Institute of Artisans

Transcription
Transliteration
Translation
ಇದು Canara Bankನಿಂದ ಉಚಿತವಾಗಿ ತರಬೇತಿ ನೀಡಿ, ಗ್ರಾಮೋದ್ಯೋಗವನ್ನು ಸೃಷ್ಟಿಸುವ ಒಂದು ಶಾಲೆ.idu Canara Bankninda ucitavāgi tarabēti nīḍi, grāmōdyōgavannu sṛṣṭisuva ondu śāle.This school is supported by Canara Bank to give free training to create jobs in rural areas. ಇಲ್ಲಿ ನಾವು ಮೂರು ರೀತಿಯ ತರಬೇತಿಯನ್ನು ಕೊಡ್ತಾ ಇದ್ದೀವಿ.illi nāvu mūru rītiya tarabētiyannu koḍtā iddīvi.We give three types of training here ಮರ ಮತ್ತು ಕಲ್ಲು, ಲೋಹ ಶಿಲ್ಪ, ಕುಂಭ ಕಲೆ.mara mattu kallu, lōha śilpa, kumbha kale.Wood and rock. Metal. Pottery ಈ ರೀತಿ ಮೂರು ರೀತಿಯ ತರಬೇತಿಯನ್ನು ಉಚಿತವಾಗಿ ಕೊಡ್ತಾ ಇದ್ದೀವಿ.ī rīti mūru rītiya tarabētiyannu ucitavāgi koḍtā iddīvi.This way we give training in these three genres at free of cost ಈ ಒಂದು ಶಾಲೆಯಲ್ಲಿ ನಾವು 18 ತಿಂಗಳ ಕಾಲ ಲೋಹ ಶಿಲ್ಪ,ī ondu śāleyalli nāvu 18 tiṅgaḷa kāla lōha śilpa,metal sculpture is taught for eighteen months ಅದೇ ರೀತಿ, 18 ತಿಂಗಳ ಕಾಲ ಮರ ಮತ್ತು ಕಲ್ಲು ಶಿಲ್ಪವನ್ನು ಹೇಳಿಕೊಡ್ತೀವಿ.adē rīti, 18 tiṅgaḷa kāla mara mattu kallu śilpavannu hēḷikoḍtīvi.Likewise, wood/stone sculpture is taught for 18 months. ಕುಂಭ ಕಲೆ 6ತಿಂಗಳಲ್ಲಿ ನಾವು ತಿಳಿಸಿ ಕೊಡ್ತಾ ಇದ್ದೀವಿ.kumbha kale 6tiṅgaḷalli nāvu tiḷisi koḍtā iddīvi.We teach pottery for 6 months here. ಈ ಒಂದು ತರಬೇತಿ, ಗ್ರಾಮದ ನಿರುದ್ಯೋಗ ಯುವಕ-ಯುವತಿಯರು ಇದರ ಒಂದು ಪ್ರಯೋಜನವನ್ನು ಪಡೀಬಹುದು.ī ondu tarabēti, grāmada nirudyōga yuvaka-yuvatiyaru idara ondu prayōjanavannu paḍībahudu.In this way, unemployed youth of villages can get the benefit of this programme. ಒಟ್ಟಾಗಿ ತಗೊಂಡ್ರೆ, ಇಲ್ಲಿ ಮರ, ಕಲ್ಲು ಇತ್ಯಾದಿ ಜೀವ ಇಲ್ಲದಿದ್ದ ವಸ್ತುಗಳಲ್ಲಿ ಜೀವ ತುಂಬುವಂತಹ ಕೆಲಸವನ್ನು ಇಲ್ಲಿ ನಾವು ಇವರಿಗೆ ಕೊಡ್ತಾ ಇದ್ದೀವಿ.oṭṭāgi tagoṇḍre, illi mara, kallu ityādi jīva illadidda vastugaḷalli jīva tumbuvantaha kelasavannu illi nāvu ivarige koḍtā iddīvi.Altogether, it can be said that we are providing jobs to these people to instil life in lifeless articles like wood/stone and metal. ಕರ್ನಾಟಕದಲ್ಲಿ ನಮ್ಮ ಪೂರ್ವಜರು ನಮ್ಮ ಹಿಂದಿನ, ಈ ರಾಜ್ಯದಲ್ಲಿ ಆಳುತ್ತಾ ಇದ್ದಂತಹ ರಾಜರುಗಳು ಕೊಟ್ಟಂತಹkarnāṭakadalli namma pūrvajaru namma hindina, ī rājyadalli āḷuttā iddantaha rājarugaḷu koṭṭantaha ಒಂದು ಸಾಂಸ್ಕøತಿಕ ವೈಭವವನ್ನು ಅದನ್ನ ಇವತ್ತು ನಾವು ಪೂರ್ತಿ ಕರ್ನಾಟಕದ ಆದ್ಯಂತ ಸುತ್ತಾಡಿದ್ರೆ ಎಲ್ಲ ಕಡೆಗೂ ಕಾಣಿಸುವುದಕ್ಕೆ ಸಿಗಲು ಸಾಧ್ಯ ಇರುವಂತದ್ದು.ondu sāṁskaøtika vaibhavavannu adanna ivattu nāvu pūrti karnāṭakada ādyanta suttāḍidre ella kaḍegū kāṇisuvudakke sigalu sādhya iruvantaddu.If we travel around Karnataka we can see the cultural grandeur everywhere contributed by our ancestral kings. ಅಂತಾದ್ರಲ್ಲಿ ಶಿಲ್ಪ ಕಲಾ ಕೇಂದ್ರಗಳಲ್ಲಿ ಕರ್ನಾಟಕ ಶಿಲ್ಪ ಕಲಾಶೈಲಿಯಲ್ಲಿ ಅದ್ರದ್ದೇ ಆದಂತಹ ಒಂದು ಛಾಪನ್ನು ಮೂಡಿಸಿದಂತದ್ದು ಒಂದು ಹೊಯ್ಸಳ ಶೈಲಿ.antādralli śilpa kalā kēndragaḷalli karnāṭaka śilpa kalāśailiyalli adraddē ādantaha ondu chāpannu mūḍisidantaddu ondu hoysaḷa śaili.One such sculptural style is the Hoysala style, which has created an indelible mark of its own among all Karnataka sculptural styles seen in centres of art. ಪ್ರಾರಂಭವಾಗಿ ಚಾಲುಕ್ಯ ಶೈಲಿ ಇತ್ತು. ಆಮೇಲೆ, ಕಲ್ಯಾಣ ಚಾಲುಕ್ಯ, ಆಮೇಲೆ ಹೊಯ್ಸಳ, ಆಮೇಲೆ ವಿಜಯನಗರ, ಅದಾದ ನಂತರ ನಾಯಕರ ಕಾಲprārambhavāgi cālukya śaili ittu. āmēle, kalyāṇa cālukya, āmēle hoysaḷa, āmēle vijayanagara, adāda nantara nāyakara kālaIn the beginning Chalukyastyle was there. Later, Kalyanachalukya, Hoysala, Vijayanagara, Nayaka’s period emerged. ಹೀಗೆ ವಿಶೇಷವಾದಂತಹ ವಾಸ್ತು ವೈಭವ ಇರುವಂತಹ ದೇವಾಲಯಗಳು ಶಿಲ್ಪಗಳನ್ನು ನಾವು ಕರ್ನಾಟಕದಾದ್ಯಂತ ಸುತ್ತಾಡಿದಾಗ ಅತ್ಯಂತ ಸಂತೋಷದಿಂದ ನೋಡುತ್ತಾ ಇರುತ್ತೇವೆ.hīge viśēṣavādantaha vāstu vaibhava iruvantaha dēvālayagaḷu śilpagaḷannu nāvu karnāṭakadādyanta suttāḍidāga atyanta santōṣadinda nōḍuttā iruttēve.We can see happily all such diverse styles in architectural grandeur in statues and temples of Karnataka. ಹಾಗೆಯೇ, ವಿದೇಶಗಳಿಂದ ಕೂಡಾ ಬಂದು ನೋಡುವಂತಹ ವಿಶೇಷವಾದಂತಹ ಶಿಲ್ಪಗಳು ಈಗಲೂ ಕೂಡಾ ಸಾವಿರಾರು ವರ್ಷಗಳಿಂದ ನಾನು ಕಾಣಲಿಕ್ಕೆ ಸಾಧ್ಯ ಆಗ್ತಾ ಇದೆ.hāgeyē, vidēśagaḷinda kūḍā bandu nōḍuvantaha viśēṣavādantaha śilpagaḷu īgalū kūḍā sāvirāru varṣagaḷinda nānu kāṇalikke sādhya āgtā ide.Also, touristscome from other countries to see and enjoy special architecture and sculpture here over thousands of years. ಶಾಸ್ತ್ರ ವಿವರಿಸುವಂತಹ ಪಂಚವಿಧ ಶಿಲ್ಪಗಳಲ್ಲಿ ಲೋಹ ಶಿಲ್ಪ ಕೂಡಾ ಒಂದು. ಈ ಶಿಲ್ಪಕ್ಕೆ ತನ್ನದೇ ಆದಂತಹ ಇತಿಹಾಸವಿದೆ.śāstra vivarisuvantaha pañcavidha śilpagaḷalli lōha śilpa kūḍā ondu. ī śilpakke tannadē ādantaha itihāsavide.Among five types of sculptures as prescribed by Shastras is metal sculpture too. This sculpture has got its own history. ಇತಿಹಾಸ ಪೂರ್ವ ಕಾಲದ ಉತ್ಖಲನಗಳಲ್ಲಿ ದೊರೆತಂತಹ ಲೋಹ ಶಿಲ್ಪಗಳು ನಮಗೆ ಪ್ರಾದೇಶಿಕವಾದಂತಹ ಜೀವನ ಶೈಲಿಯನ್ನು ತಿಳಿಸಿಕೊಡುವಲ್ಲಿ,itihāsa pūrva kālada utkhalanagaḷalli doretantaha lōha śilpagaḷu namage prādēśikavādantaha jīvana śailiyannu tiḷisikoḍuvalli, ಆ ಕಾಲದಲ್ಲಿ ಲೋಹಶಿಲ್ಪಗಳು ಯಾವ ರೀತಿಯಲ್ಲಿ ರೂಪುಗೊಳ್ಳುತ್ತಿದ್ದವು ಅನ್ನುವುದನ್ನು ತಿಳಿಸುವುದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.ā kāladalli lōhaśilpagaḷu yāva rītiyalli rūpugoḷḷuttiddavu annuvudannu tiḷisuvudaralli bahumukhya pātravannu vahisuttave.Metal sculptures recovered from prehistoric excavations tell us about how the sculptures were formed during those days and play an important role in telling about the regional life style ಭಾರತದ್ದೇ ಅನ್ನುವಂತಹ ಮಧುಶಿಷ್ಟ ವಿಧಾನ ಹೇಳುತ್ತೇವೆ. ಅದನ್ನು ಇಂದಿಗೂ ಕೂಡಾ ಸಾಂಸ್ಕøತಿಕ ನಗರಗಳಲ್ಲಿ ಇರಬಹುದು.bhārataddē annuvantaha madhuśiṣṭa vidhāna hēḷuttēve. adannu indigū kūḍā sāṁskaøtika nagaragaḷalli irabahudu.MadhushishtaVidhana is typical of India. It can be seen even today in cultural cities ಸಂಸ್ಕøತಿಯನ್ನು ಬಿಂಬಿಸುವ ಹಲವು ಉಪಕ್ರಮಗಳನ್ನು ನಾವು ಬಳಸುವುದಕ್ಕೆ ಕಾಣ್ತೇವೆ.saṁskaøtiyannu bimbisuva halavu upakramagaḷannu nāvu baḷasuvudakke kāṇtēve.We see several methods reflecting the culture ಸಂಸ್ಥೆಯಲ್ಲೂ ಕೂಡಾ ನಾವು ಲೋಹ ಶಿಲ್ಪವನ್ನು ಈ ವಿಧಾನದಲ್ಲಿ ರೂಪಿಸುವಂತಹ ವಿಶಿಷ್ಟ ಕ್ರಮವನ್ನು ಹೇಳಿಕೊಡ್ತಾ ಇದ್ದೇವೆ.saṁstheyallū kūḍā nāvu lōha śilpavannu ī vidhānadalli rūpisuvantaha viśiṣṭa kramavannu hēḷikoḍtā iddēve.We teach culture as depicted through metal sculpture in our institution ಲೋಹ ಶಿಲ್ಪದ ಪ್ರಾರಂಭಿಕ ಹಂತ, ಸಂಸ್ಥೆಯಲ್ಲಿ ರೇಖಾ ಚಿತ್ರಗಳ ವಿನ್ಯಾಸದಿಂದ ಪ್ರಾರಂಭವಾಗ್ತದೆ.lōha śilpada prārambhika hanta, saṁstheyalli rēkhā citragaḷa vinyāsadinda prārambhavāgtade.The initial stage of metal sculpture begins with line drawing designs ಸಾಂಪ್ರದಾಯಿಕವಾಗಿ ಬೇಕಾಗುವಂತಹ ಲೋಹಶಿಲ್ಪ, ಅದಕ್ಕೆ ರಚನಾ ವಿಧಾನಗಳು, ಅದನ್ನ, ಅದರಲ್ಲಿ ಬರುವಂತಹ ತಾಂತ್ರಿಕ ದೋಷಗಳು,sāmpradāyikavāgi bēkāguvantaha lōhaśilpa, adakke racanā vidhānagaḷu, adanna, adaralli baruvantaha tāntrika dōṣagaḷu, ಇವೆಲ್ಲದರ ಮನವರಿಕೆಗಳನ್ನು ಹಂತ-ಹಂತವಾಗಿ ವಿದ್ಯಾರ್ಥಿಗಳಿಗೆ ತಿಳಸಿಕೊಡುವಂತಹ ಪ್ರಯತ್ನವನ್ನು ನಾವಿಲ್ಲಿ ಮಾಡ್ತಾ ಇದ್ದೇವೆ.ivelladara manavarikegaḷannu hanta-hantavāgi vidyārthigaḷige tiḷasikoḍuvantaha prayatnavannu nāvilli māḍtā iddēve.We are trying to teach stage by stage traditional metal sculpture and technical mistakes in it. ಸಾಂಪ್ರದಾಯಿಕವಾಗಿ ರೂಪುಗೊಳ್ಳುವಂತಹ ಈ ಎಲ್ಲಾ ಶಿಲ್ಪಗಳಿಗೆ ರೇಖಾಚಿತ್ರ, ತಾಯಿ ಇದ್ದಹಾಗೆ.sāmpradāyikavāgi rūpugoḷḷuvantaha ī ellā śilpagaḷige rēkhācitra, tāyi iddahāge.Line drawing is like mother to all such traditional arts ಹಾಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿ, ಆತ, ಅನುವಂಶಿಕವಾದ ಹಿನ್ನೆಲೆಯಿಂದ ಬಂದಿರ್ಲಿhāgāgi, pratiyobba vidyārthi, āta, anuvaṁśikavāda hinneleyinda bandirlitherefore, whether he comes from a hereditary background ಅಥವಾ ಯಾವುದೇ ಒಂದು ಹಿನ್ನೆಲೆ ಇಲ್ಲದೆ, ಕೇವಲ ಆಸಕ್ತಿಯಿಂದ ಸಂಸ್ಥೆಯ ಆವರಣಕ್ಕೆ ಬಂದಿದ್ರೂ ಕೂಡಾ,athavā yāvudē ondu hinnele illade, kēvala āsaktiyinda saṁstheya āvaraṇakke bandidrū kūḍā,or on his own without any such background, ಆತನ ಆಸಕ್ತಿಯನ್ನು ಪರಿಗಣಿಸಿ ಆತನಲ್ಲಿ ಇರುವಂತಹ ಕಲಾ ಸಾಧ್ಯತೆಗಳನ್ನು ಇಮ್ಮಡಿಗೊಳಿಸುವātana āsaktiyannu parigaṇisi ātanalli iruvantaha kalā sādhyategaḷannu immaḍigoḷisuvaIt is our duty here to enhance the artistic capabilities of a student who comes here-to make him a hardworking industrious sculptor. It is a matter of pride for all of us and for the institute. ತನ್ಮೂಲಕ ಆತನನ್ನು ಸಶಕ್ತ ಉದ್ಯಮಶೀಲ ಶಿಲ್ಪಿಯನ್ನಾಗಿ ಮಾಡುವುದು ನಮ್ಮ ಇಲ್ಲಿನ ಕರ್ತವ್ಯವಾಗ್ತದೆ.tanmūlaka ātanannu saśakta udyamaśīla śilpiyannāgi māḍuvudu namma illina kartavyavāgtade. ಈ ರೀತಿ ಸಮಗ್ರವಾಗಿ ದೇಶದ ಸಾಂಸ್ಕøತಿಕ ರೀತಿಯನ್ನು, ಬೆಳೆದು ಬಂದ ನೀತಿಯನ್ನು,ī rīti samagravāgi dēśada sāṁskaøtika rītiyannu, beḷedu banda nītiyannu, ನಾವು ತಿಳಿಸುವುದರ ಜೊತೆಗೆ, ಅದನ್ನು ವ್ಯವಸ್ಥಿತವಾಗಿ ಜೀವನಕ್ಕೆ ಅಳವಡಿಸಿಕೊಳ್ಳುವ,nāvu tiḷisuvudara jotege, adannu vyavasthitavāgi jīvanakke aḷavaḍisikoḷḷuva, ತನ್ಮೂಲಕ, ವಿಶಿಷ್ಟ, ವಿಭಿನ್ನವಾದಂತಹ ಸಂಸ್ಕøತಿಯನ್ನು ಉಳಿಸುವ, ಬೆಳೆಸುವಂತಹ ಸಾಮಾಜಿಕ ಜವಾಬ್ದಾರಿಯನ್ನು ನೀಡಿ,tanmūlaka, viśiṣṭa, vibhinnavādantaha saṁskaøtiyannu uḷisuva, beḷesuvantaha sāmājika javābdāriyannu nīḍi, ಅವರನ್ನು ಸಶಕ್ತ ಉದ್ಯಮಿಗಳನ್ನಾಗಿ, ಜೊತೆಯಲ್ಲಿ ಒಬ್ಬ ಉತ್ತಮ ನಾಗರಿಕನಾಗಿ ಸಂಸ್ಥೆಯ ಈ ತರಬೇತಿ ರೂಪಿಸ್ತದೆ ಅನ್ನುವಂತಹದ್ದು ಸಂಸ್ಥೆಯ ಹಾಗೂ ನಮ್ಮೆಲ್ಲರ ಹೆಮ್ಮೆ.avarannu saśakta udyamigaḷannāgi, joteyalli obba uttama nāgarikanāgi saṁstheya ī tarabēti rūpistade annuvantahaddu saṁstheya hāgū nammellara hemme.We teach about cultural heritage of the country and the way it has developed over time besides the ways of adopting it in life therein to conserve and nurture a distinct, different culture as a social responsibility and to make the student a capable entrepreneur and also a good citizen, which we feel proud of. ಇಲ್ಲಿ ನಮಗೆ ಶಿಕ್ಷಕರ ನೆರವಿನಿಂದ, ಮೊದಲು 6 ತಿಂಗಳು ರೇಖಾಚಿತ್ರಗಳ ವಿನ್ಯಾಸ ಮತ್ತು ಅದರ ವಿವಿಧ ರಚನೆ;illi namage śikṣakara neravininda, modalu 6 tiṅgaḷu rēkhācitragaḷa vinyāsa mattu adara vividha racane; ಅದನ್ನು ಯಾವ ರೀತಿಯಾಗಿ ನಮ್ಮ ಕೆಲಸಕ್ಕೆ ಅಳವಡಿಸಿಕೊಳ್ಳಬೇಕು ಅನ್ನುವಂತಹ ಮಾಹಿತಿಯನ್ನು ಶಿಕ್ಷಕರು ನೀಡ್ತಾರೆ.adannu yāva rītiyāgi namma kelasakke aḷavaḍisikoḷḷabēku annuvantaha māhitiyannu śikṣakaru nīḍtāre.Here, with the help of our teachers,we are taught in the first six months, designs of line art and its different creationsand how to adapt it to our work. ತದನಂತರದಲ್ಲಿ ನಮಗೆ ಅಭ್ಯಾಸಗಳು ಪ್ರಾರಂಭ ಆಗ್ತವೆ.tadanantaradalli namage abhyāsagaḷu prārambha āgtave.After that excercises will begin ಈ ರೀತಿ ಮೇಣದ ಕಲಾಕೃತಿಗಳ ರಚನೆ. ನಂತರ ಉಬ್ಬು ಶಿಲ್ಪ ರಚನೆ ಎರಡು ವಿಭಾಗದಲ್ಲಿ ನಮಗೆ ತರಬೇತಿಯನ್ನು ನೀಡ್ತಾರೆ.ī rīti mēṇada kalākṛtigaḷa racane. nantara ubbu śilpa racane eraḍu vibhāgadalli namage tarabētiyannu nīḍtāre.Likewise, sculptures using wax. Later on we are trained to work on embose creation.
Word Transliteration Meaning
ಉಚಿತucitaFree
ತರಬೇತಿtarabētiTraining
ಸೃಷ್ಟಿsṛṣṭiCreation
ಶಾಲೆśāleSchool
ಮರmaraTree
ಕಲ್ಲುkalluStone
ಲೋಹlōhaMetal
ತಿಂಗಳುtiṅgaḷuMonth
ಪ್ರಯೋಜನprayōjanaUse
ಪ್ರಾರಂಭprārambhaBegining
ವಿದೇಶvidēśaAbroad
ವರ್ಷvarṣaYear
ಶೈಲಿśailiStyle
ಆಭರಣābharaṇaJewels / Ornament
ಕಿರೀಟkirīṭaDiadem
ಶಂಖśaṅkhaConch
ಚಕ್ರcakraWheel
ಇತಿಹಾಸitihāsaHistory
ಪ್ರಯತ್ನprayatnaTry
ವಿದ್ಯಾರ್ಥಿvidyārthiStudent
ಆಸಕ್ತಿāsaktiInterest
ಪರಿಗಣಿಸಿparigaṇisiConsider
ಹೆಮ್ಮೆhemmeProud
ಮಾಹಿತಿmāhitiInformation
ಅಭ್ಯಾಸabhyāsaPractice

1. ಓದಿರಿ

ಕರ್ನಾಟಕದ ವಾಸ್ತು ಶಿಲ್ಪ ಬಹಳ ಪ್ರಾಚೀನವಾಗಿದೆ. ಬೇರೆ ಬೇರೆ ಅರಸರು ಕರ್ನಾಟಕ ವಾಸ್ತು ಶಿಲ್ಪವನ್ನು ಬೆಳೆಸಿವೆ. ಕದಂಬ ರಾಜವಂಶದವರು ಕರ್ನಾಟಕದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದರು. ಅವರ ಮುಖ್ಯ ಪಟ್ಟಣಗಳು ಬನವಾಸಿ ಮತ್ತು ಹಲಸಿ. ಗಂಗ ಅರಸರ ವಾಸ್ತುಶಿಲ್ಪ ಹೆಚ್ಚಾಗಿ ಉಳಿದುಬಂದಿಲ್ಲ. ಅನೇಕ ಕಟ್ಟಡಗಳು ಗಂಗ ಅರಸರ ರಾಜಧಾನಿಯಾದ ತಲಕಾಡಿನ ಮರಳು ಗುಡ್ಡೆಗಳಲ್ಲಿ ಹೂತು ಹೋಗಿವೆ.

ಗಂಗ ಕಾಲದ ವಾಸ್ತುಶಿಲ್ಪ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಉಳಿದುಬಂದಿದೆ. ಚಂದ್ರಪ್ರಭ ಬಸದಿ, ಚಾವುಂಡರಾಯ ಬಸದಿ. ವಿಶ್ವವಿಖ್ಯಾತವಾದ ಶ್ರವಣಬೆಳಗೊಳದ ದೊಡ್ಡ ಬೆಟ್ಟದ ವೇಲಿರುವ ಬಹಳ ಸುಂದರವಾದ ಗೊಮ್ಮಟೇಶ್ವರ ವಿಗ್ರಹ ಗಂಗರ ಕೊಡುಗೆಗಳು. ಬಾದಾಮಿ ಚಾಳುಕ್ಯರು ಗುಹಾಂತರ ದೇವಾಲಯಗಳನ್ನು ಕಟ್ಟಿದರು. ಐಹೊಳೆಯನ್ನು ಚಾಳುಕ್ಯರ ವಾಸ್ತುಶಿಲ್ಪದ ತೌರುಮನೆಯೆಂದು ಕರೆಯುತ್ತಾರೆ. ಚಾಳುಕ್ಯರ ವಾಸ್ತುಶಿಲ್ಪದಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳೆರಡೂ ಸೇರಿಕೊಂಡು ಅದನ್ನು ವೇಸರ ಶೈಲಿಯೆಂದು ವಿದ್ವಾಂಸರು ಕರೆದಿದ್ದಾರೆ. ಎಲ್ಲೋರವು ಕರ್ನಾಟಕ ಚಕ್ರವರ್ತಿಗಳಾದ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಅಲ್ಲಿರುವ ಕೈಲಾಸ ದೇವಾಲಯವನ್ನು ರಾಷ್ಟ್ರಕೂಟ ಅರಸ ಒಂದನೆಯ ಕೃಷ್ಣ ಕಟ್ಟಿಸಿದ. ಹೊಯ್ಸಳರು ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿ ಸುಂದರವಾದ ದೇವಾಲಯಗಳನ್ನು ಕಟ್ಟಿದರು. ಈ ದೇವಾಲಯಗಳ ಅದ್ಭುತ ಕಲಾಕೌಶಲ ಬೆರಗುಗೊಳಿಸುತ್ತದೆ. ವಿಜಯನಗರದ ಅರಸರು ಹಂಪಿಯನ್ನು ವಿಶ್ವವಿಖ್ಯಾತವಾಗಿ ಬೆಳೆಸಿದರು. ಕರ್ನಾಟಕದ ಗುಲ್ಬರ್ಗಾ, ಬೀದರ ಬಿಜಾಪುರ ಮೊದಲಾದ ಪ್ರದೇಶಗಳಲ್ಲಿ ಇಂಡೋ ಸಾರ್ಸೆನಿಕ್ ಶೈಲಿಯ ಕಟ್ಟಡಗಳಿವೆ. ಇಬ್ರಾಹಿಂ ರೋಜ ಮತ್ತು ಗೋಳಗುಮ್ಮಟಗಳು ಅತ್ಯಂತ ಸುಂದರ ರಚನೆಗಳು.

2. ಟಿಪ್ಪಣಿ ಬರೆಯಿರಿ

ಗೋಮಟೇಶ್ವರ
ಬೇಲೂರು ಚೆನ್ನಕೇಶವ
ಲೋಹ ಶಿಲ್ಪ
ವಿಧಾನ ಸೌಧ
ಮರದ ಶಿಲ್ಪಗಳು
ತಲಕಾಡು
ಕಬ್ಬಿಣ
ಶಿಲ್ಪಿ
ಹೊಯ್ಸಳ ಶೈಲಿ
ಹಂಪಿ

Send your completed homework by email to klcjnu@gmail.com