Hotel Mylary

Transcription
Transliteration
Translation
ಈ ಇರುವಂತಹ ಮಾಲಿಕರ ಅಜ್ಜಿ ಗೌರಮ್ಮ ಅವರುī iruvantaha mālikara ajji gauramma avaruPresent owner of the hotel’s grandmother Gowramma ಈ ಕತೆಯ ಈ ಹೋಟೆಲ್‍ನ ಮೂಲ ಆಗಿರ್ತಾರೆ.ī kateya ī hōṭel‍na mūla āgirtāre.is the source of this story. ಅಜ್ಜಿ ಅವರು ಅವರ್ಗೆ ಮಕ್ಕಳು ಇಲ್ಲದೆ ಇರುವ ಸಮಯದಲ್ಲಿajji avaru avarge makkaḷu illade iruva samayadalliWhen grandmother did not have children, that time she was running the hotel. ಹೋಟೆಲ್ ನಡೆಸ್ತ ಇರೋವಾಗ ಅವರ್ಗೆ ಮೈಲಾರಲಿಂಗೇಶ್ವರhōṭel naḍesta irōvāga avarge mailāraliṅgēśvaraWhile running the restaurant, she prayed to Lord mylaralingeswara ದೇವರಿಗೆ ಹರಕೆ ಹೊತ್ತುಕೊಂಡಾಗ ಆ ಹರಕೆಯ ಫಲವಾಗಿdēvarige harake hottukoṇḍāga ā harakeya phalavāgiand as a result she got a son. ಹುಟ್ಟಿದಂತಹ ಮಗನಿಗೆ ಮೈಲಾರಸ್ವಾಮಿ ಅಂತ ಹೆಸರಿಡ್ತಾರೆ.huṭṭidantaha maganige mailārasvāmi anta hesariḍtāre.He was named Mylaraswamy. ಹಂಗಾಗಿ ಹೊಟೆಲ್‍ಗೆ ಕೂಡಾ ಮೈಲಾರಿ ಹೋಟೆಲ್ ಅಂತ ಹೆಸರಿಟ್‍ಬಿಟ್ಟುhaṅgāgi hoṭel‍ge kūḍā mailāri hōṭel anta hesariṭ‍biṭṭuThat way, the hotel took the name Mylari hotel. ಮೈಲಾರಿ ಹೋಟೆಲಲ್ಲಿ ಮಾಡೊವಂತಹ ದೋಸೆmailāri hōṭelalli māḍovantaha dōseWe have heard that the dosa prepared in Mylari hotel is famous all over the world. ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ ಅಂತ ನಾವು ಕೇಳಿದ್ದೀವಿ.prapañcadādyanta prasiddhavāgide anta nāvu kēḷiddīvi. ಈಗ ಗೌರಮ್ಮ ಅವರ ಮೊಮ್ಮಗ ಈ ಹೋಟೆಲ್‍ನ ಮಾಲೀಕರಾಗಿರ್ತಾರೆ.īga gauramma avara mommaga ī hōṭel‍na mālīkarāgirtāre.Presently Gowramma’s grandson is the owner of the hotel. ಅವರು ಬರುವಂತಹ ಎಲ್ಲಾ ಕಸ್ಟಮರನ್ನು ತುಂಬಾ ಚೆನ್ನಾಗಿ ನೋಡ್ಕೋತ ಇದ್ದಾರೆ.avaru baruvantaha ellā kasṭamarannu tumbā cennāgi nōḍkōta iddāre.He takes care of all customers who come there. ಎಲ್ಲರೂ ತುಂಬಾ ಸಂತೋಷ ಪಡ್ತಾರೆ ನಮ್ಮ ಸ್ನೇಹಿತರುellarū tumbā santōṣa paḍtāre namma snēhitaruEveryone feels happy. ನಮ್ಮ ಸಂಬಂಧಿಕರು ಬಂದವರಿಲ್ಲಿ ಒಂದು ದೋಸೆ ತಿಂದುnamma sambandhikaru bandavarilli ondu dōse tinduMy friends and relatives who come here ತುಂಬಾ ಸಂತೋಷ ಪಡ್ಕೊಂಡು ಹೋಗ್ತ ಇದ್ದಾರೆ.tumbā santōṣa paḍkoṇḍu hōgta iddāre.feel happy to have the dosa. ನಮ್ಮ ಅಜ್ಜಿ ಅವರ ಕಾಲದಿಂದ ಹೊಟ್ಲು Open ಮಾಡಿದ್ರುnamma ajji avara kāladinda hoṭlu Open māḍidruMy grandmother started the hotel during her time. ಆದ್ರೆ ನಮ್ಮ ತಂದೆಯವರು ನಡೆಸಿಕೊಂಡು ಹೋಯ್ತ ಇದ್ದರು.ādre namma tandeyavaru naḍesikoṇḍu hōyta iddaru.But, my father was running it. ನಮ್ಮ ತಂದೆಯವರ ನಿಧನ ಆದ ಮೇಲೆ ನಾವು ನಡೆಸಿಕೊಂಡು ಹೋಯ್ತ ಇದ್ದೀವಿ 70-80 ವರ್ಷದಿಂದnamma tandeyavara nidhana āda mēle nāvu naḍesikoṇḍu hōyta iddīvi 70-80 varṣadindaAfter my father’s death I am running it. It is famous for seventy eighty years. ಇದು Famous ದೋಸೆ ಇಡ್ಲಿ ಮಾತ್ರ ಮಾಡೋದು ಇನ್ನೇನು ಮಾಡಲ್ಲidu Famous dōse iḍli mātra māḍōdu innēnu māḍallaWe make only dosa and idli and nothing else. ಬೆಂಗಳೂರು ಮೈಸೂರು ಡೆಲ್ಲಿ ಹೊರಗಡೆ ಜನ ಎಲ್ಲಾ ಬರ್ತಾರೆ.beṅgaḷūru maisūru ḍelli horagaḍe jana ellā bartāre.People from Bangalore, Mysore etc. come here. Tourists, Foreigners ಪ್ರತಿಯೊಬ್ಬರೂ ಬರ್ತಾರೆ ತಿಂಡಿ ತಿನ್ನಾಕೆ.Tourists, Foreigners pratiyobbarū bartāre tiṇḍi tinnāke.Tourists and foreigners also come here to have snacks. ಅದೇ ನಮ್ಮ ದೋಸೆ Famous ಆಗಿ ಇದನ್ನೇ ನಾವು ಮುಂದುವರಿಸಿಕೊಂಡು ಹೋಯ್ತ ಇದ್ದೀವಿ.adē namma dōse Famous āgi idannē nāvu munduvarisikoṇḍu hōyta iddīvi.So famous is our dosa. We are continuing the same tradition and quality. ನಮ್ ತಂದೆಯರ ಹೆಸರು ಮೈಲಾರಸ್ವಾಮಿ ಅಂತnam tandeyara hesaru mailārasvāmi antaMy father’s name is Mylaraswamy. ಅದನ್ನ ಹೆಸರು ಮೈಲಾರಿ ಇಟ್ಟುಕೊಂಡು ನಾವು ವ್ಯಾಪಾರ ಮಾಡ್ತ ಇದ್ದೀವಿadanna hesaru mailāri iṭṭukoṇḍu nāvu vyāpāra māḍta iddīviIt has become Mylari. We are doing business under the same name. College Days ನಿoದ ಬರ್ತಾ ಇದ್ದೀನಿ. So, Collegeಲ್ಲಿ Friendsಜೊತೆ ಬರ್ತಾ ಇದ್ದೆ.College Days nioda bartā iddīni. So, Collegelli Friendsjote bartā idde.I am coming here since my college days. I used to come with college friends. ಈಗ ಬ್ಯಾಂಗ್ಲೂರಿಗೆ Shift ಆಗಿದ್ರಿಂದ Husbandನ ಕರ್ಕೊಂಡು ಬರ್ತ ಇದ್ದೀನಿ.īga byāṅglūrige Shift āgidrinda Husbandna karkoṇḍu barta iddīni.Now we have shifted to Bangalore. So, ಇವಿರಿಲ್ಲಿ First Time ಬರ್ತಾ ಇರೋದುSo, ivirilli First Time bartā irōduI come with my husband now. He is coming here for the first time. So, ಇವ್ರಿಗೆ ಹೇಗಿದೆ Tasteಅಂತ ತೋರ್ಸೋಕ ಕರ್ಕೊಂಡು ಬಂದೆSo, ivrige hēgide Tasteanta tōrsōka karkoṇḍu bandeI brought him here to show the taste. ನಂಗಂತೂ ಇಲ್ಲಿ ದೋಸೆ ಅಂದರೆ ಬಹಳ ಇಷ್ಟnaṅgantū illi dōse andare bahaḷa iṣṭaI like dosa here. ಸೊ ಇದು ಇವರ್ನ First Time ಇಲ್ಲಿ ಕರ್ಕೊಂಡು ಬರ್ತಾ ಇರೋದುso idu ivarna First Time illi karkoṇḍu bartā irōduI have brought him here for the first time. ನಂದು First Time, So ಮದ್ವೆ ಆದ ಮೇಲೆ Wife ಕರ್ಕೊಂಡು ಬಂದಿದ್ದಾರೆnandu First Time, So madve āda mēle Wife karkoṇḍu bandiddāreYes. I am here for the first time. So, ಚೆನ್ನಾಗಿದೆ Taste ಅದೇ Taste ಮಾಡ್ತ ಇದ್ದೀನಿ ಚೆನ್ನಾಗಿದೆ.So, cennāgide Taste adē Taste māḍta iddīni cennāgide.My wife has brought me here after marriage Taste is very good. I am enjoying it.. ಮೈಸೂರಿಗೆ ಬಂದಾಗೆಲ್ಲ ಬರ್ತೀವಿ.maisūrige bandāgella bartīvi.We come here whenever we come to Mysore. ಅ ನಾವು ಸುಮಾರು 10-12 ವರ್ಷದಿಂದ ಬರ್ತ ಇದ್ದೀವಿa nāvu sumāru 10-12 varṣadinda barta iddīviWe are coming here from the last 10 to 12 years. ಬೆಂಗಳೂರಿಂದ ಮೈಸೂರಿಗೆ ಬಂದಾಗ ಒಂದ್ಸಲ ಬಂದು ತಿಂಡಿ ತಿಂದು ಹೋಗ್ತೀವಿ.beṅgaḷūrinda maisūrige bandāga ondsala bandu tiṇḍi tindu hōgtīvi.When we come from Bangalore we come here once to taste dosa. ದೋಸೆ ತುಂಬಾ ಚೆನ್ನಾಗಿರ್ತಿತ್ತು.ಇಲ್ಲಿdōse tumbā cennāgirtittu.illiDose used to be very good here ಮೈಸೂರಿನಲ್ಲಿ ಮೈಲಾರಿ ಹೋಟೆಲ್ Traditionally ತುಂಬಾ Famousಮೊದ್ಲಿಂದಾನು.maisūrinalli mailāri hōṭel Traditionally tumbā Famousmodlindānu.Mylari hotel in Mysore is very famous from a long time. ಇಲ್ಲಿ ಎಲ್ಲರೂ ಸಾಧಾರಣ ಇಲ್ಲಿ ಬಂದು ದೋಸೆ ಮತ್ತು ಇಡ್ಲಿಯನ್ನು ತಿನ್ನುವಂತಹುದು ಸಹಜ.illi ellarū sādhāraṇa illi bandu dōse mattu iḍliyannu tinnuvantahudu sahaja.Everyone comes here to enjoy dosa and idli. ಸುಮಾರು Film Stars ಬರ್ತಾ ಇರ್ತಾರೆ ಅಂತ ನಮ್ಗು ಗೊತ್ತಿತ್ತು.sumāru Film Stars bartā irtāre anta namgu gottittu.We know that many film stars come here. ಹಾಗಾಗಿ ನಾವು ಎರಡು ಮೂರು ಸಲ ಬಂದುhāgāgi nāvu eraḍu mūru sala banduSo, we have come here two three times ಸಾಧಾರಣ ನಮ್ಮ ಮನೆಗೆ ಯಾರಾದರೂ ನೆಂಟ್ರು ಬಂದಾಗ ನಾವಿಲ್ಲಿ ಕರ್ಕೊಂಡು ಬರ್ತೇವೆ.sādhāraṇa namma manege yārādarū neṇṭru bandāga nāvilli karkoṇḍu bartēve.Whenever relatives come to our house we bring them here. ಇಲ್ಲಿಯ ಮಸಾಲೆ ದೋಸೆ ಬಾರೀ Famous.illiya masāle dōse bārī Famous.Masala dosa of this hotel is very famous. ಹಾಗೆ ತಿನ್ಲಿಕೋಸ್ಕರ ಎಲ್ಲರಿಗೂ ರುಚಿಯಾಗಿರುತ್ತೆ ಅಂತ ಹೇಳಿ ಬರ್ತೇರೆ.hāge tinlikōskara ellarigū ruciyāgirutte anta hēḷi bartēre.We tell others to come and enjoy dosa here. Idli is also too good. ಇಡ್ಲಿ ಹಾಗೇನೆ ಇಡ್ಲೀನೂ ತುಂಬಾ ಚೆನ್ನಾಗಿರುತ್ತೆ .iḍli hāgēne iḍlīnū tumbā cennāgirutte . ತುಂಬಾ Rush ಆದಾಗ ಒಂದೊಂದ್ಸಲ ಸಿಗಲ್ಲ ಅಷ್ಟು ಬಿಟ್ರೆtumbā Rush ādāga ondondsala sigalla aṣṭu biṭreWhenever more people come we don’t get it. Except that, it is very fine here. ತುಂಬಾ ಚೆನ್ನಾಗಿರುತ್ತೆ ಇಲ್ಲಿ ಅದಕ್ಕಾಗಿ ನಾವು ಬರ್ತಾ ಇರ್ತೀವೆ.tumbā cennāgirutte illi adakkāgi nāvu bartā irtīve.We keep coming here for the taste, ನಾವು Originally South Canaraದವರು ಇಲ್ಲಿ ಮೈಸೂರಲ್ಲಿ Settle ಆಗಿದ್ದೇವೆ.nāvu Originally South Canaradavaru illi maisūralli Settle āgiddēve.we are originally from South Canara. We have settled here in Mysore. ನಮ್ ಬೀಗರು ಆಗುವಂತೋರು ಚಿಕ್ಕಮಗಳೂರಿಂದ ಬಂದಿದ್ರು ನಮ್ಮ ಮನೆಗೆ.nam bīgaru āguvantōru cikkamagaḷūrinda bandidru namma manege.Our in laws are from Chikkamagaluru. They have come to our house. So, ಮೈಲಾರಿ ಹೋಟೆಲ್ ದೋಸೆ ತಿನ್‍ಬೇಕು ಅಂತ ಅವರ್ನ ಕರ್ಕೊಂಡು ಬಂದಿದ್ದೇವೆ.So, mailāri hōṭel dōse tin‍bēku anta avarna karkoṇḍu bandiddēve.So, we have brought them here for eating dosa.
Word Transliteration Meaning
ಮಾಲಿಕmālikaOwner
ಅಜ್ಜಿajjiGrand Mother
ಅವರುavaruThey
ಕಥೆkatheStory
ಮಕ್ಕಳುmakkaḷuChildren
ದೇವರುdēvaruGod
ಹರಕೆharakeBenison
ಮಗmagaSon
ಪ್ರಪಂಚprapañcaWorld
ಮೊಮ್ಮಗmommagaGrand son
ತಂದೆtandeFather
ನಿಧನnidhanaDeath
ಹೆಸರುhesaruName

Related Grammar Lessons

The Present Tense - ವರ್ತಮಾನ ಕಾಲ

The Present Tense ವರ್ತಮಾನ ಕಾಲ

ಈ ಪಾಠದಲ್ಲಿ ವರ್ತಮಾನ ಕಾಲದ ಪದಗಳು ತುಂಬಾ ಇವೆ. ಮಾತಾಡುವಾಗ ಈ ಪದಗಳು ಸಹಜವಾಗಿ ಕೆಲವು ಪ್ರಾದೇಶಿಕ ವ್ಯತ್ಯಾಸಗಳನ್ನು ತೋರಿವೆ.

ಸರಳವಾದ ವರ್ತಮಾನ ಕಾಲ ಪದಗಳಲ್ಲಿ ‘ ಇರು ‘ ಎಂಬ ಕ್ರಿಯಾ ಪದವು ಸೇರಿರುವುದನ್ನು ಗಮನಿಸಿ.

ಉದಾಹರಣೆಗೆ:

ಇರುತ್ತಾರೆಇರ್ತಾರೆ
ಬರುತ್ತಾರೆಬರ್ತಾರೆ
ಹೋಗುತ್ತಾರೆಹೋಗ್ತಾರೆ
ಇರುತ್ತದೆಇರ್ತದೆ
ಇಡುತ್ತಾರೆಇಡ್ತಾರೆ
ಹೋಗುತ್ತಿದ್ದೇವೆಹೋಯ್ತಿದ್ದೇವೆ
ಬರುತ್ತಿದೆಬರ್ತಿದೆ
ಬರುತ್ತೇವೆಬರ್ತೇವೆ

Important kinship terms

ಅಮ್ಮ/ತಾಯಿmother
ಅಪ್ಪ/ತಂದೆfather
ಅಕ್ಕelder sister
ಅಣ್ಣelder brother
ತಮ್ಮyounger brother
ತಂಗಿyounger sister
ಮಗson
ಮಗಳುdaughter
ಗಂಡ/ಪತಿhusband
ಹೆಂಡತಿ / ಸತಿwife
ಮಾವuncle/mother’s brother
ಅತ್ತೆaunt/father’s sister
ಅಳಿಯson-in-law, brother’s son to sister

ಓದಿರಿ ಮತ್ತು ಮುಖ್ಯ ಪದಗಳನ್ನು ಪಟ್ಟಿ ಮಾಡಿರಿ

ಜಾಗತೀಕರಣ ಪ್ರಕ್ರಿಯೆಯು ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುತ್ತಿದೆ. ಜಾನಪದ ವಿದ್ವಾಂಸರುಗಳು ‘ದೇಸೀ ಆಹಾರ ಪದ್ಧತಿ’ಯ ಸಂಗ್ರಹ, ಸಂರಕ್ಷಣೆ ಮತ್ತು ಅವುಗಳ ಪುನರುಜ್ಜೀವನ ಕುರಿತು ಪುಸ್ತಕಗಳನ್ನು ಬರೆಯುತ್ತಿದ್ದಾರೆ.

ಪ್ರಾಚೀನ ಭಾರತದ ಆಹಾರ ಪದ್ಧತಿಯು ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿಕೊಂಡು ಬೆಳೆದಿತ್ತು. ಬಾಯಿ ರುಚಿಯ ಜೊತೆಗೆ ಬಗೆ ಬಗೆಯ ಗಿಡಮೂಲಿಕೆಗಳ ಮತ್ತು ಮಾಂಸಗಳ ಬಳಕೆಗೆ ಅಲ್ಲಿ ಪ್ರಾಶಸ್ತ್ಯ ನೀಡಲಾಗಿತ್ತು. ಭಾರತದ ಆಹಾರ ಪದ್ಧತಿಯು ಜಾತಿಯ ಶ್ರೇಣೀಕರಣ ಮತ್ತು ಇತರ ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳೊಡನೆ ಸಂಬಂಧ ಸಾಧಿಸಿತ್ತು. ಬೇರೆ ಬೇರೆ ಜಾತಿಗಳ ದೇವರು, ದೈವಗಳು ಮತ್ತು ಸತ್ತು ಹೋದವರಿಗೆ ನೀಡುವ ಆಹಾರವೂ ಭಿನ್ನ ಭಿನ್ನವಾಗಿದೆ.

ಭಾರತದಲ್ಲಿ ಸ್ಥೂಲವಾಗಿ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಎಂಬ ಎರಡು ನಮೂನೆಗಳ ಆಹಾರ ದೊರೆಯುತ್ತದೆ. ಇಡ್ಲಿ, ದೋಸೆ, ಉತ್ತಪ್ಪ, ವಡೆ, ಚಟ್ನಿ ಸಾಂಬಾರುಗಳು ದಕ್ಷಿಣ ಭಾರತೀಯ ಎಂದು ಕರೆಯಿಸಿಕೊಂಡರೆ, ಪರಾಂಟಾ, ಚೋಲೆ ಬಟೂರೆ, ಕುಲ್ಚ, ಟಿಕ್ಕಿ, ದಹಿ ಬಲ್ಲ ಮೊದಲಾದುವುಗಳು ಉತ್ತರ ಭಾರತೀಯ ಅನ್ನಿಸಿಕೊಳ್ಳುತ್ತವೆ. ಜೊತೆಗೆ ದಕ್ಷಿಣ ಭಾರತದಲ್ಲಿ ಪೊಂಗಲ್ ತಮಿಳರದು, ಆಪ್ಪಂ ಮಲೆಯಾಳಿಗಳದು, ಹೈದರಾಬಾದ್ ಬಿರಿಯಾನಿ ಆಂಧ್ರದವರದು, ಬಿಸಿ ಬೇಳೆ ಬಾತ್ ಕರ್ನಾಟಕದವರದು. ಇದೇ ರೀತಿ ಉತ್ತರ ಭಾರತದಲ್ಲಿ, ಗುಜರಾತಿಗಳ ಡೋಕ್ಲಾ, ಬಂಗಾಳಿಗಳ ರಸಗುಲ್ಲಾ, ಪಂಜಾಬಿಗಳ ತಂದೂರಿ ರೋಟಿ ಜನಪ್ರಿಯವಾಗಿವೆ.

ಕಳೆದ ಅರ್ಧ ಶತಮಾನದಲ್ಲಿ ಭಾರತದ ಆಹಾರ ಪದ್ಧತಿ ತೀವ್ರವಾಗಿ ಬದಲಾಗಿದೆ. ವೇಗವಾಗಿ ಬದಲಾಗುತ್ತಿರುವ ಭಾರತದ ನಗರಗಳು ಅಷ್ಟೇ ವೇಗವಾಗಿ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುತ್ತಿವೆ.

Send your completed homework by email to klcjnu@gmail.com