Theater Song
Note:
This song has taken from a historical Kannada play- Vigaḍavikramarāya (ವಿಗಡವಿಕ್ರಮರಾಯ) written by Samsa (1919 — 1939), who is one of the most powerful play wrights of the early twentieth century. Within a span of twenty years, he wrote 23 plays.
Word | Transliteration | Meaning |
---|---|---|
ದೊರೆ | dore | king |
ದಂಡು | daṇḍu | group of warriors |
ಮಲ್ಲ ಯುದ್ದ | malla yudda | wrestling |
ಮಾನ | māna | pride |
ಲೋಕ | lōka | world |
ಗಮನಿಸಿರಿ:
ಕರ್ನಾಟಕದಲ್ಲಿ ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ- ಎಂದು ಎರಡು ಪ್ರಮುಖ ಪ್ರಕಾರಗಳಿವೆ. ಈ ಎರಡೂ ಪ್ರಕಾರಗಳಿಗೆ ಜೀವ ತುಂಬುವುದು ರಂಗ ಗೀತೆಗಳು. ರಂಗ ಗೀತೆಗಳು ನಾಟಕದ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ರಂಗ ಗೀತೆಗಳು ಛಂದೋ ಬದ್ಧವಾಗಿರುತ್ತವೆ. ಹಾಡುವ ರೀತಿ, ಒಳ್ಳೆಯ ಕಂಠ, ಸೊಗಸಾದ ಸಾಹಿತ್ಯ- ಇವು ರಂಗ ಗೀತೆಗಳ ಯಶಸ್ಸಿಗೆ ಕಾರಣ. ರಂಗಗೀತೆಗಳಲ್ಲಿ ಲಾವಣಿ, ಜಾನಪದ ಶೈಲಿಯ ಹಾಡು, ವಚನಗಳು, ದಾಸರ ಪದಗಳು ಹಾಗೂ ಶಾಸ್ತ್ರೀಯ ಸಂಗೀತದ ಕೆಲವು ಅಂಶಗಳಿರುತ್ತವೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತ ರಸಗಳನ್ನು ರಂಗದಲ್ಲಿ ಪ್ರಕಟಿಸಲು ಈ ಹಾಡುಗಳು ಸಹಕರಿಸುತ್ತವೆ. ಗುಬ್ಬಿ ವೀರಣ್ಣನವರ ಕಂಪನಿಯ ಅನೇಕ ಹಾಡುಗಳು ತುಂಬ ಜನಪ್ರಿಯವಾಗಿವೆ. ಬಿ ವಿ ಕಾರಂತರು ರಾಗ ಸಂಯೋಜಿಸಿದ ರಂಗ ಗೀತೆಗಳು ದೇಶದಾದ್ಯಂತ ಪ್ರಸಿದ್ಧವಾಗಿವೆ.
ಚಾರಿತ್ರಿಕ ನಾಟಕಗಳ ಬಗ್ಗೆ ನಿಮಗೇನು ಗೊತ್ತು? 10 ವಾಕ್ಯ ಬರೆಯಿರಿ.
ಗಿರೀಶ್ ಕಾರ್ನಾಡರ ತುಘಲಕ್ ನಾಟಕವನ್ನು ಓದಿರಿ.
ಲಂಕೇಶರ ಸಂಕ್ರಾಂತಿ ನಾಟಕದ ಬಗ್ಗೆ ಟಿಪ್ಪಣಿ ಬರೆಯಿರಿ.
ಯು ಟ್ಯೂಬ್ ನಲ್ಲಿ ದೊರೆಯುವ ರಂಗಗೀತೆಯನ್ನು ಕೇಳಿ ನಮಗೆ ತಿಳಿಸಿರಿ.
ಓದಿರಿ: ಗಿರೀಶ್ ಕಾರ್ನಾಡರ ತುಘಲಕ್, ಪಿ ಲಂಕೇಶ್ ಅವರ ಸಂಕ್ರಾಂತಿ ಮತ್ತು ಎಚ್ ಎಸ್ ಶಿವಪ್ರಕಾಶ್ ಅವರ ಮಹಾಚೈತ್ರ.
ಯೂ ಟ್ಯೂಬ್ ನಲ್ಲಿ ಬಿ ಜಯಶ್ರೀ ಅವರ ರಂಗಗೀತೆಗಳನ್ನು ಕೇಳಿರಿ, ಒಂದು ಗೀತೆ ಹಾಡಿರಿ.
https://www.youtube.com/watch?v=NvpEdoM59kA
ಓದಿರಿ ಮತ್ತು ಕೊನೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ
ಆಧುನಿಕ ಕನ್ನಡ ರಂಗಭೂಮಿಯ ಉಗಮ ಯಾವಾಗ ಆಯಿತೆಂಬುದು ಸ್ಪಷ್ಟವಾಗಿಲ್ಲ.. ದೊರೆತಿರುವ ಕನ್ನಡ ನಾಟಕಗಳಲ್ಲಿ ಸಿಂಗರಾರ್ಯ ರಚಿಸಿದ ‘ಮಿತ್ರವಿಂದಾ ಗೋವಿಂದ’ ವೇ ಮೊದಲನೆಯದು. ಇದು 17ನೆಯ ಶತಮಾನದ ಅಂತ್ಯಭಾಗದಲ್ಲಿ ರಚಿತವಾದ ಕೃತಿ; ಶ್ರೀಹರ್ಷನ ರತ್ನಾವಳೀ ನಾಟಕದ ಕನ್ನಡ ರೂಪ. ಆದರೆ ಜನಪದ ರಂಗಭೂಮಿಯು ಸುಮಾರು 10ನೇ ಶತಮಾನದಿಂದಲೂ ಜನಪ್ರಿಯವಾಗಿತ್ತು. ಬೊಂಬೆಯಾಟವೂ ಕರ್ನಾಟಕದಲ್ಲಿ ಜನಮನ್ನಣೆ ಗಳಿಸಿತ್ತು. ಯಕ್ಷಗಾನವು ಕರ್ನಾಟಕದ ಅತ್ಯಂತ ಜನಪ್ರಿಯ ಕಲೆಯಾಗಿದೆ.
ಕರ್ನಾಟಕದಲ್ಲಿ ವೃತ್ತಿ ರಂಗಭೂಮಿಯು 19ನೆಯ ಶತಮಾನದ ಉತ್ತರರಾರ್ಧದಲ್ಲಿ ಆರಂಭವಾಯಿತು. ಮರಾಠೀ ಮತ್ತು ಪಾರ್ಸಿ ರಂಗ ಭೂಮಿಯು ಕರ್ನಾಟಕದ ವೃತ್ತಿ ರಂಗ ಭೂಮಿಗೆ ಪ್ರೇರಣೆ ನೀಡಿದವು.
ಬೆಳಗಾವಿ ಜಿಲ್ಲೆಯ ಹಲಸಿ ಕಂಪನಿ (1869), ಧಾರವಾಡ ಜಿಲ್ಲೆಯ ಶರತಪುರ ನಾಟಕಮಂಡಳಿ (1872) ಆರಂಭದ ಜನಪ್ರಿಯ ಕಂಪೆನಿಗಳು. ಶಿವಮೂರ್ತಿಸ್ವಾಮಿಗಳ ( 1899) ಕೊಣ್ಣೂರ ಕಂಪನಿಯು ವೃತ್ತಿರಂಗಭೂಮಿಯ ವೈಭವ ಪರಂಪರೆಗೆ ನಾಂದಿ ಹಾಡಿತು. ಶನಿಪ್ರಭಾವ, ಮನೋವಿಜಯ, ಬಸವೇಶ್ವರ ಮುಂತಾದವು ಈ ಕಂಪನಿಯ ಪ್ರಸಿದ್ಧ ನಾಟಕಗಳು. ಬೆಳವಿ ರಾಚಯ್ಯ, ಚಿಕ್ಕೋಡಿ ಶಿವಲಿಂಗಯ್ಯ, ಮುರಗೋಡ ಗಂಗಾಧರಪ್ಪ, ಬಳ್ಳಾರಿ ಬಸಪ್ಪ, ಪೀತಾಂಬರಪ್ಪ, ಡೋಂಗರೆ, ಗುರುಲಿಂಗಪ್ಪ ಗುಳೇದಗುಡ್ಡ, ಯಲ್ಲೂಬಾಯಿ ಗುಳೇದಗುಡ್ಡ ಮೊದಲಾದ ಪ್ರಸಿದ್ಧ ನಟನಟಿಯರು ಈ ಕಂಪನಿಯಲ್ಲಿದ್ದರು. ಗರುಡ ಸದಾಶಿವರಾಯರು ಕೆಲಕಾಲ ಈ ಕಂಪನಿಯಲ್ಲಿ ಅಭಿನಯದ ಶಿಕ್ಷಕರಾಗಿದ್ದರು. 20 ವರುಷಗಳ ರಂಗಸೇವೆಯ ಅನಂತರ ಕಂಪನಿ ನಿಂತಿತು. ಕೊಣ್ಣೂರ ಕಂಪನಿ ಅನಂತರ ಉತ್ತರ ಕರ್ನಾಟಕದಲ್ಲಿ ಅನೇಕ ನಾಟಕ ಕಂಪೆನಿಗಳು ತಲೆ ಎತ್ತಿದುವು. ಇವು ಪ್ರೇಕ್ಷಕರನ್ನು ಕಡಿಮೆ ಅವಧಿಯಲ್ಲಿ ರಂಜಿಸಿ, ಒಳ್ಳೆಯ ಸಂಗೀತವನ್ನು ನೀಡುವ. ರಂಗ ಸಂಗೀತ ಪರಂಪರೆಯನ್ನು ಹುಟ್ಟು ಹಾಕಿದುವು. ಸಂಗೀತ ಪ್ರಧಾನ ನಾಟಕಗಳ ಕಾಲದಲ್ಲಿ ಗಾಯಕ-ನಟರ ದೊಡ್ಡ ಪರಂಪರೆ ನಿರ್ಮಾಣವಾಯಿತು. ವಾಮನರಾವ್ ಮಾಸ್ತರ, ಬಸವರಾಜ ಮನಸೂರ, ಗಂಗು ಬಾಯಿ ಗುಳೇದ ಗುಡ್ಡ, ಡಿ. ಮುದ್ದು ವೀರಾಚಾರ್ಯ, ಬೇವೂರ ಬಾದಷಾ ಮಾಸ್ತರ, ನೀಲಕಂಠ ಬುವಾ, ಗಾಡಗೋಳಿ ಮುರಗೋಡ ಗಂಗಾಧರಪ್ಪ, ತುಕಾರಾಮ ಬುವಾ ಗೋಕಾಕ, ಸೋನುಬಾಯಿ ದೊಡ್ಡ ಮನಿ, ಏಣಗಿ ಬಾಳಪ್ಪ, ಗಿರಡಿ ಗಂಗಯ್ಯ ಮೊದಲಾದ ನಟ-ನಟಿಯರು ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿ ಪ್ರಸಿದ್ಧರಾಗಿದ್ದರು.
ಗರುಡ ಸದಾಶಿವರಾಯರಿಂದ ಅಭಿನಯಕ್ಕೆ ಮಹತ್ತ್ವ ಬಂತು. ಕಂದಗಲ್ಲ ಹನುಮಂತರಾಯರಿಂದ ಧ್ವನಿರಮ್ಯತೆಯ ಸಂಭಾಷಣೆ ಒತ್ತು ದೊರೆಯಿತು. ಕೋಲ ಕಾಂತಪ್ಪನವರಿಂದ, ನಲವಡಿ ಶ್ರೀಕಂಠಶಾಸ್ತ್ರಿಗಳಿಂದ, ಎಚ್.ಟಿ. ಮಹಾಂತೇಶ ಶಾಸ್ತ್ರಿಗಳಿಂದ ನಾಟಕದ ಲಲಿತ ಸಂಭಾಷಣೆಗೆ, ಸಾಮಾಜಿಕ ಸಮಸ್ಯೆಗಳಿಗೆ ಪ್ರಾಧಾನ್ಯ ದೊರೆಯಿತು.
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಕಂಪನಿ ನಾಟಕಗಳು ವಸಾಹತುಶಾಹಿ ಸರಕಾರವನ್ನು ಪ್ರತಿಭಟಿಸುವುದರಲ್ಲಿ ಮಹತ್ತ್ವದ ಪಾತ್ರವಹಿಸಿದವು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ನರಗುಂದ ಬಂಡಾಯ, ಮುಂತಾದ ನಾಟಕಗಳು ಜನರಲ್ಲಿ ಸ್ವಾತಂತ್ರ್ಯದ ಅಭಿಮಾನವನ್ನು ಜಾಗೃತಿಗೊಳಿಸಿದವು.
ಮುಂದೆ ಶ್ರೀರಂಗರು ಹವ್ಯಾಸಿ ರಂಗ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿದರು. ಶ್ರೀರಂಗರ ಅನಂತರ ಜಿ.ಬಿ. ಜೋಶಿ, ಚಂದ್ರಶೇಖರ ಕಂಬಾರ, ಚಂದ್ರಕಾಂತ ಕುಸನೂರ, ಗಿರೀಶ ಕಾರ್ನಾಡ, ಚಂದ್ರಶೇಖರ ಪಾಟೀಲ, ಹೂಲಿ ಶೇಖರ ಮೊದಲಾದವರ ನಾಟಕಗಳಿಂದ ಉತ್ತರ ಕರ್ನಾಟಕದ ಹವ್ಯಾಸಿ ರಂಗಭೂಮಿ ಚೆನ್ನಾಗಿಯೇ ಬೆಳೆಯಿತು. ಕೆ ವಿ ಸುಬ್ಬಣ್ಣ ಅವರಿಂದ ಸ್ಥಾಪಿಸಲ್ಪಟ್ಟ ನೀನಾಸಂ ರಂಗ ಶಿಕ್ಷಣ ಕೇಂದ್ರದಿಂದ ತರಬೇತಿ ಪಡೆದು ಬಂದ ಕಲಾವಿದರು ಹಾಗೂ ನಿರ್ದೇಶಕರು ಹವ್ಯಾಸಿ ರಂಗಭೂಮಿಯನ್ನು ಈಗ ಜೀವಂತವಾಗಿಟ್ಟಿದ್ದಾರೆ. ಬಿ ವಿ ಕಾರಂತರಿಂದ ಆರಂಭವಾಗ ಮೈಸೂರಿನ ರಂಗಾಯಣವು ನಾಟಕ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಪ್ರಸಿದ್ಧವಾಗಿದೆ.
1975ರಲ್ಲಿ ಜನ್ಮ ತಾಳಿದ ಸಮುದಾಯ ತಂಡವು ನಾಟಕವನ್ನು ಮಧ್ಯಮವರ್ಗದಿಂದ ಶ್ರಮಜೀವಿಗಳ ಬಳಿಗೆ ಕೊಂಡೊಯ್ಯಿತು. ತಾಯಿ, ಗೆಲಿಲಿಯೋ, ಹುತ್ತವ ಬಡಿದರೆ, ಪಂಚಮ, ಬೆಲ್ಚಿ, ಏಕಲವ್ಯ, ದಂಗೆಯ ಮುಂಚಿನ ದಿನಗಳು ನಾಟಕಗಳು ದುಡಿಯುವ ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸಿದವು.
ಪ್ರಶ್ನೆಗಳು:
1. ಕನ್ನಡದ ಮೊದಲ ನಾಟಕ ಯಾವುದು?
2. ಕರ್ನಾಟಕದಲ್ಲಿ ವೃತ್ತಿ ರಂಗ ಭೂಮಿ ಯಾವಾಗ ಆರಂಭವಾಯಿತು?
3. ಕೊಣ್ಣೂರು ಕಂಪೆನಿ ಆಡಿದ ಪ್ರಸಿದ್ಧ ನಾಟಕಗಳು ಯಾವುವು?
4. ಇಬ್ಬರು ಗಾಯಕ ನಟರ ಹೆಸರು ಬರೆಯಿರಿ
5. ನೀನಾಸಂ ನ್ನು ಯಾರು ಸ್ಥಾಪಿಸಿದರು?
6. ಬಿ ವಿ ಕಾರಂತರು ಯಾವುದಕ್ಕೆ ಪ್ರಸಿದ್ಧರು?
ಈ ರಂಗಗೀತೆಯನ್ನು ಆಲಿಸಿರಿ
https://www.youtube.com/watch?v=Ju5DIy6ODV0
Send your completed homework by email to klcjnu@gmail.com