Hampi

Transcription
Transliteration
Translation
ಹಂಪಿ ಈ ಹೆಸರನ್ನು ಕೇಳಿದ ತಕ್ಷಣ, ಎಲ್ಲರಿಗೂ ನೆನಪಾಗುವುದು, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ.hampi ī hesarannu kēḷida takṣaṇa, ellarigū nenapāguvudu, karnāṭakada baḷḷāri jilleya hosapēṭe tālūkinalliruva ondu puṭṭa grāma.As soon as we hear the name Hampi, we remember the small village in Hospet taluk, Bellary district of Karnataka. ಹಂಪಿ, ಇದು ವಿಶ್ವ ಪರಂಪರಾ ತಾಣ.hampi, idu viśva paramparā tāṇa.Hampi. This is a world heritage site. ಹಂಪಿಯು ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವಂತಹ ಒಂದು ಪುಟ್ಟ ಗ್ರಾಮವಾಗಿದ್ದು,hampiyu tuṅgabhadrā nadiya baladaṇḍeya mēliruvantaha ondu puṭṭa grāmavāgiddu,Hampi is a small village today located on the right bank of Thungabhadra river. ಇಲ್ಲಿ ನಮಗೆ ಪ್ರಾಚೀನ ಕಾಲದಿಂದ ಅಂದರೆ, ಪ್ರಾಗಿತಿಹಾಸಕಾಲದಿಂದ ಹಿಡಿದು,illi namage prācīna kāladinda andare, prāgitihāsakāladinda hiḍidu, ಆಧುನಿಕ ಕಾಲದವರಗೆ ಸತತವಾಗಿ ಜನವಸತಿ ಇದ್ದಂತಹ ನೆಲೆಯನ್ನು ನಾವು ಇಲ್ಲಿ ಕಾಣಬಹುದು.ādhunika kāladavarage satatavāgi janavasati iddantaha neleyannu nāvu illi kāṇabahudu.We can see here the settlements form pre-historic times to modern times. ಪ್ರಾಗಿತಿಹಾಸ ಕಾಲದ ನಂತರ ಅಂದರೆ, ನಮಗೆ ಚಾರಿತ್ರಿಕ ಕಾಲ, ಅಥವಾ, ಆದಿ ಇತಿಹಾಸ ಕಾಲವನ್ನು ನಾವು ಕಾಣಬಹುದು.prāgitihāsa kālada nantara andare, namage cāritrika kāla, athavā, ādi itihāsa kālavannu nāvu kāṇabahudu.After the pre-historical times, we can see the early historical or historical periods here. ಆದಿ ಇತಿಹಾಸ ಕಾಲದಲ್ಲಿ ನಮಗೆ ಅನೇಕ ಅವಶೇಷಗಳು ಸುತ್ತ ಮುತ್ತ ಪ್ರದೇಶದಲ್ಲಿ ಕಂಡುಬಂದಿವೆ.ādi itihāsa kāladalli namage anēka avaśēṣagaḷu sutta mutta pradēśadalli kaṇḍubandive.We have found several ruing of early historical period in surrounding areas. ನಂತರ ಕಾಲದಲ್ಲಿ ಈ ಪ್ರದೇಶವನ್ನು ಅನೇಕ ಅರಸು ಮನೆತನಗಳವರು ಆಳಿದರು.nantara kāladalli ī pradēśavannu anēka arasu manetanagaḷavaru āḷidaru.Several dynasties have ruled from here in later periods ಆದರೆ, ಅವರೆಲ್ಲರಿಗಿಂತ ಅಧಿಕವಾಗಿ, ಹಂಪೆಯು ಪ್ರಾಮುಖ್ಯತೆಗೆ ಬಂದಿದ್ದು ವಿಜಯ ನಗರದ ಅರಸರ ಕಾಲದಿಂದ.ādare, avarellariginta adhikavāgi, hampeyu prāmukhyatege bandiddu vijaya nagarada arasara kāladinda.More than anyone, Hampi came to prominence during the times of Vijayanagara rulers ವಿಜಯ ನಗರ ಎಂದಾಕ್ಷಣ, ಅದು ಕೇವಲ ಒಂದು ಅರಸನ ಮನೆತನ ಮಾತ್ರವಲ್ಲ ಅದರಲ್ಲಿ ನಾಲ್ಕು ಅರಸು ಮನೆತನಗಳು ಇದ್ದವು.vijaya nagara endākṣaṇa, adu kēvala ondu arasana manetana mātravalla adaralli nālku arasu manetanagaḷu iddavu.It was not just one dynasty in Vijayanagar but there were four dynasties successively ಅವುಗಳನ್ನು ಕ್ರಮವಾಗಿ ಹೇಳಬೇಕಂತಂದರೆ, ಸಂಗಮಾ, ಸಾಳುವ, ತುಳುವ, ಮತ್ತು ಅರಬೀಡು ವಂಶಗಳು.avugaḷannu kramavāgi hēḷabēkantandare, saṅgamā, sāḷuva, tuḷuva, mattu arabīḍu vaṁśagaḷu.namely Saluva, Thuluva and Arabeedu dynasties. ಈ ನಾಲ್ಕು ವಂಶಗಳು ಈ ಹಂಪಿಯ ಪ್ರದೇಶವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡು,ī nālku vaṁśagaḷu ī hampiya pradēśavannu tamma rājadhāniyāgi māḍikoṇḍu, ಆಳ್ವಿಕೆಯನ್ನು, ಇಡೀ ದಕ್ಷಿಣ ಭಾರತದಲ್ಲಿ ಆಳಿ, ತಮ್ಮ ಛಾಪನ್ನು ಮೂಡಿಸಿದಂತಹವರು.āḷvikeyannu, iḍī dakṣiṇa bhāratadalli āḷi, tamma chāpannu mūḍisidantahavaru.These four dynasties ruled entire South India from Hampi as their capital and left their imprint ವಿಜಯ ನಗರಕ್ಕೆ ಸಂಬಂಧಪಟ್ಟ ಹಾಗೆ, ಯಾಕೆ ಇಷ್ಟೊಂದು ವಿಶೇಷವಾದ ಮಹತ್ವ ಇದೇ ಅಂತ ಹೇಳಿದ್ರೆ,vijaya nagarakke sambandhapaṭṭa hāge, yāke iṣṭondu viśēṣavāda mahatva idē anta hēḷidre, ಇಲ್ಲಿ ವಿಜಯ ನಗರದ ಉಚ್ಛ್ರಾಯ ಕಾಲದಲ್ಲಿ, ಅಂದರೆ ಏನು pinnacle ಅಥವಾ zenith ಅಂತ ಕರೀತೀವಿ,illi vijaya nagarada ucchrāya kāladalli, andare ēnu pinnacle athavā zenith anta karītīvi, ಆ ಕಾಲಘಟ್ಟದಲ್ಲಿ ಈ ಪ್ರದೇಶಕ್ಕೆ, ಅಂದರೆ, ಹಂಪಿ, ವಿಜಯ ನಗರ ಪಟ್ಟಣ ಅಥವಾ ಭಾಸ್ಕರ ಕ್ಷೇತ್ರā kālaghaṭṭadalli ī pradēśakke, andare, hampi, vijaya nagara paṭṭaṇa athavā bhāskara kṣētra ಈ ರಾಜಧಾನಿಗೆ ಭೇಟಿ ನೀಡಿದಂತಹ ಅನೇಕ ವಿದೇಶೀ ವಿದ್ವಾಂಸರು ಅಥವಾ ವಿದೇಶೀ ಪ್ರವಾಸಿಗರು,ī rājadhānige bhēṭi nīḍidantaha anēka vidēśī vidvāṁsaru athavā vidēśī pravāsigaru, ತಮ್ಮ ಅನುಭವಗಳನ್ನು ಅತ್ಯಂತ ಕೂಲಂಕಷವಾಗಿ ಮತ್ತು ಬಹಳ ವಿಸ್ತøತವಾಗಿ ದಾಖಲಿಸಿರುವುದು.tamma anubhavagaḷannu atyanta kūlaṅkaṣavāgi mattu bahaḷa vistaøtavāgi dākhalisiruvudu.There is a special importance for Hampi because of the visits of many foreign scholars and travellers to Hampi or Bhaskara Kshetra and have documents their detailed expansive experiences. ಇದರಿಂದ, ಈ ವಿಜಯ ನಗರಕ್ಕೆ ಅಥವಾ ವಿಜಯ ನಗರ ಪಟ್ಟಣಕ್ಕೆ ಒಂದು ರೀತಿಯಾದಂತಹ ಮಹತ್ವ ಬಂದಿದೆ.idarinda, ī vijaya nagarakke athavā vijaya nagara paṭṭaṇakke ondu rītiyādantaha mahatva bandide.Vijayanagar has received much importance because of this aspect ಪ್ರಮುಖವಾಗಿ, ವಿದೇಶೀ ಪ್ರವಾಸಿಗರಾದ ನಿಕಲೊಕೊಂಟಿ, ಬಾರ್ಬೋಸ, ಆಬ್ದುಲ್ ರಜಾಕ್, ಪಯಾಸ್, ಆಮೇಲೆ ನ್ಯೂನಿಸ್,pramukhavāgi, vidēśī pravāsigarāda nikalokoṇṭi, bārbōsa, ābdul rajāk, payās, āmēle nyūnis,Prominent among them are Nicaroconti, Barbosa, Abdul Razak, Fayaz, Nuris, Etal. ಇವರೆಲ್ಲ ತಮ್ಮ ಪ್ರವಾಸೀ ಕಥಾನಕಗಳಲ್ಲಿ ದಾಖಲಿಸಿರುವಂತಹ ಅನೇಕ ವಿಷಯಗಳು ಇವತ್ತಿಗೂ ಪ್ರಸ್ತುತವಾಗಿರುವುದು.ivarella tamma pravāsī kathānakagaḷalli dākhalisiruvantaha anēka viṣayagaḷu ivattigū prastutavāgiruvudu. ಮತ್ತು ಇವತ್ತು ಸಹ ನಾವು ಅವುಗಳನ್ನು ಜೀವಂತವಾಗಿ ನೋಡ್ತಾ ಇದ್ದೀವಿ.mattu ivattu saha nāvu avugaḷannu jīvantavāgi nōḍtā iddīvi.Their documented observations are relevant even today and we are seeing them today in real life. ಸೋ ಇದರಿಂದ ಹಂಪಿಯ ಕುರಿತು ಅನೇಕ ಜನರಿಗೆ ಒಂದು ವಿಶೇಷವಾದಂತಹ, ಅಟ್ರಾಕ್ಷನ್ ಅಥವಾ ಒಂದು ಆಕರ್ಷಣೆಯ ಕೇಂದ್ರವಾಗಿ ಇದು ಉಳಿದುಕೊಂಡು ಬಂದಿದೆ.sō idarinda hampiya kuritu anēka janarige ondu viśēṣavādantaha, aṭrākṣan athavā ondu ākarṣaṇeya kēndravāgi idu uḷidukoṇḍu bandide.So, because of this reason, Hampi has remained a special attraction for many people as a tourist centre. ಹಂಪಿಯು ಬಹಳ ವಿಶಾಲವಾದಂತಹ ಪ್ರದೇಶದಲಿ ್ಲ ಹರಡಿಕೊಂಡಿರುವಂತಹ ಒಂದು... ಜಾಗವಾಗಿದೆ.hampiyu bahaḷa viśālavādantaha pradēśadali la haraḍikoṇḍiruvantaha ondu... jāgavāgide.Hampi has spread out on a large sprouting area. ಸುಮಾರು 40 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿ,sumāru 40 cadara kilōmīṭar‍gaḷa vyāptiyalli, ಸುಮಾರು 29 ಗ್ರಾಮಗಳನ್ನು ಒಳಗೊಂಡಂತಹ ಪ್ರದೇಶವನ್ನು, ಹಂಪಿ ಪ್ರಾಧಿಕಾರದ ಅಥವಾ ಹಂಪಿ ವಲಯ ಎಂದು, ಗುರುತಿಸಲಾಗಿದೆ.sumāru 29 grāmagaḷannu oḷagoṇḍantaha pradēśavannu, hampi prādhikārada athavā hampi valaya endu, gurutisalāgide.An area spread over nearly 40sq Km with 29 villages has been recognised as Hampi zone or Hampi authority ಹಂಪಿ ಬಂದಾಗ, ತುಂಗಭದ್ರಾ ನದಿಯ ಬಲದಂಡೆಯಲ್ಲಿರುವಂತಹ ಹದಿನೈದು ಗ್ರಾಮಗಳು,hampi bandāga, tuṅgabhadrā nadiya baladaṇḍeyalliruvantaha hadinaidu grāmagaḷu, ಹಾಗೂ, ಎಡದಂಡೆಯಲ್ಲಿರುವಂತಹ ಹದಿನಾಲ್ಕು ಗ್ರಾಮಗಳಲ್ಲಿ, ನಮಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಅಧಿಕವಾದಂತಹhāgū, eḍadaṇḍeyalliruvantaha hadinālku grāmagaḷalli, namage sumāru eraḍu sāvirakkū heccu adhikavādantaha ಪ್ರಾಚ್ಯಾವಶೇಷಗಳು, ಸ್ಮಾರಕಗಳು ನಮಗೆ ಇಲ್ಲಿ ಕಂಡು ಬರುತ್ತವೆ.prācyāvaśēṣagaḷu, smārakagaḷu namage illi kaṇḍu baruttave.Fifteen villages on the right bank and fourteen villages on the left bank of Thungabhadra river come under this zone where more than two thousand architectural remains and memorials are found. ಕಮಲಾಪುರಕ್ಕೆ ಅಂದರೆ, ಹಂಪಿಗೆ ತಲಪುವುದು ಬಹಳ ಸುಲಭ.kamalāpurakke andare, hampige talapuvudu bahaḷa sulabha. ಹೊಸಪೇಟೆಯಿಂದ ಸುಮಾರು ಹನ್ನೆಡರು ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶವನ್ನು ಅಥವಾ ಹಂಪಿಯನ್ನು ಬಹಳ ಸುಲಭವಾಗಿ ನಾವು ತಲಪಬಹುದು.hosapēṭeyinda sumāru hanneḍaru kilōmīṭar dūradalliruva ī pradēśavannu athavā hampiyannu bahaḷa sulabhavāgi nāvu talapabahudu.It is very easy to reach Kamalapura or Hampi situated at a distance of twelve Kilometers from Hospet. ಕಮಲಾಪುರದಿಂದ ನಾವು ಹಂಪಿಗೆ ಪ್ರವೇಶವನ್ನು ಮಾಡುವಾಗ ನಮಗೆ ಅನೇಕ ಸ್ಮಾರಕಗಳು ಕಂಡುಬರುತ್ತವೆ.kamalāpuradinda nāvu hampige pravēśavannu māḍuvāga namage anēka smārakagaḷu kaṇḍubaruttave.While entering Hampi from Kamalapure we can see a number of ruins. ವಿಜಯ ನಗರ ಸ್ಮಾರಕಗಳನ್ನು ನಾವು ಪ್ರಮುಖವಾಗಿ ಮೂರು ಭಾಗಗಳನ್ನಾಗಿ ವರ್ಗೀಕರಿಸುತ್ತೇವೆ.vijaya nagara smārakagaḷannu nāvu pramukhavāgi mūru bhāgagaḷannāgi vargīkarisuttēve.Vijayanagara ruins are classified mainly into three groups: ಮೊದಲನೆಯದಾಗಿ ಧಾರ್ಮಿಕ ಕಟ್ಟಡಗಳು. ಎರಡನೇದು ಲೌಕಿಕ ಕಟ್ಟಡಗಳು.modalaneyadāgi dhārmika kaṭṭaḍagaḷu. eraḍanēdu laukika kaṭṭaḍagaḷu.firstly religions structures, then public buildings ಮೂರನೇದು ರಕ್ಷಣಾ ಕಟ್ಟಡಗಳು ಅಥವಾ ರಕ್ಷಣಾ ಮತ್ತು ವಾಸ್ತು ಅಂತ ಹೇಳಿ.mūranēdu rakṣaṇā kaṭṭaḍagaḷu athavā rakṣaṇā mattu vāstu anta hēḷi.and thirdly security or defence structures. ಧಾರ್ಮಿಕ ಕಟ್ಟಡಗಳಿಗೆ ಸಂಬಂಧಪಟ್ಟ ಹಾಗೆ ದೇವಾಲಯಗಳು. ಅನೇಕ ದೇವಾಲಯಗಳು ಇಲ್ಲಿ ಕಂಡು ಬರ್ತವೆ.dhārmika kaṭṭaḍagaḷige sambandhapaṭṭa hāge dēvālayagaḷu. anēka dēvālayagaḷu illi kaṇḍu bartave.In connection with religious places one can see many temples are seen here. ಅಂದ್ರೆ ಪ್ರಮುಖವಾಗಿ ಇರುವಂತಹ ದೇವಾಲಯಗಳು.andre pramukhavāgi iruvantaha dēvālayagaḷu.Means important temple structures ಈ ಎಲ್ಲಾ ದೇವಾಲಯಗಳ ಮುಂಭಾದಲ್ಲಿಯೂ ತನ್ನದೇ ಆದಂತಹ ಒಂದು ಮಾರುಕಟ್ಟೆಯನ್ನು ಹೊಂದಿದ್ದವು.ī ellā dēvālayagaḷa mumbhādalliyū tannadē ādantaha ondu mārukaṭṭeyannu hondiddavu.All temples had a market place in front of them. ಆ ಮಾರುಕಟ್ಟೆಗಳಿಗೆ ಆ ದೇವಾಲಯದ ಹೆಸರಿನಿಂದಲೇ ಅದನ್ನು ಕರೆಯುವ ಒಂದು ಪದ್ಧತಿ ಇತ್ತು.ā mārukaṭṭegaḷige ā dēvālayada hesarinindalē adannu kareyuva ondu paddhati ittu.There was a system of calling those market places with the names of the temples. ಒಂದೊಂದು ದೇವಾಲಯದ ಮಾರುಕಟ್ಟೆಯೂ ವಿಶೇಷವಾಗಿ ತನ್ನದೇ ಆದಂತಹondondu dēvālayada mārukaṭṭeyū viśēṣavāgi tannadē ādantaha ವಸ್ತುಗಳನ್ನು ಮಾರಾಟ ಮಾಡುತ್ತಿದ್ದವು ಎಂಬುದಕ್ಕೆ ನಮಗೆ ಅನೇಕ ಶಾಸನಾಧಾರಗಳು ಸಿಕ್ಕಿವೆ.vastugaḷannu mārāṭa māḍuttiddavu embudakke namage anēka śāsanādhāragaḷu sikkive.We have found many lithographs stating about distinctive items being sold in front or those temples. ಎರಡನೇದಾಗಿ, ಲೌಕಿಕ ಕಟ್ಟಡಗಳು. ಲೌಕಿಕ ಕಟ್ಟಡಗಳು ಅಂತಂದ್ರೆ,eraḍanēdāgi, laukika kaṭṭaḍagaḷu. laukika kaṭṭaḍagaḷu antandre, ಸಾಮಾನ್ಯ ಜನಸಾಮಾನ್ಯರು ಮತ್ತು ಅರಸರು ವಾಸ ಮಾಡುತ್ತಿದ್ದಂತಹ ಪ್ರದೇಶಗಳು.sāmānya janasāmānyaru mattu arasaru vāsa māḍuttiddantaha pradēśagaḷu.Secondly, public buildings were commoners and kings lived ಇನ್ನು, ವಿಜಯ ನಗರ ಕಾಲಕ್ಕೆ ಸಂಬಂಧ ಪಟ್ಟ ಹಾಗೆ, ನಮಗೆ, ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಂತಹ ಒಂದು ಕಾಲಘಟ್ಟ.innu, vijaya nagara kālakke sambandha paṭṭa hāge, namage, sāhitya mattu sāṁskaøtikavāgi atyanta prasiddhiyannu paḍedantaha ondu kālaghaṭṭa.Vijayanagara period was famous for its literary and Cultural accomplishments. ಈ ಕಾಲಘಟ್ಟದಲ್ಲಿ ನಮಗೆ ಹರಿಹರ ಮುಂತಾದ ರಾಘವಾಂಕ ಮುಂತಾದ ಅನೇಕ ಕನ್ನಡದ ಸಾಹಿತ್ಯ ಲೋಕದ ದಿಗ್ಗಜರು ಇದ್ದು, ತಮ್ಮ ಕೊಡುಗೆಗಳನ್ನು ನೀಡಿರುವರು.ī kālaghaṭṭadalli namage harihara muntāda rāghavāṅka muntāda anēka kannaḍada sāhitya lōkada diggajaru iddu, tamma koḍugegaḷannu nīḍiruvaru.Many stalwarts like Harihara, Raghavanka it at were there during this period and they have given their own contributions to the society.
Word Transliteration Meaning
ತಕ್ಷಣtakṣaṇaImmediately
ನೆನಪುnenapuRemember
ಗ್ರಾಮ.grāma.Village
ವಿಶ್ವviśvaWorld
ಪರಂಪರೆparampareHeritage
ತಾಣtāṇaPlace
ನದಿnadiRiver
ಪುಟ್ಟpuṭṭaSmall
ಇಲ್ಲಿilliHere
ಪ್ರಾಚೀನprācīnaAncient
ಆಧುನಿಕādhunikaModern
ಸತತವಾಗಿsatatavāgiContinuesly
ನೆಲೆneleRecidance
ಅಧಿಕadhikaMore
ರಾಜಧಾನಿrājadhāniCapital
ಆಳ್ವಿಕೆāḷvikeRule
ಮಹತ್ವmahatvaImportance
ವಿದ್ವಾಂಸರುvidvāṁsaruScholars
ಅನುಭವಗಳನ್ನುanubhavagaḷannuExperience
ಪ್ರವಾಸಿpravāsiTourist
ಜಾಗjāgaPlace
ಸಾವಿರsāviraThousand
ಸ್ಮಾರಕsmārakaMonument
ದೇವಾಲಯdēvālayaTemple
ಮಾರುಕಟ್ಟೆmārukaṭṭeMarket
ಅನೇಕanēkaMany
ಕೊಡುಗೆkoḍugeContribution

ಕನ್ನಡ ವ್ಯಾಕರಣ : ಒಟ್ಟು ನೋಟ:

ನೀವು ಈಗ ನೋಡಿದ ವೀಡಿಯೋದಲ್ಲಿ ಕನ್ನಡ ವ್ಯಾಕರಣದ ಅನೇಕ ರೂಪಗಳನ್ನು ನೋಡಬಹುದು. ಅವುಗಳನ್ನು ಬಿಡಿ ಬಿಡಿಯಾಗಿ ನೀವು ಈಗಾಗಲೇ ಗಮನಿಸಿದ್ದೀರಿ. ಈಗ ಮತ್ತೊಮ್ಮೆ ಅವುಗಳನ್ನು ಒಟ್ಟಿಗೇ ಗಮನಿಸೋಣ.

ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣ (ಕ್ರಿ.ಶ. ೧೨೬೦) ವನ್ನು ಆಧರಿಸಿದೆ. ಶಬ್ದಮಣಿ ದರ್ಪಣವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ. ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ ಹಾಗೂ 12ನೇ ಶತಮಾನದ ನಾಗವರ್ಮನ ಕಾವ್ಯಲೋಕನ ಹಾಗೂ ಕರ್ನಾಟಕ ಭಾಷಾಭೂಷಣಗಳಲ್ಲಿ ಯೂ ವಿವರಗಳು ಲಭ್ಯವಿವೆ. ಉಲ್ಲೇಖವಿದೆ.

ಬಳಕೆಯಲ್ಲಿರುವ ಕನ್ನಡ ಸ್ವರಗಳು ಒಟ್ಟು 12: ಅ ಆ ಇ ಈ ಉ ಊ ಎ ಏ ಐ ಒ ಓ ಔ

ವ್ಯಂಜನಗಳು: ಇವುಗಳಲ್ಲಿ ಎರಡು ವಿಧ- 1. ವರ್ಗೀಯ ವ್ಯಂಜನ 2. ಅವರ್ಗೀಯ ವ್ಯಂಜನ.

'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ.

'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು.

ಪದ ಅಥವಾ ಶಬ್ದ: 

ನಾಮಪದ: ನಾಮಪದಗಳಿಗೆ ಸಂಬಂಧಿಸಿದ ವಾಕ್ಯರಚನೆಯ ನಿಯಮಗಳು ಭಾಷೆಯಿಂದ ಭಾಷೆಗೆ ಬದಲಾಗುತ್ತವೆ.

ಕ್ರಿಯಾಪದ: ವಾಕ್ಯದಲ್ಲಿ ಕತೃವಿನ ಕ್ರಿಯೆಯನ್ನು ಸೂಚಿಸುವ ಪದವನ್ನು ಕ್ರಿಯಾ ಪದ ಎನ್ನುತ್ತಾರೆ ಈ ಕ್ರಿಯಾ ಪದವೂ ಮೂಲರೂಪವನ್ನು ಧಾತು ಅಥವಾ ಕ್ರಿಯಾ ಪ್ರಕೃತಿ ಎನ್ನುತ್ತೇವೆ.

ಸರ್ವನಾಮ: ನಾಮಪದಕ್ಕೆ ಬದಲಾಗಿ ಬಳಸುವ ಪದಗಳು ಇದರಲಿ ನಾಲ್ಕು ವಿಧ 1. ಪುರುಷಾರ್ಥಕ, 2 ಆತ್ಮಾರ್ಥಕ 3 ಪ್ರಶ್ನಾರ್ಥಕ 4. ನಿರ್ದೇಶನಾತ್ಮಕ

ಗುಣವಾಚಕ: ಗುಣಸ್ವರೂಪಗಳನ್ನು ತಿಳಿಸುವ ನಾಮಪದ

ವಿಭಕ್ತಿ: ವಿಭಕ್ತಿ ಪ್ರತ್ಯಗಳು ಒಟ್ಟು ಏಳು.

ಸಂಧಿ: ಎರಡು ಪದಗಳು ಸೇರಿದಾಗ ಸಂಧಿಯಾಗುತ್ತದೆ.

1. ಓದಿರಿ

ಹಂಪಿಯು ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿದೆ. ಹಂಪಿಯು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ. ಹಂಪಿಯು ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ. ಅಸಂಖ್ಯ ಭಾರತೀಯರು ಮತ್ತು ವಿದೇಶೀಯರು ಇಲ್ಲಿಗೆ ಭೇಟಿ ನೀಡುತ್ತಾರೆ.

ಹಂಪಿಯು ಇವತ್ತು ಹಾಳು ಬಿದ್ದಿದೆ. ಆದರೂ ಇಲ್ಲಿರುವ ವಿಟ್ಠಲ ಮಂದಿರ, ವಿರೂಪಾಕ್ಷ ದೇವಾಲಯ, ಹಜಾರ ರಾಮನ ದೇವಾಲಯ, ಸಾಸಿವೆಕಾಳು ಗಣೇಶ, ಪಟ್ಟಾಭಿರಾಮನ ದೇವಾಲಯ, ಕಲ್ಲಿನ ರಥ, ಗಜಶಾಲೆ, ಮೆಟ್ಟಿಲು ಬಾವಿ, ಕಮಲದ ಅರಮನೆಗಳಂತಹ ಅತ್ಯಂತ ಕಲಾತ್ಮಕವಾದ ಸ್ಮಾರಕಗಳು ಗತಕಾಲದ ವೈಭವವನ್ನು ಸಾರುತ್ತಿವೆ.

ಜನರ ನಂಬಿಕೆಯ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಇಲ್ಲಿನ ರಸ್ತೆ ಬೀದಿಗಳಲ್ಲಿ ಮುತ್ತು, ರತ್ನಗಳನ್ನು ರಾಶಿ ರಾಶಿ ಹಾಕಿ ಮಾರಲಾಗುತ್ತಿತ್ತಂತೆ. ಇಂತಹ ಸಂಪದ್ಭರಿತವಾದ ಪಟ್ಟಣವು ಕರ್ನಾಟಕದಲ್ಲಿದ್ದುದು ಕನ್ನಡಿಗರಿಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.

ಹಂಪಿ ಎನ್ನಲು ಕಾರಣ:

ತುಂಗಭದ್ರಾ ನದಿಯ ಅತಿ ಪುರಾತನ ಹೆಸರು ಪಂಪ. ಈ ನದಿಯ ದಂಡೆಯಲ್ಲಿರುವುದರಿಂದ ಹಂಪೆ ಅಥವಾ ಹಂಪಿ ಎಂಬ ಹೆಸರು ಬಂದಿತು. ಕಾಲಕ್ರಮೇಣ ಇದನ್ನು ವಿಜಯನಗರ ಅಥವಾ ವಿರೂಪಾಕ್ಷಪುರ ಎಂಬ ಹೆಸರುಗಳಿಂದಲೂ ಸಹ ಕರೆಯಲಾಯಿತು.

2. ಹಂಪಿಯ ವಿಶೇಷತೆಗಳ ಕುರಿತು ಒಂದು ಪ್ರಬಂಧ ಬರೆಯಿರಿ.

3. ಮೇಲಿನ ವೀಡಿಯೋ ಪಠ್ತದಲ್ಲಿರುವ ವಿಭಕ್ತಿ, ನಾಮಪದ ಮತ್ತು ಕ್ರಿಯಾಪದಗಳನ್ನು ಗುರುತಿಸಿರಿ.

Send your completed homework by email to klcjnu@gmail.com