Tile Factory

Transcription
Transliteration
Translation
ನಮ್ಮದು ಹಂಚಿನ Factory ಬಹಳ ಮುಂಚೆ, ಒಂದು 1868 ಇಸವಿಯಲ್ಲಿ ನಾವು ಸ್ಥಾಪನೆ ಮಾಡಿದ್ದು,nammadu hañcina Factory bahaḷa muñce, ondu 1868 isaviyalli nāvu sthāpane māḍiddu,Our tiles factory is very famous. It was established in 1868 AD. ಅಂದ್ರೆ, ನಮ್ಮ ಮುತ್ತಜ್ಜ ಅವರು ಸ್ಥಾಪನೆ ಮಾಡಿದ್ದಾರೆ ಇಲ್ಲಿ.andre, namma muttajja avaru sthāpane māḍiddāre illi.My great grandfather opened it . ಅವರು ಆ Timeನಲ್ಲಿ. . .ತುಂಬಾ Problems ಎಲ್ಲಾ ಇತ್ತು.avaru ā Timenalli. . .tumbā Problems ellā ittu.there in spite of many problems at that time ಆದರೆ ಏನಾಯಿತು ಅಂದ್ರೆ 1865 ಇಸವಿಯಲ್ಲಿādare ēnāyitu andre 1865 isaviyalliWhat happened in 1865 AD ಈ Basel Missionವರು ಈ ಹಂಚು ಮಾಡುವ ಒಂದು Technology ಇಲ್ಲಿ ನಮ್ಮ Indiaಗೆ ತಂದ್ರು.ī Basel Missionvaru ī hañcu māḍuva ondu Technology illi namma Indiage tandru.Basel mission people brought this technology of tile making to India. ಮಾಡಿ ಅವರು First tile factory 1865ನಲ್ಲಿ ಅವರು ಸ್ಥಾಪನೆ ಮಾಡಿದರುmāḍi avaru First tile factory 1865nalli avaru sthāpane māḍidaruThey started a factory in 1865 A.D. 3 ವರ್ಷದ ಮೇಲೆ ನಮ್ಮ ಮುತ್ತಜ್ಜ ಅವರು Factory ಇಲ್ಲಿ ಸ್ಥಾಪನೆ ಮಾಡಿದ್ರು.3 varṣada mēle namma muttajja avaru Factory illi sthāpane māḍidru.After three years my great grandfather started the factory here. 2018ರಲ್ಲಿ ನೂರ ಐವತ್ತು ವರ್ಷ ನಮ್ಮ Factoryಗೆ ಆಗ್ತದೆ.2018ralli nūra aivattu varṣa namma Factoryge āgtade.It completes 150 years in 2018 AD. ಮತ್ತೆ. ನಮ್ಮ ಮುತ್ತಜ್ಜ ಆಮೇಲೆ ಅಜ್ಜ ಅವರು, ಮತ್ತೆ ತಂದೇವ್ರೂ ಬಂದ್ರು. ಮತ್ತೆ ನನ್ನ ಇದು. ಮತ್ತೆ ನಮ್ಮ ಮಕ್ಕಳು.matte. namma muttajja āmēle ajja avaru, matte tandēvrū bandru. matte nanna idu. matte namma makkaḷu.Successively after my great grand father, my grand father, then my father and presently I and my children are taking care of it. ನಮ್ಮ ಮಕ್ಕಳಿಗೆ ತುಂಬಾ Interest ಉಂಟು.namma makkaḷige tumbā Interest uṇṭu.My children have great interest in it. ಈಗಲೂ ಅಲ್ಲಿ Switzerlandನಲ್ಲಿ ಬಾಸೆಲ್ ಪಟ್ಟಣದಲ್ಲಿ ಇರುವಂತಹīgalū alli Switzerlandnalli bāsel paṭṭaṇadalli iruvantahaSoil around Basel town in Switzerland is similar to what we find here in south canara district. ಅಲ್ಲಿಯ ಮಣ್ಣು ಮತ್ತು ಈ ದಕ್ಷೀಣ ಕನ್ನಡ ಜಿಲ್ಲೆಯ ಮಣ್ಣು, ಆ ಮಣ್ಣಿನ ರೀತಿ,alliya maṇṇu mattu ī dakṣīṇa kannaḍa jilleya maṇṇu, ā maṇṇina rīti,Similar to that work, experts came here to make tiles here using their technology. ಇಲ್ಲಿಯ ಮಣ್ಣಿನಲ್ಲಿ ಮಾಡ್ಬಹುದು ಅಂತ ಹೇಳಿ ಅಲ್ಲಿಯ Expert ಬಂದ್ರು.illiya maṇṇinalli māḍbahudu anta hēḷi alliya Expert bandru. ಇಲ್ಲಿ ಬಂದು, ಅಲ್ಲಿಯ ತಂತ್ರಜ್ಞಾನವನ್ನು ಇಲ್ಲಿ ಬಳಸಿಕೊಂಡು,illi bandu, alliya tantrajñānavannu illi baḷasikoṇḍu, ಇಲ್ಲಿ ಒಂದು ಹಂಚಿನ ಕಾರ್ಖಾನೆ ಮಾಡಬೇಕು ಅಂತ ಹೇಳಿilli ondu hañcina kārkhāne māḍabēku anta hēḷi ಇಲ್ಲಿ ಅವರು ಇಲ್ಲಿನ ಮಣ್ಣು, ವಿಶೇಷವಾಗಿ ಗುರುಪುರ, ಬಂಟ್ವಾಳ ಅಲ್ಲಿಯ ಮಣ್ಣನ್ನು ನೋಡಿ, ಅಲ್ಲಿಯ ಮಣ್ಣನ್ನು ಅವರು ಪರೀಕ್ಷಿಸಿ,illi avaru illina maṇṇu, viśēṣavāgi gurupura, baṇṭvāḷa alliya maṇṇannu nōḍi, alliya maṇṇannu avaru parīkṣisi,They examined the soil layers around especially Bantwala, Gurupura etc., ಇದು ಒಳ್ಳೆಯ Product ಮಾಡ್ಲಿಕ್ಕೆ ಒಂದು ಆಗ್ತದೆ ಅಂತ ಹೇಳಿ ಅವರುidu oḷḷeya Product māḍlikke ondu āgtade anta hēḷi avaruand found it suitable for tile making as local product. ಅದನ್ನಿಲ್ಲಿ ಮಾಡಲಿಕ್ಕೆ ಮೊದಲು ಕುದ್ರೋಳಿ ಎಂಬಲ್ಲಿ 1865ರಲ್ಲಿ ಹಂಚಿನ ಕಾರ್ಖಾನೆ ಪ್ರಾರಂಭ ಮಾಡಿದ್ರು.adannilli māḍalikke modalu kudrōḷi emballi 1865ralli hañcina kārkhāne prārambha māḍidru.They started a factory in Kudroli in 1865 AD, ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟಿಗೆ ಮೂರು ಹಂಚಿನ ಕಾರ್ಖಾನೆಗಳನ್ನು ಮಾಡಿದ್ದಾರೆ.āga dakṣiṇa kannaḍa jilleyalli oṭṭige mūru hañcina kārkhānegaḷannu māḍiddāre.That time there were three tile factories in South Canara viz., ಒಂದು ಮೋದಲಿಗೆ ಜಪ್ಪಿನಲ್ಲಿ, ಎರಡನೆಯದಾಗಿ ಕುದ್ರೋಳಿಯಲ್ಲಿ, ಮೂರನೇಯದಾಗಿ ಮಲ್ಪೆಯಲ್ಲಿ.ondu mōdalige jappinalli, eraḍaneyadāgi kudrōḷiyalli, mūranēyadāgi malpeyalli.Jappi, Kudroli and Malpe. ಮೂರು ಹಂಚಿನ ಕಾರ್ಖಾನೆಗಳನ್ನು, ಸಾವಿರಾರು ಜನ ಅಲ್ಲಿ ಕೆಲಸ ಮಾಡ್ತಿದ್ದರು.mūru hañcina kārkhānegaḷannu, sāvirāru jana alli kelasa māḍtiddaru.Thousands of people were working there. ಮತ್ತೆ ಆ ಕೆಲಸ ಮಾಡುವಾಗ ಸಹ ಅಲ್ಲಿ Casteವಾರು (ಜಾತಿವಾರು) ಇರಲಿಲ್ಲ.matte ā kelasa māḍuvāga saha alli Castevāru (jātivāru) iralilla.There was no discrimination of castee or creed for the workers. ಜಾತಿ-ಮತ-ಬೇಧ ಇರಲಿಲ್ಲ. ಎಲ್ಲರಿಗೂ ಕೆಲಸ ಕೊಡುವುದು.jāti-mata-bēdha iralilla. ellarigū kelasa koḍuvudu.Everyone was getting jobs. ವಿಶೇಷವಾಗಿ ಅಲ್ಲೇನು ಅಂತ ಹೇಳಿದ್ರೆ 1865ರಲ್ಲಿ ಮಹಿಳೆಯರು ಅಡುಗೆ ಮನೆಯಿಂದ ಹೊರಗೆ ಬಂದುviśēṣavāgi allēnu anta hēḷidre 1865ralli mahiḷeyaru aḍuge maneyinda horage banduFor the first time in 1865 AD. women come out of the kitchens ಈ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡಿದ್ರು.ī kārkhānegaḷalli kelasa māḍalu prārambha māḍidru.to work in these factories. It is a special feature. ಮತ್ತೊಂದು ವಿಶೇಷ ಅಂತಂದ್ರೆ Basel Missionನ ಹಂಚಿನ, ತಯಾರಿಸಿದ ಹಂಚುಗಳು, ಇಡೀ ಜಗತ್ತಿಗೆ ಹೋಗಿದೆ.mattondu viśēṣa antandre Basel Missionna hañcina, tayārisida hañcugaḷu, iḍī jagattige hōgide.Another special feature is that Basel mission ಎಲ್ಲ ಸಮುದ್ರ ಮಾರ್ಗದಲ್ಲಿ, ಎಲ್ಲೆಲ್ಲಿ ಬಂದರುಗಳು ಉಂಟು,ella samudra mārgadalli, ellelli bandarugaḷu uṇṭu,tiles have gone to all parts of the world by sea routes. ಎಲ್ಲಾ ಹೊರದೇಶ ಇರಬಹುದು, ನಮ್ಮ ಕೇರಳ ಇರಬಹುದು,ellā horadēśa irabahudu, namma kēraḷa irabahudu,It can be found in all parts of the country. It is famous as Mangalore tiles. ಭಾರತ ಇಡೀ, ಎಲ್ಲಾ ಪ್ರದೇಶಕ್ಕೆ ಸಹ ಇಲ್ಲಿನ ಹಂಚುಗಳು ಹೋಗಿbhārata iḍī, ellā pradēśakke saha illina hañcugaḷu hōgi ಮಂಗಳೂರು ಹಂಚು ಎಂಬ ಈ ಪ್ರಖ್ಯಾತಿ ಈಗಲೂ ಪಡೆದಿದೆ.maṅgaḷūru hañcu emba ī prakhyāti īgalū paḍedide.Mangalore tile is used all over the world. ಈಗಲೂ ಮಂಗಳೂರು ಹಂಚಿನ ಹೆಸರನ್ನು ಇಡಿ, ಜಗತ್ತಿನ ಎಲ್ಲರೂ ಹೇಳ್ತಾರೆ, ಮಂಗಳೂರು Tiles ಅಂತ ಹೇಳ್ತಾರೆ.īgalū maṅgaḷūru hañcina hesarannu iḍi, jagattina ellarū hēḷtāre, maṅgaḷūru Tiles anta hēḷtāre.Now, only a handful of factories are there in South Canara. ಇಡೀ ಜಗತ್ತಿನಲ್ಲಿ ಮಂಗಳೂರಿನ ಹಂಚನ್ನು ಉಪಯೋಗ ಮಾಡ್ತಾರೆ,iḍī jagattinalli maṅgaḷūrina hañcannu upayōga māḍtāre, ಈಗ ಕೆಲವೇ ಕೆಲವು ಬೆರಳೆಣಿಕೆಯಷ್ಟು ಹಂಚಿನ ಕಾರ್ಖಾನೆಗಳು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.īga kelavē kelavu beraḷeṇikeyaṣṭu hañcina kārkhānegaḷu namma dakṣiṇa kannaḍa jilleyallide. ಬೇರೆ ಬೇರೆ ರೀತಿಯ Productಗಳನ್ನು ಮಾಡ್ತಾರೆ,bēre bēre rītiya Productgaḷannu māḍtāre,They also make different kinds of products ಮೋದಲಿನ ಕೆಲವು Productಗಳನ್ನು ಮಾಡದಿದ್ದರೂ ಸಹ ಈಗ ceiling tiles ಇರಬಹುದು,mōdalina kelavu Productgaḷannu māḍadiddarū saha īga ceiling tiles irabahudu,such as ceiling tiles, Flooring tiles ಇರಬಹುದು, ಇಟ್ಟಿಗೆಗಳು ಇರಬಹುದು, ಅಥವಾ ಬೇರೆ ಬೇರೆ ನಮೂನೆಯ ಹಂಚುಗಳು ಇರಬಹುದು.Flooring tiles irabahudu, iṭṭigegaḷu irabahudu, athavā bēre bēre namūneya hañcugaḷu irabahudu.flooring tiles, bricks etc. ಅಲಂಕಾರಿಕ ವಸ್ತುಗಳು ಇರಬಹುದು ಅದನ್ನೆಲ್ಲಾ ಮಣ್ಣಿನಲ್ಲಿ ತಯಾರಿಸಿ ಮಾಡ್ತಾರೆ.alaṅkārika vastugaḷu irabahudu adannellā maṇṇinalli tayārisi māḍtāre.including decorative items. All are made from clay soil. ತುಳು ಎಂಬ ಪದಕ್ಕೆ ‘ಮೃದು’ ಅಥವಾ ಮೆದು, ತುಳುವಿನಲ್ಲಿ ಮೃದು ಅಥವಾ ಮದು ಅಂತ ಹೇಳ್ತಾರೆ.tuḷu emba padakke ‘mṛdu’ athavā medu, tuḷuvinalli mṛdu athavā madu anta hēḷtāre.The ‘Tulu’ word stands for ‘soft’ (medu). ಹಾಗೆ ತುಳುನಾಡಿನ ಮಣ್ಣು ಒಳ್ಳೆಯದು.hāge tuḷunāḍina maṇṇu oḷḷeyadu.Thus, the soil of Tulunadu is very good. ಉದಾಹರಣೆಗೆ ನಾವು Basel Missionನ ವರದಿಗಳನ್ನು ನಾವು ನೋಡುವುದಾದರೆudāharaṇege nāvu Basel Missionna varadigaḷannu nāvu nōḍuvudādareFor example : as per the reports of Basel Mission, d the soil here first. ಅಲ್ಲಿಯ Experts ಬಂದು, ಅಲ್ಲಿಯ ತಂತ್ರಜ್ಞಾನವನ್ನ ಪಡೆದುಕೊಂಡವರು ಬಂದು,alliya Experts bandu, alliya tantrajñānavanna paḍedukoṇḍavaru bandu,experts from there come here with their technology and examine ಇಲ್ಲಿಯ ಮಣ್ಣನ್ನು ಪರೀಕ್ಷಿಸಿ ಮೊದಲು ಪರೀಕ್ಷಿಸುವುದು ಮಣ್ಣು, ಈ ಮಣ್ಣು ಉತ್ತಮilliya maṇṇannu parīkṣisi modalu parīkṣisuvudu maṇṇu, ī maṇṇu uttamaThey found that the soil here is similar to that ಅದೇ ಜರ್ಮನಿ ಪ್ರದೇಶದಲ್ಲಿ ಸಿಕ್ಕುವಂತಹ ಅಲ್ಲಿ ಹಂಚು ಮಾಡುವಂತಹ ರೀತಿಯಲ್ಲಿಯೇ ಉಂಟುadē jarmani pradēśadalli sikkuvantaha alli hañcu māḍuvantaha rītiyalliyē uṇṭuin Switzerland and decided to make tiles here. ಎಂಬುದಾಗಿ ಈ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಮಂಗಳೂರು ಹಂಚಿನ್ನ ಹೊಡೀಬೇಕು ಎಂಬುದಾಗಿ,embudāgi ī dakṣiṇa kannaḍa jille athavā maṅgaḷūru hañcinna hoḍībēku embudāgi, ಬೇರೆಯವರು ಯಾರೂ ಪ್ರಯತ್ನ ಮಾಡಿದ್ರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡುವಂತಹ ಹಂಚನ್ನು ಹೊಡೀಲಿಕ್ಕೆ ಯಾರಿಗೂ ಆಗಲಿಲ್ಲbēreyavaru yārū prayatna māḍidrū dakṣiṇa kannaḍa jilleyalli māḍuvantaha hañcannu hoḍīlikke yārigū āgalillaNo other person could make tiles similar to those made in Dakshina Kannada district. ಯಾಕೆಂದ್ರೆ ಈಗಲೂ ಮಂಗಳೂರು ಹಂಚು ಇಡೀ ಜಗತ್ತಿನಲ್ಲಿ ಪ್ರಖ್ಯಾತವಾಗಿದೆ.yākendre īgalū maṅgaḷūru hañcu iḍī jagattinalli prakhyātavāgide.Even today it is famous in all countries of the world. ಯಾಕಂತ ಹೇಳಿದ್ರೆ Basel Mission Tiel Factory ಮಾಡುವಾಗ ಸಹyākanta hēḷidre Basel Mission Tiel Factory māḍuvāga sahaWhen Basel Mission tile factory was opened, ಆಗ ಸರ್ಕಾರ ಎಲ್ಲಾ ಸರ್ಕಾರಿ ಆಫೀಸುಗಳಿಗೆ Basel Mission ಹಂಚುಗಳನ್ನೇ ಮಂಗಳೂರು ಹಂಚುಗಳನ್ನೇ ಹೊದಿಸಬೇಕು.āga sarkāra ellā sarkāri āphīsugaḷige Basel Mission hañcugaḷannē maṅgaḷūru hañcugaḷannē hodisabēku.the government had ordered to use only these tiles for all offices. ಅಂತ Order ಮಾಡಿತ್ತು. ಹಾಗೇ, ಈಗ ಇಲ್ಲಿ ಮತ್ತು ಕೇರಳದಲ್ಲಿanta Order māḍittu. hāgē, īga illi mattu kēraḷadalliThis manufacturing has gone upto Kerala now. ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಾರಂಭವಾದದ್ದು ಕೇರಳ ತನಕ ಹೋಗಿದೆ.dakṣiṇa kannaḍa jilleyinda prārambhavādaddu kēraḷa tanaka hōgide. ಯಾಕಂದ್ರೆ ಈಗ ಹಂಚಿನ ಕಾರ್ಖಾನೆಗಾಗಿ ಮಾಡುವಂತಹ ಎಲ್ಲ Missionaryಗಳು ಸಮೇತ ಮಾಡುವುದು ಎಲ್ಲಾ ಕೇರಳವೇ.yākandre īga hañcina kārkhānegāgi māḍuvantaha ella Missionarygaḷu samēta māḍuvudu ellā kēraḷavē.Because, the tile factories are run by missionaries in Kerala. ಈ ಕರಾವಳಿ ಪ್ರದೇಶದಲ್ಲಿ ಇರುವಂತಹ ಹಂಚಿನ ಕಾರ್ಖಾನೆಗಳುī karāvaḷi pradēśadalli iruvantaha hañcina kārkhānegaḷuAll tile factories in Karavali areas ಈಗಲೂ ಉತ್ತಮ ರೀತಿಯಲ್ಲಿ ಮಂಗಳೂರು ಹಂಚು ಅಂತ ಹೇಗೆ ಹೆಸರು ಮಾಡಿದೆಯೋīgalū uttama rītiyalli maṅgaḷūru hañcu anta hēge hesaru māḍideyōare making tiles as good as Mangalore tiles. ಹಾಗೆ ಕರಾವಳಿ ಪ್ರದೇಶದ ಎಲ್ಲ ಹಂಚಿನ ಕಾರ್ಖಾನೆಗಳುhāge karāvaḷi pradēśada ella hañcina kārkhānegaḷuIt is marketed all over for various purposes. ಮಂಗಳೂರು ಹಂಚಿನ ಹೆಸರಿನಲ್ಲೇ ಈಗಲೂ ತಮ್ಮ ಉತ್ಪಾದನೆಯನ್ನು ಮಾಡ್ತಾ ಇದೆ.maṅgaḷūru hañcina hesarinallē īgalū tamma utpādaneyannu māḍtā ide.They have been making tiles under Mangalore Tiles name ಈಗಲೂ ಅದರ ಉತ್ಪಾದನೆ ಮಾತ್ರವಲ್ಲ ಅದು ಮಾರಾಟ ಸಹ ಮಾಡ್ತಾರೆ.īgalū adara utpādane mātravalla adu mārāṭa saha māḍtāre.They not onlynproduce it ut market it as well ಕೆಲವರು Terrace ಮಾಡಿದವರು ಸಹ ತಂಪಿಗಾಗಿ ಅದನ್ನು ಹೊದಿಸ್ತಾರೆ.kelavaru Terrace māḍidavaru saha tampigāgi adannu hodistāre.Those who make terraces use these tiles for coolness. ಈಗಲೂ ಬಳಕೆಯಲ್ಲಿದೆ. ಮೊದಲು ನಮ್ಮತ್ರ 450 Labourers ಇದ್ರು.īgalū baḷakeyallide. modalu nammatra 450 Labourers idru.Earlier, 450 labourers were working with us. ಈಗ ಕಡಿಮೆ ಕಡಿಮೆ ಆಗಿ 150 Labourers ಅಗಿದ್ದಾರೆ.īga kaḍime kaḍime āgi 150 Labourers agiddāre.Now, it is reduced to 150 persons. ಒಂದು Problem ಏನು ಅಂತ ಹೇಳಿದ್ರೆ, ಹೊರಗಡೆ ತುಂಬಾ ಅವರಿಗೆ Rate ಸಿಕ್ಕಿದೆ Construction ಎಲ್ಲಾ ಆಗ್ತದೆondu Problem ēnu anta hēḷidre, horagaḍe tumbā avarige Rate sikkide Construction ellā āgtadeThe problem is that they go for construction work outside ಒಂದು ದಿವಸದಲ್ಲಿ 500-600ರೂಪಾಯಿ ಸಿಗ್ತದೆ. ಇಲ್ಲಿ Minimum wages ಮಾತ್ರ ಕೊಡುವುದು.ondu divasadalli 500-600rūpāyi sigtade. illi Minimum wages mātra koḍuvudu.and they get 500 to 600 rupees per day. Here, only minimum wages are paid. ಬೇರೆ Facilities ಎಲ್ಲ ಕೊಡ್ತೇವೆ. ಯಾವುದು, ಸರಕಾರದಿಂದ ಯಾವುದೆಲ್ಲ Facilities ಎಲ್ಲ ಉಂಟು,bēre Facilities ella koḍtēve. yāvudu, sarakāradinda yāvudella Facilities ella uṇṭu,Other facilities are also given. Facilites given by the government ESI, Provident fund, Gratuity, Maternity benefit ಎಲ್ಲ ಕೊಡ್ತೀವಿ.ESI, Provident fund, Gratuity, Maternity benefit ella koḍtīvi.We give all other facilities like ESI, PF, Gratuity, maternity benefit etc. ಆದರೂ ಕೂಡಾ ಒಮ್ಮೆಗೆ ಅವರು Present ಸಿಗುವುದು ಕಡಿಮೆ ಆಗ್ತದೆ. Futureಗೆ ತುಂಬ ಸಿಕ್ತದೆ.ādarū kūḍā ommege avaru Present siguvudu kaḍime āgtade. Futurege tumba siktade.At present it is bit less, but they get lot of benefits in future. ಅದನ್ನು ಅವರು ಅಲೋಚನೆ ಮಾಡಿಕೊಳ್ಳುವುದಿಲ್ಲ. ಈಗ ತುಂಬ ಸಿಗುವ ಕಡೆಗೆ ಬೇರೆ ಹೋಗ್ತಾರೆ.adannu avaru alōcane māḍikoḷḷuvudilla. īga tumba siguva kaḍege bēre hōgtāre.They don’t understand it. Now, they go to other places where they get more
Word Transliteration Meaning
ಹಂಚುhañcuTile
ಮಾರಾಟmārāṭaSell
ಇಸವಿisaviYear
ಮುತ್ತಜ್ಜಿmuttajjiGreat Grand Mother
ಇಲ್ಲಿ. . .illi. . .here
186518651865
ವರ್ಷvarṣaYear
201820182018
ಅಜ್ಜajjaGrand Father
ತಂದೆtandeFather
ಮಕ್ಕಳು.makkaḷu.Children
ಪಟ್ಟಣpaṭṭaṇaCity
ಮಣ್ಣುmaṇṇuSoil
ತಂತ್ರಜ್ಞಾನtantrajñānaTechnology
ವಿಶೇಷviśēṣaSpecial
ಪರೀಕ್ಷೆparīkṣeTest
ಸ್ಥಳೀಯsthaḷīyaLocal
186518651865
ಕರ್ಖಾನೆkarkhāneFactory
ಒಟ್ಟುoṭṭuTotal
ಮೂರುmūruThree
ಒಂದುonduOne
ಎರಡುeraḍuTwo
ಸಾವಿರsāviraThousand
ಕೆಲಸkelasaWork
ಸಹsahaAlso
ಜಾತಿjātiCast
ಮಹಿಳೆmahiḷeWomen
ಮನೆmaneHome
ಹೊರhoraOut
ಸಮುದ್ರsamudraSea
ಮಾರ್ಗmārgaRoute
ಪ್ರಖ್ಯಾತಿprakhyātiPopular
ನಮೂನೆnamūnePattern
ಅಲಂಕಾರalaṅkāraDecoration
ವಸ್ತುvastuThing
ಪದpadaWord
ಮೃದು / ಮೆದುmṛdu / meduSmooth
ಉತ್ತಮuttamaBest
ತಮ್ಮtammaYoung Brother
ಉತ್ಪಾದನೆutpādaneProduction
450450450
150150150
ದಿನ (ದಿವಸ)dina (divasa)Day
500-600500-600500- 600

ಧಾತುಗಳು

The word “dhātu” stands for ‘Root’ (verb root). ಕನ್ನಡದಲ್ಲಿ ಇವುಗಳನ್ನು ಕ್ರಿಯಾ ಪ್ರಕೃತಿಗಳೆಂದು ಕರೆಯುತ್ತಾರೆ. ಇವು ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುತ್ತವೆ. ಆದ್ದರಿಂದ ಇವುಗಳನ್ನು ಸಹಜ ಧಾತುಗಳೆಂದೂ ಕರೆಯುತ್ತಾರೆ.

1. ಮಂಗಳೂರಿನಲ್ಲಿ ಹಂಚನ್ನು ಮಾಡುತ್ತಾರೆ
2. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ
3. ಅವಳು ಕೆಲಸ ಮಾಡುತ್ತಾಳೆ
4. ಅವನು ಊಟ ಮಾಡುತ್ತಾನೆ
5. ನಾನು ಕೆಲಸ ಮಾಡಿದೆ.
6. ಅವರು ಹಂಚು ಮಾಡುತ್ತಾರೆ
7. ಅವಳು ಕೆಲಸ ಮಾಡಲಿ

ಮೇಲೆ ಇರುವ ವಾಕ್ಯಗಳಲ್ಲಿ ಕಾಣುವ ಮಾಡುತ್ತಾರೆ, ಮಾಡುತ್ತಾಳೆ, ಮಾಡುತ್ತಾನೆ, ಮಾಡಿದೆ, ಮಾಡಲಿ - ಇವೆಲ್ಲ ಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥವನ್ನು ಕೊಡುವ ಪದಗಳಾಗಿವೆ.  ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ-ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.

ಮೇಲೆ ಹೇಳಿದ ಏಳು ಕ್ರಿಯಾಪದಗಳಿಗೆಲ್ಲ ಮೂಲ ಮಾಡು ಎಂಬ ಶಬ್ದವಾಗಿದೆ.  ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ರೂಪವೇ ಆಗಿದೆ.

ಮಾಡು ಎಂಬ ಈ ಮೂಲರೂಪಕ್ಕೆ ಬೇರೆ ಬೇರೆ ಪ್ರತ್ಯಯಗಳು ಸೇರುತ್ತವೆ. ಆಗ ಅವು ವಿವಿಧ ರೂಪಗಳನ್ನು ಹೊಂದಿ ವಿವಿಧವಾದ ಕ್ರಿಯೆಗಳನ್ನು ಸೂಚಿಸುವ ಕ್ರಿಯಾಪದವಾಗುತ್ತದೆ. ಇಂಥ ಕ್ರಿಯಾಪದದ ಮೂಲರೂಪವನ್ನು ಕ್ರಿಯಾಪ್ರಕೃತಿ ಅಥವಾ ಧಾತು ಎಂದು ಕರೆಯುತ್ತಾರೆ.

ಇಂಥ ಧಾತುಗಳಲ್ಲಿ ಮೂಲಧಾತು ಮತ್ತು ಪ್ರತ್ಯಯಾಂತ ಧಾತುಗಳೆಂದು ಎರಡು ವಿಧ.

ಮೂಲಧಾತುಗಳು : ಮಾಡು, ತಿನ್ನು, ಹೋಗು, ಬರು, ಮಲಗು, ಏಳು, ನಡೆ, ನೋಡು, ಓಡು, ನಿಲ್ಲು, ಓದು, ಆಗು, ತೂಗು, ಹಿಗ್ಗು, ನಡುಗು, ಕೊಡು, ಇಡು, ಪಡೆ, ಕುಣಿ, ಕಾಣು, ಎತ್ತು, ತರು, ಹೊಡೆ, ಬಡಿ, ಎನ್ನು, ಸೋಲು, ಇತ್ಯಾದಿ. ಈ ಧಾತುಗಳಿಗೆ ವಿವಿಧ ಪ್ರತ್ಯಗಳನ್ನು ಹಾಗೂ ಕಾಲಗಳನ್ನು ಜೋಡಿಸಿ ನಾವು ದಿನವೂ ಭಾಷೆಯಲ್ಲಿ ಬಳಸುತ್ತೇವೆ. ಉದಾಹರಣೆಗೆ-

ಕೆಲಸ ಮಾಡುವವರನ್ನು ನೋಡಿದೆ.
ನಾಳೆ ಹಣ ಕೊಡುತ್ತೇವೆ
ಕಾರ್ಖಾನೆಗೆ ಬಂದರು
ಮಿಶನರಿಗಳು ಹಂಚಿನ ಕಾರ್ಖಾನೆಗಳನ್ನು ಸ್ಥಾಪಿಸಿದರು

ಪ್ರತ್ಯಯಾಂತ ಧಾತು (ಸಾಧಿತ ಧಾತು):- ಕೆಲವು ನಾಮ ಪ್ರಕೃತಿಗಳ ಮೇಲೆ ಮತ್ತು  ಧಗ ಧಗ, ಛಟ ಛಟ ಮೊದಲಾದ ಅನುಕರಣ ಶಬ್ದಗಳ ಮೇಲೆ ಇಸು ಎಂಬ ಪ್ರತ್ಯಯ ಸೇರಿದಾಗ ಅವು ಪ್ರತ್ಯಯಾಂತ ಧಾತುಗಳಾಗುತ್ತವೆ. ಇವಕ್ಕೆ ಸಾಧಿತ ಧಾತುಗಳೆಂದೂ ಹೆಸರು. ಉದಾಹರಣೆಗೆ:-

ಮಾಡಿಸು, ತರಿಸು, ತಿನ್ನಿಸು, ಪರೀಕ್ಷಿಸಿ, ಮಾತಾಡಿಸು, ಹೇಳಿಸು, ಹಾಕಿಸು ಪ್ರಯತ್ನಿಸು, ಪ್ರೀತಿಸು, ಧಗ ಧಗಿಸು, ಗಮಗಮಿಸು, – ಇತ್ಯಾದಿ

ಕೆಳಗಿನ ವಾಕ್ಯಗಳಲ್ಲಿರುವ ಧಾತುಗಳನ್ನು ಗುರುತಿಸಿರಿ

1. ಮನೆಯಲ್ಲಿ ಮಗು ಜನಿಸಿದೆ
2. ಮಗು ಅಳುತ್ತಿದೆ
3. ಹಂಚು ತಯಾರಾಗುತ್ತದೆ
4. ಮಣ್ಣನ್ನು ತರಲಾಗುತ್ತಿತ್ತು
5. ಪರೀಕ್ಷೆ ಮಾಡಿದರು
6. ಕಾರ್ಖಾನೆಗಳನ್ನು ಸ್ಥಾಪಿಸಿದರು
7. ಕಾರ್ಮಿಕರು ಬಂದರು
8. ಊಟ ಮಾಡುತ್ತಿದ್ದರು
9. ಕಷ್ಟ ಪಟ್ಟರು
10. ಮಳೆ ಬರುತ್ತದೆ

ಕೆಳಗಿನ ಧಾತುಗಳನ್ನು ಬಳಸಿ ವಾಕ್ಯ ಮಾಡಿರಿ

1. ಬರು
2. ತರು
3. ಓದು
4. ಮಾಡು
5. ತಿನ್ನು
6. ಹೋಗು
7. ಮಲಗು
8. ನಡೆ
9. ನೋಡು
10. ಓಡು

ಓದಿರಿ:

ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆಯನ್ನು ಉತ್ಪಾದಿಸಲಾಗುತ್ತದೆ. ಅಲ್ಲಿ ಮೊದಲು ಕಬ್ಬನ್ನು ಸಂಸ್ಕರಿಸಲಾಗುವುದು. ಕಬ್ಬಿನಿಂದ ಕಚ್ಚಾ ಸಕ್ಕರೆಯನ್ನು ಉತ್ಪಾದಿಸುವಲ್ಲಿ ಅನೇಕ ಹಂತಗಳಿವೆ.

ಕಬ್ಬನ್ನು ಮೊದಲು ಸ್ವೀಕರಿಸಬೇಕು. ರಸ ತೆಗೆಯಲು ಕಬ್ಬನ್ನು ತುಂಡು ಮಾಡಬೇಕು. ಕಬ್ಬನ್ನು ಜಜ್ಜಿ ರಸವನ್ನು ತೆಗೆಯಬೇಕು. ರಸವನ್ನು ತಿಳಿಗೊಳಿಸಬೇಕು. ರಸವನ್ನು ಆವಿಯಾಗಿಸಬೇಕು. ಆಮೇಲೆ ಹರಳಾಗಿಸಬೇಕು. ಮತ್ತು ಸಕ್ಕರೆಯನ್ನು ಒಣಗಿಸಬೇಕು. ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು.

ಕರ್ನಾಟಕದಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳು ಇವೆ.

Send your completed homework by email to klcjnu@gmail.com