೆ ಮಾಡುವಂತಹ ಕೆಲಸವನ್ನ ಅವರು ಮಾಡ್ತಿದ್ದಾರೆavarellarū kūḍa paścimavāhinige bandu astiyanna visarjane māḍuvantaha kelasavanna avaru māḍtiddāreespecially for immersing the ashes in the river waters. ಇಲ್ಲಿ ಸಾಕಷ್ಟು ಗಾಂಧಿಜಿಯವರ ಅಸ್ತಿ ಕೂಡ ಇಲ್ಲಿ ಪಶ್ಚಿಮವಾಹಿನಿಯಲ್ಲಿ ವಿಸರ್ಜನೆ ಆಗಿದೆ.illi sākaṣṭu gāndhijiyavara asti kūḍa illi paścimavāhiniyalli visarjane āgide.Gandhiji’s skeletal remains were also immersed here ಅಂತ ಸಾಕಷ್ಟು ಮುಖ್ಯ ಮಂತ್ರಿಗಳ ಅಸ್ತಿಯನ್ನು ಕೂಡ ಅಲ್ಲಿ ವಿಸರ್ಜನೆ ಮಾಡಿದರೆ.anta sākaṣṭu mukhya mantrigaḷa astiyannu kūḍa alli visarjane māḍidare.and also of many chief ministers ಹೀಗೆ ಶ್ರೀರಂಗಪಟ್ಟಣದಲ್ಲಿ ಒಂದು ದಿನಕ್ಕೆ ನೋಡುವಂತಹ ಸ್ಥಳಗಳಿಲ್ಲhīge śrīraṅgapaṭṭaṇadalli ondu dinakke nōḍuvantaha sthaḷagaḷillaThus, it is not possible to see Sri Rangapatna in a day ತುಂಬಾ ಕನಿಷ್ಟ ಅಂದರೂ ಎರಡು ಮೂರು ದಿನಗಳು ಬೇಕುtumbā kaniṣṭa andarū eraḍu mūru dinagaḷu bēkuIf requires at least two to three days ಇಲ್ಲಿ ಕೋಟೆ, ಕಂದಕಗಳು, ದೇವಾಲಯಗಳು, ಚರ್ಚ್, ಮಸೀದಿilli kōṭe, kandakagaḷu, dēvālayagaḷu, carc, masīdito see the fort, trench, temples, church, mosque etc. ಹೀಗೆ ವಿವಿಧ ಧರ್ಮಕ್ಕೆ ಸೇರಿದಂತ ಇಲ್ಲಿ ಪ್ರಾರ್ಥನಾ ಮಂದಿರಗಳಿದಾವೆhīge vividha dharmakke sēridanta illi prārthanā mandiragaḷidāvethus places belonging to different faiths ಕೋಟೆಗಳಿದಾವೆ ವಿಶಿಷ್ಠವಾದಂತಹದ್ದುkōṭegaḷidāve viśiṣṭhavādantahadduThere are some wonderful forts ಒಂದು ವಿಪರ್ಯಾಸದ ಸಂಗತಿ ಏನು ಅಂದರೆ ಇಷ್ಟೆಲ್ಲಾ ಪುರತತ್ವ ಆಕರಗಳನ್ನondu viparyāsada saṅgati ēnu andare iṣṭellā puratatva ākaragaḷannaA paradoxical matter. About this historical city is that ತನ್ನ ಒಡಲಲ್ಲಿ ಇಟ್ಕೊಂಡಿದ್ದರೂ ಕೂಡ ಶ್ರೀರಂಗ ಪಟ್ಟಣ ಇದರ ಬಗ್ಗೆ ಸಂಶೋಧನೆ ಮಾಡಿtanna oḍalalli iṭkoṇḍiddarū kūḍa śrīraṅga paṭṭaṇa idara bagge saṁśōdhane māḍiin spite of having so many interesting archaeological sites, ಒಂದು ಸ್ಪಷ್ವವಾದಂತ, ಬೆಳಕು ಚೆಲ್ಲುವಂತ, ಹೊರ ಜಗತ್ತಿಗೆ ಸತ್ಯವನ್ನ ಹೇಳುವಂತಹ ಕೆಲಸಗಳು ಇನ್ನೂ ಆಗುತ್ತಿಲ್ಲ ಅನ್ನುವುದು ಕೆಲವರ ಅಭಿಪ್ರಾಯondu spaṣvavādanta, beḷaku celluvanta, hora jagattige satyavanna hēḷuvantaha kelasagaḷu innū āguttilla annuvudu kelavara abhiprāyathere is not much of research done here to throw light on unknown facts and to tell the truth to the world, as per the opinion of some people. ಅದು ಹಾಗೇ ಇದೆ ಆ ದಿಕ್ಕಿನಲ್ಲಿ ಕೆಲಸಗಳು ಸಾಗಿದರೆ ಬಹಳ ಒಳ್ಳೆದಾಗುತ್ತೆ.adu hāgē ide ā dikkinalli kelasagaḷu sāgidare bahaḷa oḷḷedāgutte.I would like to mention here that it is good to proceed on such lines ಇದರ ಇತಿಹಾಸ ಮತ್ತಷ್ಟು ವಿಸ್ತಾರ ಆಗುತ್ತೆ ಅಂತ ಹೇಳಿ ನಾನು ಹೇಳಿಲಿಕ್ಕೆ ಬಯಸ್ತಿನಿidara itihāsa mattaṣṭu vistāra āgutte anta hēḷi nānu hēḷilikke bayastiniso that its history gets extended further.
Word Transliteration Meaning
ಜಗತ್ತುjagattuWorld
ಹಳೆhaḷeOld
ಭೂಗರ್ಭಶಾಸ್ತ್ರbhūgarbhaśāstraGeology
ಪ್ರದೇಶpradēśaRegion
ದೇವಸ್ಥಾನdēvasthānaTemple
ಶಾಸನśāsanaInscription
ಉಲೇಖulēkhaCitation
ಧರ್ಮdharmaReligion
ಸ್ಮಾರಕsmārakaMonument
ಪವಿತ್ರವಾದpavitravādaProsperous
ಸ್ಥಳsthaḷaPlace
ಭಕ್ತರುbhaktaruDevotees
ಅಧಿಕಾರಿadhikāriOfficer
ಸಾಮ್ರಜ್ಯsāmrajyaEmpire
ಹಳ್ಳಿhaḷḷiVillage
ಅಥವಾathavāOr
ಐತಿಹಾಸಸಿಕaitihāsasikaHistorical
ಪ್ರಾಮುಕ್ಯತೆprāmukyateImpartance
ರಾಜrājaKing
ಆನೆāneElephant
ಐದುaiduFive
ಆಳ್ವಿಕೆāḷvikeReign
ನದಿnadiRiver
ನಿರ್ಮಾಣnirmāṇaBuild
ದೂರdūraDistance
ಕೋಟೆkōṭeFort
ಅಭಿವೃದ್ಧಿabhivṛddhiDevelopment
ಮೂರುmūruThree
ಕಂದಕkandakaDitch
ಶಸ್ತ್ರಗಾರśastragāra
ದ್ವೀಪdvīpaIsland
ಅವಶೇಷಗಳುavaśēṣagaḷuReliqualae
ಕಣ್ಣುkaṇṇuEye
ಅರಮನೆaramanePalace
ವಸ್ತು ಸಂಗ್ರಹಾಲಯvastu saṅgrahālayaMuseum
ಹತ್ತುhattuTen
ಸಮಾಧಿsamādhiTomb
ತಾಯಿtāyiMother
ತಂದೆtandeFather
ಉದ್ಯಾನudyānaGarden/Park
ಎರಡುeraḍuTwo
ಸ್ಥಾನsthānaPlace
ಅಸ್ತಿastiProperty
ಸಂಶೋಧನೆsaṁśōdhaneResearch

Related Grammar Lessons

The Past Tense - ಭೂತ ಕಾಲ

The Present Tense - ವರ್ತಮಾನ ಕಾಲ

The Future Tense - ಭವಿಷ್ಯತ್ ಕಾಲ

ಕಾಲ ರೂಪಗಳು

ಕನ್ನಡದಲ್ಲಿ ಮುಖ್ಯವಾಗಿ ಮೂರು ಕಾಲ ರೂಪಗಳಿವೆ

1. ವರ್ತಮಾನ ಕಾಲ
2. ಭೂತ ಕಾಲ
3. ಭವಿಷ್ಯತ್ ಕಾಲ

ವರ್ತಮಾನ ಕಾಲದ ಕ್ರಿಯಾರೂಪವು, ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯ ಸೇರುತ್ತದೆ. ಉದಾಹರಣೆಗೆ

1. ಹೇಳಲಿಕ್ಕೆ ಬಯಸುತ್ತೇನೆ
2. ವಿಸರ್ಜನೆ ಆಗುತ್ತಿದೆ
3. ಕಾವೇರಿ ನದಿಯ ಕವಲುಗಳು ಸೇರುತ್ತವೆ
4. ಗುಂಬಜ್ ಅಂತ ಕರೆಯುತ್ತೇವೆ
5. ಮಣ್ಣು ಮಾಡುತ್ತಾರೆ / ಮಾಡ್ತಾರೆ
6. ಮರಣವನ್ನು ಅಪ್ಪುತ್ತಾರೆ
7. ಕೋಟೆ ಕಟ್ಟುತ್ತಾರೆ
8. ಜನರು ಬರುತ್ತಾರೆ
9. ಪ್ರವಾಸಿಗರು ನೋಡುತ್ತಾರೆ
10. ಕಾವೇರಿ ಹರಿಯುತ್ತದೆ
11. ಟಿಪ್ಪು ಸುಲ್ತಾನ್ ಆಳುತ್ತಾನೆ

ಓದಿರಿ

ಕರ್ನಾಟಕದ 12 ಪ್ರಮುಖ ಐತಿಹಾಸಿಕ ಸ್ಥಳಗಳು

ಕರ್ನಾಟದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಕೆಲವು ಈ ಕೆಳಗಿನವು -

ಹಂಪಿ ಸ್ಮಾರಕಗಳು, ಹಂಪಿ:

ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿರುವ ಸ್ಮಾರಕಗಳು ವಿಜಯನಗರದ ಸಾಮ್ರಾಜ್ಯದ ಅವಶೇಷಗಳಾಗಿವೆ. ವಿರೂಪಾಕ್ಷ ದೇವಾಲಯ, ಹಂಪಿ ಬಜಾರ್‌, ಹಜಾರ ರಾಮನ ಗುಡಿ, ಸಾಸಿವೆ ಕಾಳು ಗಣೇಶ, ಉಗ್ರ ನರಸಿಂಹ, ಮಹಾನವಮಿ ದಿಬ್ಬ, ವಿಠಲ ದೇವಾಲಯಗಳು ಇಲ್ಲಿ ಇವೆ. ಹಂಪಿಯು ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಐತಿಹಾಸಿಕ ಸ್ಥಳವಾಗಿದೆ. 

ಪಟ್ಟದಕಲ್ಲು ಸ್ಮಾರಕಗಳು, ಪಟ್ಟದಕಲ್ಲು:

ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯಲ್ಲಿದೆ. ಪಟ್ಟದಕಲ್ಲಿನ ಸ್ಮಾರಕಗಳ ಸಮೂಹವು ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ ಮತ್ತು ಭಾರತದಲ್ಲಿನ ವಿಶ್ವ ಪರಂಪರೆಯ ತಾಣವಾಗಿದೆ. ಪಟ್ಟದಕಲ್ಲು ಸ್ಮಾರಕಗಳು ನಾಗರ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಶೈಲಿಗಳನ್ನು ಹೊಂದಿವೆ.

 

ಬೀದರ್ ಕೋಟೆ, ಬೀದರ್:

ಬೀದರ ಜಿಲ್ಲೆಯಲ್ಲಿರುವ ಬೀದರ್ ನಗರದಲ್ಲಿರುವ ಕೋಟೆಯು ಅದ್ಭುತವಾಗಿದೆ. ಈ ಕೋಟೆಯ ಒಳಗೆ ಸುಮಾರು 30 ಸ್ಮಾರಕಗಳು ಇವೆ. ರಂಗಿನ್ ಮಹಲ್, ಗಗನ್ ಮಹಲ್, ದಿವಾನ್-ಇ-ಆಮ್, ಇಲ್ಲಿಯ ಆಕರ್ಷಣೆಗಳಾಗಿವೆ.

ಹೊಯ್ಸಳೇಶ್ವರ ದೇವಸ್ಥಾನ, ಹಳೆಬೀಡು:

ಹಾಸನ ಜಿಲ್ಲೆಯಲ್ಲಿದೆ. ಹೊಯ್ಸಳೇಶ್ವರ ದೇವಸ್ಥಾನದ ಹೊರ ಗೋಡೆಯ ಶಿಲ್ಪಗಳು ವಿಶ್ವಪ್ರಸಿದ್ಧವಾಗಿವೆ.

ಐಹೊಳೆ ಐತಿಹಾಸಿಕ ದೇವಾಲಯಗಳು, ಐಹೊಳೆ:

ಐಹೊಳೆ ಗ್ರಾಮವು ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ದೇವಾಲಯಗಳ ಸಂಕೀರ್ಣವಾಗಿದೆ. ಉತ್ತರ ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣವಾಗಿದೆ.

ಮಹಾಕೂಟ ದೇವಾಲಯಗಳ ಸಮೂಹ, ಮಹಾಕೂಟ:

ಬಾಗಲಕೋಟೆ ಜಿಲ್ಲೆಯಲ್ಲಿದೆ. ಚಾಲುಕ್ಯ ವಂಶದ ಆರಂಭಿಕ ರಾಜರು ನಿರ್ಮಿಸಿದ ಪ್ರಮುಖ ಸ್ಥಳವೆಂದರೆ ಮಹಾಕೂಟ ಗುಂಪಿನ ದೇವಾಲಯ.

ಬಸವಕಲ್ಯಾಣ ಕೋಟೆಯ ಸ್ಮಾರಕಗಳು, ಬೀದರ್:

ಬೀದರ್ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಕೋಟೆಯು ಏಳು ದ್ವಾರಗಳು ಮತ್ತು ಸ್ಮಾರಕಗಳನ್ನು ಹೊಂದಿದೆ . ಇದು ಬಸವಣ್ಣನವರ ಕರ್ಮಭೂಮಿ ಎಂದೂ ಸಹ ಪ್ರಸಿದ್ಧವಾಗಿದೆ. 

ಲಕ್ಷ್ಮೇಶ್ವರ, ಗದಗ:

ಗದಗ ಜಿಲ್ಲೆಯ ಲಕ್ಷ್ಮೇಶ್ವರವು ಹಲವಾರು ಪ್ರಮುಖ ದೇವಾಲಯಗಳು ಮತ್ತು ಜೈನ ಸ್ಮಾರಕಗಳನ್ನು ಹೊಂದಿದೆ.

ಬಾದಾಮಿ ಗುಹೆ ದೇವಾಲಯಗಳು, ಬಾದಾಮಿ:

ಬಾದಾಮಿಯಲ್ಲಿ ಪ್ರಸಿದ್ಧವಾದ ಗುಹಾ ದೇವಾಲಯಗಲಿವೆ. ಬಾದಾಮಿ ದೇವಾಲಯ ಸಂಕೀರ್ಣವನ್ನು ಭಾರತೀಯ ರಾಕ್‌-ಕಟ್‌ ವಾಸ್ತುಶೈಲಿಯ ಅತ್ಯುತ್ತಮ ಉದಾಹರಣೆ ಎಂದು ಪರಿಗಣಿಸಲಾಗಿದೆ. 

ಸೋಮನಾಥಪುರ:

ಸೋಮನಾಥಪುರವು ಮೈಸೂರು ನಗರದ ಸಮೀಪದಲ್ಲಿದೆ. ಇದು ಕೇಶವ ದೇವಾಲಯಕ್ಕೆ ಹೆಸರುವಾಸಿಯಾಗಿದೆ ಮತ್ತು ಹೊಯ್ಸಳ ವಾಸ್ತುಶೈಲಿಗೆ ಉತ್ತಮ ಉದಾಹರಣೆಯಾಗಿದೆ.

ಚೆನ್ನಕೇಶವ ದೇವಸ್ಥಾನ, ಬೇಲೂರು:

ಹಾಸನ ಜಿಲ್ಲೆಯ ಚೆನ್ನಕೇಶವ ದೇವಸ್ಥಾನವನ್ನು ವಿಜಯನಾರಾಯಣ ದೇವಸ್ಥಾನ ಎಂತಲೂ ಕರೆಯಲಾಗುತ್ತದೆ. ಇದು ತನ್ನ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯ ಸಂಕೀರ್ಣವು ಕರ್ನಾಟಕ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಗೋಲಗುಂಬಜ್, ವಿಜಯಪುರ:

ವಿಶ್ವದ ಏಳು ಅದ್ಭುತಗಳಲ್ಲಿ ಗೋಲಗುಂಬಜ್ ಕೂಡ ಒಂದು. ಇದನ್ನು ಮಹಮ್ಮದ್ ಆದಿಲ್ ಶಾ ಕಟ್ಟಿಸಿದ. ಗೋಲಗುಂಬಜ್ ನ ವಿಶೇಷವೆಂದರೆ, ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ಧವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ. ಹಾಗೆಯೇ ಇಲ್ಲಿರುವ ಪಿಸುಗುಟ್ಟುವ ಜಗುಲಿಯಲ್ಲಿ ನಿಂತು ಪಿಸುಗುಟ್ಟಿದರೆ ಅತಿ ಸಣ್ಣ ಶಬ್ಧ ಕೂಡ 37 ಮೀ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ.

ಕರ್ನಾಟಕ ರಾಜ್ಯದ ಯಾವುದಾರೂ ಒಂದು ಸ್ಥಳದ ಬಗೆಗೆ ಪ್ರಬಂಧ ಬರೆಯಿರಿ

Send your completed homework by email to klcjnu@gmail.com