Colours of Yakṣagāna

Transcription
Transliteration
Translation
ಈಗ ಯಕ್ಷಗಾನ ಎನ್ನುವಂತಹದ್ದು ಸರ್ವಾಂಗ ಸುಂದರವಾದ ಒಂದು ಕಲೆ.īga yakṣagāna ennuvantahaddu sarvāṅga sundaravāda ondu kale.Yakshagana is an all-round beautiful art. ಅದು ಸಂಪೂರ್ಣವಾಗಿ ಸರ್ವತಂತ್ರ ಸ್ವತಂತ್ರ ಅಂತ ಹೇಳ್ಲಿಕ್ಕೆ ಆಗುವುದಿಲ್ಲ.adu sampūrṇavāgi sarvatantra svatantra anta hēḷlikke āguvudilla.It cannot be said that it is altogether independent. ಕಾರಣ ಏನೂಂತಂದ್ರೆ ನಮ್ಮ ಭಾರತದಲ್ಲಿ, ಅದಕ್ಕೂ ದಕ್ಷಿಣ ಭಾರತದಲ್ಲಿkāraṇa ēnūntandre namma bhāratadalli, adakkū dakṣiṇa bhāratadalliBecause, in our country especially in South India ಬೇರೆ ಬೇರೆ ಭಾಷಾ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯ,bēre bēre bhāṣā sandarbhagaḷalli bēre bēre rītiya,similar theatrical presentations are taking place in the context of different languages. ಇದೇ ರೀತಿಯ ರಂಗ ಪ್ರಯೋಗಗಳು ಬೆಳೆಯುತ್ತಾ ಬಂದಿದ್ದಾವೆ.idē rītiya raṅga prayōgagaḷu beḷeyuttā bandiddāve.Experiments like these are developing all the time. ಅದರಲ್ಲಿ ಕೂಡ ಕರ್ನಾಟಕದ ಈ ಯಕ್ಷಗಾನ ಎನ್ನುವುದು ಬಹಳ ಒಂದುadaralli kūḍa karnāṭakada ī yakṣagāna ennuvudu bahaḷa ondu ವಿಕಾಸಮುಖವಾಗಿ ಬೆಳೆಯುತ್ತಾ ಬಂದಿದೆ. ಈಗ ಕರ್ನಾಟಕದಲ್ಲಿvikāsamukhavāgi beḷeyuttā bandide. īga karnāṭakadalliKarnataka’s Yakshagana has been developing progressively. ನಾವು ನೋಡುವುದಿದ್ರೆ ಅದನ್ನು ತಿಟ್ಟುಗಳಾಗಿ ಅಥವಾ ಮಟ್ಟುಗಳಾಗಿnāvu nōḍuvudidre adannu tiṭṭugaḷāgi athavā maṭṭugaḷāgiWhen we look at it as thittus or muttus, ವಿಂಗಡಿಸಿ ಹೇಳೊದಾದರೆ ತೆಂಕುತಿಟ್ಟು, ಬಡಗುತಿಟ್ಟು ಮತ್ತು ಬಡ ಬಡಗುತಿಟ್ಟು,viṅgaḍisi hēḷodādare teṅkutiṭṭu, baḍagutiṭṭu mattu baḍa baḍagutiṭṭu,it can be divided into Thenkuthittu, Badaguthittu, Bada Badaguthittu and ಉತ್ತರ ಕನ್ನಡದ ತಿಟ್ಟು ಹೀಗೆ ವಿಭಜಿಸಿ ಹೇಳಬಹುದು.uttara kannaḍada tiṭṭu hīge vibhajisi hēḷabahudu.Uttara Kannada thittu. ಆ ತಿಟ್ಟಿನ ಸಂದರ್ಭದಲ್ಲಿ ವೇಷಭೂಷಣ ಇತ್ಯಾದಿಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ.ā tiṭṭina sandarbhadalli vēṣabhūṣaṇa ityādigaḷalli svalpa vyatyāsa ide.In case of these thittus there is some difference in costumes. ಸಾದೃಶ್ಯವೂ ಇದೆ ವ್ಯತ್ಯಾಸವೂ ಇದೆ. ಕುಣಿತದಲ್ಲೂ ಸ್ವಲ್ಪ ವ್ಯತ್ಯಾಸ ಇದೆ.sādṛśyavū ide vyatyāsavū ide. kuṇitadallū svalpa vyatyāsa ide.There are similarities and also differences. There is some difference in dancing also. ಭಾಗವತಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟು ಅದು ಗೌಣ ಅಂತ ಹೇಳಬಹುದು.bhāgavatikeyalli svalpa vyatyāsa uṇṭu adu gauṇa anta hēḷabahudu.There is some difference in Bhagavathike which can be said that it is negligible. ಯಕ್ಷಗಾನದಲ್ಲಿ ಬಣ್ಣ ಎನ್ನುವಂತಹದ್ದು ಬಹಳ ಮುಖ್ಯವಾದದ್ದು.yakṣagānadalli baṇṇa ennuvantahaddu bahaḷa mukhyavādaddu.Colour is very important in Yakshagana. ವರ್ಣರಂಜಿತವಾದ ಒಂದು ಕಲೆ.varṇarañjitavāda ondu kale.It is a colourful art. . ಆ ವರ್ಣ ಮನಸ್ಸನ್ನು ಆಕರ್ಷಿಸುವಂತಹ ರೀತಿಯಲ್ಲಿರುತ್ತದೆ.ā varṇa manassannu ākarṣisuvantaha rītiyalliruttade.Color attracts the mind ಆ ವರ್ಣ ಸಾರಥ್ಯ ಎನ್ನುವಂತಹದ್ದು ಬಹಳ ಮುಖ್ಯ.ā varṇa sārathya ennuvantahaddu bahaḷa mukhya.Colour domination is very important. ರಾತ್ರಿಯಿಡೀ ನಡೆಯತಕ್ಕಂತಹ ಯಕ್ಷಗಾನ ಬಯಲಾಟದಲ್ಲಿrātriyiḍī naḍeyatakkantaha yakṣagāna bayalāṭadalliDistinct Characters appear gradually in night long Yakshagana bayalata. ವಿಶಿಷ್ಟವಾದಂತಹ ವೇಷಗಳು ಕ್ರಮೋಚಿತವಾಗಿ ಬರುತ್ತವೆ.viśiṣṭavādantaha vēṣagaḷu kramōcitavāgi baruttave. ಆರಂಭದಲ್ಲಿ ಪೀಠಿಕೆ ವೇಷ ಅಂತ ಇರುವಂತಹದ್ದು,ārambhadalli pīṭhike vēṣa anta iruvantahaddu,In the beginning, there will be an introductory part (Peethike). ಅದು ಆರಂಭದ ಒಂದು ಸಾತ್ವಿಕ ಗುಣದ ವೇಷ ಅದು.adu ārambhada ondu sātvika guṇada vēṣa adu.It is good natured character. ಅದಕ್ಕೆ ಬಹಳಷ್ಟು ವರ್ಣ ವೈಖರ್ಯದಿಂದ ಕೂಡಿದಂತಹadakke bahaḷaṣṭu varṇa vaikharyadinda kūḍidantahaIt will have aharya or makeup with variety of colour combinations. ಒಂದು ಅಹರ್ಯ ಅಥವ ಮೇಕಪ್ ಅಂತ ಹೇಳುತ್ತೇವೆ.ondu aharya athava mēkap anta hēḷuttēve. ಆ ರೀತಿಯ ಒಂದು ಚಿತ್ರ ಇಲ್ಲ. ಸಾಮಾನ್ಯ ಉದ್ದದ ನಾಮ,ā rītiya ondu citra illa. sāmānya uddada nāma,Commonly, long names or mudras will be there. ಮುದ್ರೆಗಳು ಇವೆಲ್ಲ ಇವೆ ಅಷ್ಟೆ.mudregaḷu ivella ive aṣṭe. ಆಮೇಲೆ ಯಕ್ಷಗಾನದಲ್ಲಿ ಬಣ್ಣದ ವೇಷ ಎನ್ನುವಂತಹದ್ದāmēle yakṣagānadalli baṇṇada vēṣa ennuvantahaddaIn yakshagana a role called bannada Vesha ಬಹಳ ಆಕರ್ಷಕವಾದ ಒಂದು ವೇಷ.bahaḷa ākarṣakavāda ondu vēṣa.is a very attractive part. ಒಂದು ಸುಸಂಗತವಾದ ಸುದೀರ್ಘವಾದಂತಹ ಬಯಲಾಟದಲ್ಲಿondu susaṅgatavāda sudīrghavādantaha bayalāṭadalliIn a long well coordinated bayalata ಅಸುರ ಪಾತ್ರಗಳು ಸ್ವಲ್ಪ ತಾಮಸ ಗುಣದ ಅಸುರ ಪಾತ್ರಗಳು ಬೇಕೇಬೇಕು.asura pātragaḷu svalpa tāmasa guṇada asura pātragaḷu bēkēbēku.negative charactered asura roles are required. ಗಾಂಭೀರ್ಯ ಅವುಗಳ ನಡೆ ನುಡಿ ಎಲ್ಲವೂ ಕೂಡಾgāmbhīrya avugaḷa naḍe nuḍi ellavū kūḍāTheir talk and walk are majestic, ಬಹಳ ನಿಧಾನ ಆದರೂ ಕೂಡಾ ಬಹಳ ಆಕರ್ಷಕ, ಗಂಭೀರbahaḷa nidhāna ādarū kūḍā bahaḷa ākarṣaka, gambhīraslow yet it is attractive and serious. ಅದರಲ್ಲಿ ನಾನಾ ರೀತಿಯ ವ್ಯತ್ಯಾಸಗಳುಂಟುadaralli nānā rītiya vyatyāsagaḷuṇṭuThere are many differences ಅಥವಾ ಬೇರೆ ಬೇರೆ ರೀತಿ ವಿಂಗಡಿಸಬಹುದು.athavā bēre bēre rīti viṅgaḍisabahudu.or it is classified differently. ಮೊದಲು ನಾನು ಯಕ್ಷಗಾನ ಆಟದಲ್ಲಿರುವಂತಹmodalu nānu yakṣagāna āṭadalliruvantahaAt the outset, I shall tell about the characters in Yakshagana. ವೇಷಗಳ ಒಂದು ರೀತಿಯನ್ನು ಹೇಳುತ್ತೇನೆ.vēṣagaḷa ondu rītiyannu hēḷuttēne. ಪೀಠಿಕೆ ವೇಷ ಒಂದು, ಆಮೇಲೆ ಎದುರು ವೇಷpīṭhike vēṣa ondu, āmēle eduru vēṣaIt starts with peethike character followed by eduru character, ಎದುರು ವೇಷ ಅಂದರೆ ಪ್ರತಿನಾಯಕ ವೇಷ ಇನ್ನೊಂದು.eduru vēṣa andare pratināyaka vēṣa innondu.that means an anti-hero character. ಆಮೇಲೆ ಬಣ್ಣದ ವೇಷ ಮತ್ತೊಂದು.āmēle baṇṇada vēṣa mattondu.Then a bannada vesha ಮತ್ತೆ ಪುಂಡು ವೇಷ ಅಂತ ಹೇಳುತ್ತಾರೆ.matte puṇḍu vēṣa anta hēḷuttāre.followed by pundu vesha. ಅಂದರೆ ಬಹಳ ಉತ್ಸಾಹಿ ತರುಣ ವೇಷ.andare bahaḷa utsāhi taruṇa vēṣa.Pundu vesha is of very active, enthusiastic young characters ಅಭಿಮನ್ಯು, ಬಬ್ರುವಾಹನ ಈ ರೀತಿಯ ವೇಷಗಳುabhimanyu, babruvāhana ī rītiya vēṣagaḷulike Abhimanyu, Babhruvahana etc. ಪುಂಡು ವೇಷ ಅಂತ ಕರೆಯುತ್ತಾರೆ.puṇḍu vēṣa anta kareyuttāre. ಆಮೇಲೆ ಸ್ತ್ರೀವೇಷ ಅಂತೂ ಅನಿವಾರ್ಯವಾದದ್ದೇ. ಸ್ತ್ರೀವೇಷ ಇರ್ಲೇಬೇಕು.āmēle strīvēṣa antū anivāryavādaddē. strīvēṣa irlēbēku.Feminine character is inevitable. Lady characters should be there. ಆಮೇಲೆ ಕೆಲವು ವೇಷಗಳು ಯಾವುದೇ ವರ್ಗಕ್ಕೆಂತ ಸೇರುವುದಿಲ್ಲ.āmēle kelavu vēṣagaḷu yāvudē vargakkenta sēruvudilla.Later characters do not belong to any particular category. ಋಷಿ ಪಾತ್ರ ಬರುತ್ತದೆ, ಬ್ರಾಹ್ಮಣ ಪಾತ್ರ ಬರುತ್ತದೆ,ṛṣi pātra baruttade, brāhmaṇa pātra baruttade,There will be a sage, a Brahmin etc. ವಿಭಿಷಣ ಮೊದಲಾದ ಕೆಲವು ಪಾತ್ರಗಳುvibhiṣaṇa modalāda kelavu pātragaḷuSome roles like Vibheeshana ಅವುಗಳ ವೇಷ ಸ್ವಲ್ಪ ವಿಶಿಷ್ಟವಾದದ್ದು.avugaḷa vēṣa svalpa viśiṣṭavādaddu.are of a special kind. ಅಂದ್ರೆ ಈ ಪುಂಡುವೇಷದ ಕಿರೀಟ ಇಟ್ಟುandre ī puṇḍuvēṣada kirīṭa iṭṭuThat means, a crown of Pundu Vesha is placed on the head and armlets are put on. ಇಡೀ ಕೈಯ ದಗಳೆ ಹಾಕುವಂತಹದ್ದು.iḍī kaiya dagaḷe hākuvantahaddu. ಅದೆಲ್ಲಾ ಸೂಕ್ಷ್ಮಗಳು ಅಷ್ಟು ಬೇಕೂಂತ ಇಲ್ಲ.adellā sūkṣmagaḷu aṣṭu bēkūnta illa.There need not be so many intricacies. ಈ ಬಣ್ಣದ ವೇಷದಲ್ಲಿ ಕೆಲವು ವ್ಯತ್ಯಾಸಗಳುಂಟು.ī baṇṇada vēṣadalli kelavu vyatyāsagaḷuṇṭu.There are some differences in these bannada veshas viz. ಕಾಟು ಬಣ್ಣ ಮತ್ತು ರಾಜ ಬಣ್ಣ ಅಂತ ಹೇಳಿ.kāṭu baṇṇa mattu rāja baṇṇa anta hēḷi.Katu banna and Raja banna. ಕಾಟು ಅಂತ ಹೇಳಿದ ಕೂಡಲೇ ಅದೇನು ಚಂದ ಇಲ್ಲಾಂತ ಅರ್ಥ ಅಲ್ಲ.kāṭu anta hēḷida kūḍalē adēnu canda illānta artha alla.Katu banna doesnot indicate that it is not nice. ಅದರ ಪಾರಿಭಾಷಿಕ ಶಬ್ಧ ಅದು. ಇದು ರಾವಣನ ಒಂದು ಮುಖವರ್ಣಿಕೆ,adara pāribhāṣika śabdha adu. idu rāvaṇana ondu mukhavarṇike,It is only a biblio word. It is a mask of Ravana. ಅದು ರಾವಣನಿಗೆ ಮಾತ್ರ ಮೀಸಲು. ಆ ಬರವಣಿಗೆadu rāvaṇanige mātra mīsalu. ā baravaṇigeIt is reserved only for Ravana. ಅದು ಹೀಗೆ ಒಂದು ಇಲ್ಲಿ ಬರುತ್ತದೆ, ರಾವಣನಿಗೆ ಮಾತ್ರ ಅದು.adu hīge ondu illi baruttade, rāvaṇanige mātra adu.Dialogues are meant only for Ravana. ಬೇರೆ ಅಸುರ ಪಾತ್ರಗಳಿಗೆ ಅದು ಬರುವುದಿಲ್ಲ.bēre asura pātragaḷige adu baruvudilla.It does not apply to other Asura Characters. ಆಮೇಲೆ ಈಗ ರಾಜಬಣ್ಣದಲ್ಲಿ ಶೂರಪದ್ಮ, ಥಾರಕಾಸುರ, ಇವರೆಲ್ಲ ಬರುತ್ತಾರೆ.āmēle īga rājabaṇṇadalli śūrapadma, thārakāsura, ivarella baruttāre.After that, in these days, likes of Shoorapadma and Tarakasura all come with RajabaNNa. ಮರಿರಾವಣ ಬರುತ್ತಾನೆ. ಅದರ ಒಂದು ವೈಖರಿಯೇ ಬೇರೆ.marirāvaṇa baruttāne. adara ondu vaikhariyē bēre.Mariravana comes. It has a unique style. ಸಾಲು ಸಾಲಾಗಿ ಚಿಟ್ಟಿಗಳು ಬರಬೇಕು.sālu sālāgi ciṭṭigaḷu barabēku.Chitties come one after another. ಆ ಬಣ್ಣದ ವೇಷದಲ್ಲಿ ನಾನು ಹೇಳಿದೆ ಕಾಟು ಬಣ್ಣ ಮತ್ತು ರಾಜ ಬಣ್ಣ ಅಂತ ಹೇಳಿ.ā baṇṇada vēṣadalli nānu hēḷide kāṭu baṇṇa mattu rāja baṇṇa anta hēḷi.I have mentioned that there are two bannada veshas viz., ಕಾಟು ಬಣ್ಣ ಅದು ಕೂಡಾ ನೋಡ್ಲಿಕ್ಕೆ ಚಂದ ಇದೆ ಆ ಬರವಣಿಗೆ.kāṭu baṇṇa adu kūḍā nōḍlikke canda ide ā baravaṇige.Katu banna and Raja banna. Katu banna is good to look at. ರಾಜಬಣ್ಣದ ಗಾಂಭೀರ್ಯ ಒಂದು ಬೇರೆ.rājabaṇṇada gāmbhīrya ondu bēre.Raja banna’s appeal is different. ಈ ಬಣ್ಣ ಎಲ್ಲಾ ಬಣ್ಣಗಳನ್ನು ಯಕ್ಷಗಾನದಲ್ಲಿ ಬಳಸುವುದಿಲ್ಲ.ī baṇṇa ellā baṇṇagaḷannu yakṣagānadalli baḷasuvudilla.All colours are not used in yakshagana. ಪ್ರಧಾನವಾಗಿ ಹಸಿರು, ಕೆಂಪು, ಕಪ್ಪು, ಸ್ವಲ್ಪಮಟ್ಟಿಗೆ ಬಿಳಿpradhānavāgi hasiru, kempu, kappu, svalpamaṭṭige biḷiMainly green, red, and black are used. White is very rare. ಬಹಳ ಅಪೂರ್ವ ಅದು ಈ ಹನುಮಂತನ ವೇಷಕ್ಕೆ ಇದಕ್ಕೆಲ್ಲಾ ಬಳಸುತ್ತಾರೆ.bahaḷa apūrva adu ī hanumantana vēṣakke idakkellā baḷasuttāre.It is used for Hanumantha’s role. ಈ ಕಪ್ಪು ಎದುರು ವೇಷಕ್ಕೆ ಬಳಸುತ್ತಾರೆ. ಮತ್ತು ಅಸುರ ಪಾತ್ರಗಳಿಗೆī kappu eduru vēṣakke baḷasuttāre. mattu asura pātragaḷigeBlack is used for eduru vesha and green is ಸಾಮಾನ್ಯ ಕಾಟು ಬಣ್ಣ ಪಾತ್ರಗಳಿಗೆ ಅದನ್ನು ಬಳಸುತ್ತಾರೆ.sāmānya kāṭu baṇṇa pātragaḷige adannu baḷasuttāre.normally used for Katu banna roles. ರಾಜಬಣ್ಣಕ್ಕೆ ಕೆಂಪು ದಗಳೆ ಈ ರೀತಿಯಾಗಿ ಬಳಸುತ್ತಾರೆ.rājabaṇṇakke kempu dagaḷe ī rītiyāgi baḷasuttāre.Red is used for Raja banna. ಆಮೇಲೆ ಈಗ ಒಂದು ಅಸುರ ಪಾತ್ರāmēle īga ondu asura pātraAsura Patra ರಾವಣನಂತಹ ಒಂದು ರಾಜಗಾಂಭೀರ್ಯದ ಪಾತ್ರದ ಒಡ್ಡೋಲಗದಲ್ಲಿrāvaṇanantaha ondu rājagāmbhīryada pātrada oḍḍōlagadallilike Ravana is depicted differently in royal majesty etc. ಬೆಳಗ್ಗೆ ಎದ್ದು ಅವನ ನಿತ್ಯಾಂನಿಕ ವಿಧಿಗಳನ್ನು ತೆರೆಯಲ್ಲಿ,beḷagge eddu avana nityānnika vidhigaḷannu tereyalli,Screen is half covered on stage ತೆರೆಯನ್ನು ಅರ್ಧಕ್ಕೆ ನಿಲ್ಲಿಸಿ ಸ್ನಾನ, ದಂತದಾವನ, ಭಸ್ಮಧಾರಣ,tereyannu ardhakke nillisi snāna, dantadāvana, bhasmadhāraṇa,and Ravana’s morning routines like brushing, bathing, smearing bhasma, ಶಿವಪೂಜೆ ಇತ್ಯಾದಿಗಳನ್ನು ಸಾಂಕೇತಿಕವಾಗಿ ನಿರ್ವಹಿಸುತ್ತಾನೆ.śivapūje ityādigaḷannu sāṅkētikavāgi nirvahisuttāne.shivapuja etc, are performed symbolically. ಆವಾಗ ಅದಕ್ಕೆ ನಿರ್ದಿಷ್ಟ ರೀತಿಯ ಚೆಂಡೆಯ ವಾದನಗಳು ಉಂಟು.āvāga adakke nirdiṣṭa rītiya ceṇḍeya vādanagaḷu uṇṭu.During that time particular chende instruments are there. ಅದು ಒಟ್ಟು ಇಷ್ಟು ಅಂತ ಆರ್ಭಟೆ, 10-18 ಆರ್ಭಟೆ ಆಗಬೇಕು.adu oṭṭu iṣṭu anta ārbhaṭe, 10-18 ārbhaṭe āgabēku.Certain number like 10-18 beatings should be there in the beginning. ಅದರಲ್ಲಿ ಒಟ್ಟು ಒಡ್ಡೋಲಗ ಮುಗಿವಾಗ ಆ ರೀತಿ ಇರುತ್ತದೆ.adaralli oṭṭu oḍḍōlaga mugivāga ā rīti iruttade.It will be there till the court scene is there. ಮತ್ತೆ ಈಗ ಇಂದ್ರನಂತಹ ಒಂದು ಪಾತ್ರ ಒಡ್ಡೋಲಗ ಕೊಡುವಾಗmatte īga indranantaha ondu pātra oḍḍōlaga koḍuvāgaWhen we present Indra’s Court scene, ಹಳೆಯ ಕ್ರಮದಲ್ಲಿ ಸಭಾ ಕಲಾಶಂ ಅಂತ ಇದೆhaḷeya kramadalli sabhā kalāśaṁ anta ideIn old style, it is called Sabha Kalaasham ಅದು ಸಭಾ ಕ್ಲಾಸ್ ಅಂತ ಹೇಳ್ತಾರ ಅದಲ್ಲ ಸಭಾ ಕಲಾಷ ಅದು.adu sabhā klās anta hēḷtāra adalla sabhā kalāṣa adu.They also call it Sabha Class, but it is Sabha Kalaasha ಅದು ಒಂದು ನಾಲ್ಕು ಸುತ್ತು ಕುಣಿದುadu ondu nālku suttu kuṇiduSabha Kalaasham with four rounds of dance ಸಭಾ ವಂದನೆ ಮಾಡುವಂತಹ ಒಂದು ವಿಶಿಷ್ಟವಾದ ಕ್ರಮ.sabhā vandane māḍuvantaha ondu viśiṣṭavāda krama.and then Sabha Vandane is shown in old practice. ಈಗ ಅದನ್ನೆಲ್ಲಾ ಸಾಮಾನ್ಯ ಬಿಟ್ಟಿದ್ದಾರೆ.īga adannellā sāmānya biṭṭiddāre.Now it is stopped. ಹಳೇ ಕ್ರಮದಲ್ಲಿ ಆ ರೀತಿ ಇತ್ತು.haḷē kramadalli ā rīti ittu.It used to be like that in old system ಈಗ ಶ್ರೀಕೃಷ್ಣನಂತಹ ಪಾತ್ರದ ಒಡ್ಡೋಲಗದಲ್ಲಿīga śrīkṛṣṇanantaha pātrada oḍḍōlagadalliIn case of Krishna’s royal court scene ಶ್ರೀಕೃಷ್ಣ ಅಷ್ಟಮಹಿಷಿಯರೊಂದಿಗೆ ಕೂಡಿ ಒಡ್ಡೋಲಗ ಕೊಡಬೇಕೂಂತ ಕ್ರಮ.śrīkṛṣṇa aṣṭamahiṣiyarondige kūḍi oḍḍōlaga koḍabēkūnta krama.it was practiced that Krishna should dance with eight mahishis. ಅಷ್ಟಲ್ಲದಿದ್ದರೂ, ಯಾಕೆಂದರೆ ಯಾವುದೇ ಮೇಳದಲ್ಲಿ ಅಷ್ಟು ಸ್ತ್ರೀ ಪಾತ್ರಗಳು ಇರುವುದಿಲ್ಲ.aṣṭalladiddarū, yākendare yāvudē mēḷadalli aṣṭu strī pātragaḷu iruvudilla.In any mela, that many lady characters will not be there. ಒಂದು ಮೂರು ಜನ ಆದರೂ ಇರುತ್ತಾರೆ.ondu mūru jana ādarū iruttāre.Minimum of three ladies will be there. ಅವರನ್ನೊಳಗೊಂಡು ಒಂದು ವಿಶಿಷ್ಟವಾದ ರೀತಿಯಲ್ಲಿavarannoḷagoṇḍu ondu viśiṣṭavāda rītiyalliWith them in a special posture of ಶೃಂಗಾರದ ಒಂದು ಭಂಗಿಯಲ್ಲಿ ಒಂದು ಅರ್ಧ ಪವಡಿಸಿ ಆತ ಪ್ರತ್ಯಕ್ಷನಾಗುತ್ತಾನೆśṛṅgārada ondu bhaṅgiyalli ondu ardha pavaḍisi āta pratyakṣanāguttāneromance Krishna appears in a half sleeping mode. ಅದು ಆಕರ್ಷಿತವಾದ ಒಂದು ರೀತಿ ಅದು.adu ākarṣitavāda ondu rīti adu.It is an attractive one. ಈ ತರ ಬಣ್ಣಗಳು ಮತ್ತು ಈ ವಿಧಿ ವಿಧಾನಗಳುī tara baṇṇagaḷu mattu ī vidhi vidhānagaḷuSuch colours and procedures ಯಕ್ಷಗಾನದಲ್ಲಿ ಬಹಳ ಮುಖ್ಯವಾದಂತಹ ಒಂದು ಪಾತ್ರವಹಿಸುತ್ತವೆ.yakṣagānadalli bahaḷa mukhyavādantaha ondu pātravahisuttave.are very important characters in yakshagana. ಇದು ಒಂದು ಬಣ್ಣದ ವೇಷದ ಮಾದರಿ.idu ondu baṇṇada vēṣada mādari.It is a model of bannada vesha. ಇದರಲ್ಲಿ ವಿಸ್ತಾರವಾದಂತಹ ಒಂದು ವೃತ್ತಾಕಾರದ ಕಿರೀಟ ದೊಡ್ಡ ಅಳತೆಯದ್ದು.idaralli vistāravādantaha ondu vṛttākārada kirīṭa doḍḍa aḷateyaddu.There is a large circular crown. ಕಥಕ್ಕಳಿಯಲ್ಲಿ ಕೂಡಾ ಅದೇ ಬಗೆಯ ಕಿರೀಟವನ್ನು ಧರಿಸುತ್ತಾರೆ.kathakkaḷiyalli kūḍā adē bageya kirīṭavannu dharisuttāre.Similar crown is used in Kathakkali. ಆಮೇಲೆ ಈಗ ಮುಖವರ್ಣಿಕೆಯಲ್ಲಿ ಇದು ರಾಜಬಣ್ಣದāmēle īga mukhavarṇikeyalli idu rājabaṇṇadaMask is having raja banna forms. ಸ್ವರೂಪವನ್ನು ಹೊಂದಿರುವಂತಹ ಒಂದು ಮುಖವರ್ಣಿಕೆ.svarūpavannu hondiruvantaha ondu mukhavarṇike. ಇದರಲ್ಲಿ ಮೂಗನ್ನು ಸ್ವಲ್ಪ ಹಿರಿದು ಮಾಡಿ ತೋರಿಸುವುದಕ್ಕಾಗಿ ಹತ್ತಿಯ ಉಂಡೆ ಇಡುತ್ತಾರೆ.idaralli mūgannu svalpa hiridu māḍi tōrisuvudakkāgi hattiya uṇḍe iḍuttāre.To show an enlarged nose they use cotton ball. ಮತ್ತೆ ಮುಖವನ್ನು ಸ್ವಲ್ಪ ವಿಸ್ತಾರಗೊಳಿಸಲುmatte mukhavannu svalpa vistāragoḷisaluTo show an enlarged face ಎರಡು ಬದಿಯಲ್ಲಿ ಸ್ವಲ್ಪ ಹತ್ತಿಯ ಉಂಡೆಯನ್ನು ಇಡುತ್ತಾರೆ.eraḍu badiyalli svalpa hattiya uṇḍeyannu iḍuttāre.they keep little cotton pads on both sides. ಇನ್ನು ಮುಖ ಒಂದು ಮುಖವಾಡದ ಸ್ವರೂಪinnu mukha ondu mukhavāḍada svarūpaTo get the look of a face, ಬರುವ ರೀತಿಯಲ್ಲಿ ಈ ಹಿಟ್ಟಿನ ಮತ್ತು ಸುಣ್ಣದ ಬೆರಕೆಯಲ್ಲಿbaruva rītiyalli ī hiṭṭina mattu suṇṇada berakeyallithey write serrations slowly on the mask with a paste of flour and lime upon its drying. ಹಿಟ್ಟಿನ ಮುಳ್ಳುಗಳ ಹಾಗೆ ಇರುವಂತಹ ರಚನೆಗಳನ್ನುhiṭṭina muḷḷugaḷa hāge iruvantaha racanegaḷannuThey make cone like shapes using paste of flour ನಿಧಾನವಾಗಿ ಬರೆಯುತ್ತಾ ಅದು ಒಣಗಿದ ಮೇಲೆnidhānavāgi bareyuttā adu oṇagida mēleWhile doing it very slowly and after it gets dried ಚುಟ್ಟಿ ಇಟ್ಟು ಆ ರೀತಿ ಈ ರೀತಿ ಬರೆಯುತ್ತಾರೆ.cuṭṭi iṭṭu ā rīti ī rīti bareyuttāre.They make dots like this ಆಮೇಲೆ ಕಣ್ಣಿನ ಸುತ್ತಲೂ ಬೇರೆ ಬೇರೆ ರೀತಿಯāmēle kaṇṇina suttalū bēre bēre rītiyaThen, writes different lines around eyes ಈಗ ಕಪ್ಪು, ಬಿಳಿ, ಕೆಂಪು, ಅರಶಿಣ ಈ ಬಣ್ಣದ ರೇಖೆಗಳನ್ನು ಎಳೆಯುತ್ತಾರೆ.īga kappu, biḷi, kempu, araśiṇa ī baṇṇada rēkhegaḷannu eḷeyuttāre.with black, white, red, yellow colours. ಆಮೇಲ ಪುಷ್ಟವಾದ ಮೀಸೆ ಇರುತ್ತದೆ ಇದಕ್ಕೆ.āmēla puṣṭavāda mīse iruttade idakke.Then they attach a thick moustache and a beard. ಆಮೇಲೆ ಕೆಳಗೆ ಗಡ್ಡ ಇರುತ್ತದೆ.āmēle keḷage gaḍḍa iruttade. ಇತ್ತೀಚೆಗೆ ಕೆಂಪು ಗಡ್ಡವನ್ನೂ ಕೂಡಾ ಸೇರಿಸುತ್ತಾರೆittīcege kempu gaḍḍavannū kūḍā sērisuttāreNow a days they attach red beards also. ಹಿಂದೆ ಅದು ಇರಲಿಲ್ಲ. ಇರಲಿ, ಈ ಕಿರೀಟಕ್ಕೆ ಸರಿಯಾಗಿ ಇರುವಂತಹ ಕರ್ಣ ಪಾತ್ರ,hinde adu iralilla. irali, ī kirīṭakke sariyāgi iruvantaha karṇa pātra,It was not there previously. Matching with the Crown, ಕಿವಿಯನ್ನು ಮುಚ್ಚುಂತಹ ದೊಡ್ಡ ಅಳತೆಯ ಕರ್ಣ ಪಾತ್ರಗಳು.kiviyannu muccuntaha doḍḍa aḷateya karṇa pātragaḷu.suitable earlobes are made to cover the ears. ಆಮೇಲೆ ಇಲ್ಲಿ ಎದೆ ಪದಕ ಅಂತ ಹೇಳುತ್ತೇವೆ ಈ ಜಾಗವನ್ನು ಮುಚ್ಚುವಂತಹದ್ದು.āmēle illi ede padaka anta hēḷuttēve ī jāgavannu muccuvantahaddu.Then a breast pendant is placed on chest. ಆಮೇಲೆ ಈ ವೇಷದ ಭರ್ಜರಿತನಕ್ಕೆ ಒಂದು ಮೂರ್ನಾಲ್ಕು ಶಾಲುಗಳನ್ನು,āmēle ī vēṣada bharjaritanakke ondu mūrnālku śālugaḷannu,To enhance the grandeur of this colourful costume three or four showls are added. ವರ್ಣರಂಜಿತ ಶಾಲುಗಳು ಈಥರ, ಶಾಲುಗಳನ್ನು ಹಾಕಿಕೊಳ್ಳುತ್ತಾರೆ.varṇarañjita śālugaḷu īthara, śālugaḷannu hākikoḷḷuttāre.Colorful shawls like this ಸೋಗೋಲೆ ಅಂತ ಹೇಳುತ್ತಾರೆ ಅದನ್ನು.sōgōle anta hēḷuttāre adannu.They are called sogole ಸೋಗೆವಲ್ಲಿ ಅಥವಾ ಸೋಗೋಲೆ ಅಂತ ಹೇಳುತ್ತಾರೆsōgevalli athavā sōgōle anta hēḷuttāreAlso called Sogevalli or Sogole ಅಮೇಲೆ ಇದನ್ನು ವೀರಕಸೆ ಅಂತ ಹೇಳುತ್ತಾರೆ.amēle idannu vīrakase anta hēḷuttāre.It is called veerakathe. It is a beautiful formation draping down. ಎದುರಿಗೆ ಇಳಿದು ಬಿಟ್ಟಿರುವಂತಹ ಸುಂದರವಾದಂತಹ ಒಂದು ರಚನೆ.edurige iḷidu biṭṭiruvantaha sundaravādantaha ondu racane.An ornament called Bhujakeerthi is placed ವೀರಕಸೆ ಅಂತ ಹೇಳುತ್ತಾರೆ. ಈ ಭುಜವನ್ನು ಎತ್ತರಿಸಿ ತೋರಿಸುವಂತಹvīrakase anta hēḷuttāre. ī bhujavannu ettarisi tōrisuvantahaon the shoulder to increase the height of shoulder. ಸೊಗಸಾದ ಒಂದು ಆಭರಣಕ್ಕೆ ಭುಜಕೀರ್ತಿ ಎಂದು ಹೇಳುತ್ತೇವೆ. ಭುಜಕೀರ್ತಿ.sogasāda ondu ābharaṇakke bhujakīrti endu hēḷuttēve. bhujakīrti.The beautiful ornament is called Bhujakeerthi. ಆಮೇಲೆ ತೋಳುಕಟ್ಟು, ಇಲ್ಲಿ ಇದು ದಗಳೆ ಇಲ್ಲಿ ಕಪ್ಪುಬಣ್ಣದ ದಗಳೆಯನ್ನು ಉಪಯೋಗಿಸಿದ್ದಾರೆāmēle tōḷukaṭṭu, illi idu dagaḷe illi kappubaṇṇada dagaḷeyannu upayōgisiddāreThen an armlet in black colour is used. ಒಂದು ರೀತಿಯಲ್ಲಿ ಕಾಟು ಬಣ್ಣ ಅಂತಲೂ ಹೇಳಬಹುದು.ondu rītiyalli kāṭu baṇṇa antalū hēḷabahudu.It is a katu banna. ಸ್ಪಷ್ಟವಾದ ರೀತಿಯೇನು ಇರ್ಲಿಲ್ಲ. ಅದು ತಿಳಿದ ಮಟ್ಟಿಗೆ ಮಾಡಿದ್ದಾರೆ ಇರ್ಲಿ.spaṣṭavāda rītiyēnu irlilla. adu tiḷida maṭṭige māḍiddāre irli.There is no defined way of doing it. They do it as they like. ಸೊಗೋಲೆಯಲ್ಲಿ ನಾನಾ ರೀತಿಯ ರಂಗುಗಳಿರುತ್ತವೆ.sogōleyalli nānā rītiya raṅgugaḷiruttave.There are various colours in sogole. ಯಕ್ಷಗಾನದಲ್ಲಿ ಇದನ್ನು ಚಂದ ಮಾಡುತ್ತಾರೆ.yakṣagānadalli idannu canda māḍuttāre.They prepare it well in yakshagana. ಆದರೆ ಕಥಕ್ಕಳಿಯಲ್ಲಿ ಈ ಸೊಗೋಲೆಗಳನ್ನು ಅಷ್ಟು ಚಂದವಾಗಿ ಮಾಡುವುದಿಲ್ಲ.ādare kathakkaḷiyalli ī sogōlegaḷannu aṣṭu candavāgi māḍuvudilla.But, in kathakkali these sogoles are not that fine. ಇಲ್ಲಿ ಅದನ್ನು ಸ್ವಲ್ಪ ವರ್ಣರಂಜಿತವಾಗಿ ಮಾಡುತ್ತಾರೆ.illi adannu svalpa varṇarañjitavāgi māḍuttāre.They make it little colourful. ಆಮೇಲೆ ಇಲ್ಲಿ ಮೊಣಕಾಲಿನಿಂದ ಕೆಳಗೆ ಕೆಲವು ರಚನೆಗಳು ಉಂಟು.āmēle illi moṇakālininda keḷage kelavu racanegaḷu uṇṭu.Then, there are some designs below the knee. ಈಗ ಅದನ್ನು ಸ್ವಲ್ಪ ಬೇರೆ ತರ ಮಾಡುತ್ತಾರೆ, ಇರಲಿ.īga adannu svalpa bēre tara māḍuttāre, irali.Now a days they do it differently. ಅಲ್ಲಿ ಕಾಲು ಕೆಳಗೆ ಕಾಲು ಗೆಜ್ಜೆ ಬರುತ್ತದೆ. ಕಾಲು ಮೆತ್ತೆ ಅಂತ ಬರುತ್ತದೆ.alli kālu keḷage kālu gejje baruttade. kālu mette anta baruttade.They place the trinket there. ಆಮೇಲೆ ಇನ್ನೊಂದು ಬಳೆ ಅಂತ ಬರುತ್ತದೆ ಕಾಲು ಬಳೆāmēle innondu baḷe anta baruttade kālu baḷeLeg pad is also used. ಅಷ್ಟೆಲ್ಲಾ ಬರುವಾಗ ಇನ್ನೊಂದು ಸುತ್ತು ಹಾಗೆ ಮೇಲೆ ಬರುತ್ತದೆ.aṣṭellā baruvāga innondu suttu hāge mēle baruttade.A ring is also placed above. ಅಷ್ಟಾಗುವಾಗ ಮೊಣಕಾಲಿನವರೆಗೆ ರಚನೆಗಳು ಬರುವುದರಿಂದaṣṭāguvāga moṇakālinavarege racanegaḷu baruvudarindaIt looks fat also. Normally, the feet are left as such. ಮೊನಕಾಲು ಸಂಪೂರ್ಣ ಆವೃತವಾಗುತ್ತದೆ.monakālu sampūrṇa āvṛtavāguttade.With these designs the knees are completely covered. ಮತ್ತೆ ಅದು ಪುಷ್ಟವಾಗಿಯೂ ಕಾಣುತ್ತದೆ.matte adu puṣṭavāgiyū kāṇuttade. ಪಾದವನ್ನು ಸಾಮಾನ್ಯವಾಗಿ ಹಾಗೆಯೇ ಬಿಟ್ಟಿರುತ್ತಾರೆ.pādavannu sāmānyavāgi hāgeyē biṭṭiruttāre.It looks fat also. Normally, the feet are left as such. ಇದು ಅದರ ಸಾಮಾನ್ಯ ಒಂದು ಸ್ವರೂಪ ಈ ಬಣ್ಣದ ವೇಷದ್ದು.idu adara sāmānya ondu svarūpa ī baṇṇada vēṣaddu.This is a general description of this bannada vesha or yakshagana.
Word Transliteration Meaning
ಯಕ್ಷಗಾನyakṣagānaYakshagana, the art form
ಎನ್ನುವennuvaCalled
ಸರ್ವಾಂಗsarvāṅgaAll round
ಸುಂದರವಾದsundaravādaBeautiful
ಕಲೆkaleArt
ಸಂಪೂರ್ಣsampūrṇaCompletely
ಸ್ವತಂತ್ರsvatantraIndependent
ಕಾರಣkāraṇaReason
ಬೆಳೆಯುತ್ತಾbeḷeyuttāGrowing
ಅದರಲ್ಲಿadaralliIn that
ವಿಕಾಸಮುಖವಾಗಿvikāsamukhavāgiGrowth oriented
ವಿಂಗಡಿಸಿ/ವಿಭಜಿಸಿviṅgaḍisi/vibhajisiClassify / Divide
ತೆಂಕುತಿಟ್ಟುteṅkutiṭṭuSouthern
ಬಡಗುತಿಟ್ಟುbaḍagutiṭṭuNorthern
ಬಡ ಬಡಗುತಿಟ್ಟುbaḍa baḍagutiṭṭuNorth Northen
ವೇಷಭೂಷಣvēṣabhūṣaṇaCostume
ವ್ಯತ್ಯಾಸvyatyāsaDifference
ಸಾದೃಶ್ಯವೂsādṛśyavūLikeness
ಗೌಣgauṇaUndepart
ವರ್ಣvarṇaColor
ಸಾರಥ್ಯsārathyaGuiding
ರಾತ್ರಿrātriNight
ವೇಷvēṣaCostume
ಕ್ರಮೋಚಿತವಾಗಿkramōcitavāgiIn order
ಪೀಠಿಕೆpīṭhikePrelude / Preface
ಚಿತ್ರcitraFigure
ಅಸುರasuraVillain
ಪಾತ್ರpātraCharacter
ತಾಮಸtāmasaNegative
ಗಾಂಭೀರ್ಯgāmbhīryaSerious
ನಿಧಾನnidhānaSlow
ಆಕರ್ಷಕākarṣakaAttractive
ಎದುರುeduruOpposite
ಉತ್ಸಾಹಿutsāhiEnthusiastic
ತರುಣtaruṇaAdult
ಸ್ತ್ರೀstrīWomen
ಮುಖವರ್ಣಿಕೆmukhavarṇikeMake-up
ಕಾಟು ಬಣ್ಣkāṭu baṇṇaBlack color
ರಾಜ ಬಣ್ಣrāja baṇṇaDignified color
ಹಸಿರುhasiruGreen
ಕೆಂಪುkempuRed
ಕಪ್ಪುkappuBlack
ಬಿಳಿbiḷiWhite
ತೆರೆtereScreen
ನಿಲ್ಲಿಸಿnillisiStop
ಸ್ನಾನsnānaBath
ದಂತದಾವಣdantadāvaṇaTooth
ಭಸ್ಮಧಾರಣbhasmadhāraṇaCovered with ash
ಸಾಂಕೇತಿಕsāṅkētikaSymbolic
ಚೆಂಡೆceṇḍePercussion instrument
ಆರ್ಭಟೆārbhaṭeNoisy
ಹಳೆಯhaḷeyaOld
ಕಾರ್ಯಕ್ರಮkāryakramaProgram
ಮೇಳmēḷaTroup
ಮೂರುmūruThree
ಜನjanaPeople
ವಿಶಿಷ್ಟviśiṣṭaUnique
ಶೃಂಗಾರśṛṅgāraRomantic
ಭಂಗಿbhaṅgiPose
ಕಿರೀಟkirīṭaHeadgear / Crown
ದೊಡ್ಡdoḍḍaBig
ಅಳತೆaḷateMeasure
ಮುಖವಾಡmukhavāḍaMask
ಸ್ವರೂಪsvarūpaShape
ಹಿಟ್ಟಿನhiṭṭinaFlour
ಸುಣ್ಣsuṇṇaLime
ಬೆರಕೆberakeMix
ಮುಳ್ಳುmuḷḷuNib
ರಚನೆracaneShape
ಅರಶಿಣaraśiṇaSaffron
ರೇಖೆrēkheLine
ಎಳೆಯುತ್ತಾರೆeḷeyuttāreTo draw line
ಪುಷ್ಟವಾದpuṣṭavādaHealthier
ಮೀಸೆmīseMoustache
ಗಡ್ಡgaḍḍaBeard
ಕಿವಿkiviEar
ಮುಚ್ಚುmuccuShut
ಎದೆedeChest
ಪದಕpadakaLocket
ಭರ್ಜರಿತನbharjaritanaGrandness
ಶಾಲುśāluWrapround/Shawl
ಭುಜbhujaShoulder
ಸೊಗಸಾದsogasādaLoveliness
ಆಭರಣಕ್ಕೆābharaṇakkeOrnament
ತೋಳುಕಟ್ಟುtōḷukaṭṭuShoulder pad
ಗೆಜ್ಜೆgejjeJingle
ಬಳೆbaḷeBangle
ಮೊನಕಾಲುmonakāluKnee

Regional variations

Yakshagana (Kannada: ಯಕ್ಷಗಾನ) is a traditional theatre form that combines dance, music, dialogue, costume, make-up, and simple stage techniques with a unique style of presentation. Yakshagana is mainly prevalent in the coastal and adjacent districts of Karnataka state and is closely connected with the other forms found in the neighbouring states of Andhra Pradesh, Kerala, Tamilnadu and Maharastra. Unlike other forms, it is more vibrant, plural and dynamic.

Scholars have placed the origin of Yakshagana from the 11th to 15th Century. However, this art form acquired new dimension with a poet Parthi Subba (1600) who converted scripto and phono centric medieval Kannada texts in to body centric texts. Currently there are more than 500 texts, 36 professional and 1200 amateur troupes performing Yakshagana throughout the year. There are about 5000 professional and more than 15000 armature artists involved in this vibrant art form, so far not shown any signs of quantity decline, in spite of very fast 'modernization' and 'urbanization'.

In this video, you will come across many new words, spoken in a particular geographical area, and not found in other areas of Karnataka and very specific to Yakshagana. These words are transmitted orally from artists to artists with few minor variations.

Examples:

ಯಕ್ಷಗಾನ
ರಂಗ ಪ್ರಯೋಗ
ತಿಟ್ಟು
ಮಟ್ಟು
ವೇಷಭೂಷಣ
ಭಾಗವತಿಕೆ
ವೇಷ
ಪೀಠಿಕೆ ವೇಷ
ಆಹಾರ್ಯ
ಮುದ್ರೆ
ಅಸುರ ಪಾತ್ರ
ತಾಮಸ
ಎದುರು ವೇಷ
ಪ್ರತಿನಾಯಕ
ಬಣ್ಣದ ವೇಷ
ಪುಂಡು ವೇಷ
ಸ್ತ್ರೀವೇಷ
ಕಿರೀಟ
ದಗಳೆ
ಕಾಟು ಬಣ್ಣ
ರಾಜ ಬಣ್ಣ
ಮುಖವರ್ಣಿಕೆ
ಹನುಮಂತ ವೇಷ
ಕಾಟು ಬಣ್ಣ
ಒಡ್ಡೋಲಗ
ಹತ್ತಿಯ ಉಂಡೆ
ಚುಟ್ಟಿ
ಸೋಗೋಲೆ
ವೀರಕಸೆ
ಭುಜಕೀರ್ತಿ
ತೋಳುಕಟ್ಟು
ಕಥಕ್ಕಳಿ
ಕಾಲು ಗೆಜ್ಜೆ
ಬಳೆ

ಯಕ್ಷಗಾನವು ನೃತ್ಯ, ಹಾಡು, ಮಾತು ಮತ್ತು ವೇಷ-ಭೂಷಣಗಳನ್ನು ಒಳಗೊಂಡ ಒಂದು ಕಲೆ.  ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇದು ಜನಪ್ರಿಯವಾಗಿದೆ. ಇದರಲ್ಲಿ ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಎಂಬ ಎರಡು ಪ್ರಬೇಧಗಳಿವೆ.

ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.

1. ಪ್ರಸಂಗ: ಯಕ್ಷಗಾನದಲ್ಲಿ ಒಂದು ‘ಪ್ರಸಂಗ ‘ ಇರುತ್ತದೆ. ಉದಾಹರಣೆಗೆ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧ. ಈ ಕಥೆಯನ್ನು "ಗದಾಯುದ್ದ ಪ್ರಸಂಗ" ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪ್ರಸಂಗಗಳನ್ನು ಪುರಾಣಗಳಿಂದ ಆಯ್ದುಕೊಳ್ಳುತ್ತಾರೆ.
2. ಪಾತ್ರಧಾರಿಗಳು:ಪ್ರಸಂಗದ ಕಥೆಯನ್ನು ಅಭಿನಯಿಸುವವರು ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪಾತ್ರ - ಹೀಗೆ ಪ್ರಸಂಗದಲ್ಲಿ ಅನೇಕ ಪಾತ್ರಗಳಿರುತ್ತವೆ. ಕಲಾವಿದರು ಅವುಗಳನ್ನು ಅಭಿನಯಿಸುತ್ತಾರೆ.
3. ವೇಷಭೂಷಣ:ಯಕ್ಷಗಾನದಲ್ಲಿ ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಅವು ತುಂಬಾ ಆಕರ್ಷಕವಾಗಿರುತ್ತವೆ.
4. ಭಾಗವತಿಕೆ: ಭಾಗವತಿಕೆ ಅಥವಾ ಹಾಡುಗಾರಿಕೆ ಇದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರ ಹಾಡಿಗೆ ಕಲಾವಿದರು ಕುಣಿಯುತ್ತಾರೆ.
5. ಮಾತುಗಾರಿಕೆ: ಭಾಗವತರ ಹಾಡಿಗೆ ಕಲಾವಿದರು ಅರ್ಥ ಹೇಳುತ್ತಾರೆ. ಆಗ ಕತೆಯು ಜನರಿಗೆ ಸುಲಭವಾಗಿ ತಲುಪುತ್ತದೆ.

Please visit a local performance and write 10 regional words in Kannada Languages. Also try to explain it in Kannada.

Send your completed homework by email to klcjnu@gmail.com