Modern Agriculture

Transcription
Transliteration
Translation
ಇದು ನನ್ನ ಕಲ್ಪನೆ ಅಲ್ಲ. ಆದರೆ, ಮೊತ್ತ ಮೊದಲು, ಕೆಲವು German Missionaries ಈ ಪ್ರದೇಶದಲ್ಲಿ ಕೆಲಸ ಮಾಡಿದಾಗ ಅವರು ಕಂಡುಕೊಂಡದ್ದು ಏನು ಅಂತ ಹೇಳಿದ್ರೆ,idu nanna kalpane alla. ādare, motta modalu, kelavu German Missionaries ī pradēśadalli kelasa māḍidāga avaru kaṇḍukoṇḍaddu ēnu anta hēḷidre,It is not my imagination. When some German missionaries came to this area for the first time, they found that ಊರಲ್ಲಿ ಕೆಲಸದ ಕೊರತೆ. ಕೆಲಸಗಾರರಿಗೆ ಕೆಲಸದ ಕೊರತೆ. ಅದನ್ನು ನಿವಾರಿಸ್ಲಿಕ್ಕಾಗಿūralli kelasada korate. kelasagārarige kelasada korate. adannu nivārislikkāgithere was need of jobs in this place for workers ಈ ಬೆಟ್ಟ ಪ್ರದೇಶಗಳಲ್ಲಿ ಕೆಲವು ಕೃಷಿ ಮಾಡಿದ್ರೆ ಹೆಚ್ಚು ಉದ್ಯೋಗ ಸೃಷ್ಟಿ ಆಗ್‍ಬಹುದು ಎಂಬ ಉದ್ದೇಶದಿಂದ ಈ ಕೃಷಿ ಪ್ರದೇಶವನ್ನು ಪ್ರಾರಂಭ ಮಾಡಿದ್ರು.ī beṭṭa pradēśagaḷalli kelavu kṛṣi māḍidre heccu udyōga sṛṣṭi āg‍bahudu emba uddēśadinda ī kṛṣi pradēśavannu prārambha māḍidru.To over come this problem, they thought of enhancing jobs if agriculture is done in these hilly terrains and started cultivation. ಈಗ ನಾನು ವಿದ್ಯಾಭ್ಯಾಸ ಮುಗಿಸಿ ಇಲ್ಲಿಗೆ ಹಿಂದೆ ಕೃಷಿಗೆ ಬಂದ ನಂತರ, ಇನ್ನು ಕೆಲವು.....īga nānu vidyābhyāsa mugisi illige hinde kṛṣige banda nantara, innu kelavu.....After finishing me education I came here. ನಾನು ಸಸ್ಯಶಾಸ್ತ್ರ ಕಲ್ತಿದ್ದು ಈ ಉಷ್ಣ ವಲಯದಲ್ಲಿ ಯಾವುದೆಲ್ಲ ಬೆಳೀಲಿಕ್ಕೆ ಸಾಧ್ಯ ಉಂಟು ಅಂತ ಒಂದು ನೋಡ್‍ಬೇಕು ಎಂಬ ಉದ್ದೇಶದಿಂದnānu sasyaśāstra kaltiddu ī uṣṇa valayadalli yāvudella beḷīlikke sādhya uṇṭu anta ondu nōḍ‍bēku emba uddēśadindaI have studied botany. ದಕ್ಷಿಣ ಅಮೇರಿಕಾದಲ್ಲಿ, ಮಲೇಶಿಯಾ ಪ್ರದೇಶದಲ್ಲಿ, ಮಧ್ಯ ಆಫ್ರಿಕಾದಲ್ಲಿ ಇರುವಂತಹ ಕೆಲವು ಗಿಡಗಳನ್ನು ತಂದು ಇಲ್ಲಿ ಪ್ರಾಯೋಗಿಕವಾಗಿ ಬೆಳೆಸುವಂತಹ ಪ್ರಯತ್ನ ಮಾಡಿದೆ.dakṣiṇa amērikādalli, malēśiyā pradēśadalli, madhya āphrikādalli iruvantaha kelavu giḍagaḷannu tandu illi prāyōgikavāgi beḷesuvantaha prayatna māḍide.I have tried to grow practically some plants brought from south America, Malaysia, Central Africa etc., to see what are the possibilities in this tropical region. ನಾವು ಇಲ್ಲಿ 30ಕ್ಕೂ ಹೆಚ್ಚು ಬೇರೆ ಬೇರೆ ಬೆಳೆಗಳನ್ನು ಬೆಳೆಸ್ತೇವೆ. ಹೆಚ್ಚಿನವಗಳು ಹಣ್ಣು ಹಂಪಲುಗಳು. ಮತ್ತೆ ಕೆಲವು ಔಷಧಿಯ ಗಿಡ ಇರ್ಬಹುದು.nāvu illi 30kkū heccu bēre bēre beḷegaḷannu beḷestēve. heccinavagaḷu haṇṇu hampalugaḷu. matte kelavu auṣadhiya giḍa irbahudu.We grow more than 30 varieties here. Most of them are fruits and some are medicinal plants. ಆದರೆ, ಅ.... ಈ ಪ್ರದೇಶದಲ್ಲಿ...ಅ.... ಪರಂಪರೆಯಲ್ಲಿ ಬೆಳ್ದದ್ದು ಹೇಗೆ ಅಂತ ಹೇಳಿದ್ರೆādare, a.... ī pradēśadalli...a.... parampareyalli beḷdaddu hēge anta hēḷidreBut, what was grown traditionally in this area was food crops ಆಹಾರ ಬೆಳೆಸುವಂತದ್ದು. ನಮಗೆ, ಅಕ್ಕಿ ಅಥವಾ ಗೋಧಿ ಎಂಬುದು ಆಹಾರ. ಬೇರೆ ಹಣ್ಣು ಹಂಪಲು ಕಾಯಿ ಪಲ್ಲೆಗಳು ಆಹಾರ ಅಲ್ಲ.āhāra beḷesuvantaddu. namage, akki athavā gōdhi embudu āhāra. bēre haṇṇu hampalu kāyi pallegaḷu āhāra alla.For us rice or wheat is the food. Other fruits and vegetables are not food stuff. ಆದರೆ ಇತ್ತೀಚೆಗೆ ಆದರ ಪ್ರಾಮುಖ್ಯತೆ ಜನರಿಗೆ ಹೆಚ್ಚು ಕಂಡು ಬಂದದ್ರಿಂದ ಹಣ್ಣಿನ ಉಪಯೋಗ ಕಾಯಿಪಲ್ಲೆ ಉಪಯೋಗ ಹೆಚ್ಚಾಗ್ತಾ ಬಂತು.ādare ittīcege ādara prāmukhyate janarige heccu kaṇḍu bandadrinda haṇṇina upayōga kāyipalle upayōga heccāgtā bantu.As the people found the importance of such items, they started using more of fruits ಹಾಗಾಗಿ, ಅವಕಾಶವೂ ಹೆಚ್ಚಾಯಿತು. ಹಾಗೇ ನಾವು ಹೊಸ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಸಿ ಅದು ಉತ್ತಮವಾಗಿ ಕಂಡಲ್ಲಿ, ಅದು ಹೊಸ ಬೆಳೆಯಾಗಿ ಇಲ್ಲಿ ಆವಿಷ್ಕಾರ ಮಾಡಿದ್ದೇವೆ.hāgāgi, avakāśavū heccāyitu. hāgē nāvu hosa beḷegaḷannu prāyōgikavāgi beḷesi adu uttamavāgi kaṇḍalli, adu hosa beḷeyāgi illi āviṣkāra māḍiddēve.Thus, the opportunity has also increased. Also, we have grown new crops experimentally here and have invented them as new crops if they are found to be useful. ನಮ್ಮಲ್ಲಿ ಬೆಳೆUಳಾಗಿ ಬೆಳಸುವಂತಹ ಎಷ್ಟೋ ಗಿಡಗಳು ಇದ್ದಾವೆ. ಅದು ಅಲದೆ, ಸಸ್ಯ ಶಾಸ್ತ್ರಕ್ಕೆ..... ಶಾಸ್ತ್ರೀಯವಾಗಿ Important ಆಗಿರುವಂತಹ ಕೆಲವು ತಳಿಗಳನ್ನು ಕೂಡ ಕೂಡಿಸಿದ್ದೇವೆ.nammalli beḷeUḷāgi beḷasuvantaha eṣṭō giḍagaḷu iddāve. adu alade, sasya śāstrakke..... śāstrīyavāgi Important āgiruvantaha kelavu taḷigaḷannu kūḍa kūḍisiddēve.There are many plants that can be grown as crops. We have added many species which are classically important ಅ.... ಉದಾಹರಣೆಗೆ ಈ ನನ್ನ ಬಲದ ಬದಿಗೆ ಇರುವಂತಹ ಅಶೋಕ ವೃಕ್ಷ. ನಮ್ಮ ಮಕ್ಕಳಿಗೆ ಎಷ್ಟೋ ಜನರಿಗೆ ಅದರ ಪರಿಚಯವೇ ಇಲ್ಲ.a.... udāharaṇege ī nanna balada badige iruvantaha aśōka vṛkṣa. namma makkaḷige eṣṭō janarige adara paricayavē illa.For example: Ashoka tree towards my right. Many people in duding are no familiar with it. ಅದೂ ರಾಮಾಯಣದಲ್ಲಿ ಹೇಳಿರುವಂತಹ ಒಂದು ಮುಖ್ಯವಾದ ಒಂದು ಗಿಡ. ಅಶೋಕ..... ಅದು...... ಅದನ್ನು ಪರಿಚಯಿಸೋದಕ್ಕೆ..... ಅದನ್ನು ಔಷಧವಾಗಿಯೂ ಉಂಟು.adū rāmāyaṇadalli hēḷiruvantaha ondu mukhyavāda ondu giḍa. aśōka..... adu...... adannu paricayisōdakke..... adannu auṣadhavāgiyū uṇṭu.Ashoka is an important tree as mentioned in Ramayana. It has medicinal values too. ಮತ್ತೆ ಮೂಡಬಿದ್ರಿ ಎಂಬುದು ಬಿದಿರಿನಿಂದ ಬಂದ ಹೆಸರು. ಆದರೆ, ಇಲ್ಲಿ ಕ್ರಮೇಣ ಎಷ್ಟು ಮಟ್ಟಿಗೆ ಆಯಿತು ಅಂತಂದ್ರೆ, ಬಿದರೆಲ್ಲ ನಾಶವಾಗಿ ಚಟ್ಟ ಕಟ್ಟೋಕೂ ಬಿದಿರಿಲ್ಲದ ಪರಿಸ್ಥಿತಿ ಬಂತು.matte mūḍabidri embudu bidirininda banda hesaru. ādare, illi kramēṇa eṣṭu maṭṭige āyitu antandre, bidarella nāśavāgi caṭṭa kaṭṭōkū bidirillada paristhiti bantu.The name Mudabidri is derived from bamboo. But, here gradually there is so much of change that even for making chaTTa, there was no bamboo available ಹಾಗಿರುವಾಗ ನಾವು ಬಿದಿರಿನ ತಳಿಗಳನ್ನು ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ,hāgiruvāga nāvu bidirina taḷigaḷannu abhivṛddhi māḍabēku emba uddēśadinda,In that case, with the purpose of developing bamboo varieties ಲೋಕದಲ್ಲಿ ಎಲ್ಲೆಲ್ಲಿ ಒಳ್ಳೆಯ ಬಿದಿರುಗಳುಂಟು ಅದನ್ನು ಕೂಡಿಸ್ಲಿಕ್ಕೆ ಹೋಗಿ, ಸಾಧಾರಣ 40ಕ್ಕೂ ಮೇಲೆ ತಳಿಗಳನ್ನು ಕೂಡಿಸಿದ್ದೇವೆ.lōkadalli ellelli oḷḷeya bidirugaḷuṇṭu adannu kūḍislikke hōgi, sādhāraṇa 40kkū mēle taḷigaḷannu kūḍisiddēve.we have collected more than forty species from all over. ಇಂಡೋನೇಶಿಯಾದಿಂದ ಹಿಡಿದು ಕೋಸ್ಟರಿಕಾದ ವರೆಗಿನ ಕೆಲವು ಜಾತಿಯ ಬಿದಿರುಗಳನ್ನು ಇಲ್ಲಿ ಕೂಡಿಸಿ ಬೆಳೀತಾ ಇದ್ದೇವೆ.iṇḍōnēśiyādinda hiḍidu kōsṭarikāda varegina kelavu jātiya bidirugaḷannu illi kūḍisi beḷītā iddēve.Some Varieties are brought from Indonesia to costa Rice and are grown here ಅದು ಇನ್ನೊಂದು ಮುಖ್ಯವಾದದ್ದು. ಇಲ್ಲಿ ಒಂದು ತಳಿ ಇಲ್ಲಿ ಎದುರಿಗೆ ಕಾಣ್ತಾವುಂಟು.adu innondu mukhyavādaddu. illi ondu taḷi illi edurige kāṇtāvuṇṭu.That is another important variety, the one that is growing there. ನಮ್ಮಲ್ಲಿ ಕೃಷಿ ವಿಚಾರ ಮಾತಾಡುವಾಗ ಸರಕಾರದಿಂದ ಏನು ಸಿಗ್ತದೆ, ವಿಮೆ ಮಾಡಿದ್ರೆ ಸಹಕಾರ ಆಗ್ಬಹುದೋnammalli kṛṣi vicāra mātāḍuvāga sarakāradinda ēnu sigtade, vime māḍidre sahakāra āgbahudōWhen we talk about agriculture, we think of what we get from the government and if it is helpful to get insured ಸಬ್ಸಿಡಿ ಕೊಟ್ರೆ ಸಹಕಾರ ಆಗ್ಬಹುದೋ ಅಂತ ಒಂದು ಎಲ್ಲಾ ಯೋಚನೆಗಳು ನಮ್ಮ bureaucrats ನಿoದ ಬರ್ತದೆ.sabsiḍi koṭre sahakāra āgbahudō anta ondu ellā yōcanegaḷu namma bureaucrats nioda bartade.All kinds of ideas come from bureaucrats what can we get from government, whether insurance will be useful or getting subsidy is useful. ಆದರೆ, ಕೃಷಿ ಉದ್ದಾರ ಆಗ್ಬೇಕಾದ್ರೆ ಕೃಷಿಕರಿಂದಲೇ ಆಗ್ಬೇಕು.ādare, kṛṣi uddāra āgbēkādre kṛṣikarindalē āgbēku.But, only farmers can improve agriculture ಆದ್ರೆ ಅಡೆತಡೆಗಳು ಅದಕ್ಕೆ ಏನಾದ್ರೂ ಇದ್ರೆ ಮಾತ್ರ ಸರಕಾರ ತೆಗದ್ರ್ರೆ ಉತ್ತಮವಾಗ್ತದೆ.ādre aḍetaḍegaḷu adakke ēnādrū idre mātra sarakāra tegadrre uttamavāgtade.If there are any hurdles to it, it is better if the government removes them ನಾವು ಈ ಕೃಷಿ ಪ್ರದೇಶದಲ್ಲಿ ಉಳಿದುಕೊಳ್ಳಿಕೆ ಕಾರಣ ಒಂದು ಏನು ಅಂತ ಹೇಳಿದ್ರೆ,nāvu ī kṛṣi pradēśadalli uḷidukoḷḷike kāraṇa ondu ēnu anta hēḷidre,The reason for us to remain in this sector of agriculture is ನಾವು ಒಂದು ಬೆಳೆಯ ಮೇಲೆ ಹೊಂದಿಕೊಂಡಿಲ್ಲ. ಕೃಷಿಯಲ್ಲಿ ವೈವಿಧ್ಯತೆ.nāvu ondu beḷeya mēle hondikoṇḍilla. kṛṣiyalli vaividhyate.We are not depending on one crop. not dependent on one variety in cultivation ಅದರಲ್ಲಿ ಒಂದು failure ಆದ್ರೆ ನಮಗೆ insurance ಇನ್ನೊಂದು ಬೆಳೆ. ನಾ.....insurance ಪಾಲಿಸಿಯಿಂದ ಬರೂದಿಲ್ಲ.adaralli ondu failure ādre namage insurance innondu beḷe. nā.....insurance pālisiyinda barūdilla.If one crop fails, the insurance lies in another crop, not from insurance policy. ಹಾಗೇನೇ, ನಮಗೆ ಎ... ಏನಾದ್ರೂ.... ಕಾಣಬೇಕಾದ್ರೆ, ಬಂಡವಾಳ ಕೂಡ ಇಲ್ಲೇ ಉತ್ಪಾದನೆ ಆಗ್ಬೇಕು.hāgēnē, namage e... ēnādrū.... kāṇabēkādre, baṇḍavāḷa kūḍa illē utpādane āgbēku.Also, if we have to see more money, the capital should also be grown here ಇದು ಒಂದ್ನೇದು. ಎರಡ್ನೇದು ಎಲ್ಲಾ ಕೃಷಿ ಉ....ಕೃಷಿ ಉತ್ಪಾದನೆ ಮಾಡಿದ್ರೆ ನೇರವಾಗಿ ಮಾರಾಟ ಮಾಡ್ಲಿಕೆ ನೀವು ಮಾರುಕಟ್ಟೆಗೆ ತೆಕ್ಕೊಂಡು ಹೋದ್ರೆ ನಿಮಗೆ ಸಿಕ್ಕುವ ಬೆಲೆ ಬಹಳ ಕಡಿಮೆ.idu ondnēdu. eraḍnēdu ellā kṛṣi u....kṛṣi utpādane māḍidre nēravāgi mārāṭa māḍlike nīvu mārukaṭṭege tekkoṇḍu hōdre nimage sikkuva bele bahaḷa kaḍime.Secondly, after agricultural produce you have to take it to market. The price that you get is very low. ಸ್ವಲ್ಪಾಂಶವನ್ನಾದ್ರೂ ಸಂಸ್ಕರಣೆ ಮಾಡಿ, ಅದನ್ನು ಮಾರ್ಕೆಟ್ ಮಾಡೋದಾದ್ರೆ,svalpāṁśavannādrū saṁskaraṇe māḍi, adannu mārkeṭ māḍōdādre,If a part of it is processed and then marketed. ನಮ್ಮ ಹಣ ಪಟ್ಟಣಕ್ಕೆ ಹೋಗುವಂತಾದ್ದು ಆದಷ್ಟು ಇಲ್ಲಿಯೆ, ಹಳ್ಳಿಯಲ್ಲಿ ಉಳಿಯುವ ಹಾಗಾದ್ರೆ ಇನ್ನೊಂದು step ಅದ್ರಲ್ಲಿ. ಒಂದು ಹೆಜ್ಜೆ.namma haṇa paṭṭaṇakke hōguvantāddu ādaṣṭu illiye, haḷḷiyalli uḷiyuva hāgādre innondu step adralli. ondu hejje.We can prevent our money going to market. It is a good step. ಮೂರನೇದಾಗಿ ಈಗ ಇತ್ತೀಚೆಗೆ, ಪಟ್ಟಣಗಳಲ್ಲಿ ಬೆ...ವಾಸಿಸುವವರಿಗೆ ಕೃಷಿಯ ವಿಚಾರ ಕಲೀಬೇಕು,mūranēdāgi īga ittīcege, paṭṭaṇagaḷalli be...vāsisuvavarige kṛṣiya vicāra kalībēku,Thirdly, the city people want to see the life here to know about agriculture. ಇಲ್ಲಿ ಹೇಗೆ ಜೀವನ ಉಂಟು ಅಂತ ನೋಡ್ಬೇಕು ಅಂತ ಬಹಳ ಆಸಕ್ತಿ ಇದೆ.illi hēge jīvana uṇṭu anta nōḍbēku anta bahaḷa āsakti ide.There is lot of curiosity. ಪರದೇಶದಿಂದ ಬಂದವರಿಗೂ ಇಲ್ಲಿಯ ಜೀವನ ರೀತಿಯನ್ನು ಕಾಣ್ಲಿಕೆ ಆ...ಆಸಕ್ತಿ ಉಂಟು.paradēśadinda bandavarigū illiya jīvana rītiyannu kāṇlike ā...āsakti uṇṭu.Foreigners coming here too have lot of interest. ಅದಕ್ಕಾಗಿ ನಾವು Tourismನ್ನು ಕೂಡ ಕೃಷಿಯ ಒಟ್ಟಿಗೆ ಒಂದು ಅಂಗವಾಗಿ ಬೆಳೆಸ್ಲಿಕ್ಕೆ ಪ್ರಯತ್ನ ಮಾಡ್ತೇವೆ.adakkāgi nāvu Tourismnnu kūḍa kṛṣiya oṭṭige ondu aṅgavāgi beḷeslikke prayatna māḍtēve.For this reason, we try to blend tourism along with agriculture ಒಂದನೇದಾಗಿ Foreign tourist ಬಂದಾಗ, ಅವರು, ಸಂಬಾರ ಜೀನ್ಸ್‍ಗಳನ್ನು ಉಪಯೋಗಿಸ್ತಾರೆ ಆ ಗಿಡ Àಹೇಗೆ ಬೆಳೀತದೆ ಅಂತ ಅವರಿಗೆ ಗೊತ್ತಿರೋದಿಲ್ಲ.ondanēdāgi Foreign tourist bandāga, avaru, sambāra jīns‍gaḷannu upayōgistāre ā giḍa Àhēge beḷītade anta avarige gottirōdilla.When foreign tourists come here, they use Sambar products. They are not aware of ways of growing it. ಅದೆಲ್ಲ ಇಲ್ಲಿ ನಾವು ಬೆಳೀತಿದ್ದೇವೆ ಅಂತ ತೋರಿಸ್ಲಿಕಾಗ್ತದೆ. ಇಲ್ಲಿ ಬೆಳೆದಂತಹ ವಸ್ತುಗಳನ್ನು ಅವರಿಗೆ ಮಾರಾಟ ಮಾಡ್ಲಿಕೆ ಆಗ್ತದೆ.adella illi nāvu beḷītiddēve anta tōrislikāgtade. illi beḷedantaha vastugaḷannu avarige mārāṭa māḍlike āgtade.We can show here how it is grown. We can sell the products grown here ಇದು, ಮತ್ತೆ ಅವ್ರಿಗೆ ಇಲ್ಲಿ ಕೆಲವು ವ್ಯವಸ್ಥೆ ಮಾಡಿದ್ರೆ ಅದ್ರಲ್ಲು ಕೂಡ ಕೆಲವು ಆದಾಯ ಮಾಡ್ಲಿಕ್ಕೆ ಆಗ್ತದೆ.idu, matte avrige illi kelavu vyavasthe māḍidre adrallu kūḍa kelavu ādāya māḍlikke āgtade.If some arrangements are made here for stay, some income can be generated. ಇದು ಮೂರನೇದ್ದು. ಹಾಗೆ, ಒಂದು ವೈವಿಧ್ಯತೆ ಬೇಕು. ನಮ್ಮ ಸಂಸ್ಕರಣೆ ಬೇಕು.idu mūranēddu. hāge, ondu vaividhyate bēku. namma saṁskaraṇe bēku.Thus, some variety is required processing is required ಸಾಧ್ಯ ಇದ್ದಲ್ಲಿ Tourism ಕೂಡ ಸೇರಿಸ್ಕೊಂಡ್ರೆ ಅದನ್ನು ಒಂದು ಕೃಷಿಯಾಗಿ ಮುಂದುವರಿಸ್ಲಿಕ್ಕೆ ಸಾಧ್ಯ ಉಂಟು.sādhya iddalli Tourism kūḍa sēriskoṇḍre adannu ondu kṛṣiyāgi munduvarislikke sādhya uṇṭu.If possible, tourism can be added so that it can be developed as an occupation.
Word Transliteration Meaning
ಇದುiduThis
ನನ್ನnannaMy
ಕಲ್ಪನೆkalpaneImagining
ಆದರೆādareBut
ಕೊರತೆkorateLack
ಬೆಟ್ಟbeṭṭaHill
ಕೆಲವುkelavuFew
ಕೃಷಿkṛṣiAgriculture
ಹೆಚ್ಚುheccuMany
ಉದ್ಯೋಗudyōgaEmployment
ಸೃಷ್ಟಿsṛṣṭiCreation
ವಿದ್ಯಾಭ್ಯಾಸvidyābhyāsaEducation
ನಾನುnānuI
ಸಸ್ಯಶಾಸ್ತ್ರsasyaśāstraBotany
ಸಾಧ್ಯsādhyaPossible
ಉದ್ದೇಶuddēśaPurpose
ಪ್ರಯತ್ನprayatnaTry
3030Thirty
ಬೆಳೆbeḷeCrop
ಹಣ್ಣು ಹಂಪಲುhaṇṇu hampaluFruit
ಔಷಧಿauṣadhiMedicine
ಗಿಡgiḍaPlant
ಆಹಾರāhāraFood
ಅಕ್ಕಿakkiRice
ಗೋಧಿgōdhiWheat
ಕಾಯಿkāyiRipe
ಅವಕಾಶavakāśaOpportunity
ಹೊಸhosaNew
ಪ್ರಾಯೋಗಿಕprāyōgikaPractical
ಆವಿಷ್ಕಾರāviṣkāraInvention
ತಳಿtaḷiBreed
ಪರಿಚಯparicayaIntroduction
ಬಿದಿರುbidiruBamboo
ನಾಶnāśaDestroy
ಪರಿಸ್ಥಿತಿparisthitiSituation
ಅಭಿವೃದ್ಧಿabhivṛddhiDevelopment
ಉದ್ದೇಶuddēśaObjective
ಸಹಕಾರsahakāracooperation
ಬೆಲೆbelePrice
ಬಹಳbahaḷaMany
ಕಡಿಮೆ.kaḍime.Low
ಹಳ್ಳಿhaḷḷiVilllage
ಹೆಜ್ಜೆ.hejje.Step
ಜೀವನjīvanaLife
ಆಸಕ್ತಿāsaktiInterest
ವ್ಯವಸ್ಥೆvyavastheSystem
ಆದಾಯādāyaIncome
ನಮ್ಮnammaOur
ಸಂಸ್ಕರಣೆsaṁskaraṇeProcessing
ಒಂದುonduOne
ಕೃಷಿkṛṣiAgriculture
ಸಾಧ್ಯsādhyaPossible

Related Grammar Lessons

The Past Tense - ಭೂತ ಕಾಲ

The Present Tense - ವರ್ತಮಾನ ಕಾಲ

The Future Tense - ಭವಿಷ್ಯತ್ ಕಾಲ

The Past Tense

In modern Kannada the past tense is indicated by adding d before personal endings. Examples:

1. ಅವರು ಪ್ರಾರಂಭ ಮಾಡಿದರು – ಮಾಡಿದ್ರು
2. ನಾನು ಆರಂಭ ಮಾಡಿದೆ.
3. ನಾನು ಬೆಳೆಸಿದೆ
4. ಅವಳು ತಂದಳು
5. ನೀನು ಗಿಡಕ್ಕೆ ನೀರು ಹಾಕಿದೆ.
6. ಅವನು ಹಣ್ಣು ತಿಂದನು
7. ಗಿಡ ಚೆನ್ನಾಗಿ ಬೆಳೆದಿದೆ
8. ಬಳ್ಳಿ ಹಬ್ಬಿದೆ.
9. ಅವು ಬೆಳೆದುವು - ಬೆಳೆದವು
10. ಅಮೇರಕಾದಲ್ಲಿ ನೋಡಿದೆ.
11. ಆಫ್ರಿಕಾದಲ್ಲಿ ಇದೆ.
12. ಅವರು ತಂದರು

The Present Tense

The simple present tense

In simple present tense, the verb iru is used. It is used in accordance with the gender and number. Examples:

1. ಅವನು ಇರುತ್ತಾನೆ
2. ಅವಳು ಇರುತ್ತಾಳೆ
3. ಗಿಡ ಇರುತ್ತದೆ
4. ಅಶೋಕಾ ಮರ ಇದೆ
5. ಸಸ್ಯಗಳು ಇವೆ
6. ದೇಶಗಳು ಇವೆ. – ದೇಶಗಳಿವೆ
7. ಪ್ರತಿ ಮರಕ್ಕೂ ಹೆಸರಿಗಳಿವೆ
8. ಪ್ರತಿ ಮರದಲ್ಲೂ ಹಣ್ಣುಗಳಿವೆ
9. ಎಲೆಗಳು ಹಸಿರಾಗಿವೆ
10. ಮಣ್ಣು ಫಲವತ್ತಾಗಿದೆ.

The simple present tense is also formed without a verb.

1. ಅದು ಮರ
2. ಅದು ಗಿಡ
3. ಇದು ಹಣ್ಣು
4. ಅವು ಕಾಯಿಗಳು
5. ಅವರು ಕೆಲಸಗಾರರು
6. ಒಳ್ಳೆಯ ಮರಗಳು
7. ಫಲವತ್ತಾದ ನೆಲ
8. ದೊಡ್ಡ ಹಣ್ಣು
9. ಸಣ್ಣ ಗಿಡ
10. ಅವನ ಕೆಲಸ

The present habitual tense:

This tense indicates habitual actions or general statements. In modern Kannada, both the present tense and future tense have the same marker. The marker is tt. The verb agrees in number and gender with the subject. Examples:

ನಾನು ಗಿಡಗಳನ್ನು ಬೆಳೆಸುತ್ತೇನೆ
ಪ್ರತಿ ದಿನ ತೋಟಕ್ಕೆ ಹೋಗುತ್ತೇನೆ
ಅವಳು ಹಣ್ಣು ತಿನ್ನುತ್ತಾಳೆ
ದನಗಳು ಬರುತ್ತವೆ
ಆಮದು ಮಾಡುತ್ತೇನೆ
ರಫ್ತು ಮಾಡುತ್ತಾರೆ
ಅವನು ಕೆಲಸ ಮಾಡುತ್ತಾನೆ
ಅವಳು ತಿನ್ನುತ್ತಾಳೆ

The present progressive tense:

This tense is used when the action is actually taking place. The verb takes the tense suffix tt and the tense markers of simple present tense. Examples:

ನಾನು ಬೆಳೆಸುತ್ತಿದ್ದೇನೆ
ಅವಳು ನೀರು ಹಾಕುತ್ತಿದ್ದಾಳೆ
ಮರ ಫಲ ಬಿಡುತ್ತಿದೆ
ಬಳ್ಳಿ ಹಬ್ಬುತ್ತಿದೆ
ಹಣ್ಣು ನೇತಾಡುತ್ತಿದೆ.
ನೀನು ಕೆಲಸ ಮಾಡುತ್ತಿದ್ದೀಯಾ
ಅವರು ತಿನ್ನುತ್ತಿದ್ದಾರೆ

1. Translate into English.

1. ಅವರು ತೋಟ ಮಾಡಿದರು
2. ಅವಳು ಗಿಡ ಬೆಳೆಸಿದಳು
3. ಮಿಶನರಿಗಳು ಬಂದರು
4. ಗಿಡ ಬೆಳೆಯುತ್ತಿದೆ.
5. ನೀರು ಹರಿಯುತ್ತಿದೆ.
6. ಬಳ್ಳಿ ಹಬ್ಬುತ್ತದೆ.
7. ಅವು ಹಲಸಿನ ಹಣ್ಣುಗಳು
8. ಅಶೋಕಾ ಮರ ಬೆಳೆಸಿದೆ.
9. ಗೊಬ್ಬರ ತರ್ತಾನೆ
10.  ಅವನು ಹೋಗಿದ್ದಾನೆ

2. Translate into Kannada.

1. Are they workers?
2. That is Mango tree
3. This is a creeper
4. Take mango fruit
5. It came yesterday
6. He will come tomorrow
7. He is cutting tree
8. She is working
9. Water is flowing
10. Jack fruit is hanging

3. Use the future tense marker.

1. ಅವಳು ನಾಳೆ ......................(ಬರು)
2. ದನ ನಿನ್ನೆ ......................(ಬರು)
3. ಅವನು ನಾಳೆ ......................(ಹೋಗು)
4. ಇವನು ಸುಂದರವಾಗಿ ......................(ಬರೆ)
5. ಇವರು ......................(ಓದು)

4. Translate into Kannada:

1. I will grow jasmine in my garden
2. Mangos will arrive tomorrow
3. No water yesterday
4. She will eat at nigh
5. He will dance in evening
6. Will get insurance next year
7. She is eating mango
8. Tree is growing

Send your completed homework by email to klcjnu@gmail.com