Hotel Industry

Transcription
Transliteration
Translation
ನಮಸ್ಕಾರ, ನಾನು ಈ ಉದ್ಯಮಕ್ಕೆ ಬಂದಿದ್ದು ಒಂದು Accident ಅಂತ ಹೇಳ್ಬಹುದು.namaskāra, nānu ī udyamakke bandiddu ondu Accident anta hēḷbahudu.Namaskara. I can say that I came to this industry by accident or by chance. ಆಕಸ್ಮಾತ್ ಆಗಿ ನಾನು ಬಂದೆ. ಮೂಲತಃ ನಾನು B.E. Electronics Engineer.ākasmāt āgi nānu bande. mūlataḥ nānu B.E. Electronics Engineer.Basically, I am a BE Electronics Engineer. ನಮ್ಮ ತಂದೆಯವರದ್ದು ಒಂದು... ಸಣ್ಣದೊಂದು Hotel ಇತ್ತು.namma tandeyavaraddu ondu... saṇṇadondu Hotel ittu.My father had a small hotel. It was called Brahmins Coffee Bar in Shankarapura. ಅದು ಶಂಕರ್‍ಪುರದಲ್ಲಿ ಬ್ರಾಹ್ಮಣ್ಸ್ ಕಾಫಿ ಬಾರ್ ಅಂತ. ಬಹಳ ಚಿಕ್ಕದು.adu śaṅkar‍puradalli brāhmaṇs kāphi bār anta. bahaḷa cikkadu.It was a small hotel which can be run in a car shed. ಒಂದು ಕಾರ್ ಶೆಡ್ಡನಲ್ಲಿ ನಡೆಸುವಂತಹ ಒಂದು Hotel.ondu kār śeḍḍanalli naḍesuvantaha ondu Hotel. ಅಲ್ಲಿ ನಾವು ಮೂಲತಃ ಹುಟ್ಟಿ ಬೆಳೆದಾವಾಗಿನಿಂದ ಆ ವ್ತಾವರಣವನ್ನು ನೋಡ್ತಾ ಇದ್ವಿ.alli nāvu mūlataḥ huṭṭi beḷedāvāgininda ā vtāvaraṇavannu nōḍtā idvi.We were observing that atmosphere since out birth. ಆದರೆ ನಮ್ಮ ಪಾಡಿಗೆ ನಾವು Graduation ಮಾಡಿ,ādare namma pāḍige nāvu Graduation māḍi,But, I did graduation on my own ನಾವು ಒಂದು ಅಮೇರಿಕಾಗೆ ಉನ್ನತ ವ್ಯಾಸಂಗ ಮಾಡೋದಕ್ಕೆ ಹೋಗಬೇಕುnāvu ondu amērikāge unnata vyāsaṅga māḍōdakke hōgabēkuand liked to go to America for higher studies. ಅಂತ ನಾನು ಇಷ್ಟ ಪಟ್ಟಾವಾಗ ನನಗೆ 84ರಲ್ಲಿ Visa ಸಿಗಲಿಲ್ಲ.anta nānu iṣṭa paṭṭāvāga nanage 84ralli Visa sigalilla.I didn’t get VISA in 1984. ಸೋ ಆ ದೃಷ್ಟಿಯಲ್ಲಿ ನಾನು ಏನಾದರೂ ಒಂದು ಜೀವನ ನಿರ್ವಹಣೆಗೆ ಮಾಡಬೇಕಾಗಿತ್ತು.sō ā dṛṣṭiyalli nānu ēnādarū ondu jīvana nirvahaṇege māḍabēkāgittu.In such a situation I had to do something for livelihood. ಸರಿ ಈ ಉದ್ಯಮವನ್ನೇ ಆಯ್ಕೆ ಮಾಡ್ಕೊಂಡು, ಅದರಲ್ಲಿ ಗಾಂಧಿ ಬಜಾರ್‍ನಲ್ಲಿsari ī udyamavannē āyke māḍkoṇḍu, adaralli gāndhi bajār‍nalliI chose this industry and started a small Fast Food Stall called Adigas in Gandhi Bazaar for the first time in 1993. ಒಂದು ಪ್ರಥಮವಾಗಿ ಒಂದು ಅಡಿಗಾಸ್ ಅಂತondu prathamavāgi ondu aḍigās anta ಒಂದು ಸ್ಮಾಲ್ Fast Food Joint ನ್ನು ಶುರುಮಾಡಿದೆ. 93ರಲ್ಲಿ.ondu smāl Fast Food Joint nnu śurumāḍide. 93ralli.It became very successful in 1993. 93ರಲ್ಲಿ ಮಾಡಿದಾವಾಗ ಅದು ಬಹಳ ಯಶಸ್ವಿ ಆಯಿತು.93ralli māḍidāvāga adu bahaḷa yaśasvi āyitu.Encouraged by its success I started branches in Jayanagar and other places. ಅದರ ಯಶಸ್ಸನ್ನು ನೋಡಿಕೊಂಡು, ಹಾಗೇ ಕ್ರಮೇಣ ಜಯನಗರದಲ್ಲಿadara yaśassannu nōḍikoṇḍu, hāgē kramēṇa jayanagaradalli ಮತ್ತು ಇನ್ನಿತರ Branches ನಾನು ಮಾಡ್ತಾ ಹೋದೆ.mattu innitara Branches nānu māḍtā hōde. ಈಗ ನಮ್ಮ ಬ್ರ್ಯಾಂಚ್‍ಸ್ ಆಲ್‍ಮೋಸ್ಟ್ ಕರ್ನಾಟಕದಲ್ಲಿ ಎಲ್ಲಾ ಕಡೆ ಇದೆ.īga namma bryāñc‍s āl‍mōsṭ karnāṭakadalli ellā kaḍe ide.Now our branches are there all over Karnataka. ನಾವು ದುಬೈನಲ್ಲಿ ಕೂಡಾ ಒಂದು Branchನ್ನು ನಾವು ಮಾಡಿದ್ವಿ.nāvu dubainalli kūḍā ondu Branchnnu nāvu māḍidvi.We started a branch in Dubai. At the root of it is only one thing i.e., Passion. ಇದಕ್ಕೆ ಮೂಲ ಒಂದೇ ಒಂದು ಏನಂದ್ರೆ, ಒಂದು Fashionidakke mūla ondē ondu ēnandre, ondu Fashion ಎರಡನೇದು ನಾನು ಬದುಕಲೇ ಬೇಕಾಗಿತ್ತು. ನನಗೆ ಬೇರೆ ಯಾವ ವಿದ್ಯೆಯೂ ಗೊತ್ತಿಲ್ಲ.eraḍanēdu nānu badukalē bēkāgittu. nanage bēre yāva vidyeyū gottilla.Second point is that I had to make a living. ಅದು ಬಿಟ್ರೆ ಬೇರೆ ಇನ್ಯಾವುದೂadu biṭre bēre inyāvudūI donot know anyother field. Engineeringಲ್ಲಿ Success ಆಗತ್ತೆ ಅಂತ Guarantee ನನಗೆ ಕಾಣಲಿಲ್ಲ.Engineeringlli Success āgatte anta Guarantee nanage kāṇalilla.There was no guarantee that I will succeed in Engineering. ಸೋ, ಆ ದೃಷ್ಟಿಯಿಂದ ಇದರಲ್ಲೇ ನಾನು ಏನಾದರೂ ಒಂದು ಮಾಡಬೇಕಾಗಿತ್ತು.sō, ā dṛṣṭiyinda idarallē nānu ēnādarū ondu māḍabēkāgittu.So, I had to do something in this field itself. ಆ ದೃಷ್ಟಿಯಿಂದ ನಾನು ಬಹಳ Hardwork ಮಾಡ್ದೆ.ā dṛṣṭiyinda nānu bahaḷa Hardwork māḍde.From that viewpoint I did lot of hardwork. ಹೊರಗಡೆ ಎಲ್ಲ ಯಾವ ತರಹ, ಬೇರೆಯವರು ಯಾವ ರೀತಿ ಇದನ್ನು ಮಾಡ್ತಾ ಇದ್ದಾರೆ,horagaḍe ella yāva taraha, bēreyavaru yāva rīti idannu māḍtā iddāre,I studied how others are doing it outside. ಆ Trends ಏನಿದೆ, ಅದನ್ನೆಲ್ಲಾ ಅರ್ಥ ಮಾಡ್ಕೊಂಡು, ಅದನ್ನು ಅಳವಡಿಸ್ಕೊಂಡುā Trends ēnide, adannellā artha māḍkoṇḍu, adannu aḷavaḍiskoṇḍuI understood what are the trends and adopted them. ಒಂದು Quality ಮತ್ತೆ Hygeine, ಮತ್ತೆ Service standards,ondu Quality matte Hygeine, matte Service standards,I gave priority for quality, hygiene and service standards. ಈ ಮೂರು ಕೊಟ್ರೆ ಹೋಟೆಲ್ ಇಂಡಸ್ಟ್ರೀಗೆ ಯಾವತ್ತೂ ಬಹಳ ಒಂದು ಫ್ಯೂಚರ್ ಇದ್ದೇ ಇದೆ.ī mūru koṭre hōṭel iṇḍasṭrīge yāvattū bahaḷa ondu phyūcar iddē ide.If we can give all these three things there is a great future for hotel industry. ಯಾವತ್ತೂ Foodಗೆ Demand ಕಮ್ಮಿ ಆಗೋದಿಲ್ಲ ಅನ್ನೋದನ್ನ ಮನಗಂಡುyāvattū Foodge Demand kammi āgōdilla annōdanna managaṇḍuDemand for food never comes down. ಅದನ್ನು ಮಾಡಿದೆ. ಹೊಸ ಹೊಸ Industry standards ಏನಿದೆadannu māḍide. hosa hosa Industry standards ēnideI realized it and did it. I adopted new industry norms and standards. ಅದನ್ನೆಲ್ಲಾ ಅಳವಡಿಸ್ಕೊಂಡೆ. ಮತ್ತೆ ಇದಕ್ಕೆ ನನಗೆ ನನ್ನ Graduation ಕೂಡಾ Help ಆಯಿತು.adannellā aḷavaḍiskoṇḍe. matte idakke nanage nanna Graduation kūḍā Help āyitu.My graduation too helped me in this work. ಒಂದು ವಿಜನ್ ಇತ್ತು ಅದ್ರಲ್ಲಿ ಅದ್ರಿಂದ ನನಗೆ ಹೆಲ್ಪ್ ಆಯಿತು.ondu vijan ittu adralli adrinda nanage help āyitu.I had a vision in it. It helped me. It helped me in developing this industry. ಹಾಗಾಗಿ ಈ ಒಂದು ಉದ್ಯಮವನ್ನು ಬೆಳಸ್ಲಿಕ್ಕೆ ನನಗೆ ಬಹಳ ಸಹಕಾರಿ ಆಯಿತು.hāgāgi ī ondu udyamavannu beḷaslikke nanage bahaḷa sahakāri āyitu.I found success in it. No industry is easy to run. ಅದ್ರಲ್ಲಿ ನಾನು ಯಶಸ್ಸನ್ನು ಕಂಡೆ.adralli nānu yaśassannu kaṇḍe. ನೋಡೀ ಯಾವುದೇ ಒಂದು ಉದ್ಯಮ Easy ಆಗಿ ಯಾವುದೂ ಆಗೋದಿಲ್ಲ.nōḍī yāvudē ondu udyama Easy āgi yāvudū āgōdilla. ಪ್ರತಿಯೊಂದು ಉದ್ಯಮದಲ್ಲೂ ಅದರದ್ದೇ ಆದ ಒಂದು ಕಷ್ಟಗಳು ಇದ್ದೇ ಇರುತ್ವೆ.pratiyondu udyamadallū adaraddē āda ondu kaṣṭagaḷu iddē irutve.There are specific difficulties of its own in every industry. ಹಾಗಾಗಿ Hotel ಉದ್ಯಮದಲ್ಲೂ ಕಷ್ಟ ಇದೆ.hāgāgi Hotel udyamadallū kaṣṭa ide. ಹಾಗಾಂತ ಅಂದು ಬಿಟ್ಟು ಉದ್ಯಮ ಬೇಡ ಅಂತ ಇತ್ತೀಚಿನ ಯುವ ಪೀಳಿಗೆಗಳುhāgānta andu biṭṭu udyama bēḍa anta ittīcina yuva pīḷigegaḷu Especially ನಾನು ನೋಡಿದ ಹಾಗೆ, ನಮ್ಮ Hotel owners ಮಕ್ಕಳುಗಳೇEspecially nānu nōḍida hāge, namma Hotel owners makkaḷugaḷēIn such a case younger generation people, especially children of our owners as I have seen, are not liking it. We can say that it is unfortunate. ಇದನ್ನು ಇಷ್ಟಪಡ್ತಾ ಇಲ್ಲ.ಇದೊಂದು ದುರದೃಷ್ಟ ಅಂತ ಹೇಳ್ಬಹುದು.idannu iṣṭapaḍtā illa.idondu duradṛṣṭa anta hēḷbahudu. actual ಆಗಿ Foreign Company ಗಳು ಬಹಳಷ್ಟು ಇಲ್ಲಿ ಬಂದುactual āgi Foreign Company gaḷu bahaḷaṣṭu illi banduActually foreign companies are coming here to Food joints ನ Open ಮಾಡಿ, ಅವರ ಒಂದು Food ನ್ನು ಇಲ್ಲಿ ನಮಗೆ ಪರಿಚಯಸಿ,Food joints na Open māḍi, avara ondu Food nnu illi namage paricayasi,open their food points to introduce their food to us. ಅದ್ರಲ್ಲಿ ನಮ್ಮ ದೇಶದಿಂದ ಸಿಕ್ಕಾಪಟ್ಟೆ ಹಣವನ್ನು ಮಾಡಿಕೊಂಡು ಹೋಗ್ತಾ ಇದ್ದಾರೆ.adralli namma dēśadinda sikkāpaṭṭe haṇavannu māḍikoṇḍu hōgtā iddāre.They are making huge money from our country. ಆದ್ರೆ ನಮ್ಮ ಒಂದು Indian Food ಏನಿದೆ ಇದಕ್ಕೆ Beat ಮಾಡೋಕ್ಕೆ ಆಗಲ್ಲ.ādre namma ondu Indian Food ēnide idakke Beat māḍōkke āgalla.But, it is difficult to beat our Indian food. ಇಷ್ಟು Varieties! ಒಂದು ಸಾವಿರಾರು Varieties food ಇದೆ.iṣṭu Varieties! ondu sāvirāru Varieties food ide.So many varieties! Thousands of varieties of food are there. ಅದನ್ನು ನಾವು ನ್ಯೂಟ್ರೀಶಿಯಸ್ಸು, ಹೆಲ್ದೀ ಮತ್ತೆ ಅದು ಒಂದು ಬಹಳ ರುಚಿಕರವಾದ ಫುಡ್.adannu nāvu nyūṭrīśiyassu, heldī matte adu ondu bahaḷa rucikaravāda phuḍ.It is nutritious, healthy and tasty. ಒಂದು ಮಸಾಲೆ ದೋಸೆ, ಒಂದು ಇಡ್ಲಿ ಸಾಕು,ondu masāle dōse, ondu iḍli sāku,One Idly and one masala dosa are enough for breakfast. ಇಡ್ಲಿ ಕೂಡಾ ಇವತ್ತು ಎಷ್ಟು Healthy food ಅಂತ,iḍli kūḍā ivattu eṣṭu Healthy food anta,Idli is very healthy food. It is approved by World Health OrganisationIt is approved by World Health OrganisationIt has been approved by World Health Organization. ಇಂತಹ ಒಂದು Background ಇರುವಂತಹ ನಮ್ಮ ಒಂದು ಸಂಸ್ಕøತಿನಲ್ಲಿintaha ondu Background iruvantaha namma ondu saṁskaøtinalliWith such a background in our culture ಈ Food ನಾವು ಚೆನ್ನಾಗಿ ಪ್ರಚುರಪಡಿಸಬೇಕು.ī Food nāvu cennāgi pracurapaḍisabēku.we should popularize this food. ಈ ಫುಡ್ ಬಹುಶಃ ಪ್ರಪಂಚದಲ್ಲಿ ಎಲ್ಲಾ ಜನಕ್ಕೂ ಸಿಗುವ ಹಾಂಗೆ ಆಗಬೇಕು.ī phuḍ bahuśaḥ prapañcadalli ellā janakkū siguva hāṅge āgabēku.This food should be made available to all people in the world. ಈ ನಿಟ್ಟಿನಲ್ಲಿ ನಮ್ಮ Governmentಗಳು support ಮಾಡ್ಬೇಕು.ī niṭṭinalli namma Governmentgaḷu support māḍbēku.In this regard, our governments should help. ಇದಕ್ಕೆ ಸಾಕಷ್ಟು ಚಾಲೆಂಜÉಸ್ ಇದೆ. ಸಮಸ್ಯೆ ಅಂತ ನಾನು ಹೇಳೋಲ್ಲ,idakke sākaṣṭu cāleñjaÉs ide. samasye anta nānu hēḷōlla,There are enough challenges to it. I don’t say that they are problems. It Should be taken as a Challenge, ಈ Younsters ಏನಿದ್ದಾರೆ ಇವತ್ತು.It Should be taken as a Challenge, ī Younsters ēniddāre ivattu.It should be taken as a challenge. ಇದನ್ನು ನಮ್ಮ ಒಂದು ಫುಡ್ ಅದನ್ನು ಪ್ರಚುರ ಪಡಿಸೋದಕ್ಕೆidannu namma ondu phuḍ adannu pracura paḍisōdakkeOur youngsters should adopt Marketing techniques ಆಗಿರಬಹುದು ಅಥವಾ ಅದ್ರಲ್ಲಿ ಒಂದು ವಿದ್ಯೆ.Marketing techniques āgirabahudu athavā adralli ondu vidye.marketing techniques to popularize our food. ಯಾವುದೇ ಒಂದಕ್ಕೂ, ಒಂದು ಅನುಭವ ಬೇಕು.yāvudē ondakkū, ondu anubhava bēku.Everything requires experience. ಆ ಒಂದು ನಿಟ್ಟಿನಲ್ಲಿ ಅನುಭವ ತಗೊಂಡು,ā ondu niṭṭinalli anubhava tagoṇḍu,After acquiring experience ಅದನ್ನ ಹೊಸ ಹೊಸ ಒಂದು ಇವತ್ತು Management Cunsultants ಇದ್ದಾರೆ,adanna hosa hosa ondu ivattu Management Cunsultants iddāre,one should take the assistance of ಆಮೇಲೆ Architects ಇದ್ದಾರೆ. . . ಇವ್ರನ್ನೆಲ್ಲಾ ಜೊತೆ ಮಾಡ್ಕೊಂಡುāmēle Architects iddāre. . . ivrannellā jote māḍkoṇḍumanagement consultants and architect ಅದಕ್ಕೆ ಬೇಕಾದ Marketing survey ಮಾಡಿ,adakke bēkāda Marketing survey māḍi,s to survey the market to know ಒಂದು ಜಾಗದಲ್ಲಿ ಇದು ನಡೆಯುತ್ತಾ ಇಲ್ವಾ ಅಂತ ಸರ್ವೇ ಮಾಡ್ಕೊಂಡು,ondu jāgadalli idu naḍeyuttā ilvā anta sarvē māḍkoṇḍu,whether this venture works out or not in this area. ಆ ಒಂದು ಹೊಸ ಹೊಸ Menu...ಯಾವುದು ಇಷ್ಟ ಆಗತ್ತೆ ಅಂತ . .. ಒಂದುā ondu hosa hosa Menu...yāvudu iṣṭa āgatte anta . .. onduWith a new menu to know whether people like it or not ಅದನ್ನು ತಿಳ್ಕೊಂಡು ಮಾಡಿದ್ದೇ ಆದರೆ, ಖಂಡಿತ ಯಶಸ್ವಿ ಆಗುತ್ತೆ.adannu tiḷkoṇḍu māḍiddē ādare, khaṇḍita yaśasvi āgutte.if one goes forward, definitely it will be a success. ಆದರೆ ಇನ್ನು ಒಂದು ಇವತ್ತು City ಬೆಳವಣಿಗೆಯಲ್ಲಿ ಬಹಳ Real Estate ದುಬಾರಿ ಆಗಿದೆ.ādare innu ondu ivattu City beḷavaṇigeyalli bahaḷa Real Estate dubāri āgide.In today’s cities real estate prices have gone up ಮತ್ತು Water charges, Current charges ತುಂಬಾ ದುಬಾರಿ ಇದೆ.mattu Water charges, Current charges tumbā dubāri ide.and water charges, electricity charges are very expensive. Labour problem ಇದೆ. Labour getting a Skilled Labour ಸಿಗ್ತಾ ಇಲ್ಲ.Labour problem ide. Labour getting a Skilled Labour sigtā illa.Cost of labour is very high. Skilled labour are not available. ಈ ನಿಟ್ಟಿನಲ್ಲಿ ಸರ್ಕಾರದವರು ಇದನ್ನೇಲ್ಲಾ ಸಹಾಯಕ್ಕೆ ಬಂದರೆ,ī niṭṭinalli sarkāradavaru idannēllā sahāyakke bandare,In this regard, if the government comes forward to help ಈಗ Example ಒಂದು ಹೋಟೆಲ್ ಮಾಡ್ಲಿಕ್ಕೆ ಒಂದು subsidy ಕೊಡುವಂತಾದ್ದು,īga Example ondu hōṭel māḍlikke ondu subsidy koḍuvantāddu,such as giving subsidy to start a hotel, ಅಥವಾ ಒಂದು ಜಾಗವನ್ನು Concission rate ನಲ್ಲಿ ಕೊಡುವಂತಾದ್ದುathavā ondu jāgavannu Concission rate nalli koḍuvantāddugiving premises on concessional rates ಅಥವಾ ಒಂದು Training institure open ಮಾಡಿathavā ondu Training institure open māḍior opening a training institute to provide skilled trained staff, Skilled trainig Staff ನ್ನು ಕೊಡುವಂತಾದ್ದು. ಈ ತರಹದಲ್ಲಿ ಮಾಡಿದ್ರೆ,Skilled trainig Staff nnu koḍuvantāddu. ī tarahadalli māḍidre, ಈ Industry ಕೂಡಾ ಬೆಳೀತದೆ. ಮತ್ತೆ ಇದ್ರಿಂದ ಸರಕಾರಕ್ಕೆ Revenue ಬರ್ತದೆ.ī Industry kūḍā beḷītade. matte idrinda sarakārakke Revenue bartade.hotel industry will become attractive and will continue. In return, the government will get revenue. ಈ ನಮ್ಮ ಉಡುಪಿ ಹೋಟೆಲುಗಳು. ಎಲ್ಲಾ Forign ನಲ್ಲಿ ಎಲ್ಲಾ ಹೋಗಬೇಕುī namma uḍupi hōṭelugaḷu. ellā Forign nalli ellā hōgabēkuI am of the opinion that our udupi hotels should go abroad. ಅಂತ ನಾನು ಹೇಳೋದು. ಅದು ಇದೆ. ಆದ್ರೆ ಅಂತಹ ಸಂಖ್ಯೆಯಲ್ಲಿ ಇಲ್ಲ.anta nānu hēḷōdu. adu ide. ādre antaha saṅkhyeyalli illa.Very few hotels are there outside. ಬೇರೆ ಬ್ರ್ಯಾಂಚಸ್, ಇವತ್ತು KFC ಆಗಿರಬಹುದು, McDonalds ನವರ.bēre bryāñcas, ivattu KFC āgirabahudu, McDonalds navara.So many branches of KFC, MCDonald are there in India today. ಸಂಖ್ಯೆ ಎಷ್ಟಿದೆ. ನಮ್ಮ ದೇಶದಲ್ಲಿ.. ಇದರಲ್ಲಿ ಒಂದು 100 ಕೂಡಾ ನಮ್ಮ ಸಂಖ್ಯೆಗಳು ಹೊರಗಡೆ ಇಲ್ಲ.saṅkhye eṣṭide. namma dēśadalli.. idaralli ondu 100 kūḍā namma saṅkhyegaḷu horagaḍe illa.Compared to this not even 1% of our hotels is there outside. ಅದು ಆಗಬೇಕು. ಆ ದೃಷ್ಟಿಯಲ್ಲಿ ಅದ್ರಿಂದ ನಮಗೆ Forign Exchange ಕೂಡಾ ಬರ್ತದೆ.adu āgabēku. ā dṛṣṭiyalli adrinda namage Forign Exchange kūḍā bartade.We will get foreign revenue from this. ಈ ದೃಷ್ಟಿಯಲ್ಲಿ ಯಾವ ಪೀಳಿಗೆಗಳು ಇದು ಕಷ್ಟ ಈ ಉದ್ಯಮ ಇದು ಇಲ್ಲಾ ಅಂತ ಹೇಳಿ ಬಿಡಬಾರದು.ī dṛṣṭiyalli yāva pīḷigegaḷu idu kaṣṭa ī udyama idu illā anta hēḷi biḍabāradu.Younger generation should not give it up saying that it is a risky industry. ಅದನ್ನು ಮುಂದುವರಿಸ್ಕೊಂಡು ನಮ್ಮ ಸಂಸ್ಕøತಿ, ನಮ್ಮ Food, ಇದಕ್ಕೊಂದು ಗೌರವ ಸಿಗೋ ತರಹ.adannu munduvariskoṇḍu namma saṁskaøti, namma Food, idakkondu gaurava sigō taraha.They should continue it to get respect for our food and our culture. ಈ ನಿಟ್ಟಿನಲ್ಲಿ ನಾನು ಒಂದು ಮಾತು ಹೇಳೋದಕ್ಕೆ ಇಷ್ಟ ಪಡ್ತೀನಿ.ī niṭṭinalli nānu ondu mātu hēḷōdakke iṣṭa paḍtīni.I would like to say a word here. ನಮ್ಮ MTR ಅಥವಾ ನಮ್ಮ ಮಯ್ಯ Group, ಇವರು ಅದನ್ನು ಬಹಳ ಒಂದು....namma MTR athavā namma mayya Group, ivaru adannu bahaḷa ondu....Our MTR and Mayya group brought good name to our south Indian food. South Indian Foodಗೆ ಒಳ್ಳೆ ಬೆಲೆ ಬರುವ ಹಾಗೆ ಮಾಡಿದ್ರು.South Indian Foodge oḷḷe bele baruva hāge māḍidru.There is a reason for that. ಅದಕ್ಕೆ ಕಾರಣಾನು ಇದೆ. ಸೌತ್ ಇಂಡಿಯನ್ ಫುಡ್ ಬಹಳ Short livedadakke kāraṇānu ide. saut iṇḍiyan phuḍ bahaḷa Short livedSouth Indian food is short lived. ಅದು ಜಾಸ್ತಿ ಹೊತ್ತು ಉಳಿಯಲ್ಲ. ಹಳಸಿ ಹೋಗಿ ಬಿಡುತ್ತೆ ಬೇಗ.adu jāsti hottu uḷiyalla. haḷasi hōgi biḍutte bēga.It doesnot stay for a longertime. ಆದರೆ ಅದನ್ನು ಅವರು ತಿಂಗಳುಗಟ್ಲೆ Shelf Life ನಲ್ಲಿ ಉಳಿಯುವಂತಹ,ādare adannu avaru tiṅgaḷugaṭle Shelf Life nalli uḷiyuvantaha,It becomes stale. But, they innovated new technology for months together shelflife and ಹೊಸ ಟೆಕ್ನಾಲಜಿ ಕಂಡು ಹಿಡಿದುhosa ṭeknālaji kaṇḍu hiḍidu ಇವತ್ತು ಪ್ರಪಂಚದಲ್ಲಿ ಎಲ್ಲಾ ಕಡೆ ಹೋಗೋದಕ್ಕೆ ಅದು ಅನುಕೂಲ ಆಗಿದೆ.ivattu prapañcadalli ellā kaḍe hōgōdakke adu anukūla āgide.it has enabled it to go to all parts of the world. ಮತ್ತೆ ಅದ್ರಿಂದ touristsಗಳಿಗೆ travellersಗಳಿಗೆ ಬಹಳ ಅನುಕೂಲ ಆಗಿದೆ.matte adrinda touristsgaḷige travellersgaḷige bahaḷa anukūla āgide.It is helpful to tourists and travelers. Especially vegetarians ಗಂತೂ it is a heaven . ಭಾಳ ಸಂತೋಷ.Especially vegetarians gantū it is a heaven . bhāḷa santōṣa.Especially for vegetarians it is a boon. ಈ ದೃಷ್ಟಿಯಲ್ಲಿ ಯಾವ ಪೀಳಿಗೆಯವರ ಈ ಒಂದು ಉದ್ಯಮವನ್ನು ಇದಕ್ಕೆ ಬಹಳ ಒಳ್ಳೆಯ ಭವಿಷ್ಯ ಇದೆ.ī dṛṣṭiyalli yāva pīḷigeyavara ī ondu udyamavannu idakke bahaḷa oḷḷeya bhaviṣya ide.In this regard, there is a good future for younger generation in food industry. ಇದು ಬಹಳ ಕಷ್ಟ ಅನ್ನುವ ಭಾವನೆ ಬೇಡ. ಕಷ್ಟ ಎಲ್ಲದ್ರಲ್ಲೂ ಇದ್ದೇ ಇದೆ.idu bahaḷa kaṣṭa annuva bhāvane bēḍa. kaṣṭa elladrallū iddē ide.They should not think that it is difficult. ಆದರೆ ಅದಕ್ಕೆ ಪರಿಹಾರ ಇದೆ. ನಾವು Hardwork ಮಾಡಿದ್ರೆādare adakke parihāra ide. nāvu Hardwork māḍidreEvery business is risky. But there is a solution to it. ಅದಕ್ಕೆ ಖಂಡಿತಾ ಒಂದು ಉತ್ತಮ Returns ಇದೆ ಅಂತ ಈ ಸಂದರ್ಭದಲ್ಲಿ ನಾನು ಭರವಸೆ ಕೊಡ್ತೀನಿ.adakke khaṇḍitā ondu uttama Returns ide anta ī sandarbhadalli nānu bharavase koḍtīni.I assure you that there will be good returns for our hardwork
Word Transliteration Meaning
ನಮಸ್ಕಾರnamaskāraHello
ನಾನುnānuI
ಉದ್ಯಮudyamaIndustry
ಮೂಲತಃmūlataḥBasically
ಸಣ್ಣsaṇṇaSmall
ನಿರ್ವಹಣೆnirvahaṇeMaintainance
ಬಹಳbahaḷaA Lot
ಯಶಸ್ವಿyaśasviSuccess
ವಿದ್ಯೆvidyeEducation
ದೃಷ್ಟಿdṛṣṭiView / Sight
ಹೊಸhosaNew
ಸಹಕಾರಿsahakāriHelpful
ಪ್ರಚುರಪಡಿಸಬೇಕುpracurapaḍisabēkuPromote
ಸಂಖ್ಯೆsaṅkhyeNumber
ಪೀಳಿಗೆpīḷigeGeneration
ಕಷ್ಟkaṣṭaHardship
ಪರಿಹಾರparihāraSolution
ಭರವಸೆbharavaseAssurance

Usage of English in Kannada

According to 2011 census, the total population of Karnataka is 63 million. Most of them speaks more than one language. Kannada is the official language of the state of Karnataka. However, in urban area, people who work in film industry, television, and in private sector mixes English while speaking in Kannada. Even in state administration, one could see many circulars in English.

Please note how English is replacing Kannada in above Video.

1. ನಾನು ಈ ಉದ್ಯಮಕ್ಕೆ ಬಂದಿದ್ದು ಒಂದು Accident ಅಂತ ಹೇಳ್ಬಹುದು.
2. ಮೂಲತಃ ನಾನು ಬಿ.ಇ. ಇಲೆಕ್ಟ್ರಾನಿಕ್ಸ್ ಇಂಜಿನಿಯರ್.
3. ಅದು ಶಂಕರ್‍ಪುರದಲ್ಲಿ ಬ್ರಾಹ್ಮಣ್ಸ್ ಕಾಫಿ ಬಾರ್ ಅಂತ.
4. ಒಂದು ಕಾರ್ ಶೆಡ್ಡನಲ್ಲಿ
5. ನಾವು Graduation ಮಾಡಿ
6. ಒಂದು ಅಡಿಗಾಸ್ ಅಂತ
7. ಒಂದು ಸ್ಮಾಲ್ Fast Food Joint ನ್ನು
8. ಇನ್ನಿತರ ಬ್ರ್ಯಾಂಚಸ್‍ನ್ನು
9. ಈಗ ನಮ್ಮ ಬ್ರ್ಯಾಂಚ್‍ಸ್ ಆಲ್‍ಮೋಸ್ಟ್ ಕರ್ನಾಟಕದಲ್ಲಿ ಎಲ್ಲಾ ಕಡೆ ಇದೆ.
10. ನಾವು ದುಬೈನಲ್ಲಿ ಕೂಡಾ ಒಂದು ಬ್ರ್ಯಾಂಚನ್ನು
11. ಒಂದು Fashion
12. ಇಂಜಿನಿಯರಿಂಗ್‍ನಲ್ಲಿ ಸಕ್ಸೆಸ್ ಆಗತ್ತೆ ಅಂತ ಗ್ಯಾರಂಟಿ ನನಗೆ ಕಾಣಲಿಲ್ಲ.
13. ಸೋ, ಆ ದೃಷ್ಟಿಯಿಂದ ಇದರಲ್ಲೇ ನಾನು ಏನಾದರೂ
14. ಬಹಳ ಹಾರ್ಡ್ ವರ್ಕ್ ಮಾಡ್ದೆ.
15. ಒಂದು ಕ್ವಾಲಿಟಿ ಮತ್ತೆ ಹೈಜೀನ್, ಮತ್ತೆ ಸರ್ವಿಸ್ ಸ್ಟ್ಯಾಂಡಡ್ರ್ಸ್,
16. ಹೋಟೆಲ್ ಇಂಡಸ್ಟ್ರೀಗೆ ಯಾವತ್ತೂ ಬಹಳ ಒಂದು ಫ್ಯೂಚರ್ ಇದ್ದೇ ಇದೆ.
17. ಯಾವತ್ತೂ ಫುಡ್‍ಗೆ ಡಿಮಾಂಡ್ ಕಮ್ಮಿ ಆಗೋದಿಲ್ಲ
18. ಹೊಸ ಹೊಸ ಇಂಡಸ್ಟ್ರಿ ಸ್ಟ್ಯಾಂಡಡ್ರ್ಸ್ ಏನಿದೆ
19. ನನ್ನ Graduation ಕೂಡಾ ಹೆಲ್ಪ್ ಆಯಿತು.
20. ಒಂದು ವಿಜನ್ ಇತ್ತು
21. ಅದ್ರಲ್ಲಿ ಅದ್ರಿಂದ ನನಗೆ ಹೆಲ್ಪ್ ಆಯಿತು.
22. ಇತ್ತೀಚಿನ ಯುವ ಪೀಳಿಗೆಗಳು especially ನಾನು ನೋಡಿದ ಹಾಗೆ,
23. ನಮ್ಮ ಹೋಟೆಲ್ ಓನರ್ಸ್ ಮಕ್ಕಳುಗಳೇ
24. Actual ಆಗಿ Foreign Company ಗಳು ಬಹಳಷ್ಟು ಇಲ್ಲಿ ಬಂದು
25. Open ಮಾಡಿ,
26. ಒಂದು Food ನ್ನು ಇಲ್ಲಿ
27. ಇಂಡಿಯನ್ ಫುಡ್ ಏನಿದೆ ಇದಕ್ಕೆ ಬೀಟ್ ಮಾಡೋಕ್ಕೆ ಆಗಲ್ಲ.
28. ಇಷ್ಟು ವೆರಾಯಿಟೀಸ್!
29. ಒಂದು ಸಾವಿರಾರು ವೆರಾಯಿಟೀಸ್ ಫುಡ್ ಇದೆ.
30. ಅದನ್ನು ನಾವು ನ್ಯೂಟ್ರೀಶಿಯಸ್ಸು, ಹೆಲ್ದೀ ಮತ್ತೆ ಅದು ಒಂದು ಬಹಳ ರುಚಿಕರವಾದ ಫುಡ್.
31. ಒಂದು ಬ್ಯಾಕ್‍ಗ್ರೌಂಡ್ ಇರುವಂತಹ ನಮ್ಮ ಒಂದು ಸಂಸ್ಕøತಿನಲ್ಲಿ
32. ನಮ್ಮ Government ಗಳು ಸಪೋರ್ಟ್ ಮಾಡ್ಬೇಕು.
33. ಇದಕ್ಕೆ ಸಾಕಷ್ಟು ಚಾಲೆಂಜÉಸ್ ಇದೆ.
34. ಈ ಯಂಗಸ್ಟರ್ಸ್ ಏನಿದ್ದಾರೆ
35. ಪ್ರಚುರ ಪಡಿಸೋದಕ್ಕೆMarketing techniques ಆಗಿರಬಹುದು
36. ಹೊಸ ಒಂದು ಇವತ್ತು Management Consultants ಇದ್ದಾರೆ,
37. ಆಮೇಲೆ Architects ಇದ್ದಾರೆ.
38. ಇವತ್ತು ಸಿಟಿ ಬೆಳವಣಿಗೆಯಲ್ಲಿ
39. ರಿಯಲ್ ಎಸ್ಟೇಟ್ ದುಬಾರಿ ಆಗಿದೆ.
40. ಮತ್ತು ವಾಟರ್ ಚಾರ್ಜಸ್, ಕರೆಂಟ್ ಚಾರ್ಜಸ್ ತುಂಬಾ ದುಬಾರಿ ಇದೆ.
41. ಲೇಬರ್ ಪ್ರಾಬ್ಲಮ್ ಇದೆ.
42. ಈಗ Example ಒಂದು ಹೋಟೆಲ್ ಮಾಡ್ಲಿಕ್ಕೆ ಒಂದು ಸಬ್ಸಿಡಿ ಕೊಡುವಂತಾದ್ದು,
43. ಒಂದು ಜಾಗವನ್ನು Concession rate ನಲ್ಲಿ ಕೊಡುವಂತಾದ್ದು
44. ಒಂದು ಟ್ರೈನಿಂಗ್ ಇನ್ಸಿಟ್ಯೂಟ್ಸ್‍ನ್ನು ಓಪನ್ ಮಾಡಿ
45. Skilled trainig Staff ನ್ನು ಕೊಡುವಂತಾದ್ದು.
46. ಎಲ್ಲಾ Foreign ನಲ್ಲಿ
47. ನಮಗೆ Forign Exchange ಕೂಡಾ ಬರ್ತದೆ.
48. ಸೌತ್ ಇಂಡಿಯನ್ ಫುಡ್‍ಗೆ ಒಳ್ಳೆ ಬೆಲೆ ಬರುವ ಹಾಗೆ
49. ಸೌತ್ ಇಂಡಿಯನ್ ಫುಡ್ ಬಹಳ Short lived
50. ಹೊಸ ಟೆಕ್ನಾಲಜಿ ಕಂಡು ಹಿಡಿದು
51. ಟೂರಿಸ್ಟ್‍ಗಳಿಗೆ ಟ್ರಾವೆಲರ್ಸ್‍ಗಳಿಗೆ
52. Especially vegetarians ಗಂತೂ it is a heaven
53. ನಾವು ಹಾರ್ಡ್ ವರ್ಕ್ ಮಾಡಿದ್ರೆಅದಕ್ಕೆ ಖಂಡಿತಾ ಒಂದು ಉತ್ತಮ ರಿಟನ್ರ್ಸ್ ಇದೆ.

1. Translate into English

ಕರ್ನಾಟಕ ಒಂದು ಸುಂದರ ರಾಜ್ಯ. ಇದು ಬರೀ ತನ್ನ ಐತಿಹಾಸಿಕ ಜಾಗಗಳಿಗೆ ಮಾತ್ರ ಪ್ರಸಿದ್ಧಿ ಅಲ್ಲ ತನ್ನ ಸಾಂಪ್ರದಾಯಿಕ ಊಟ ತಿಂಡಿಗೂ ಕೂಡ ತುಂಬಾ ಹೆಸರು ಮಾಡಿದೆ. ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕ ಎರಡು ಸಹ ತಮ್ಮದೇ ಛಾಪು ಮೂಡಿಸಿದೆ.  ಒಂದೊಂದು ಜಿಲ್ಲೆಯಲ್ಲೂ ಈ ತರಹದ ಒಂದೊಂದು ಸಾಂಪ್ರದಾಯಿಕ ಹಾಗೂ ಹೆಸರಾಂತ ಅಡಿಗೆಯು ನಮಗೆ ಕಾಣ ಸಿಗುತ್ತದೆ.

2. ಓದಿರಿ:

ನೀರ್ ದೋಸೆ:

ಅಬ್ಭಾ ಏನ್ ರುಚಿ! ಅದಕ್ಕೆ ಸಸ್ಯಾಹಾರಿಗಳು ಚಟ್ನೀ ಜೊತೆ ತಿಂತಾರೆ, ಮೀನು ಪ್ರಿಯರು ಅದಕ್ಕೆ ಮೀನು ಬೇಕು ಅಂತಾರೆ. ಕರಾವಳಿ ಕಡೆ ಜನಪ್ರಿಯವಾಗಿದ್ದ ಈ ತಿಂಡಿ ಇದೀಗ ಎಲ್ಲೆಡೆ ಸಿಗುತ್ತದೆ! ಇದಂತೂ ಎಷ್ಟು ತಿಂದ್ರು ತಿಂತಾನೆ ಇರ್ಬೇಕು ಅನ್ನೋ ಅಷ್ಟು ಚೆನ್ನಾಗಿದೆ! ಒಂದ್ ಎರಡು ದೋಸೆ ಯಾವ್ ಮೂಲೆಗೂ ಸಾಕಾಗಲ್ಲ! ಇದರ ಗಮ್ಮತ್ತೇ ಅಂತಹುದು!

ಜೋಳದ ರೊಟ್ಟಿ:

ಉತ್ತರ ಕರ್ನಾಟಕದಲ್ಲಿ ಜೋಳದ ಪದಾರ್ಥ ಇಲ್ಲದೆ ಊಟ ತಿಂಡಿ ಪೂರ್ಣ ಆಗೋದೇ ಇಲ್ಲ ಅವರು ತರಾವರಿ ರೊಟ್ಟಿ ಮಾಡ್ತಾರೆ. ಅದರಲ್ಲಿ ಬಾಯಿ ನೀರ್ ಬಾರೋ ಹಾಗೆ ಮಾಡ್ಸೋದು ಜೋಳದ ರೊಟ್ಟಿ ಹಾಗೂ ಬದನೆಕಾಯಿ ಎಣ್ಣೆಗಾಯಿ.

ಅಕ್ಕಿ ಮತ್ತು ರಾಗಿ:

ಕರ್ನಾಟಕದ ದಕ್ಷಿಣ ಭಾಗದಲ್ಲಿ ಜನ ಜಾಸ್ತಿ ಬಳಸೋದು ಅಕ್ಕಿ ಮತ್ತು ರಾಗಿ! ಇಲ್ಲಿ ಜನ ಸಾಮಾನ್ಯವಾಗಿ 3 ಹೊತ್ತು ಬೇಕಾದ್ರೂ ಅನ್ನ ತಿಂತಾರೆ. ಇವರ ಜಾಸ್ತಿ ಪ್ರಾಮುಖ್ಯತೆ ಅನ್ನ ಹಾಗೂ ರಾಗಿ ಇಂದ ಮಾಡಿದ ತಿಂಡಿಗಳು ಅಂತಹದ್ದರಲ್ಲಿ ಒಂದು ರಾಗಿ ರೊಟ್ಟಿ! ರಾಗಿ ಮುದ್ದೆಯಂತೂ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಇತರೆ ದಕ್ಷಿಣ ಭಾಗದಲ್ಲಿ ಸರ್ವೇ ಸಾಮಾನ್ಯ.

ಬಿಸಿಬೇಳೆ ಬಾತ್:

ಬಿಸಿಬೇಳೆ ಬಾತ್ ಆಗಿನ ಕಾಲದ ಸಾಂಪ್ರಾದಾಯಿಕ ಅಡಿಗೆ. ಇದು ತಿಂಡಿಗಳ ರಾಜ ಅಂತಾನೆ ಹೇಳಬಹುದು. ಇದು ಎಲ್ಲರ ಅಚ್ಚು ಮೆಚ್ಚಿನ ತಿಂಡಿ. ಬಿಸಿಬೇಳೆ ಬಾತ್ ನೊಂದಿಗೆ ಮೊಸರನ್ನ ಕೂಡ ಒಳ್ಳೆ ಕಾಂಬಿನೇಶನ್.

ಮೈಸೂರು ಮಸಾಲಾ ದೋಸೆ:

ಮೈಸೂರು ಮಸಾಲಾ ದೋಸೆ ಅಂದ್ರೆ ಕರ್ನಾಟಕದಲ್ಲಿ ಎಲ್ಲ ಕಡೆ ಪ್ರಸಿದ್ಧ. ಇದರ ರುಚಿಯೋ ರುಚಿ.

ಬಾಳೆ ಎಲೆ ಊಟ:

ಕರ್ನಾಟಕದಲ್ಲಿ ಬಾಳೆ ಎಳೆಯ ಮೇಲೆ ಊಟವನ್ನು ಬಡಿಸುತ್ತಾರೆ. ಉಪ್ಪು, ಉಪ್ಪಿನ ಕಾಯಿ, ಕೋಸಂಬರಿ, 2-3 ತರಕಾರಿ ಪಲ್ಯಗಳು, ಒಬ್ಬಟ್ಟು, ಖೀರು, ಚಿತ್ರಾನ್ನ, ಅನ್ನ, ಸಾಂಬಾರು, ರಸಂ ಹಾಗೂ ಮೊಸರು. ಇಷ್ಟು ಸಾಮಾನ್ಯವಾಗಿ ಒಂದು ಸಮಾರಂಭಗಳಲ್ಲಿ ನಾವು ತಿನ್ನಬಹುದು. ಯಾವುದೇ ಶುಭ ಸಂದರ್ಭಗಳಲ್ಲಿ ಬಾಳೆ ಎಲೆಯ ಊಟವೇ ಶ್ರೇಷ್ಟ ಎಂದು ಜನರು ಹೇಳುತ್ತಾರೆ.

3. ನಿಮ್ಮ ಇಷ್ಟದ ತಿಂಡಿಯ ಕುರಿತು ಒಂದು ಪ್ರಬಂಧ ಬರೆಯಿರಿ

Send your completed homework by email to klcjnu@gmail.com