Kannada Periodicals

Transcription
Transliteration
Translation
ಬೆಳಗಾಗೆದ್ದು ಯಾರ್ಯಾರ ನೆನೆಯಲಿ ಇದೊಂದು ಜನಪದ ಗೀತೆ ತುಣುಕು.beḷagāgeddu yāryāra neneyali idondu janapada gīte tuṇuku.Whom to remember when we get up in the morning? This is a line from folk song. ನಾವಂತೂ ಕನ್ನಡಿಗರು ನೆನೆಯೋದು ನಮ್ಮ ಪತ್ರಿಕೆಗಳನ್ನು. ದಿನ ಪತ್ರಿಕೆಗಳು ಹತ್ತಾರು ಇವೆ.nāvantū kannaḍigaru neneyōdu namma patrikegaḷannu. dina patrikegaḷu hattāru ive.We, Kannadigas remember our Kannada newspapers. There are several dailies – ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಜಯ ವಾಣಿ, ವಾರ್ತಾ ಭಾರತಿ, ಹೊಸ ದಿಗಂತ,prajāvāṇi, kannaḍaprabha, vijaya karnāṭaka, vijaya vāṇi, vārtā bhārati, hosa diganta,Prajavani, Kannada Prabha, Vijaya Karnataka, Vijaya Vani, Vartha Bharathi, Hosa Digantha etc. ಹೀಗೆ ಹತ್ತು ಹಲವು. ಈ ದಿನ ಪತ್ರಿಕೆಗಳು ನಿಜವಾಗ್ಲೂನೂ, ಬೆಳಗ್ಗೆ ಎದ್ದು, ಜನ ದಿನಪತ್ರಿಕೆಗಳನ್ನು ಓದದೇ ಇದ್ರೆhīge hattu halavu. ī dina patrikegaḷu nijavāglūnū, beḷagge eddu, jana dinapatrikegaḷannu ōdadē idreIf the people do not to read the newspaper ಅವರಿಗೆ ಬೆಳಿಗ್ಗೆ ಎದ್ದು Coffeeನೂ ಕುಡೀಲಿಕ್ಕೆ ಆಗಲ್ಲ. Tea-ನೂ ಕುಡೀಲಿಕ್ಕೆ ಆಗಲ್ಲ.avarige beḷigge eddu Coffeenū kuḍīlikke āgalla. Tea-nū kuḍīlikke āgalla.in the morning they cannot enjoy coffee or tea. ಇಷ್ಟು, ಒಂದು ರೀತಿಯ ದಿನನಿತ್ಯದ ಒಂದು ಚಟುವಟಿಕೆ, ಪತ್ರಿಕೆಗಳ ಓದು!iṣṭu, ondu rītiya dinanityada ondu caṭuvaṭike, patrikegaḷa ōdu!It is an essential activity in the morning. ಈ ದಿನ ಪತ್ರಿಕೆಗಳ ವಿಶೇಷ ಏನು ಅಂದ್ರೆ, ಪ್ರತಿ ಪತ್ರಿಕೆಯಲ್ಲಿ ಒಂದು ಪುರವಣಿ ಇರುತ್ತೆ.ī dina patrikegaḷa viśēṣa ēnu andre, prati patrikeyalli ondu puravaṇi irutte.Speciality of today’s newspaper is that they carry a supplement everyday ಆ ಪುರವಣಿ ಒಂದು ದಿವಸ, ಆಸ್ತಿಗಳ ಕೊಡು ಕೊಳ್ಳುವಿಕೆ ಬಗ್ಗೆ,ā puravaṇi ondu divasa, āstigaḷa koḍu koḷḷuvike bagge,about property matters, ಇನ್ನೊಂದು ದಿವಸ ಶಿಕ್ಷಣದ ಬಗ್ಗೆ,innondu divasa śikṣaṇada bagge,education, ಮತ್ತೊಂದು ದಿವಸ ಆರೋಗ್ಯದ ಬಗ್ಗೆ,mattondu divasa ārōgyada bagge,health, ಮತ್ತೊಂದು ದಿವಸ ಮಹಿಳೆಯರ ಒಂದು Entreprenuership ಅಥವಾ ಅವರ ಉದ್ಯಮ ಶೀಲತೆಯ ಬಗ್ಗೆ.mattondu divasa mahiḷeyara ondu Entreprenuership athavā avara udyama śīlateya bagge.Women entrepreuneureship sports etc. ಈ ತರಹ ಅನೇಕ ಪುರವಣಿಗಳನ್ನ ಪ್ರತೀ ದಿವಸ ಭಿನ್ನ ಭಿನ್ನವಾದ ಪುರವಣಿಗಳನ್ನು ಈ ದಿನ ಪತ್ರಿಕೆಗಳು ತರ್ತಾವೆ.ī taraha anēka puravaṇigaḷanna pratī divasa bhinna bhinnavāda puravaṇigaḷannu ī dina patrikegaḷu tartāve.They carry variety of supplement everyday. ಈ ದಿನ ಪತ್ರಿಕೆಗಳ ಜೊತೆಗೆ, ಅನೇಕ ವಾರ ಪತ್ರಿಕೆಗಳಿದ್ದಾವೆ.ī dina patrikegaḷa jotege, anēka vāra patrikegaḷiddāve.There are several weeklies along with these dailies – ಸುಧಾ, ತರಂಗ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ- ಹೀಗೆ ನೂರಾರು ಇವೆ.sudhā, taraṅga, hāy beṅgaḷūru, laṅkēś patrike- hīge nūrāru ive.Sudha, Tharanga, Hai Bengaluru, Lankesh Pathrike etc. ನೂರಾರು ಅಂತ ಹೇಳಿದ್ರೆ ತಪ್ಪಿಲ್ಲ…. ಇಲ್ಲೇ ನೋಡಿnūrāru anta hēḷidre tappilla…. illē nōḍiThere are hundreds of them like Times of karnataka, ಭ್ರಷ್ಟರ ಬೇಟೆ, Voice of Crime, ನಿಮ್ಮ ನಾಯಕ, ನಿಮ್ಮ ಅಗ್ನಿ, ವಿಜಯ ನೆಕ್ಸ್ಟ್,Times of karnataka, bhraṣṭara bēṭe, Voice of Crime, nimma nāyaka, nimma agni, vijaya neksṭ,voice of Karnataka, Bhrashtara bete, Voice of Crime, Nimma Nayaka, Nimma Agni, Vijaya next ಹೀಗೆ, Page 3 - ನೂರಾರು ವಾರ ಪತ್ರಿಕೆಗಳಿವೆ.hīge, Page 3 - nūrāru vāra patrikegaḷive.Page 3 etc. Like that there are hundreds of newspapers ಅದಲ್ಲದೇನೇ, ಪಾಕ್ಷಿಕಗಳಿವೆ. ಪಾಕ್ಷಿಕಗಳು ಅಲ್ಲದೇನೇ ಮತ್ತೆ,adalladēnē, pākṣikagaḷive. pākṣikagaḷu alladēnē matte,There are fortnightlies, not only fortnightly but ಮಾಸ ಪತ್ರಿಕೆಗಳಿವೆ, ತ್ರೈಮಾಸಿಕಗಳಿವೆ.māsa patrikegaḷive, traimāsikagaḷive.monthlies, trimonthlies etc. ಇಷ್ಟಲ್ಲದೇನೇ ಈ ಪತ್ರಿಕೆಗಳ ಒಂದು ವಿಶೇಷ ಏನು ಅಂದ್ರೆ,iṣṭalladēnē ī patrikegaḷa ondu viśēṣa ēnu andre,Special feature of these periodicals is that ವಾರ ಪತ್ರಿಕೆಗಳಾಗಿರಬಹುದು, ದಿನ ಪತ್ರಿಕೆಗಳಾಗಿರಬಹುದು….vāra patrikegaḷāgirabahudu, dina patrikegaḷāgirabahudu….they bringout special supplements once in a way like ವಿಶೇಷಾಂಕಗಳನ್ನು ತರೋದು. ಯುಗಾದಿ ವಿಶೇಷಾಂಕ, ದೀಪಾವಳಿ ವಿಶೇಷಾಂಕ-viśēṣāṅkagaḷannu tarōdu. yugādi viśēṣāṅka, dīpāvaḷi viśēṣāṅka-Yugadi Visheshanka, Deepavali Visheshanka etc. ಯಾಕಂದ್ರೆ ಯುಗಾದಿ ಅನ್ನುವುದು ಕರ್ನಾಟಕದಲ್ಲಿ ಬಹಳ ದೊಡ್ಡ ಹಬ್ಬ.yākandre yugādi annuvudu karnāṭakadalli bahaḷa doḍḍa habba.because Yugadi is a special festival in Karnataka. ಈ ಹಬ್ಬದ ಸಂದರ್ಭದಲ್ಲಿ ಎಲ್ಲವನ್ನೂ, ಎಲ್ಲರೂ ಹೊಸತನ್ನು ಬಯಸುತ್ತಾರೆ.ī habbada sandarbhadalli ellavannū, ellarū hosatannu bayasuttāre.People use everything new during this festival including new clothes. ಹೊಸತನ್ನು ತೊಡ್ತಾರೆ, ಹೊಸತನ್ನು ಬಯಸ್ತಾರೆ.hosatannu toḍtāre, hosatannu bayastāre. ಈ ದೃಷ್ಟಿಯಿಂದ ಈ ಯುಗಾದಿ ವಿಶೇಷಾಂಕಕ್ಕೆ ಬಹಳ ಬೆಲೆ ಇದೆ.ī dṛṣṭiyinda ī yugādi viśēṣāṅkakke bahaḷa bele ide.In this sense, there is a special value for yugadi visheshanka. ಅದು ಅಲ್ಲದೇನೇ, ಈ ವಿಶೇಷಾಂಕಗಳನ್ನು ಸಿದ್ಧಪಡಿಸೋದಕ್ಕೆadu alladēnē, ī viśēṣāṅkagaḷannu siddhapaḍisōdakkeJournalists put in extra efforts for 3 to 4 months to bringout this issue. ಒಂದು 3-4 ತಿಂಗಳು ಪರಿಶ್ರಮವನ್ನು ಪತ್ರಿಕೆಯವರು ಮಾಡ್ತಾರೆ.ondu 3-4 tiṅgaḷu pariśramavannu patrikeyavaru māḍtāre. ಯಾಕಂದ್ರೆ ಕಥಾ ಸ್ಪರ್ಧೆ ಏರ್ಪಡಿಸ್ತಾರೆ, ಕವನ ಸ್ಪರ್ಧೆ ಏರ್ಪಡಿಸ್ತಾರೆ.yākandre kathā spardhe ērpaḍistāre, kavana spardhe ērpaḍistāre.They arrange short story competition, poetry competition etc. ಈ ಯುಗಾದಿ ವಿಶೇಷಾಂಕ, ದೀಪಾವಳಿ ವಿಶೇಷಾಂಕಗಳ ಕಥೆಗಳಲ್ಲಿ,ī yugādi viśēṣāṅka, dīpāvaḷi viśēṣāṅkagaḷa kathegaḷalli,Prize winners in Yugadi and Deepavali special editions ಸ್ಪರ್ಧೆಗಳಲ್ಲಿ, ಕಥಾ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆದುspardhegaḷalli, kathā spardhegaḷalli bahumānavannu paḍeduwinners of story and poetry competitions ಅವರ ಕಥೆಗಳು ಎಲ್ಲೆಲ್ಲಿ ಮುದ್ರಣಗೊಂಡಿದ್ದವೋ,avara kathegaḷu ellelli mudraṇagoṇḍiddavō,wherever they have been published ಅವರೆಲ್ಲರು ಇವತ್ತು ಕನ್ನಡ ನಾಡಿನ ಪ್ರಾತಿನಿಧಿಕ ಸಾಹಿತಿಗಳಾಗಿದ್ದಾರೆ.avarellaru ivattu kannaḍa nāḍina prātinidhika sāhitigaḷāgiddāre.have become today’s representative writers in the state. ದೊಡ್ಡ ದೊಡ್ಡ ಸಾಹಿತಿಗಳಾಗಿದ್ದಾರೆ. ನನಗೆ ನೆನಪಿರೋ ಹಾಗೆ,doḍḍa doḍḍa sāhitigaḷāgiddāre. nanage nenapirō hāge,They have become great writers. As I remember, ತೇರು ಬಂತು ತೋರಿಗೆ ಅಂತ ಒಂದು ಕಥೆಯನ್ನುtēru bantu tōrige anta ondu katheyannua story called ‘Theru banthu Thorige’ by ನಮ್ಮ ಬೆಸಗರಹಳ್ಳಿ ರಾಮಣ್ಣೋರು ಪ್ರಜಾವಾಣಿ ವಿಶೇಷಾಂಕದಲ್ಲಿ ಪ್ರಕಟ ಮಾಡಿದ್ರು.namma besagarahaḷḷi rāmaṇṇōru prajāvāṇi viśēṣāṅkadalli prakaṭa māḍidru.Besagarahalli Ramanna was published in Prajavani special issue. ಅದಾದ ನಂತರ ಅವರು ದೊಡ್ಡ ಲೇಖಕರಾದ್ರು. ದೊಡ್ಡ ಕಥಾ ಲೇಖಕರಾದ್ರು.adāda nantara avaru doḍḍa lēkhakarādru. doḍḍa kathā lēkhakarādru.He became a famous writer subsequently. ಹೀಗೆ, ಅನೇಕ ಕಾದಂಬರಿಗಳು ಧಾರವಾಹಿಯಾಗಿ ನಮ್ಮ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.hīge, anēka kādambarigaḷu dhāravāhiyāgi namma vāra patrikegaḷalli prakaṭavāgive.Many novels are published as serials in our weeklies. ನಮ್ಮ ಕನ್ನಡದ ಪತ್ರಿಕೆಗಳ ಒಂದು ವಿಶೇಷ ಏನು ಅಂದ್ರೆ,namma kannaḍada patrikegaḷa ondu viśēṣa ēnu andre,Special feature of our Kannada periodicals ಕೇವಲ ಅನುದಿನದ ಆಗುಹೋಗಗಳಲ್ಲ, ರಾಜಕಾರಣ ಅಲ್ಲ,kēvala anudinada āguhōgagaḷalla, rājakāraṇa alla,is that besides day to day political developments ಸಾಹಿತ್ಯ-ಸಂಸ್ಕøತಿಯ ಒಂದು ಸಂವರ್ಧನೆಗೂ ಕೂಡsāhitya-saṁskaøtiya ondu saṁvardhanegū kūḍathey are extending support ಇವು ಒಂದು ರೀತಿ ಬೆನ್ನೆಲುಬಾಗಿ ನಿಂತಿವೆ ಅಂದ್ರೆ ತಪ್ಪಾಗಲಾರದು.ivu ondu rīti bennelubāgi nintive andre tappāgalāradu.like backbone to development and enrichment of our culture and literature. ನಮ್ಮ ಈ ಪತ್ರಿಕೆಗಳ ಮತ್ತೊಂದು ವಿಶೇಷ ಏನು ಅಂತ ಅಂದ್ರೆ,namma ī patrikegaḷa mattondu viśēṣa ēnu anta andre,Another speciality of our newspapers ಯಾವ ಕಾರಣಕ್ಕೂನೂ, ಜನಗಳ ಮನಸ್ಸನ್ನು, ಓದುಗರ ಮನಸ್ಸನ್ನು ನೋಯಿಸುವ ಕೆಲಸವನ್ನು ಮಾಡಿಲ್ಲ.yāva kāraṇakkūnū, janagaḷa manassannu, ōdugara manassannu nōyisuva kelasavannu māḍilla.For any reason, our newspapers do not hurt the sentiments of our readers. ಮಾಡೋದೂ ಇಲ್ಲ. ಸುದ್ದಿಯನ್ನ ಹೇಗೆ ಹಾಗೇ ಕೊಡುತ್ತ,māḍōdū illa. suddiyanna hēge hāgē koḍutta,They provide news as it is ಸ್ವಲ್ಪ ರೋಚಕವಾಗಿ, ಒಂದು ರೀತಿ ಸಿನಿಮೀಯವಾಗಿ ಅಲ್ಲಿ ಇಲ್ಲಿ ಪ್ರಕಟ ಮಾಡಬಹುದೇ ಹೊರತು,svalpa rōcakavāgi, ondu rīti sinimīyavāgi alli illi prakaṭa māḍabahudē horatu,with little sensationalism or cynicism ಎಂದೂ ಕೂಡ ಅತಿರೇಕಕ್ಕೆ ನಮ್ಮ ಕನ್ನಡ ಪತ್ರಿಕೋದ್ಯಮ ಹೋಗಿಲ್ಲ.endū kūḍa atirēkakke namma kannaḍa patrikōdyama hōgilla.here and there but they never reach excessive limits. ಅದರಿಂದಾನೇ ಇಂದು ಕೂಡ ಪತ್ರಿಕೋದ್ಯಮ ಉಳ್ಕೊಂಡಿದೆ. ಪತ್ರಿಕೆ, ಒದುಗರನ್ನು ಉಳಿಸಿಕೊಂಡಿದೆ.adarindānē indu kūḍa patrikōdyama uḷkoṇḍide. patrike, odugarannu uḷisikoṇḍide.For this reason, Kannada journalism has survived today. ಈಗಿನ ದೃಶ್ಯ ಮಾಧ್ಯಮದ ಒಂದು ಹಾವಳಿಯ ನಡುವೆಯೂ ಕೂಡīgina dṛśya mādhyamada ondu hāvaḷiya naḍuveyū kūḍaIn spite of the on slaught or influence of visual media on people, ಪತ್ರಿಕೆಗಳನ್ನು ಒದಬೇಕು ಅನ್ನುವ ಒಂದು ತುಡಿತ ಜನರಲ್ಲಿ ಇನ್ನೂ ಇದೆ.patrikegaḷannu odabēku annuva ondu tuḍita janaralli innū ide.there is still a strong ‘want’ to read newspapers. ಇದಕ್ಕೆ ಕಾರಣ, ಕನ್ನಡ ಪತ್ರಕರ್ತರ ಮತ್ತು ಕನ್ನಡ ಪತ್ರಿಕೆಗಳ ಒಂದು ವಸ್ತು ನಿಷ್ಠ ಧೋರಣೆ ಅಂತ ನನ್ನ ಅಭಿಪ್ರಾಯ.idakke kāraṇa, kannaḍa patrakartara mattu kannaḍa patrikegaḷa ondu vastu niṣṭha dhōraṇe anta nanna abhiprāya.The reason for this is the commitment to reality of Kannada journalists and Kannada dailies. ನಾನೂ ಹೇಳಿಕೇಳಿ, ವಿದ್ಯುನ್ಮಾನ ಮಾಧ್ಯಮದವನು.nānū hēḷikēḷi, vidyunmāna mādhyamadavanu.I am from electronic media. ದೃಶ್ಯ ಮಾಧ್ಯಮದಲ್ಲಿ 40 ವರ್ಷ ಕೆಲಸ ಮಾಡಿದ್ದೇನೆ.dṛśya mādhyamadalli 40 varṣa kelasa māḍiddēne.I have worked for 40 years in visual media. ಆದರೂ ಕೂಡ, ಬೆಳಗ್ಗೆ ಎದ್ದು, ದಿನ ಪತ್ರಿಕೆ ಓದದೇ ಇದ್ರೆ,ādarū kūḍa, beḷagge eddu, dina patrike ōdadē idre,Yet, if I don’t read that day’s newspapers as soon as ಅವತ್ತು ದಿನಾನೇ ಪ್ರಾರಂಭ ಆಗೋದಿಲ್ಲ.avattu dinānē prārambha āgōdilla.I getup my day doesn’t commence at all. ಅಷ್ಟರ ಮಟ್ಟಿಗೆ ನಾನು ದೃಶ್ಯ ಮಾಧ್ಯಮದಲ್ಲಿ ಇದ್ದುಕೊಂಡು ಕೂಡ,aṣṭara maṭṭige nānu dṛśya mādhyamadalli iddukoṇḍu kūḍa,in spite of being in the visual media for so long. ಈ ಮುದ್ರಣ ಮಾಧ್ಯಮ, ಅಂದ್ರೆ Print Mediaಅಂತಾರಲ್ಲ, ಅದ್ರಿಂದ ಪ್ರಭಾವಿತನಾಗಿದ್ದೇನೆ.ī mudraṇa mādhyama, andre Print Mediaantāralla, adrinda prabhāvitanāgiddēne.To that extent I am influenced by the print media ಇದಕ್ಕೆ ಮುಖ್ಯ ಕಾರಣ, ಬಹುತೇಕ ಮುಖ್ಯ ಕಾರಣ,idakke mukhya kāraṇa, bahutēka mukhya kāraṇa,Main reason for this is ನಮ್ಮ ಪತ್ರಿಕೆಗಳು ಅನುಸರಿಸಿರುವ ಒಂದು ವಸ್ತು ನಿಷ್ಠ ಧೋರಣೆ; ಒಂದು ಗಾಂಭೀರ್ಯ.namma patrikegaḷu anusarisiruva ondu vastu niṣṭha dhōraṇe; ondu gāmbhīrya.the commitment to reality of our newspapers. ಸುದ್ದಿಯನ್ನ ಒಂದು ರೀತಿಯಲ್ಲಿ, ಅದನ್ನು ಮುದ್ರಣ ಮಾಡುವಾಗsuddiyanna ondu rītiyalli, adannu mudraṇa māḍuvāgaWhen they publish a news ಸುದ್ದಿಯನ್ನು ಹೇಗೆ ಜನಗಳಿಗೆ ತಲಪಿಸಬೇಕು ಅನ್ನುವಾಗsuddiyannu hēge janagaḷige talapisabēku annuvāgawhen it comes reaching the people ಒಂದು ಅಪರೂಪದ ಗಾಂಭೀರ್ಯವನ್ನು ಕನ್ನಡ ಪತ್ರಿಕೋದ್ಯಮ ಕಾಪಾಡಿಕೊಂಡು ಬಂದಿದೆ.ondu aparūpada gāmbhīryavannu kannaḍa patrikōdyama kāpāḍikoṇḍu bandide.Kannada journalism has maintained a rarematurity in which the news is made to reach people. ಅದ್ರಿಂದಾನೇ ಕನ್ನಡ ಪತ್ರಿಕೆಗಳನ್ನು ಓದಲೇ ಬೇಕು ಅನ್ನುವ ತುಡಿತadrindānē kannaḍa patrikegaḷannu ōdalē bēku annuva tuḍitaThat’s why, there is a desire in the people to read Kannada news papers ಈಗಲೂ ಜನರಲ್ಲಿದೆ; ನನ್ನಂತವರಲ್ಲೂ ಇದೆ.īgalū janarallide; nannantavarallū ide.people, including me ಬೆಳಗ್ಗೆಯಿಂದ ರಾತ್ರೆವರೆಗೂ Cameraದ ಹಿಂದೆ ಕೆಲಸ ಮಾಡಿದರೂ ಕೂಡ,beḷaggeyinda rātrevaregū Camerada hinde kelasa māḍidarū kūḍa,in spite of working behind the camera from morning till night. ಬೆಳಗ್ಗೆ ಎದ್ದ ತಕ್ಷಣ ನಾನು ವಯಕ್ತಿಕವಾಗಿ,beḷagge edda takṣaṇa nānu vayaktikavāgi,As soon as I getup, personally ನನಗೆ ಊಟ ಅಥವಾ ತಿಂಡಿ ಎಷ್ಟು ಮುಖ್ಯವೋ ಅಷ್ಟೇ ಪತ್ರಿಕೆ ಓದುವುದು ಕೂಡ ಮುಖ್ಯ.nanage ūṭa athavā tiṇḍi eṣṭu mukhyavō aṣṭē patrike ōduvudu kūḍa mukhya.reading a newspaper is as important to me as breakfast or lunch. ಆಮೇಲೆ, ಈ ನಮ್ಮ ಬರಹಗಾರರು, ನಾನೂ ಆಗಾಗ ಬರೀತಾ ಇರ್ತೀನಿ.āmēle, ī namma barahagāraru, nānū āgāga barītā irtīni.I too write sometimes in papers. ನನ್ನ ಸಾಕ್ಷ್ಯ ಚಿತ್ರಗಳು ಪ್ರಸಾರ ಆಗಬಹುದು, ಎಲ್ಲಾ ಕಡೆ ದೃಶ್ಯ ಮಾಧ್ಯಮಗಳಿವೆ.nanna sākṣya citragaḷu prasāra āgabahudu, ellā kaḍe dṛśya mādhyamagaḷive.My documentaries may be telecast sometimes here and there. There are visual media everywhere. ಆದರೆ, ನನ್ನ ಒಂದು ಲೇಖನ ಪತ್ರಿಕೆಯಲ್ಲಿ ಪ್ರಕಟ ಆಯಿತು ಅಂದ್ರೆādare, nanna ondu lēkhana patrikeyalli prakaṭa āyitu andreBut, when an article of mine is published in newspaper, ನನಗಾಗುವ ಸಂತೋಷ ಯಾರಿಗೂ ಆಗಲ್ಲ.nanagāguva santōṣa yārigū āgalla.I get immense pleasure ಯಾಕಂದ್ರೆ, ಒಂದು ಪ್ರಕಟ ಆಗುವ ಮೂಲಕyākandre, ondu prakaṭa āguva mūlakabecause I have a feeling that ನಾನು ಜನರಿಗೆ ಶಾಶ್ವತವಾಗಿ ತಲಪ್ತೀನಿ ಅನ್ನುವ ಭಾವನೆ ಇದೆ.nānu janarige śāśvatavāgi talaptīni annuva bhāvane ide.I reach the people permanently with one publication. ದೃಶ್ಯ ಮಾಧ್ಯಮ ಬರತ್ತೆ, ಮಾಯ ಆಗಿ ಬಿಡತ್ತೆ.dṛśya mādhyama baratte, māya āgi biḍatte.Visual media is a virtual media. ಕಣ್ತೆರೆದು ಕಣ್ಣು ಮುಚ್ಚೋದ್ರೊಳಗೆ ಅದು ಮಾಯ ಆಗಿ ಇರುತ್ತೆkaṇteredu kaṇṇu muccōdroḷage adu māya āgi irutteIt comes and goes within a blink. ಇದು ಶಾಶ್ವತವಾಗಿ, ನಮ್ಮ ಒಂದು Cupboard ನಲ್ಲಿ ಉಳಕೊಳ್ಳುತ್ತೆ.idu śāśvatavāgi, namma ondu Cupboard nalli uḷakoḷḷutte.This remains permanently in our cupboard and an our book shelves. ನಮ್ಮ Shelves ಲ್ಲ್ಲಿ ಉಳ್ಕೊಳ್ಳತ್ತೆ.namma Shelves llli uḷkoḷḷatte.
Word Transliteration Meaning
ಪತ್ರಿಕೆpatrikePaper
ಬೆಳಗ್ಗೆbeḷaggeMorning
ಜನಪದjanapadaFolklore
ತುಣುಕುtuṇukuPiece
ನಮ್ಮnammaOur
ದಿನ (ದಿವಸ)dina (divasa)Day
ಪ್ರಜಾವಾಣಿ,prajāvāṇi,Name of a newspaper
ಕನ್ನಡಪ್ರಭ,kannaḍaprabha,Name of a newspaper
ವಿಜಯ ಕರ್ನಾಟಕ,vijaya karnāṭaka,Name of a newspaper
ವಿಜಯ ವಾಣಿ,vijaya vāṇi,Name of a newspaper
ವಾರ್ತಾ ಭಾರತಿ,vārtā bhārati,Name of a newspaper
ಹೊಸ ದಿಗಂತhosa digantaName of a newspaper
ಹತ್ತುhattuTen
ಹಲವು.halavu.Many
ನಿಜnijaTruth
ಜನjanaPeople
ಒಂದುonduOne
ದಿನನಿತ್ಯdinanityaDaily
ಚಟುವಟಿಕೆcaṭuvaṭikeActivity
ಓದುōduRead
ವಿಶೇಷviśēṣaSpecial
ಪುರವಣಿpuravaṇiEdition
ಆಸ್ತಿāstiProperty
ಶಿಕ್ಷಣśikṣaṇaEducation
ಆರೋಗ್ಯārōgyaHealth
ಮಹಿಳೆmahiḷeWomen
ಉದ್ಯಮ-ಶೀಲತೆudyama-śīlateEntrepreneurship
ಅನೇಕanēkaNumerous
ಭಿನ್ನ-ಭಿನ್ನವಾದbhinna-bhinnavādaVariant
ವಾರvāraWeek
ಸುಧಾ,sudhā,Name of a magazine
ತರಂಗ,taraṅga,Name of a magazine
ಹಾಯ್ ಬೆಂಗಳೂರು,hāy beṅgaḷūru,Name of a tabloid
ಲಂಕೇಶ್laṅkēśName of a tabloid
ನೂರಾರುnūrāruHundreds
ಬೇಟೆbēṭeHunt
ನಾಯಕnāyakaCaptain
ಪಾಕ್ಷಿಕpākṣikaFortnightly / Biweekly
ಮಾಸmāsaMonthly
ತ್ರೈಮಾಸಿಕtraimāsikaQuarterly
ವಿಶೇಷಾಂಕviśēṣāṅkaSpecial Edition
ಬಹಳbahaḷaMany
ದೊಡ್ಡdoḍḍaBig
ಹಬ್ಬhabbaFestival
ಹೊಸhosaNew
ದೃಷ್ಟಿdṛṣṭiVision
ತಿಂಗಳುtiṅgaḷuMonth
ಪರಿಶ್ರಮpariśramaHardwork
ಕಥೆkatheStory
ಸ್ಪರ್ಧೆspardheCompetition
ಕವನkavanaPoetry
ಬಹುಮಾನbahumānaPrize/ Award
ಮುದ್ರಣmudraṇaPrint
ಇಂದು (ಇವತ್ತು)indu (ivattu)Today
ಸಾಹಿತಿsāhitiPoet
ತೇರುtēruCharriot
ಪ್ರಕಟprakaṭaPublish
ಲೇಖಕlēkhakaWriter
ಕಾದಂಬರಿkādambariNovel
ಧಾರವಾಹಿdhāravāhiSerial
ರಾಜಕಾರಣrājakāraṇaPolitics
ಸಾಹಿತ್ಯ-ಸಂಸ್ಕøತಿsāhitya-saṁskaøtiLiterature - Culture
ಸುದ್ದಿsuddiNews
ಸ್ವಲ್ಪsvalpaLittle
ರೋಚಕrōcakaInteresting
ಅತಿರೇಕatirēkaExcess
ಪತ್ರಿಕೋದ್ಯಮpatrikōdyamaJournalism
ದೃಶ್ಯdṛśyaScene
ಮಾಧ್ಯಮmādhyamaMedia
ಹಾವಳಿhāvaḷiPlagued
ತುಡಿತtuḍitaPull
ಅಭಿಪ್ರಾಯ.abhiprāya.Opinion
ವಿದ್ಯುನ್ಮಾನvidyunmānaElectronically
ಪ್ರಾರಂಭprārambhaBeginning
ಧೋರಣೆdhōraṇeOpinion
ಗಾಂಭೀರ್ಯgāmbhīryaMaturity
ಅಪರೂಪaparūpaRare
ಕೆಲಸkelasaWork
ತಕ್ಷಣtakṣaṇaImmediatly
ನಾನುnānuI
ವಯಕ್ತಿಕvayaktikaPersonal
ಬರಹಗಾರbarahagāraWriter
ಸಾಕ್ಷ್ಯ-ಚಿತ್ರಗಳುsākṣya-citragaḷuDocumentory
ಪ್ರಸಾರprasāraTelecast/ Broadcast
ಲೇಖನlēkhanaArticle
ಕಣ್ಣುkaṇṇuEye
ಮಾಯmāyaDisappear
ಶಾಶ್ವತśāśvataPermanent

Related Grammar Lessons

The Written and Spoken Styles - ಲಿಖಿತ ಮತ್ತು ಆಡು ಮಾತಿನ ರೀತಿಗಳು

The Kannada language has several social and regional dialects among which the most notable varieties are the dialects of Mysore, Mangalore and Dharwad. The above Video aimed at noting the distinction between the written style and the spoken style of the educated people of Mysore and Bangalore.

The written style of Kannada is used in newspapers and other writings in general. It is also used on television for news and while presenting research papers. A mixture of written and spoken styles is used in literary speeches. Spoken style is used by people in everyday conversation.

1. Differences in vocabulary are based on phonetic and phonemic changes. Some of them result in vowel harmony. But there is complexity in these changes and most of the changes are irregular. Examples: There is change in the following.

SpokenWritten
ಅಂದ್ರೆಅಂದರೆ
ಬಿಡತ್ತೆಬಿಡುತ್ತದೆ
ಮಾಡಿದ್ರುಮಾಡಿದರು
ನಿಜವಾಗ್ಲೂನೂನಿಜವಾಗಲೂ
ಯಾಕಂದ್ರೆಯಾಕೆಂದರೆ
ತರೋದುತರುವುದು
ಮುಚ್ಚೋದುಮುಚ್ಚುವುದು
ಕುಡೀಲಿಕ್ಕೆಕುಡಿಯಲಿಕ್ಕೆ
ತರ್ತಾವೆತರುತ್ತಾವೆ
ತರೋದುತರುವುದು
ನೆನಪಿರೋನೆನಪಿರುವ
ಮಾಡ್ತಾರೆಮಾಡುತ್ತಾರೆ
ರಾಮಣ್ಣೋರುರಾಮಣ್ಣನವರು
ಲೇಖಕರಾದ್ರುಲೇಖಕರಾದರು
ಅದರಿಂದಾನೇಅದರಿಂದನೇ
ಬರೀತಾಬರೆಯುತ್ತಾ
ಇರ್ತೀನಿಇರುತ್ತೇನೆ
ಬರತ್ತೆಬರುತ್ತದೆ
ಬಿಡತ್ತೆಬಿಡುತ್ತದೆ
ಉಳ್ಕೊಳ್ಳತ್ತೆಉಳಿದುಕೊಳ್ಳುತ್ತದೆ.

2. In modern Kannada, words end in vowels. Among the vowels, 'u' is the most common. In spoken Kannada, the final 'u' is dropped in most cases. When 'nu' occurs as a suffix in nouns, pronouns and verbs, it is also dropped in most cases.

ಕಣ್ಣು ಮುಚ್ಚೋದ್ರೊಳಗೆಕಣ್ಣನ್ನು ಮುಚ್ಚುವುದರೊಳಗೆ
ಹೋದಹೋದನು

3. Other vowels and consonants are also dropped in spoken style. Examples:

ಬರ್ತಾನೆಬರುತ್ತಾನೆ
ತರ್ತಾರೆತರುತ್ತಾರೆ
ಆಗ್ಲಿಆಗಲಿ

4. Cases

Accusative

ಪತ್ರಿಕೆಗಳನ್ನು
ಹೊಸತನ್ನು

Dative

ಜನರಿಗೆ
ಕುಡೀಲಿಕ್ಕೆ

Genitive

ನಿತ್ಯದ
ಸಾಹಿತ್ಯ-ಸಂಸ್ಕøತಿಯ

Locative

ಸ್ಪರ್ಧೆಗಳಲ್ಲಿ
ಪತ್ರಿಕೆಯಲ್ಲಿ
ಪುರವಣಿಗಳಲ್ಲಿ
ಕರ್ನಾಟಕದಲ್ಲಿ

Convert the following into spoken style.

1. ಅವನು ಬಂದನು.
2. ಉಮಾ ಮನೆಗೆ ಹೋದಳು.
3. ಅಶೋಕನು ಶಾಸನಗಳನ್ನು ಬರೆಯಿಸಿದ.
4. ನಾನು ಕಾಫಿ ಕುಡಿಯುತ್ತೇನೆ.
5. ಅವನು ಊಟ ಮಾಡುತ್ತಾನೆ.
6. ಅವಳು ಲೇಖನ ಬರೆಯುತ್ತಾಳೆ.
7. ಗೀತಾಳು ಚೆನ್ನಾಗಿ ಹಾಡುತ್ತಾಳೆ.
8. ಅಮ್ಮ ದೆಹಲಿಗೆ ಬರುತ್ತಾರೆ.
9. ಅಪ್ಪನಿಗೆ ಸಿಟ್ಟು ಬರುತ್ತದೆ.
10. ಮಳೆ ಬರುತ್ತದೆ.

Send your completed homework by email to klcjnu@gmail.com