Journalism

Transcription
Transliteration
Translation
ನೀವು ಪತ್ರಿಕೆಗಳ ಹೆಸರನ್ನು ನೋಡಿದರೆ ನಿಮಗೆ ಅದು ಜನರಿಗೆ ಸಂಬಂಧ ಪಟ್ಟಿದ್ದು ನಾಡಿಗೆ ಸಂಬಂಧ ಪಟ್ಟಿದ್ದು ಅಂತ ಗೊತ್ತಾಗುತ್ತೆ.nīvu patrikegaḷa hesarannu nōḍidare nimage adu janarige sambandha paṭṭiddu nāḍige sambandha paṭṭiddu anta gottāgutte.As you look at the names of the news papers you will realise that they are related to the people and land. ಸಂಯುಕ್ತ ಕರ್ನಾಟಕ ಹುಟ್ಟಿದಾಗ ಕರ್ನಾಟಕದ ಏಕೀಕರಣ ಆಗಬೇಕು ಅಂತ ಆಶಯವನ್ನ ಇಟ್ಟುಕೊಂಡು ಆ ಪತ್ರಿಕೆಯನ್ನ ಶುರು ಮಾಡಿದರುsaṁyukta karnāṭaka huṭṭidāga karnāṭakada ēkīkaraṇa āgabēku anta āśayavanna iṭṭukoṇḍu ā patrikeyanna śuru māḍidaruWhen Samyuktha Karnataka was established it was done with the objective of unification of Karnataka. ಪ್ರಜಾವಾಣಿ ಪ್ರಜೆಗಳ ಧ್ವನಿಯಾಗಿರಬೇಕು ಅನ್ನೊ ಪತ್ರಿಕೆಯಾಗಿತ್ತುprajāvāṇi prajegaḷa dhvaniyāgirabēku anno patrikeyāgittuPrajavani is a news paper with the idea of becoming the voice of the people. ಅದೇ ಉದಯವಾಣಿ ಇರಬಹುದು, ವಿಶ್ವ ವಾಣಿ ಇರಬಹುದು, ವಿಜಯವಾಣಿ ಇರಬಹುದು, ವಿಜಯ ಕರ್ನಾಟಕ ಇರಬಹುದು, ವಿಶಾಲ ಕರ್ನಾಟಕ ಇರಬಹುದುadē udayavāṇi irabahudu, viśva vāṇi irabahudu, vijayavāṇi irabahudu, vijaya karnāṭaka irabahudu, viśāla karnāṭaka irabahuduSimilarly, Udayavani, Vishwa Vani, Vijaya Karnataka, Vijaya Vani etc., ಎಲ್ಲಾ ಪತ್ರಿಕೆಗಳಿಗೆ ನಾಡು ಮತ್ತು ನುಡಿಗೆ ಸಂಬಂಧಪಟ್ಟ ಒಂದು ಧ್ವನಿ ಎದ್ದು ಕಾಣಿಸುತ್ತೆ.ellā patrikegaḷige nāḍu mattu nuḍige sambandhapaṭṭa ondu dhvani eddu kāṇisutte.are having the voice related to the land and the language. ಅಂದರೆ ಮುಖ್ಯವಾಗಿ ಏನು ಆಗಿರಬಹುದು ಅಂತ ಅನ್ನಿಸುತ್ತೆ ಅಂದರೆandare mukhyavāgi ēnu āgirabahudu anta annisutte andareWhat appears to be more important is that ನಾವೆಲ್ಲ ಪತ್ರಿಕೆಗಳನ್ನ ಆರಂಭಿಸಿದ ಹಿರಿಯರು ಎಲ್ಲಾ ಯೋಚನೆ ಏನು ಮಾಡಿರಬಹುದು ಅಂದರೆnāvella patrikegaḷanna ārambhisida hiriyaru ellā yōcane ēnu māḍirabahudu andarethe elders who started these newspapers ಮೋದಲು ನಾವು ಓದುಗರಿಗೆ ನಾವು ಒಂದು ವೇದಿಕೆಯನ್ನ ಕಲ್ಪಿಸಬೇಕು ಮತ್ತು ಅವರಿಗೆ ಒಂದು ಧ್ವನಿಯನ್ನ ಒದಗಿಸಬೇಕು ಅನ್ನೊ ಮುಖ್ಯ ಧ್ಯೇಯ ಅವರಿಗೆ ಇತ್ತು ಹಾಗೆ ಇತ್ತು ಅನ್ನಿಸುತ್ತೆ. ನನಗೆmōdalu nāvu ōdugarige nāvu ondu vēdikeyanna kalpisabēku mattu avarige ondu dhvaniyanna odagisabēku anno mukhya dhyēya avarige ittu hāge ittu annisutte. nanagemight have thought of providing a platform to the people to raise their voice. ಮತ್ತೆ ಇನ್ನೊಂದು ಒಂದು ಪತ್ರಿಕೆ ಇರೋದು ಯಾವಾಗಲೂನುmatte innondu ondu patrike irōdu yāvāgalūnuI always felt ಹೆಚ್ಚು ತುಳಿತಕೊಳಗಾದ ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾಗುವಂತ ಒಂದು ಕೆಲಸವನ್ನ ಆ ಪತ್ರಿಕೆ ಮಾಡಬೇಕು.heccu tuḷitakoḷagāda mattu dhvani illadavarige dhvaniyāguvanta ondu kelasavanna ā patrike māḍabēku.that the newspaper should play the role of becoming the voice of the voiceless and oppressed people. ಹಾಗೂ ಸರ್ಕಾರದ ಜೊತೆಗೆ ಯಾವಾಗಲೂ ಮಾಧ್ಯಮದ ಒಂದು ಸಂವಾದ ನಿರಂತರವಾಗಿ ಇರುತ್ತೆ ಹಾಗೆ ಅಂತ ನನಗೆ ಅನ್ನಿಸುತ್ತೆ.hāgū sarkārada jotege yāvāgalū mādhyamada ondu saṁvāda nirantaravāgi irutte hāge anta nanage annisutte.I also feel that the medium will maintain a dialogue always with the government. ಸರ್ಕಾರವನ್ನ ನಾವು ಯಾವಾಗಲೂ Critical ಆಗಿ ನೋಡಬೇಕುsarkāravanna nāvu yāvāgalū Critical āgi nōḍabēkuWe should view the government the news papers can do the job of prompting the government to do a good job. Critical ಆಗಿ ನೋಡುವ ಮೂಲಕ ಮಾತ್ರ ನಾವು ಏನು ಮಾಡಬಹುದು ಅಂದರೆCritical āgi nōḍuva mūlaka mātra nāvu ēnu māḍabahudu andareWhile bein critical what we can do is ಜನರಿಗೆ ಆ ಸರ್ಕಾರ ಒಳ್ಳೆದು ಮಾಡಬೇಕು ಅನ್ನೊ ಕೆಲಸವನ್ನ ಕೂಡ ನಾವು ಪತ್ರಿಕೆಗಳು ಮಾಡಬೇಕಾಗುತ್ತೆ.janarige ā sarkāra oḷḷedu māḍabēku anno kelasavanna kūḍa nāvu patrikegaḷu māḍabēkāgutte.to expect the government to give good service ಅದಕ್ಕೆ ಒಟ್ಟಾರೆ ನಮ್ಮ ಹಿರಿಯರು, ಡಿ.ವಿ.ಜಿ ಯಂತವರು ಮತ್ತೊಬ್ಬರು ಅವರೆಲ್ಲಾ ಅಂದುಕೊಂಡಿದ್ದು ಏನು ಅಂದರೆadakke oṭṭāre namma hiriyaru, ḍi.vi.ji yantavaru mattobbaru avarellā andukoṇḍiddu ēnu andareOur elders like DVG et al thought that ಪತ್ರಿಕೆ ವಿರೋಧ ಪಕ್ಷದ ಸ್ಥಾನಲ್ಲಿದ್ದುಕೊಂಡು ಯಾವಾಗಲೂ ತನ್ನ ಕೆಲಸವನ್ನ ತಾನು ಮಾಡಬೇಕುpatrike virōdha pakṣada sthānalliddukoṇḍu yāvāgalū tanna kelasavanna tānu māḍabēkua news paper should always remain in the position of an opposition party and perform its job. ಒಂದು ಪತ್ರಿಕೆಯ ಮುಖ್ಯವಾದ ಉದ್ದೇಶ ಏನು ಆಗಿರಬೇಕು ಅಂದರೆondu patrikeya mukhyavāda uddēśa ēnu āgirabēku andareThe main purpose of any newspaper should be ಅದು ವಿಶ್ವಾಸರ್ಹತೆಯನ್ನ ಬಹಳ ಮುಖ್ಯವಾಗಿ ಹೊಂದಿರಬೇಕು ಹಾಗೆ ಅಂತ ನನಿಗೆ ಅನ್ನಿಸುತ್ತೆ.adu viśvāsarhateyanna bahaḷa mukhyavāgi hondirabēku hāge anta nanige annisutte.to have reliability, which I feel ಈಗ ಅದು ಬಹಳ ಬಿಕ್ಕಟ್ಟಿನಲ್ಲಿರುವ ಸಂಗತಿ ಕೂಡ ಹಾಗೆ ಅಂತ ಅನ್ನಿಸುತ್ತೆ.īga adu bahaḷa bikkaṭṭinalliruva saṅgati kūḍa hāge anta annisutte.I feel that at the moment this factor is in crisis. ನಾನು ಪತ್ರಿಕೆಗಳಿಗೆ ಸಂಬಂಧ ಪಟ್ಟಂತೆ ತಾವು ಈಗೆಲ್ಲಾ ಪ್ರಚಲಿತವಾಗಿರುವ Paid Journalism ಬಗ್ಗೆ ತಾವು ಗಮನಿಸಿರಬಹುದುnānu patrikegaḷige sambandha paṭṭante tāvu īgellā pracalitavāgiruva Paid Journalism bagge tāvu gamanisirabahuduYou might have noticed that paid journalism is currently is in practice. Paid Journalismವಿಶ್ವಾಸಾರ್ಹತೆಗೆ ಮುಖ್ಯವಾದ ಕುಟಾರ ಪ್ರಾಯವನ್ನ ಹಾಕ್ತಾ ಇದೆ ಹಾಗೆ ಅಂತ ನಾನು ಅಂದ್ಕೊಂಡಿದಿನಿ.Paid Journalismviśvāsārhatege mukhyavāda kuṭāra prāyavanna hāktā ide hāge anta nānu andkoṇḍidini.I am of the opinion that paid journalism is axing the reliability factor. ಮುಖ್ಯವಾಗಿ ಪತ್ರಿಕೆಗಳು ಮಾಡಬೇಕಾದ ಕೆಲಸ ಏನು ಅಂದರೆmukhyavāgi patrikegaḷu māḍabēkāda kelasa ēnu andareAnother important job of the news papers is ಸುದ್ದಿಯ ಜೊತೆಗೆ ಒಂದು ರಂಜನೆಯನ್ನು ಒದಗಿಸುವ ಕೆಲಸ ಕೂಡ ಪತ್ರಿಕೆಗಳ ಕೆಲಸsuddiya jotege ondu rañjaneyannu odagisuva kelasa kūḍa patrikegaḷa kelasato provide entertainment along with the news. ಆ ಕಾರಣಕ್ಕಾಗಿಯೇ ಪುರವಣಿಗಳು ಹುಟ್ಟಿಕೊಂಡವು ಹಾಗೆ ಅಂತ ನನಿಗೆ ಅನ್ನಿಸುತ್ತೆ.ā kāraṇakkāgiyē puravaṇigaḷu huṭṭikoṇḍavu hāge anta nanige annisutte.For this reason probably, the supplements took shape. ಅಮೇಲೆ ಇದು ವೈವಿಧ್ಯಮಯವಾದದ್ದು ಮೊದಲು ಸಾಹಿತ್ಯ ಅಂದರೆ ಲಲಿತ ಕಲೆ ಸಾಹಿತ್ಯ ಅನ್ನೋದುamēle idu vaividhyamayavādaddu modalu sāhitya andare lalita kale sāhitya annōduLater on, it became diverse in content. ಸಾಹಿತ್ಯ ಪುರವಣಿಯಲ್ಲಿ Art ಇತ್ತು, ಸಾಹಿತ್ಯ ಇತ್ತು, ನಾಟಕ ಇತ್ತು ಮತ್ತೊಂದು ರಚನೆ ಎಲ್ಲಾ ಇತ್ತುsāhitya puravaṇiyalli Art ittu, sāhitya ittu, nāṭaka ittu mattondu racane ellā ittuIn the beginning there was literature and art in Prajavani. News about theatre was there. ಅಮೇಲೆ ಭೂಮಿಕ,ಹೆಣ್ಣುಮಕ್ಕಳ ಪತ್ರಿಕೆಗಳೆಲ್ಲಾ ಬಂದ್ವುamēle bhūmika,heṇṇumakkaḷa patrikegaḷellā bandvuLater on “Bhoomika’ came as a voice of the women. ಮಾದ್ಯಮ ಕ್ಷೇತ್ರದಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿದಾವೆ. ಆವಿಷ್ಕಾರಗಳು ಆಗಿದಾವೆ.mādyama kṣētradalli bahaḷaṣṭu vyatyāsagaḷāgidāve. āviṣkāragaḷu āgidāve.Many changes have taken place in the medium and also many inventions are done. ತಾಂತ್ರಿಕವಾಗಿ ಆನೇಕ ಬದಲಾವಣೆಗಳು ಬಂದಿದಾವೆ.tāntrikavāgi ānēka badalāvaṇegaḷu bandidāve.Many technical changes has also been adapted. ನಾವೆಲ್ಲ ಕೈ ಯಿಂದ ಬರೆದವರು ಆರಂಭದಲ್ಲಿ ಮೊಳೆ ಜೋಡಿಸಿದ ಕಾಲದಲ್ಲಿ ನಾವು ಇದ್ದೇವು.nāvella kai yinda baredavaru ārambhadalli moḷe jōḍisida kāladalli nāvu iddēvu.We wrote manually during those days. We live in the age of manual typesetting. ಆಮೇಲೆ Fax ಬಂತು, ಆಮೇಲೆ Computer ಬಂತುāmēle Fax bantu, āmēle Computer bantuFax and computers came later. ಅವೆಲ್ಲವು ಅವಾಸ್ಥಾಂತರಗಳನ್ನು ನೋಡಿದ್ದೇವೆ.avellavu avāsthāntaragaḷannu nōḍiddēve.We have witnessed all such transitions. ಈಚಿನ ಕಳೆದ ಎಂಟು, ಹತ್ತು ವರ್ಷಗಳಲ್ಲಿ ಪತ್ರಿಕೋದ್ಯಮಕ್ಕೆ ಒಂದು ಸವಾಲು ಆಗಬಹುದಾದು ಅನ್ನಿಸಿತ್ತು ಅದು ಎಲ್ಲಾರಿಗೂīcina kaḷeda eṇṭu, hattu varṣagaḷalli patrikōdyamakke ondu savālu āgabahudādu annisittu adu ellārigūIn the last eight to ten years, what appeared to be a challenge to journalism came Electronic Media ಬಂತು Electronic Media ಸಹಜವಾಗಿನೆ Visual Media ಅದು.Electronic Media bantu Electronic Media sahajavāgine Visual Media adu.in the form of electronic medium which is effectively and naturally the visual media. ಸಹಜವಾಗೇ ಜನರಿಗೆ ಹೆಚ್ಚು Appeal ಅಗ್ತದೆ, ಮತ್ತು ಅದರಲ್ಲಿ ನಾವು ಕಾಣಿಸಿಕೊಳ್ಳಬೇಕು ಹಾಗೆ ಅಂತ ಹೇಳಿ ಎಲ್ಲಾರೂ ಬಯಸೋದು ಸಹಜವಾಗಿದೆ.sahajavāgē janarige heccu Appeal agtade, mattu adaralli nāvu kāṇisikoḷḷabēku hāge anta hēḷi ellārū bayasōdu sahajavāgide.It appeals naturally to the people. Also it is natural that people like to appear in it. ಆದರೆ ಏನಾಗಿದೆ ಅಂದರೆ ಅದರಲ್ಲಿ ಮತ್ತೊಂದು ಒಂದು ಸಮಸ್ಯೆ ಇದೆādare ēnāgide andare adaralli mattondu ondu samasye ideBut, there is a problem in it. ಏನು Electronic Mediaದಲ್ಲಿ ಒಂದು ಸಮಸ್ಯೆ ಇದೆ ಅನ್ನಿಸುತ್ತೆ.ēnu Electronic Mediadalli ondu samasye ide annisutte.The problem with electronic media is ಪತ್ರಿಕೆಎಗಳಿಗಾದರೆ ಬೆಳಗ್ಗೆ ಸುದ್ದಿ ಕೊಡಬೇಕಾಗಿರುತ್ತೆ. ಜನರಿಗೆ ತಲುಪಿಸಬೇಕಾದ ಆಗತ್ಯ ಇದೆ ಅದರಲ್ಲಿ.patrikeegaḷigādare beḷagge suddi koḍabēkāgirutte. janarige talupisabēkāda āgatya ide adaralli.The newspapers deliver the news every morning. ಆದರೆ Electronic Mediaದಲ್ಲಿ ಘಳಿಗೆ ಘಳಿಗೆಗೂ ಯಾರು ಮೊದಲು ಸುದ್ದಿ ಕೊಡಬೇಕು ಅನ್ನೊādare Electronic Mediadalli ghaḷige ghaḷigegū yāru modalu suddi koḍabēku annoBut, the visual media has to give the news every moment ಒಂದು ವಿಚಿತ್ರವಾದ ಅಥವಾ ಸಹಜವಾದ ಪೈಪೋಟಿಗೆ ಅಥವಾ ಸ್ಪರ್ಧೆಗೆ ಅವರು ಇಳಿದಿರೊದ್ರಿಂದondu vicitravāda athavā sahajavāda paipōṭige athavā spardhege avaru iḷidirodrindaas they are in mutual competition which is a peculiar but natural one. ಸುದ್ದಿ ನಿಜವೇ? ಸುಳ್ಳೇ? ಅನ್ನೊದು ಒಂದು ದೊಡ್ಡ ಸಮಸ್ಯೆ ಇದೆ.suddi nijavē? suḷḷē? annodu ondu doḍḍa samasye ide.Hence, the question arises whether the news is true or false. ನಾನು ತಮಗೆ ಮೊದಲೇ ಹೇಳಿದೆ, ವಿಶ್ವಾರ್ಹತೆ ತುಂಬಾ ಮುಖ್ಯವಾದ ಸಂಗತಿ ಪತ್ರಿಕೆಗಳಿಗೆ ಅನ್ನೊದುnānu tamage modalē hēḷide, viśvārhate tumbā mukhyavāda saṅgati patrikegaḷige annoduAs I told you earlier, integrity is the most important factor for a newspaper. ಯಾವ ಸುದ್ದಿಯನ್ನು ಪ್ರಕಟ ಮಾಡಬೇಕಾದರೂ ಕೂಡ ಅದಕ್ಕೆ ಇನ್ನೊಂದು ಮುಖ ಇರಬೇಕು ಅನ್ನೊದು ನಾವು ತಿಳ್ಕೊಳಬೇಕುyāva suddiyannu prakaṭa māḍabēkādarū kūḍa adakke innondu mukha irabēku annodu nāvu tiḷkoḷabēkuWe should realise that there is one more face of the news before publishing it. ಎರಡನೆಯದು Verify ಮಾಡಬೇಕು ಅದನ್ನ, ಅದು ನಿಜವೆ ಸುಳ್ಳೇ ಅನ್ನೊದನ್ನ Verify ಮಾಡ್ಕೊಬೇಕು.eraḍaneyadu Verify māḍabēku adanna, adu nijave suḷḷē annodanna Verify māḍkobēku.It should be verified whether it is true or false. Electronic ಮಾಧ್ಯಮಗಳು ಬರುದಕ್ಕಿಂತ ಮುಂಚೆ ಕೂಡ ಇಂಥ ಅವಘಡಗಳಾಗಿವೆ ತಮಗೆಲ್ಲಾ ಅದು ಗೊತ್ತುElectronic mādhyamagaḷu barudakkinta muñce kūḍa intha avaghaḍagaḷāgive tamagellā adu gottuSuch typw od mishaps used to happen before electronic media came. ಯಾರೊ ಸತ್ತು ಹೋದರು ಹಾಗೆ ಅನ್ನೊ ಸುದ್ದಿಗಳು ಕೂಡ ಆಕಾಶವಾಣಿಯಲ್ಲಿ ಬಂದಿದ್ದು ಉಂಟು ಇಲ್ಲ ಅಂತ ನಾನು ಹೇಳಲ್ಲyāro sattu hōdaru hāge anno suddigaḷu kūḍa ākāśavāṇiyalli bandiddu uṇṭu illa anta nānu hēḷallaI don’t deny the facts that the death News of come persons appeared on Akashavani also. ಸೋ ಆ ಪೈಪೋಟಿ ಅಂದರೆ ಒಂದು ಸ್ಪರ್ಧೆ ಏನು ಇದೆಯಲ್ಲ ಬಹುಮುಖತೆ ಏನು ಇದೆಯಲಾ ಬಂದಿರೋ ಮಾದ್ಯಮsō ā paipōṭi andare ondu spardhe ēnu ideyalla bahumukhate ēnu ideyalā bandirō mādyama ಅದು ಒಂದು ಆರೋಗ್ಯ ಪೂರ್ಣ ಒಂದು ಗುಣಮಟ್ಟವನ್ನ ತರಬೇಕಾದ ಅಗತ್ಯ ಇತ್ತು.adu ondu ārōgya pūrṇa ondu guṇamaṭṭavanna tarabēkāda agatya ittu.The competition that prevails among media should have achieved a healthy competition. ಸಾಧ್ಯತೆನೂ ಇತ್ತು ಅಂತ ಅನ್ನಿಸುತ್ತೆ ನನಿಗೆ. ಆದರೆ ಈಗ ಅದು ಆಗಿಲ್ಲ ಅದು ಅನ್ನಿಸುತ್ತೆsādhyatenū ittu anta annisutte nanige. ādare īga adu āgilla adu annisutteThere was a possibility for it, I feel. But, it appears that it is not there now. ಏನಾಗಿದೆ ಈಗ ಅಂದರೆ ನಮ್ಮ ಮಧ್ಯೆ ಪೈಪೋಟಿ ಇದೆ.ēnāgide īga andare namma madhye paipōṭi ide.What has happened now is that there is a competetion between us ಅಂದರೆ, Electronic ಮಾದ್ಯಮಗಳ ಮಧ್ಯೆ ಪೈಪೋಟಿ ಇದೆ.andare, Electronic mādyamagaḷa madhye paipōṭi ide.Now there is unhealthy competition between electronic media to ಯಾರು ಮೊದಲು ಸುದ್ದಿ ಕೊಡಬೇಕು ಅನ್ನೋದು ಅವರ ಬದ್ದೆ ಇರೊದರಿಂದyāru modalu suddi koḍabēku annōdu avara badde irodarindagive news first before others. ಸತ್ಯಕ್ಕೆ ಚ್ಯುತಿ ಬರೊ ಸಾದ್ಯತೆಗಳು ಅನೇಕ ಕಂಡು ಬರ್ತಾವೆ.ಹಾಗೇ ಅನ್ನಿಸುತ್ತೆsatyakke cyuti baro sādyategaḷu anēka kaṇḍu bartāve.hāgē annisutteThere are possibilities of truth getting twisted in the process. ಮತ್ತೆ ಇನ್ನೊಂದು Electronic ಮಾಧ್ಯಮಗಳು ಬಂದಿರೊದ್ರಿಂದ ನಾವು ಹೆಚ್ಚು Loud ಆಗಿದಿವಿ ಅನ್ನಿಸುತ್ತೆ.matte innondu Electronic mādhyamagaḷu bandirodrinda nāvu heccu Loud āgidivi annisutte.With the arrival of electronic media, I think that we have become bit louder. ನಾವು ಕೂಗ್ತಾ ಇದೀವಿ ಹಾಗೇ ಅಂತ ನನಿಗೆ ಅನ್ನಿಸುತ್ತೆ.nāvu kūgtā idīvi hāgē anta nanige annisutte.We may be shouting at times. ಅದು ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಕಂಡು ಬರ್ತಾ ಇದೆ ಹಾಗೇ ಅಂತ ನನಿಗೆ ಅನ್ನಿಸುತ್ತೆ.adu patrikegaḷa śīrṣikegaḷalli kaṇḍu bartā ide hāgē anta nanige annisutte.It is also appearing in the headlines of the news papers. ಅದು ಪತ್ರಿಕೆಗಳ ಆರೋಗ್ಯ ದೃಷ್ಟಿಯಿಂದ ಒಳ್ಳೆದಲ್ಲ ಅಂತ ನನ್ನ ಅಭಿಪ್ರಾಯadu patrikegaḷa ārōgya dṛṣṭiyinda oḷḷedalla anta nanna abhiprāyaIt is my opinion that it is not good from the viewpoint of health of the newspapers. ನನ್ನ ಅನುಭವ ಹಳೇ ಕಾಲದ ಮನುಷ್ಯ ಅಂತ ಅನ್ನಿಸಬಹುದು ಆದರೆ ನನಿಗೆ ಈಗಲೂ ಅದೇ ನಿಜವಾದದ್ದು ಅಂತnanna anubhava haḷē kālada manuṣya anta annisabahudu ādare nanige īgalū adē nijavādaddu antaI may sound like person of earlier times, but I strongly belive so. ಯಾಕೆಂದರೆ ಮೌಲ್ಯಗಳಲ್ಲಿ ಯಾವತ್ತು ಬದಲಾಗಲ್ಲ, ಮೌಲ್ಯಗಳು ಯಾವಾಗಲೂ ಒಂದೇ ತರ ಇರ್ತವೆ.yākendare maulyagaḷalli yāvattu badalāgalla, maulyagaḷu yāvāgalū ondē tara irtave.But, I feel that it is true even today because values never change anytime. Values remain the same always. ಮಲುದನಿಯ ಮಾತಿಗೆ ಬೆಲೆ ಇಲ್ಲದೇ ಇದ್ದರೆ, ಮಲುದನಿಯ ಮಾತಿಗೆ ಬೆಲೆ ಇಲ್ಲದೇ ಇದ್ದರೆmaludaniya mātige bele illadē iddare, maludaniya mātige bele illadē iddareIf there is no value for the soft spoken words ನಾವು ಎಷ್ಟು ಅಂತ ಆಕ್ರೋಶ ವ್ಯಕ್ತಪಡಿಸೋಕೆ ಆಗುತ್ತದೆ, ಆಕ್ರೋಶಕ್ಕೆ ಒಂದು ಮಿತಿ ಇರುತ್ತದೆ.nāvu eṣṭu anta ākrōśa vyaktapaḍisōke āguttade, ākrōśakke ondu miti iruttade.how can we express our anguish loudly. There is a limit for our anguish. So, ಮೆಲುದನಿಯಲ್ಲಿ ಎಚ್ಚರಗೊಳ್ಳದವರು ಎಷ್ಟು ನೀವು ಕೂಗಿದರು ಕೂಡ ಎಚ್ಚರಗೊಳ್ಳುವಂತ ಸಂದರ್ಭ ಬಂದರೆSo, meludaniyalli eccaragoḷḷadavaru eṣṭu nīvu kūgidaru kūḍa eccaragoḷḷuvanta sandarbha bandareWhen people cannot wakeup with our soft words, cannot wakeup with loud voices, ಆಗ ನಾವು ತಾರಸಿ ಹಾರಿ ಕೋಗುವ ಹಾಗೆ ಕೂಗೊಕೆ ಅಗುತ್ತಾ ಅನ್ನೊದು ನನಗೆ ಇರುವ ಆತಂಕ ಅದುāga nāvu tārasi hāri kōguva hāge kūgoke aguttā annodu nanage iruva ātaṅka aduthen can we shout at the top of our voices so that the roof flies away. It is my concern. ಆದರೂ ಕೂಡ ಯಾವಾಗಲೂ ಪೈಪೋಟಿ ಇರಬೇಕುādarū kūḍa yāvāgalū paipōṭi irabēkuEven then, some kind of a competition should be there. ಬಟ್ ಈಗ ನಾನು ಕೇಳಿದ ಹಾಗೇ Electronic ಮಾಧ್ಯಮಗಳು ಅಷ್ಟು ಲಾಭವನ್ನು ಮಾಡ್ತಾ ಇಲ್ಲ ಹಾಗೆ.baṭ īga nānu kēḷida hāgē Electronic mādhyamagaḷu aṣṭu lābhavannu māḍtā illa hāge.But as I told, the electronic media are not making much profit. ಅಂತ ನಾನು ಕೇಳಿದಿನಿ. ಎಲ್ಲೊ ಒಂದೆರೆಡು ಮಾತ್ರ ಮಾದ್ಯಮಗಳ ಮಾತುanta nānu kēḷidini. ello ondereḍu mātra mādyamagaḷa mātuI have heard so, about two three media ಈ ಬಿಕ್ಕಟ್ಟು ಇಂಗ್ಲೀಷ್ ಮಾದ್ಯಮದಲ್ಲೂ ಕೂಡ ಇದೆ.ī bikkaṭṭu iṅglīṣ mādyamadallū kūḍa ide.This cries is in English medium too. ಇಂಗ್ಲೀಷ್ ಮಾಧ್ಯಮಗಳಿಂದಾಗಿನೆ ನಾವು Loud ಆಗಿರಬಹುದು ಕೂಡ ಅಂತ ನನಿಗೆ ಅನ್ನಿಸುತ್ತೆ.iṅglīṣ mādhyamagaḷindāgine nāvu Loud āgirabahudu kūḍa anta nanige annisutte.May be, we have become loud because of the influence of English media. ಇಂಗ್ಲೀಷ್ ಮಾದ್ಯಮ... ನಾನು ಯಾವುದಕ್ಕೆ Refer ಮಾಡ್ತಾ ಇದಿನಿ ಅಂತ ತಮಗೆ ಗೊತ್ತಾಗುತ್ತೆiṅglīṣ mādyama... nānu yāvudakke Refer māḍtā idini anta tamage gottāgutteYou may be understanding what I am referring to. ಅಲ್ಲೇನೇ ಮೆಲುಧನಿಯ ಮಾತಿನ ಏನು.... Channel ಗಳು ಎಷ್ಟು ಪ್ರಭಾವಕಾರಿಯಾಗಿದಾವೆ,allēnē meludhaniya mātina ēnu.... Channel gaḷu eṣṭu prabhāvakāriyāgidāve,Some channels have become too powerful ಎಷ್ಟು ಪ್ರಭಾವಶಾಲಿಯಾಗಿದಾವೆ ಅನ್ನೊದು ಕೂಡ ನಮಿಗೆ ಗೊತ್ತಾಗುತ್ತೆ. ಅಂತನೂ ಕೂಡ ನಾನು ಅದ್ಕೊಂಡಿದಿನಿ.eṣṭu prabhāvaśāliyāgidāve annodu kūḍa namige gottāgutte. antanū kūḍa nānu adkoṇḍidini.We understand that those channels have become so powerful and influential.
Word Transliteration Meaning
ಪತ್ರಿಕೆpatrikeNews Paper
ಹೆಸರುhesaruName
ನಿಮಗೆnimageFor you
ಅದುaduThat
ಜನರುjanaruPeople
ಸಂಬಂಧsambandhaRelation
ಪ್ರಜೆprajeCitizen
ಧ್ವನಿdhvaniVoice
ಎಲ್ಲಾellāAll
ಓದುōduRead
ಹೆಚ್ಚುheccuMore
ಸರ್ಕಾರsarkāraGovernment
ಸಂವಾದsaṁvādaDialog
ನಿರಂತರnirantaraContinues
ನನಗೆ .nanage .Me
ಪಕ್ಷpakṣaParty
ಕೆಲಸkelasaWork
ಉದ್ದೇಶuddēśaIntent
ವಿಶ್ವಾಸರ್ಹತೆviśvāsarhateHonesty
ಬಹಳbahaḷaLot
ಮುಖ್ಯವಾಗಿmukhyavāgiMainly
ಈಗīgaNow
ಬಿಕ್ಕಟ್ಟುbikkaṭṭuCrisis
ಏನುēnuWhat
ಸುದ್ದಿsuddiNews
ಸಾಹಿತ್ಯsāhityaLiterature
ಆಮೇಲೆāmēleThen
ಪತ್ರಿಕೋದ್ಯಮpatrikōdyamaJournalism
ಸವಾಲುsavāluChallenge
ಸಮಸ್ಯೆsamasyeProblem
ಒಂದುonduOne
ನಿಜnijaTruth
ಸುಳ್ಳುsuḷḷuLie
ದೊಡ್ಡdoḍḍaBig
ಪೈಪೋಟಿpaipōṭiCompetation
ಆಕ್ರೋಶākrōśaAnger
ಮಿತಿmitiLimitation
ಎಚ್ಚರeccaraAware
ಸಂದರ್ಭsandarbhaSituation
ಆತಂಕātaṅkaAnxiety
ಮಾದ್ಯಮmādyamaMedia/ Medium

Related Grammar Lessons

The Interrogatives - ಪ್ರಶ್ನಾರ್ಥಕ ಪದಗಳು

The Interrogative

The interrogative pronouns begin with e or ē. The interrogative adjective is yāva. Examples:

ಏನು - What?
ಪತ್ರಿಕೆಯಲ್ಲಿ ಏನಿದೆ?
ಯಾವ ಪೇಪರ್ ಬೇಕು?
ಪತ್ರಿಕೆಯಲ್ಲಿ ಏನಿರಬೇಕು?
ಯಾವ ಭಾಷೆಯ ಪತ್ರಿಕೆ?
ಅವರಿಗೆ ಏನು ಬೇಕು?
ಅಲ್ಲಿ ಏನಿದೆ?
ಸಂಪಾದಕರು ಏನು ಮಾಡುತ್ತಾರೆ?
ಪ್ರಜಾಪ್ರಭುತ್ವದ ಯಶಸ್ಸಿಗೆ ಮಾಧ್ಯಮಗಳು ಬೇಕೇ?
ಸಂಪಾದಕೀಯ ಇದೆಯೇ?
ಪತ್ರಿಕೆಯಲ್ಲಿ ಏನೇನು ಇದೆ?
ಸಾಪ್ತಾಹಿಕ ಏಂದರೆ ಏನು?
ಯಾವ ಲೇಖಕರು ಅಂಕಣ ಬರೆಯುತ್ತಾರೆ?
ಪತ್ರಿಕೆ ಯಾವಾಗ ಬರುತ್ತದೆ?
ಪತ್ರಿಕೆಯ ಬೆಲೆ ಎಷ್ಟು?
ಅದು ಯಾವ ಪತ್ರಿಕೆ?
ಅದರ ಸಂಪಾದಕರು ಯಾರು?

Examples of ē as an adjective:

The interrogative particle ā or ē is added at the end of the sentence.

ಆ ಪತ್ರಿಕೆ ನಿಂತು ಹೋಯಿತೇ?
ನೀನು ದಿನಾ ಪತ್ರಿಕೆ ಓದುತ್ತೀಯಾ?
ಪತ್ರಿಕೆ ಹುಬ್ಳಿಯಿಂದ ಪ್ರಕಟವಾಗುವುದೇ?

ಓದಿರಿ ಮತ್ತು ಪ್ರತಿ ಮಾಡಿರಿ

ಆಧುನಿಕ ಜಗತ್ತಿನಲ್ಲಿ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದೆ. ಕನ್ನಡದಲ್ಲಿ ಪತ್ರಿಕೋದ್ಯಮ ಆರಂಭವಾದುದು 19ನೇ ಶತಮಾನದ ಉತ್ತರಾರ್ಧದಲ್ಲಿ. ವಿದೇಶೀಯರ ಸಂಪರ್ಕವಾದ ಮೇಲೆ ಅವರು ಮುದ್ರಣಯಂತ್ರಗಳನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು. ಆನಂತರ ಅವರಿಂದಲೇ ಮೊದಲ ಪತ್ರಿಕೆಗಳು ಪ್ರಾರಂಭವಾದವು. ಪತ್ರಿಕೆಗಳು ಕನ್ನಡ ಜನ ಜೀವನದ ಪ್ರತಿಬಿಂಬವಾಗಿದೆ.

೧೮೪೩ ನೆಯ ಜುಲೈ ಒಂದರಲ್ಲಿ ಪ್ರಾರಂಭವಾದ 'ಮಂಗಳೂರು ಸಮಾಚಾರ' ವೆಂಬ ಪತ್ರಿಕೆಯೇ ಕರ್ನಾಟಕದ ಪ್ರಥಮ ಪತ್ರಿಕೆಯಾಗಿದೆ. ಇದು ಸ್ವಲ್ಪ ಕಾಲದಲ್ಲಿಯೇ ಮಂಗಳೂರಿನಿಂದ ಬಳ್ಳಾರಿಗೆ ವರ್ಗವಾಗಿ 'ಕನ್ನಡ ಸಮಾಚಾರ' ಎಂಬ ಹೊಸ ಹೆಸರನ್ನು ಪಡೆದುಕೊಂಡಿತು. ಈಗ ಕನ್ನಡದಲ್ಲಿ ಅನೇಕ ಪತ್ರಿಕೆಗಳು ಪ್ರಕಟವಾಗುತ್ತಿವೆ.

Exercises

Substitution drill

ನೀನು ಬರುತ್ತೀಯಾ?
ನೀವು ..........
ಅವರು ..........
ಅವಳು ..........

ನಾನು ಪತ್ರಿಕೆ ಓದುತ್ತೇನೆ
ಅವನು ..........
ನೀನು ..........
ಅವನು ..........
ಅವರು ..........

ಅವನು ಟಿ ವಿ ನೋಡುತ್ತಾನೆ
ಅವಳು ..........
ನಾನು ..........
ಅವರು ..........

Make simple sentences using following verbs.

ಓದು, ನಡೆ, ಆಡು, ಬರೆ, ಬೀಳು, ಹಾಡು

Send your completed homework by email to klcjnu@gmail.com