ರವೀಂದ್ರ ಕಲಾ ಕ್ಷೇತ್ರ ರವೀಂದ್ರನಾಥ ಟ್ಯಾಗೋರ್ ಅವರravīndra kalā kṣētra ravīndranātha ṭyāgōr avaraRavindra Kalakshetra was constructed by central government in all states on the occasion of centenary celebrations of Ravindranath Tagore.
100ನೇ ವರ್ಷದ ಜನ್ಮದಿನಕ್ಕೋಸ್ಕರ ಕೇಂದ್ರ ಸರ್ಕಾರ,100nē varṣada janmadinakkōskara kēndra sarkāra,
ಎಲ್ಲಾ ರಾಜ್ಯಗಳಲ್ಲಿ ಕಟ್ಟಿದಂತಹ ರಂಗಭೂಮಿಯ ಒಂದು ಪರಿಕಲ್ಪನೆ ಇದೆಯಲ್ಲ.ellā rājyagaḷalli kaṭṭidantaha raṅgabhūmiya ondu parikalpane ideyalla.
ಆ ಕಾರಣದಿಂದ ಹುಟ್ಟಿದಂತಹ ರವೀಂದ್ರ ಕಲಾ ಕ್ಷೇತ್ರ ಇದು.ā kāraṇadinda huṭṭidantaha ravīndra kalā kṣētra idu.
ನಿಮಗೆ ಗೊತ್ತಿರಬಹುದು, ಕಲ್ಕತ್ತಾದಲ್ಲಿ ರವೀಂದ್ರ ಸದನ ಅಂತಹnimage gottirabahudu, kalkattādalli ravīndra sadana antahaYou are aware that there is Ravindra Sadana in Kolkatta.
ಬೇರೆ ಬೇರೆ ರಾಜ್ಯಗಳಲ್ಲಿ ರವೀಂದ್ರನಾಥರ ಹೆಸರಲ್ಲಿ ಬೇರೆ ಬೇರೆ ರಂಗಮಂದಿರಗಳು ಹುಟ್ಟಿಕೊಂಡವು.bēre bēre rājyagaḷalli ravīndranāthara hesaralli bēre bēre raṅgamandiragaḷu huṭṭikoṇḍavu.It is there in other states by the name of Rabindranath Tagore.
ಆದರೆ ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರ ಅಂತ ಹೆಸರು ಬಂತು. ರವೀಂದ್ರ ಕಲಾಕ್ಷೇತ್ರādare beṅgaḷūrinalli ravīndra kalākṣētra anta hesaru bantu. ravīndra kalākṣētraIt is called Ravindra Kalakshetra in Bengaluru.
ನಮ್ಮ ಅದೃಷ್ಟ ಅನ್ನಿಸುತ್ತೆ. ಇದೊಂದು ಕಲಾಕ್ಷೇತ್ರ.namma adṛṣṭa annisutte. idondu kalākṣētra.It is our good fortune that we have such a nice theatre.
ಕಲಾವಿದರಿಗೆ ಪವಿತ್ರವಾದಂತಹ ಕ್ಷೇತ್ರ; ಕಲಾಕ್ಷೇತ್ರ. ....ನಿಜkalāvidarige pavitravādantaha kṣētra; kalākṣētra. ....nijaIt is a holy place for artists – abode of arts.
ನಿಮಗೆ ಗೊತ್ತಿರುತ್ತೆ, ನಮ್ಮ ರಾಜ್ಯದ ಅನೇಕ ಜನ ಅಷ್ಟೇ ಅಲ್ಲ,nimage gottirutte, namma rājyada anēka jana aṣṭē alla,Yes. You may be aware that many people not only from our state but also from other states desire to act here on the stage.
ಬೇರೆ ಬೇರೆ, ರಾಜ್ಯದವರನ್ನೂ ಈ ಒಂದು ಕಲಾಕ್ಷೇತ್ರದಲ್ಲಿ ಅಭಿನಯ ಮಾಡಬೇಕು.bēre bēre, rājyadavarannū ī ondu kalākṣētradalli abhinaya māḍabēku.
ಕಲಾವಿದರು ಭಾಗವಹಿಸ ಬೇಕೂಂತ ಆಸೆ ಪಡುತ್ತಾರೆ.kalāvidaru bhāgavahisa bēkūnta āse paḍuttāre.Artists want to come and participate here.
ಹೌದು ಕಲಾವಿದರ ಕನಸು ಇದು. ಕಲಾಕ್ಷೇತ್ರದಲ್ಲಿ,haudu kalāvidara kanasu idu. kalākṣētradalli,Yes. It is a dream of artists.
ಕಲಾಕ್ಷೇತ್ರದ ಒಂದು ರಂಗಮಂಚದ ಮೇಲೆkalākṣētrada ondu raṅgamañcada mēleIt is a wonderful experience to go on to the stage here.
ಬಂದು ಹೋಗುವುದಿದೆಯಲ್ಲ, ಅದು ಅದ್ಭುತ ಅನುಭವ,bandu hōguvudideyalla, adu adbhuta anubhava,It is also memorable days for the lifetime.
ಮತ್ತದು ಜೀವಿತದಲ್ಲಿ ಅದೊಂದು ಮರೆಯಲಾಗದ ದಿನಗಳೂ ಅನಿಸತ್ತೆ.mattadu jīvitadalli adondu mareyalāgada dinagaḷū anisatte.
ಈಗ ನಿಜವಾಗಿ ಹೇಳಬೇಕೂಂತ ಅಂದ್ರೆ, ದೆಹಲಿಯಲ್ಲಿದ್ದಾರೆ ನೋಡಿ ಕನ್ನಡಿಗರು, ನಮ್ಮ ಕನ್ನಡಿಗರಿಗೆīga nijavāgi hēḷabēkūnta andre, dehaliyalliddāre nōḍi kannaḍigaru, namma kannaḍigarigeTruly speaking, Kannadigas here in Delhi
ಕಲಾಕ್ಷೇತ್ರಕ್ಕೆ ಹೋಗ್ಬಿಟ್ಟು, ರವೀಂದ್ರ ಕಲಾ ಕ್ಷೇತ್ರಕ್ಕೆ ಹೋಗ್ಬಿಟ್ಟು ನಾನೊಂದು ಕಾರ್ಯಕ್ರಮ ಮಾಡಿದೆ ಅಂದ್ರೆkalākṣētrakke hōgbiṭṭu, ravīndra kalā kṣētrakke hōgbiṭṭu nānondu kāryakrama māḍide andrelook for an opportunity to go to Bangalore and do a programme in Kalakshetra
ಜನ್ಮಸಾರ್ಥಕ ಆಯಿತು ಅಂತ ತಿಳ್ಕೊಂಡ್ರೂನು ಉತ್ಪ್ರೇಕ್ಷೆಯೇನಲಪ್ಪ ನನಿಗೆjanmasārthaka āyitu anta tiḷkoṇḍrūnu utprēkṣeyēnalappa nanigeIt is a kind of fulfillment in life, without exaggeration.
ಅಷ್ಟೇ ಅಲ್ಲ ಮೇಡಂ, ಬರೀ ದಿಲ್ಲಿಗೆ ಸೀಮಿತ ಅಂತ ಅಲ್ಲ, ದೇಶಕ್ಕೆಂತ ಅಲ್ಲ,aṣṭē alla mēḍaṁ, barī dillige sīmita anta alla, dēśakkenta alla,Not only that madam. It is not limited only to Delhi or to the country.
ಅಮೆರಿಕದಲ್ಲಿರುವ ಕನ್ನಡಿಗರು ಅಕ್ಕ ಸಮ್ಮೇಳನದಲ್ಲಿ ಮಾಡಿದಂತಹ ಕನ್ನಡಿಗರುamerikadalliruva kannaḍigaru akka sammēḷanadalli māḍidantaha kannaḍigaruKannadigas in America who organize ‘Akka’ conference
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ ಮಾಡಬೇಕೂಂತ ಬಯಸುತ್ತಾರೆ.beṅgaḷūrina ravīndra kalākṣētradalli ondu kāryakrama māḍabēkūnta bayasuttāre.desire to do a programme in Ravindra Kalakshetra.
ಈಗ ‘ನಾವಿಕ’ ಅಂತ ನಡೀತ್ತಾ ಇದೆ. ಅವರು ಇಲ್ಲಿ ಬಂದು ಕಾರ್ಯಕ್ರಮ ಮಾಡಬೇಕು,īga ‘nāvika’ anta naḍīttā ide. avaru illi bandu kāryakrama māḍabēku,Now ‘Navika’ is going on. Kannadigas
ಅಲ್ಲಿನ ಕನ್ನಡಿಗರು ಬಂದು ಇಲ್ಲಿ ಒಂದು ಕಾರ್ಯಕ್ರಮ ಮಾಡಬೇಕೂಂತ ಅಂತಾರೆ .allina kannaḍigaru bandu illi ondu kāryakrama māḍabēkūnta antāre .there desire to come here and do a programme in Ravindra Kalakshetra.
ಅಂದ್ರೆ ವಿಶ್ವವ್ಯಾಪ್ತಿ ಕಲಾಕ್ಷೇತ್ರಕ್ಕೆ ಹೆಸರಿದೆ.andre viśvavyāpti kalākṣētrakke hesaride.It has got a worldwide name.
ಮತ್ತೆ ಈ ರವೀಂದ್ರ ಕಲಾ ಕ್ಷೇತ್ರ ಇದೆಯಲ್ಲ,matte ī ravīndra kalā kṣētra ideyalla,This Ravindra Kalakshetra
ಇದು ಹವ್ಯಾಸಿಗಳಿಗೆ ಮತ್ತೆ ವೃತ್ತಿ ರಂಗಭೂಮಿಗೆ ಎರಡಕ್ಕೂ ತೆರೆದುಕೊಂಡಂತಹ ಒಂದು –idu havyāsigaḷige matte vṛtti raṅgabhūmige eraḍakkū teredukoṇḍantaha ondu –is open to both amateurs and professional theatre artists. Definitely.
ಖಂಡಿತಾ, ಯಾಕೆಂದ್ರೆ ಬೆಂಗಳೂರಲ್ಲಿ ಹಲವಾರು ಆಮೇಲೆ ಹುಟ್ಟಿಕೊಂಡವು.khaṇḍitā, yākendre beṅgaḷūralli halavāru āmēle huṭṭikoṇḍavu.Because, many theatres commenced later on.
ಸುಮಾರು ರಂಗಮಂದಿರಗಳಿವೆ. ಆದ್ರೆ ಅವು ಎಲ್ಲಾsumāru raṅgamandiragaḷive. ādre avu ellāSo many of them are there in Bangalore.But, all of them
ಈ ವೃತ್ತಿ ರಂಗಭೂಮಿಗೆ ಮಾತ್ರ ಸೀಮಿತವಾಗಿದೆ.ī vṛtti raṅgabhūmige mātra sīmitavāgide.are limited to professional theatre.
ಆದ್ರೆ ಇಲ್ಲಿ Particularly ಇದು, ರವೀಂದ್ರ ಕಲಾಕ್ಷೇತ್ರ ಇದೆಯಲ್ಲ,ādre illi Particularly idu, ravīndra kalākṣētra ideyalla,But, this one particularly Ravindra Kalakshetra
ಇದು ವೃತ್ತಿ ರಂಗಭೂಮಿಗೂ ಸೇರುತ್ತೆ. ಹವ್ಯಾಸಿಗೂ ಸೇರುತ್ತೆ,idu vṛtti raṅgabhūmigū sērutte. havyāsigū sērutte,belongs to both amateur as well as professional artists.
ಪೌರಾಣಿಕ ರಂಗಭೂಮಿಗೂ ಸೇರುತ್ತೆ. ಈಕಡೆ ಯಕ್ಷಗಾನದವರಿದ್ದಾರಲ್ಲ,paurāṇika raṅgabhūmigū sērutte. īkaḍe yakṣagānadavariddāralla,Also to mythological performances.
ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ಬಂದು ಯಕ್ಷಗಾನವನ್ನು ಪ್ರದರ್ಶನ ಮಾಡಿmaḷegālada sandarbhadalli illi bandu yakṣagānavannu pradarśana māḍiDuring monsoon yakshagana shows are also conducted here.
ಏಯ್.. ನಿಮಗೆ ಗೊತ್ತಿಲ್ಲ ಇಡೀ ರಾತ್ರಿ ಯಕ್ಷಗಾನ ನಡೆಯುತ್ತೆ.ēy.. nimage gottilla iḍī rātri yakṣagāna naḍeyutte.You may not know.Yakshagana goes on throughout the night.
ರಾತ್ರಿ 10 ಗಂಟೆಗೆ ಶುರುಮಾಡಿ ಬೆಳಕರೆಯವರೆಗೂ ಯಕ್ಷಗಾನ ಮಾಡ್ತಾರೆ. ಇಲ್ಲಿrātri 10 gaṇṭege śurumāḍi beḷakareyavaregū yakṣagāna māḍtāre. illiIt starts at 10 in the night and goes on till dawn.
ಈ ರವೀಂದ್ರ ಕಲಾ ಕ್ಷೇತ್ರದಲ್ಲಿ. ಅಮೇಲೆ ಈ ಒಂದು Area ಇದೆಯಲ್ಲ,ī ravīndra kalā kṣētradalli. amēle ī ondu Area ideyalla,The area around Ravindra Kalakshetra
ಸಂಪೂರ್ಣವಾದಂತಹ Area... ನೋಡೀ,sampūrṇavādantaha Area... nōḍī,is an attractive landmark for Bangalore.
ಈ ಕಡೆಯಿಂದ ಬಂದರೆ Townhall ಇದೆ, Townhall ಒಂದು ರಂಗಮಂದಿರī kaḍeyinda bandare Townhall ide, Townhall ondu raṅgamandiraComing from corporation side, we see Townhall first. Townhall is also a well furnished auditorium.
ಒಳಕ್ಕೆ ಬಂದ ತಕ್ಷಣ ನಿಮಗೆ ಎದುರುಗಡೆ ಸಿಗುವುದು ಸಂಸಾ ಬಯಲು ರಂಗ ಮಂದಿರ,oḷakke banda takṣaṇa nimage edurugaḍe siguvudu saṁsā bayalu raṅga mandira,As you enter Kalakshetra you will see Samsa open air theatre.
ಆ ಕಡೆ ಕಾಣುವುದು ನಮಗೆ ರವೀಂದ್ರ ಕಲಾಕ್ಷೇತ್ರ. ನಮ್ಮ ಎಡಗಡೆ ಹೋದರೆ ಕನ್ನಡ ಭವನ ಇದೆ.ā kaḍe kāṇuvudu namage ravīndra kalākṣētra. namma eḍagaḍe hōdare kannaḍa bhavana ide.Behind that and facing JC road, we see Ravindra Kalakshetra. Towards left of that building is Kannada Bhavan.
ಕನ್ನಡ ಭವನದಲ್ಲಿ ಒಂದು ನಯನಾ ರಂಗಮಂದಿರಾಂತ ಇದೆ.kannaḍa bhavanadalli ondu nayanā raṅgamandirānta ide.There is a small auditorium called Nayana at the ground floor of Kannada Bhavana.
ಮತ್ತೆ ಒಂದು ಸಣ್ಣಪುಟ್ಟ Seminarಗಳನ್ನು ಮಾಡುವುದಕ್ಕೆmatte ondu saṇṇapuṭṭa Seminargaḷannu māḍuvudakkeWe also have small seminar halls.
ಚಿಕ್ಕ ಚಿಕ್ಕ Auditoriumಗಳು ಸಹ ನಮಗೆ ಸಿಗುತ್ತವೆ.:cikka cikka Auditoriumgaḷu saha namage siguttave.:
ನಯನಾ ಇದೆ, ಚಾವಡಿ ಇದೆ.nayanā ide, cāvaḍi ide.Nayana is there. Chavadi is there.
ಒಟ್ಟಾರೆ ಹೇಳಬೇಕೂಂತ ಅಂದ್ರೆ, ಈ ಒಂದು...oṭṭāre hēḷabēkūnta andre, ī ondu...Overall, We can say that
ಏನು ಪ್ರದೇಶ ಇದೆಯಲ್ಲ, ಇದು ರಂಗಭೂಮಿಗೆ ಅಥವಾ ಸಾಂಸ್ಕøತಿಕಕ್ಕೆēnu pradēśa ideyalla, idu raṅgabhūmige athavā sāṁskaøtikakkethis area is the hub of theatre and cultural activities.
ತೆರೆದಿಟ್ಟುಕೊಂಡಂತಹ ಜಾಗ ಅಂತ ಹೇಳ್ಕೋಬಹುದು.terediṭṭukoṇḍantaha jāga anta hēḷkōbahudu.
ಖಂಡಿತಾ. . ಖಂಡಿತ, ಅಮೇಲೆ ಉಷಾ ಹೇಳುತ್ತಿದ್ದರು ನೋಡಿkhaṇḍitā. . khaṇḍita, amēle uṣā hēḷuttiddaru nōḍiCertainly. Yes. Moreover, as Usha was telling many amateur drama troupes
ಹವ್ಯಾಸಿ, ಎಷ್ಟೋ ಹವ್ಯಾಸಿ ರಂಗತಂಡಗಳು ಬಂದಿವೆ.havyāsi, eṣṭō havyāsi raṅgataṇḍagaḷu bandive.
ಸ್ಪಂದನ, ಬೆನಕ, ನಮ್ಮ ಉಮಾಶ್ರೀಯವರು,spandana, benaka, namma umāśrīyavaru,like Spandana, Benaka, Ranga Sampada have given shows here.
ಈಗ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವೆಯಾಗಿದ್ದರಾಲ್ಲ,īga kannaḍa mattu saṁskaøti ilākheya saciveyāgiddarālla,Our Kannada and Culture Minister is there you know, Mrs.
ಅವರು ಯಾವತ್ತೂ ಬಹುಶಃ ಈ ರವೀಂದ್ರ ಕಲಾಕ್ಷೇತ್ರಕ್ಕೆ ಬಹುಶಃ ಕೃತಜ್ಞರಾಗಿರಬೇಕು.avaru yāvattū bahuśaḥ ī ravīndra kalākṣētrakke bahuśaḥ kṛtajñarāgirabēku.Umasri, should be ever grateful to this Ravindra Kalakshetra.
ಇಲ್ಲಿಂದ ಹುಟ್ಟಿಕೊಂಡಂತಹ ಕಲಾವಿದೆ ಅವರು.illinda huṭṭikoṇḍantaha kalāvide avaru.She has grown as an artist from here.
ಅಷ್ಟೇ ಮಾತ್ರ ಅಲ್ಲ, ಇಲ್ಲಿ ಕಾಲೇಜು ರಂಗಭೂಮಿ ಇದೆಯಲ್ಲ,aṣṭē mātra alla, illi kālēju raṅgabhūmi ideyalla,Not only that college theatre in Bangalore has grown from here.
ಅದು ತುಂಬಾ ಬೆಳವಣಿಗೆಗೆ, ಈ ಕಲಾಕ್ಷೇತ್ರ ತುಂಬಾ ಕೊಡುಗೆ ಇದೆ.adu tumbā beḷavaṇigege, ī kalākṣētra tumbā koḍuge ide.This Kalakshetra has given lot of contributions. Certainly
ಖಂಡಿತ....ಯಾಕೆಂದ್ರೆ ಇಡೀ ಇಷ್ಟೊಂದು ಕಾಲೇಜಿನ ಎಲ್ಲಾ ಹುಡುಗರು ಕೂಡಾkhaṇḍita....yākendre iḍī iṣṭondu kālējina ellā huḍugaru kūḍāCollege students from their own drama groups and arrange drama festivals here.
ಅವರವರೇ ಒಂದು ರಂಗತಂಡಗಳನ್ನು ಕಟ್ಟಿಕೊಂಡು,avaravarē ondu raṅgataṇḍagaḷannu kaṭṭikoṇḍu,
ಇಲ್ಲಿ ಕಾಲೇಜು ನಾಟಕೋತ್ಸವಗಳು ಆಗುತ್ತವೆ ಇಲ್ಲಿ,illi kālēju nāṭakōtsavagaḷu āguttave illi,
Really Great... ಎರಡೂ ಹೇಳ್ತಾ ಇದ್ರಾ ನೀವು...Really Great... eraḍū hēḷtā idrā nīvu...Really great. you are telling about two developments.
ಆದ್ರೆ ಒಂದು ರಂಗಭೂಮಿಯ ಚಳುವಳಿ ಹುಟ್ಟಿಕೊಂಡಿದ್ದು ಸಮುದಾಯದ ಮುಖಾಂತರ,ādre ondu raṅgabhūmiya caḷuvaḷi huṭṭikoṇḍiddu samudāyada mukhāntara,But, the theatre movement started through samudaya.
ಆ ಸಮುದಾಯ, 75ರ ದಶಕದಲ್ಲಿ ಇಲ್ಲಿ ಹುಟ್ಟಿ ಬೆಳೆದಂತಹ ಸಮುದಾಯ.ā samudāya, 75ra daśakadalli illi huṭṭi beḷedantaha samudāya.Samudaya took birth here in seventies.
ಇಡೀ ರಾಜ್ಯಕ್ಕೆ ಒಂದು ಚಳುವಳಿ,iḍī rājyakke ondu caḷuvaḷi,It took the theatre movement to the entire state of Karnataka.
ರಂಗಭೂಮಿಯನ್ನು ಒಂದು ಚಳುವಳಿ ರೂಪದಲ್ಲಿ ತಗ್ಹೊಂಡು ಹೋಗ್ಬಿಟ್ಟಿತ್ತು.raṅgabhūmiyannu ondu caḷuvaḷi rūpadalli taghoṇḍu hōgbiṭṭittu.
ಬರೀ ವೇದಿಕೆ ನಾಟಕಗಳಲ್ಲ, ಸೀನಿಯಂ Stageಗಳಲ್ಲಿ ಬೀದಿ ನಾಟಕಗಳು ಸಹ,barī vēdike nāṭakagaḷalla, sīniyaṁ Stagegaḷalli bīdi nāṭakagaḷu saha,Not only through stage dramas, but also through street pays, private stages etc.
ಈ ಸಂಸಾ ಬಯಲು ರಂಗ ಅದೆಷ್ಟು ಬೀದಿ ನಾಟಕಗಳನ್ನು ಕಂಡಿರುವಂತಹ ಜಾಗ ಅಂತಂದ್ರೆ...ī saṁsā bayalu raṅga adeṣṭu bīdi nāṭakagaḷannu kaṇḍiruvantaha jāga antandre...This Samsa open air theatre has witnessed so many street pays.
ಅದ್ಭುತವಾದಂತಹ ಸ್ಥಳ ಇದು. ಒಂದು ನಾವಿಲ್ಲಿ ಕೂತ್ಕೋಕ ಇದ್ದೀವಿ,adbhutavādantaha sthaḷa idu. ondu nāvilli kūtkōka iddīvi,It is a wonderful place. We used to go and sit there.
ಸಿ.ಜಿ.ಕೆ. ಸಿ.ಜಿ.ಕೆ ಆರಾಮವಾಗಿ ಇಲ್ಲಿ ಕೂತ್ಕೊಂಡುsi.ji.ke. si.ji.ke ārāmavāgi illi kūtkoṇḍuC.G. Krishnaswamy used to come and watch plays here.
ಏ ಬಾರೋ ಇಲ್ಲಿ ಅಂತ ಕರೆದು ನಮ್ಮನ್ನ ಬೆಳೆಸಿದಂತವರುē bārō illi anta karedu nammanna beḷesidantavaruHe was taking our assistance when required.
ನಮ್ಮಲ್ಲಿ ರಂಗಭೂಮಿಯ ಚಟುವಟಿಕೆಗಳನ್ನು ಹುಟ್ಟುಹಾಕಿದಂತವರು ಸಿ.ಜಿ.ಕೆ.ಯಂತವರು.nammalli raṅgabhūmiya caṭuvaṭikegaḷannu huṭṭuhākidantavaru si.ji.ke.yantavaru.He started new wave theatre activities from here.
ಅವರು ಕೂತ್ಕೊಂಡು ಇದು ಮಾಡ್ತಾ ಇದ್ರು, ಕಾರಂತರಾಗಿರಬಹುದು.avaru kūtkoṇḍu idu māḍtā idru, kārantarāgirabahudu.
ಕಂಬಾರರಾಗಿರಬಹುದು, ಕಾರ್ನಾಡರಾಗಿರಬಹುದು. ವಿಶೇಷ ಏನೂಂತ ಅಂದ್ರೆ,kambārarāgirabahudu, kārnāḍarāgirabahudu. viśēṣa ēnūnta andre,Also Kambar, Karanth, Karnad et al. Special feature of this area
ಈ Compound ಒಳಗೆ ಬಂದುಬಿಟ್ರೆ ಎಲ್ಲರೂ Equal ಆಗಿಬಿಟ್ಟರ್ತೀವಿ,ī Compound oḷage bandubiṭre ellarū Equal āgibiṭṭartīvi,is that we become equals as soon as we enter here.
ಎಲ್ಲರೂ ಒಂದಾಗ್ಬಿಡ್ತೀವಿ. ಯಾರೇ ಆಗಿರ್ಲಿ ಆಚೆ ಇದ್ರೆellarū ondāgbiḍtīvi. yārē āgirli āce idreAll of us become one. Let it be anyone,
ಉದಾಹರಣೆ ಹೇಳ್ತಿನಿ ನಾನು ಪ್ರಕಾಶ್ ರೈ ಬಂದ್ರು. ಆಚೆ ಅವ್ರಿಗೆ Security ಇರತ್ತೆ.udāharaṇe hēḷtini nānu prakāś rai bandru. āce avrige Security iratte.for example – Prakash Rai has got security outside.
ಈ ಕಾಂಪೌಂಡ್ ಒಳಗೆ ಅವರು Common man.ī kāmpauṇḍ oḷage avaru Common man.But, when he enters this compound he remains relaxed like a common man.
ಅವರೊಬ್ಬ ಕಲಾವಿದ...avarobba kalāvida...He is an artist.
ಆರಾಮವಾಗಿ ಮೆಟ್ಟಲು ಮೇಲೆ ಕೂತ್ಕೊಂಡು ಆರಾಮವಾಗಿ ಇರ್ತಾರೆ.ārāmavāgi meṭṭalu mēle kūtkoṇḍu ārāmavāgi irtāre.He sits on the steps and relaxes. Nagabharana also comes here.
ನಾಗಾಭರಣ ಆಗಿರ್‍ಬಹುದು.nāgābharaṇa āgirbahudu.
ನಾಗಾಭರಣ..nāgābharaṇa..Nagabharana !
ಎಂತೆಂತಹ ದೊಡ್ಡ ದೊಡ್ಡ ಮಹಾ ನಿರ್ದೇಶಕರು. ಇಲ್ಲಿ ಹುಟ್ಟಿ ಬೇಳ್ದಿದ್ದಾರೆ.ententaha doḍḍa doḍḍa mahā nirdēśakaru. illi huṭṭi bēḷdiddāre.So many great directors have grown up from here.
ಈ ರಂಗಭೂಮಿಯಲ್ಲಿ ಅವರು ನಟನೆಯನ್ನು ಕಲ್ತು ಅವರು ನಿರ್ದೇಶಕರಾಗಿ ಹೊಗಿದ್ದಾರೆ.ī raṅgabhūmiyalli avaru naṭaneyannu kaltu avaru nirdēśakarāgi hogiddāre.They have learnt acting in this theatre and then have become directors.
ಅದು ನಿಜವಾಗ್ಲೂ ನಮಗೆ ಹೆಮ್ಮೆ.adu nijavāglū namage hemme.It is a matter of pride for us.
ಹೆಮ್ಮೆ… ಹೆಮ್ಮೆhemme… hemmePride !
: ನಮಗೆಲ್ಲ ಸ್ಪೂರ್ತಿ…. ನಾವು ಸಿನಿಮಾ ನಿರ್ದೇಶಕರಾಗೋದಕ್ಕೆ ಇವರುಗಳೆಲ್ಲ…: namagella spūrti…. nāvu sinimā nirdēśakarāgōdakke ivarugaḷella…It is inspiration for us. They are instrumental in making us directors.
ಈ ರಂಗಭೂಮಿಯ ಕಾಣಿಕೆ ಇರತ್ತಲ್ಲ.ī raṅgabhūmiya kāṇike irattalla.Contribution of this theatre is there.
ಖಂಡಿತkhaṇḍitaCertainly.
ಅದು ತುಂಬಾ ಮುಖ್ಯ ಆಗತ್ತೆadu tumbā mukhya āgatteIt becomes very important.
ಅದು ನಿಜ.adu nija.It is true.
ಮತ್ತೆ ನೋಡಿ. ಇದೊಂದು Meeting point. ಇದು (ರಂಗಾ) ಕಲಾಕ್ಷೇತ್ರ ಇದೆಯಲ್ಲ,..matte nōḍi. idondu Meeting point. idu (raṅgā) kalākṣētra ideyalla,..Then you see, this is a meeting point. This kalakshetra is in a way……
ಏನೋ ಒಂಥರಾ ಅಡ್ಡಾ ಅಂತ ಹೇಳ್‍ಬಹುದು…{ನಗು}ēnō ontharā aḍḍā anta hēḷbahudu…{nagu}We can say that it is a kind of adda (laughter).
ಖಂಡಿತ ಖಂಡಿತkhaṇḍita khaṇḍitaCertainly.
100% ಅಡ್ಡಾನೆ ಇದು…. ನಿಜವಾದ ಕನ್ನಡದ ಶಬ್ದ ಆಂದ್ರೆ ಅಡ್ಡಾ ಅಂತಾನೇ ಹೇಳ್ಬಹುದು.100% aḍḍāne idu…. nijavāda kannaḍada śabda āndre aḍḍā antānē hēḷbahudu.Yes. It is 100% adda. It is a real Kannada word. It is an adda. We can say.
ಯಾಕೆ ಅಂದ್ರೆ, ಸಣ್ಣ ಸಣ್ಣ meeting ಆಗ್‍ಬೇಕಾದ್ರೆ ….ಇಲ್ಲಿ ನೋಡಿyāke andre, saṇṇa saṇṇa meeting āgbēkādre ….illi nōḍiBecause, for small group meetings.
ಒಂದು ಪುರುಷರ ವಿಶ್ರಾಂತಿ ಧಾಮ…. ಇದು…. ಒಂದು ಕೋಣೆ ಇದೆ.ondu puruṣara viśrānti dhāma…. idu…. ondu kōṇe ide.There is a gents rest room.
ಹಾಗೆಯೇ ಮಹಿಳೆಯರ ಒಂದು ಕೋಣೆ ಇದೆ. ವಿಶ್ರಾಂತಿ ಕೋಣೆ…..hāgeyē mahiḷeyara ondu kōṇe ide. viśrānti kōṇe…..Also, there is a separate Ladies rest room. Groups of 12 to 15 people meet there.
ಅಲ್ಲಿ ಈಗ ಒಂದು ಸಣ್ಣ meeting ….alli īga ondu saṇṇa meeting ….
ಒಂದು 10-12-15 ಜನ ಸೇರಿ ಮಾಡ್‍ಬೇಕು ಅಂತಾದ್ರೆ ಇಲ್ಲಿಗೆ ಬಂದು ಸೇರ್ತಾರೆ….ondu 10-12-15 jana sēri māḍbēku antādre illige bandu sērtāre….
ಒಂಥರಾ Seminar point ಅಂತontharā Seminar point antaIt is a kind of seminar point.
ಕಲಾಕ್ಷೇತ್ರದಲ್ಲಿ ಬಂದು ಸೇರೋಣ ಅಂತ ಹೇಳ್ತಾರೆ…kalākṣētradalli bandu sērōṇa anta hēḷtāre…They generally say let’s meet in Kalakshetra
Correct… correct..Correct… correct..Correct …. Correct.
ಇದು ಬೆಂಗಳೂರಿನ ಹೃದಯಭಾಗದಲ್ಲಿದೆ ... ಹಾidu beṅgaḷūrina hṛdayabhāgadallide ... hāIt is in the heart of Bangalore Yes.
Heart of city ಇದು. ಈ ಕಡೆಯಿಂದ ಯಾರೇ ಬರ್ಲಿ ಇಲ್ಲಿ ಬರ್ತಾರೆ. …Heart of city idu. ī kaḍeyinda yārē barli illi bartāre. …Being heart of the city anybody
ಈ ಕಡೆಯಿಂದ ಯಾರೇ ಬರ್ಲಿ….ನನ್ನದು ಮಲ್ಲೇಶ್ವರಂ.ī kaḍeyinda yārē barli….nannadu mallēśvaraṁ.coming from this side will visit this place. Mine is Malleswaram.
ಈ ಕಡೆ ಜಯನಗರದಿಂದ ಬರೋವ್ರಿಗೆ ಇದೊಂದು Centre point ಆಗಿರತ್ತೆ.ī kaḍe jayanagaradinda barōvrige idondu Centre point āgiratte.This is a central place for anyone coming from Jayanagar.
ಈ ಮುಂದುಗಡೆ ಕೆ ಜಿ ರೋಡಲ್ಲಿ ಹೋಗ್ತಿವಲ್ಲ ನಾವು… ಹಾī mundugaḍe ke ji rōḍalli hōgtivalla nāvu… hāWe go to KG Road via this place. Yes.
ಆ ರಸ್ತೇನಲ್ಲಿ ಹೋಗ್ತಾ ಒಂದು ಸರ್ತಿ ಒಳಗೆ ಬಂದು ಹೋಗ್ತೀವಿ ನಾವು.ā rastēnalli hōgtā ondu sarti oḷage bandu hōgtīvi nāvu.While going on that road,
ಈ ಕಡೆಯಿಂದ ಬಂದ್ರೆ ಒಂದ್ಸರ್ತಿ ಬಂದು ಹೋಗ್ತೀವಿ.ī kaḍeyinda bandre ondsarti bandu hōgtīvi.we come inside once.
ಆ ಮಾತೇನೋ ನಿಜ ರವಿ. ಇಲ್ಲಿ ನಿಮ್ಮ ಮಾತನ್ನ ನಾನು ಒಪ್ಕೋತೀನಿ.ā mātēnō nija ravi. illi nimma mātanna nānu opkōtīni.It is true Ravi, whatever you say.
But ಈಗ ಮೊದಲಿನ ಹಾಗಿಲ್ಲ ಬೆಂಗಳೂರು. ನೀವು ಹೇಳಿದ್ರಿ ಮಲ್ಲೇಶ್ವರಂನಿಂದ ಬರ್ತೀನಿ. ಜಯನಗರದಿoದ ಬರ್ತೀನಿ ಅಂತ. ಎಷ್ಟು ಒಳ್ಳೊಳ್ಳೆ ಕಾರ್ಯಕ್ರಮ ಆಗುತ್ತೆ ಅಂದ್ರೆ,But īga modalina hāgilla beṅgaḷūru. nīvu hēḷidri mallēśvaranninda bartīni. jayanagaradioda bartīni anta. eṣṭu oḷḷoḷḷe kāryakrama āgutte andre,I agree to it. But, now Bangalore is not like before. You said, you come from Malleswaram and Jayanagar side. So many good programmes take place here everyday.
ನಾವು ನಗರದಲ್ಲಿ ಇಂದೋ ನಾಳೆ ಕಾರ್ಯಕ್ರಮ ಕಾರ್ಯಕ್ರಮಾನೋ ಅಂತ ನೊಡಿದಾಗnāvu nagaradalli indō nāḷe kāryakrama kāryakramānō anta noḍidāga
ಮನಸ್ಸು ತುಡೀತದೆ. ಬರಬೇಕು ಅಂತ. ನೋಡ್ರಿ 7 ಗಂಟೆಗೆ ನಾಟಕ ಶುರು ಆಗತ್ತೆ.manassu tuḍītade. barabēku anta. nōḍri 7 gaṇṭege nāṭaka śuru āgatte.Mind yearns to go hand attend all programmes. Drama starts at 7 pm
9 ಗಂಟೆಗೆ ನಾಟಕ ಮುಗಿಯುತ್ತೆ. ನಾವು ವಾಪಸ್ಸು ಹೋಗೋದು ಹೇಗೆ.9 gaṇṭege nāṭaka mugiyutte. nāvu vāpassu hōgōdu hēge.and ends at 9 pm. How to go back?
ನಾನು ಒಬ್ಲೇ ಬಂದ್ರೆ ಹೋಗೋದು ಹೇಗೆ? ಈವಾಗ ಮೊದಲಿನ ಹಾಗೆ ಇಲ್ಲ. ಬೆಂಗಳೂರುnānu oblē bandre hōgōdu hēge? īvāga modalina hāge illa. beṅgaḷūruIf I come alone how to go back? City is not like before
ಟ್ರಾಫಿಕ್‍ನಿಂದಾಗಿ, ಅಷ್ಟೊಂದು ಸಲೀಸಾಗಿ ಬಂದು ಹೋಗುವಂತಾದ್ದು ಆಗಲ್ಲ.ṭrāphiknindāgi, aṣṭondu salīsāgi bandu hōguvantāddu āgalla.due to Bangalore traffic. It is not that easy to come and go.
ನೀವೇನೋ ಗಾಡೀಲಿ ಬಂದ್ಬಟಿಡ್ತೀರಾ, ಪರವಾಗಿಲ್ಲ. Publicಗೆ ಬಹಳ ತೊಂದ್ರೆ ಆಗಿದೆಯಪ್ಪnīvēnō gāḍīli bandbaṭiḍtīrā, paravāgilla. Publicge bahaḷa tondre āgideyappaYou come on vehicle. It’s easy for you. It is difficult for public.
Madam, ವಿಶ್ವ ಎಲ್ಲಾ ಜನರ ಕಣ್ಣು ಬೆಂಗಳೂರು ಮೇಲಿದೆ... ಇದೆ.Madam, viśva ellā janara kaṇṇu beṅgaḷūru mēlide... ide.Madam, all eyes of the world are on Bangalore. It’s there.
ಒಂದು ಕೋಟಿ ನೂರಾ……ಒಂದು ಕೋಟಿ ಇಪ್ಪತ್ತೈದು ಲಕ್ಷ ಜನondu kōṭi nūrā……ondu kōṭi ippattaidu lakṣa janaOne crore and twenty five lakh people
ಬೆಂಗಳೂರಲ್ಲಿ ವಾಸ ಮಾಡ್ತಾ ಇದ್ದಾರೆ. ಇಂಥಾದ್ರಲ್ಲಿ ಇಷ್ಟೊಂದು ಜನಗಳ,beṅgaḷūralli vāsa māḍtā iddāre. inthādralli iṣṭondu janagaḷa,live in Bangalore.
65 ಲಕ್ಷ Vehicle ಬೆಂಗಳೂರಲ್ಲಿ ಓಡಾಡ್ತಾ ಇದೆ.65 lakṣa Vehicle beṅgaḷūralli ōḍāḍtā ide.Sixty five lakh vehicles ply on the roads here.
ಇದರ ಮಧ್ಯೆ ನಾವು ನಮ್ಮ ರಂಗಭೂಮಿಯನ್ನು ಮತ್ತೆ ಕಲೆನಾ ಉಳಿಸ್ಕೊಂಡು ಬೆಳೆಸ್ಕೋಬೇಕಾಗಿದೆ.idara madhye nāvu namma raṅgabhūmiyannu matte kalenā uḷiskoṇḍu beḷeskōbēkāgide.We have to retain our theatre art amidst this situation and develop it.
ಅದು Greatadu GreatIt’s great.
ಆಮೇಲೆ ಒಂದು. ಮುಂಚೆ ಇದೊಂದು ಕೇಂದ್ರ. ಆದ್ರೆ ಈಗ ಜಯನಗರಕ್ಕೆ ಹೋದ್ರೆ ರಂಗಶಂಕರ ಒಂದು ಸಿಗತ್ತೆ.āmēle ondu. muñce idondu kēndra. ādre īga jayanagarakke hōdre raṅgaśaṅkara ondu sigatte.Earlier it was the only centre. Now, if we go to Jayanagar, we get Rangashankara there.
ಹೌದು ಹೌದುhaudu hauduYes, yes.
ಮಲ್ಲೆಶ್ವರಂಗೆ ಹೋದ್ರೆ ಸೇವಾ ಸದನ ಒಂದು ರಂಗಭೂಮಿ ಸಿಗತ್ತೆ.malleśvaraṅge hōdre sēvā sadana ondu raṅgabhūmi sigatte.When we go to Malleswaram, we get Seva Sadana Theatre
ಚೌಡಯ್ಯ ರಂಗಭೂಮಿ ಇದೆ…. ಈ ತರಹಾ…cauḍayya raṅgabhūmi ide…. ī tarahā…and Chowdaiah Memorial Hall.
ಮಲ್ಲತ್ತಹಳ್ಳಿಯಲ್ಲಿ ಕಲಾಗ್ರಾಮ ಇದೆ, ಕಲಾಗ್ರಾಮ ಇದೆmallattahaḷḷiyalli kalāgrāma ide, kalāgrāma ideThere is Kalagrama in Mallathahalli.
ಕಲಾಗ್ರಾಮ ಬಂರಲ್ಲಾ ಈಗkalāgrāma baṁrallā īga
ಕಲಾಗ್ರಾಮ ಇದೆ. ಈ ಕಡೆ ನಮ್ಮ ಪ್ರೇಕ್ಷಕ ವರ್ಗಕ್ಕೆkalāgrāma ide. ī kaḍe namma prēkṣaka vargakkeYes, Kalagrama is there.
ಅವರವರದ್ದೇ ಆದ ಜಾಗ ಹುಡುಕ್ತಾ ಇದ್ದಾರೆ. ಈಗ,avaravaraddē āda jāga huḍuktā iddāre. īga,Now, they are searching for a separate place of their own.
ಅದು ಒಳ್ಳೇದು ಅಂತ ಅನಿಸತ್ತೆ.adu oḷḷēdu anta anisatte.It seems to be good.
ಖಂಡಿತkhaṇḍitaCertainly
ಒಳ್ಳೇ ಬೆಳವಣಿಗೆ ಕೂಡಾ ಹೌದು.oḷḷē beḷavaṇige kūḍā haudu.It is a good development
ಬಡಾವಣೆ ರಂಗಭೂಮಿ ಉಂಟಲ್ಲ.. ಒಂದು ಒಂದು ದಶಕದಿಂದ,baḍāvaṇe raṅgabhūmi uṇṭalla.. ondu ondu daśakadinda,Extension area theatre is there in the last decade.
ಬಡಾವಣೆ ರಂಗಭೂಮಿ ತುಂಬಾ ಅದ್ಭುತವಾಗಿ ಬೆಳೆದಿದೆ.baḍāvaṇe raṅgabhūmi tumbā adbhutavāgi beḷedide.It has grown wonderfully.
ಆಗ್ತಾ ಇದೆ ನೀವು ಹೇಳಿದ್ರಲ್ಲ… ಹಾಂāgtā ide nīvu hēḷidralla… hāṁYou had told about it. It is happening. Yes.
ಅಲ್ಲಲ್ಲಿ ಕೆಲ ಕಲಾವಿದರು ಏನ್ಮಾಡ್ತಾರೆ ಅಂದ್ರೆ ತಮ್ಮ ಮನೆಯ ಮಹಡಿಯ ಮೇಲೆ,allalli kela kalāvidaru ēnmāḍtāre andre tamma maneya mahaḍiya mēle,What the artists do now a days is that they construct small theatres on their houses.
ಒಂದು ಸಣ್ಣ ಮಟ್ಟಿನ Theatreನ್ನ ಅಲ್ಲಿ….ಮಾಡ್ತಾ ಇರ್ತಾರೆ.ondu saṇṇa maṭṭina Theatrenna alli….māḍtā irtāre.It is going on.They do dramas there.
ರಂಗಮಂದಿರ ಕಟ್ಟಿಕೋತಾ ಇದ್ದಾರೆ.ಬಹಳ ಒಳ್ಳೆಯದು ಅಲ್ವಾ?raṅgamandira kaṭṭikōtā iddāre.bahaḷa oḷḷeyadu alvā?It is very good, is it n’t?
ತುಂಬಾ ಜನರು ಕಟ್ಟಿಕೊಂಡಿದದ್ದಾರೆ....: ಖಂಡಿತtumbā janaru kaṭṭikoṇḍidaddāre....: khaṇḍitaMany people have done it. Certainly.
ಅಲ್ಲಿ ಒಂದು Weekend ಒಂದು ನಾಟಕ ಮಾಡ್ತಾರೆ.alli ondu Weekend ondu nāṭaka māḍtāre.They perform a drama in the weekend.
ಆಮೇಲೆ ಒಂದು ಒಳ್ಳೆಯ ಸಿನಿಮಾ ಬಂದ್ರೆ ತೋರಿಸ್ತಾರೆ. ಈ ತರದ್ದೆಲ್ಲ ಈಗ ಚಟುವಟಿಕೆ…āmēle ondu oḷḷeya sinimā bandre tōristāre. ī taraddella īga caṭuvaṭike…They show good cinemas. Such activities go on.
ರಂಗಾಸಕ್ತರಿಗೆ ಒಂದು ಸರಿಯಾದ ಜಾಗ ಸಿಗೋದು ತುಂಬಾ ಸಂತೋಷ...raṅgāsaktarige ondu sariyāda jāga sigōdu tumbā santōṣa...It is a happy note that theatre lovers get suitable places.
ಆದ್ರೆ ಅಷ್ಟೆಲ್ಲ ಇದ್ರೂ ಕೂಡ… ಕಲಾಕ್ಷೇತ್ರ ಇದೆಯಲ್ಲ…..ādre aṣṭella idrū kūḍa… kalākṣētra ideyalla…..In spite of so many venues
ಕಲಾಕ್ಷೇತ್ರದಲ್ಲಿ ಅದಕ್ಕಿರುವ ಆಕರ್ಷಣೆಯೇ ಬೇರೆ.....ಅದು ನಿಜ.kalākṣētradalli adakkiruva ākarṣaṇeyē bēre.....adu nija.Kalakshetra has its own attraction. it is true
ಈಗಲೂ ಸಹ ಕಲಾಕ್ಷೇತ್ರ ನಮಗೆ ಸಿಗಬೇಕು ಅಂದ್ರೆīgalū saha kalākṣētra namage sigabēku andreIn order to get the Kalakshetra
3 ತಿಂಗಳು ಮುಂಚೆ ನಾವು Book ಮಾಡ್ಬೇಕು.3 tiṅgaḷu muñce nāvu Book māḍbēku.we have to book it 3 months in advance.
Online..... Competetion…, Online booking ಇದೆ.Online..... Competetion…, Online booking ide.Online Competition. There is online booking.
Competetionನಲ್ಲಿ ನಾವು booking ಮಾಡ್ಬೇಕಾಗತ್ತೆ. …Competetionnalli nāvu booking māḍbēkāgatte. …We have to book it in competition.
ಅದು ತುಂಬಾ…. ಕನ್ನಡ ಸಂಸ್ಕøತಿ ಇಲಾಖೆ.adu tumbā…. kannaḍa saṁskaøti ilākhe.It is under Kannada and Culture department.
ಅಲ್ಲ, ರವಿಯವರೇ ನಾನು ಇನ್ನೊಂದು ಮಾತು ಕೇಳ್ಬೇಕು ಅಂದ್ಕೊಂಡಿದ್ದೆ.alla, raviyavarē nānu innondu mātu kēḷbēku andkoṇḍidde.Ravi, I wanted to ask one more thing.
ತುಂಬಾ ನಾಟಕಗಳು ರವೀಂದ್ರ ಕಲಾಕ್ಷೇತ್ರದಲ್ಲಿ ಇಷ್ಟು ಪ್ರದರ್ಶನ ಕಂಡಿವೆ.tumbā nāṭakagaḷu ravīndra kalākṣētradalli iṣṭu pradarśana kaṇḍive.It is a matter of pride that so many dramas have seen stage shows in Ravindra Kalakshetra.
ಅನ್ನೋದು ಅದೊಂದು ಹೆಗ್ಗಳಿಕೆಯ ಮಾತು.annōdu adondu heggaḷikeya mātu.
ಬಹುಷಃ ಯಾವ ನಾಟಕಗಳು ನಿಮಗೆ ಗೊತ್ತಿದೆಯೆನೊ …ತುಘಲಕ್ ಇರ್‍ಬಹುದಾbahuṣaḥ yāva nāṭakagaḷu nimage gottideyeno …tughalak irbahudāDo you know what plays have been enacted there.
ಅಥವಾ… ಎಷ್ಟು ದೊಡ್ಡ ನಾಟಕಗಳು ಸತತವಾಗಿ ಪ್ರದರ್ಶನ ಆಗಿವೆ ಅನ್ನೋದನ್ನ..athavā… eṣṭu doḍḍa nāṭakagaḷu satatavāgi pradarśana āgive annōdanna..It may be Tughlak or so many others have seen successive shows.Sufficiently. Successive shows ……
ಸಾಕಷ್ಟು ಸಾಕಷ್ಟು ಆಗಿವೆ. ನಮ್ಮ ಕುರಿ ನಾಟಕಕ್ಕೆ….sākaṣṭu sākaṣṭu āgive. namma kuri nāṭakakke….So many have takenplace. Kuri drama was directed by MS Sathyu.
ಕುರಿ ನಾಟಕ ಎಂ ಎಸ್ ಸತ್ಯು ಅವರು ನಿರ್ದೇಶನ ಮಾಡಿದಂತಹ ಕುರಿ ನಾಟಕkuri nāṭaka eṁ es satyu avaru nirdēśana māḍidantaha kuri nāṭaka
ಇಲ್ಲಿ Show ಆದಾಗ Line ಅಲ್ಲಿವರೆಗೂ ಇರತಿತ್ತು ಅನ್ನೋದು ಮುಖ್ಯ.illi Show ādāga Line allivaregū iratittu annōdu mukhya.That time the queue used to be so long.
ಹರಕೆಯ ಕುರಿ ನಾಟಕ ಆಗಿದ್ದು ಆಮೇಲೆ, ಸಿನಿಮಾ ಆಯಿತು.harakeya kuri nāṭaka āgiddu āmēle, sinimā āyitu.Harakeya Kuri drama came later. It became a movie subsequently.
ಸಂಸಾರದಲ್ಲಿ ಸರಿಗಮ ಏನೋ ಆ ತರಹದ ನಾಟಕಗಳು,saṁsāradalli sarigama ēnō ā tarahada nāṭakagaḷu,Samsaradalli Sarigama was one such drama.
ಅಂದ್ರೆ ಇಲ್ಲಿ ಯಾವ ನಾಟಕ ಯಶಸ್ವಿ ಆಗತ್ತೋ…andre illi yāva nāṭaka yaśasvi āgattō…Whichever drama becomes successful
ಅವು ಮಂದೆ ಚಿತ್ರ ಆದ್ರೂ ಯಶಸ್ವಿ ಆಗತ್ತೆ ಅನ್ನುವ ನಂಬಿಕೆ ಇದೆ.avu mande citra ādrū yaśasvi āgatte annuva nambike ide.here it will be successful as a movie also, it is generally believed.
ರಂಗ ಭೂಮಿಗೆ ಸಂಬಂಧಪಟ್ಟ ಹಾಗೆ ಮಾತ್ರ ಕಲಾಕ್ಷೇತ್ರ ಇರೋದಲ್ಲ....ಹಾಂraṅga bhūmige sambandhapaṭṭa hāge mātra kalākṣētra irōdalla....hāṁKalakshetra is not connected to only theatre.Yes.
ಇಲ್ಲಿ ಎಲ್ಲಾ ಚಟುವಟಿಕೆಗಳಿವೆ....ಪ್ರತಿಭಟನೆilli ellā caṭuvaṭikegaḷive....pratibhaṭaneAll other activities are also there. Protests
ರಾಜಕೀಯದಲ್ಲಿ ಏನಾದರೂ ಸ್ಥಿತ್ಯಂತರವಾದಾಗrājakīyadalli ēnādarū sthityantaravādāgaWhenever there is a change in politics
ಇಲ್ಲಿ ಒಂದು ಪ್ರತಿಭಟನೆಯನ್ನು ಹಮ್ಮಿಕೋಳ್ಳುತ್ತಾರೆ....ಸಮಾವೇಶಗಳುilli ondu pratibhaṭaneyannu hammikōḷḷuttāre....samāvēśagaḷuprotests are held here. Conference ?
ಹೂ. ಸಮಾವೇಶ. ಹಾಗಾಗಿ ಇದು ಇದ್ಯಲ್ಲ....,hū. samāvēśa. hāgāgi idu idyalla....,Yes, Conference is also held. Thus,
ಬರೀ ರಂಗಭೂಮಿಗೆ ಸಂಬಂಧಪಟ್ಟ ಹಾಗಲ್ಲ...ಹಾbarī raṅgabhūmige sambandhapaṭṭa hāgalla...hāit is not connected to theatre only.
ಎಲ್ಲಾ ತರದೊಂದು.ಸಮಾಜದ ಎಲ್ಲಾ ತರದೊಂದು.... ಒಂದು ಇದಕ್ಕೆ....ಏನು React ಮಾಡ್ತದೆ ಇದು.....ellā taradondu.samājada ellā taradondu.... ondu idakke....ēnu React māḍtade idu.....All kinds of people of the society react to it.
ಖಂಡಿತ. ತುಂಬಾ ಸಂತೋಷ, ನಿಮ್ಜೊತೆ ಕೂತ್ಕೊಂಡು ಇಷ್ಟೊತ್ತಿನವರೆಗೂ ರಂಗಭೂಮಿಯ ಬಗ್ಗೆ ನಾವು ಸಂಸಾ ಬಯಲು ರಂಗಮಂದಿರದಲ್ಲಿ ಮಾತಾಡಿದಿವಲ್ಲ...khaṇḍita. tumbā santōṣa, nimjote kūtkoṇḍu iṣṭottinavaregū raṅgabhūmiya bagge nāvu saṁsā bayalu raṅgamandiradalli mātāḍidivalla...Definitely very happy. We discussed with you so long like sitting in Samsa open air theatre.
ಹೌದುhauduYes.
ಅದು ಒಂದು ಹೆಮ್ಮೆಯ ಕ್ಷಣ ಅಂತ ಅಂದ್ಕೊಂಡಿದ್ದೀವಿ. ಧನ್ಯವಾದಗಳು ತಮಗೆ.adu ondu hemmeya kṣaṇa anta andkoṇḍiddīvi. dhanyavādagaḷu tamage.That was a moment of pride. Thank you.
ನಮಗೂ ನಿಮ್ ಜೊತೆ ಮಾತಾಡಿದ್ದು, ಅಷ್ಟೇ ಸಂತೋಷ ಆಯಿತು.namagū nim jote mātāḍiddu, aṣṭē santōṣa āyitu.I am also happy for talking to you so long.