Bhūtā Worship

Transcription
Transliteration
Translation
ಕರ್ನಾಟಕದ ಆರಾಧನಾ ಪರಂಪರೆ ಬಹಳ ಶ್ರೀಮಂತವಾದಂತಹ ಆರಾಧನಾ ಪರಂಪರೆ.karnāṭakada ārādhanā parampare bahaḷa śrīmantavādantaha ārādhanā parampare.Tradition of Worship in Karnataka is a rich tradition. ಉತ್ತರ ಕರ್ನಾಟಕ ಮೇಲ್ಭಾಗದಿಂದ ನಾವು ಆರಂಭ ಮಾಡುವುದಾದರೆuttara karnāṭaka mēlbhāgadinda nāvu ārambha māḍuvudādareAs we move from northern part of Karnataka we observe that ಗುಲ್ಬರ್ಗಾ ಮತ್ತು ಬೀದರ್ ಭಾಗದಲ್ಲಿ ವೀರಪ್ಪನ ಆರಾಧನೆ ಇದೆ,gulbargā mattu bīdar bhāgadalli vīrappana ārādhane ide,worship of Veerappa is there in Gulbarga and Bidar districts. ಸ್ವಲ್ಪ ಕೆಳಗಡೆ ಬಂದರೆ ಶಿವಮೊಗ್ಗ ಭಾಗದಲ್ಲಿ ಜುಂಜಪ್ಪನ ಆರಾಧನೆ ಇದೆ.svalpa keḷagaḍe bandare śivamogga bhāgadalli juñjappana ārādhane ide.Further south, we see that there is worship of Nanjappa in Shimogga district. ಹಾಗೆಯೇ ಮೈಸೂರು ಭಾಗಕ್ಕೆ ಬಂದರೆ ಮಲೈ ಮಹದೇಶ್ವರ ಮತ್ತು ಮಂಟೇ ಸ್ವಾಮಿಯ ಆರಾಧನೆ ಇದೆ.hāgeyē maisūru bhāgakke bandare malai mahadēśvara mattu maṇṭē svāmiya ārādhane ide.Similarly we observe that there is worshipping of Malai Mahadeshwara and Monteswamy in Mysore area. ಅದೇ ರೀತಿಯಲ್ಲಿ ಕರ್ನಾಟಕದ ಕರಾವಳಿ ಭಾಗಕ್ಕೆ ಬಂದರೆadē rītiyalli karnāṭakada karāvaḷi bhāgakke bandareWhen we reach coastal area of Karnataka ನಾವು ಅದನ್ನು ತುಳುನಾಡು ಅಂತಹ ಕರೆಯುತ್ತೇವೆ.nāvu adannu tuḷunāḍu antaha kareyuttēve.we call it Tulunadu. ಈ ತುಳುನಾಡಿನಲ್ಲಿ ಭೂತಗಳ ಆರಾಧನೆ ಬಹಳ ಮುಖ್ಯವಾದಂತಹ ಒಂದು ಪ್ರಾಚೀನವಾದಂತಹ ಆರಾಧನಾ ಪರಂಪರೆ.ī tuḷunāḍinalli bhūtagaḷa ārādhane bahaḷa mukhyavādantaha ondu prācīnavādantaha ārādhanā parampare.In this Tulunadu the practice of worshipping demons is an important ancient tradition. ಈ ಭೂತಗಳನ್ನು ನಾವು ದೈವ ಎನ್ನುವಂತಹ ಹೆಸರಿನಲ್ಲಿ ಕೂಡಾ ಕರೆಯುತ್ತೇವೆ.ī bhūtagaḷannu nāvu daiva ennuvantaha hesarinalli kūḍā kareyuttēve.These demons are also called “daiva” by us. ಭೂತಾರಾಧನೆಯನ್ನು ದೈವಾರಾಧನೆ ಎಂಬ ಹೆಸರಿನಲ್ಲಿ ಕರೆಯುತ್ತೇವೆ.bhūtārādhaneyannu daivārādhane emba hesarinalli kareyuttēve.We also call demon worship as Daivaradhane. ಭೂತಾರಾಧನೆಯ ಬಗೆಗೆ ಆರಂಭಿಕವಾಗಿ ಅಧ್ಯಯನ ನಡೆಸಿರುವ ಪಾಶ್ಚಾತ್ಯ ವಿದ್ವಾಂಸರುbhūtārādhaneya bagege ārambhikavāgi adhyayana naḍesiruva pāścātya vidvāṁsaruWestern scholars carried out initial studies about demon worship ವಿಶೇಷವಾಗಿ Missionaryಗಳು ಭೂತಗಳನ್ನು ಒಂದು ರೀತಿಯ ಪ್ರೇತಾತ್ಮಗಳುviśēṣavāgi Missionarygaḷu bhūtagaḷannu ondu rītiya prētātmagaḷuespecially missionary scholars. We call demons as a kind of liberated souls. ಅದು ಮನುಷ್ಯರಿಗೆ ಕೆಟ್ಟದ್ದನ್ನು ಮಾಡುವ ಶಕ್ತಿಗಳು ಒಂದು ರೀತಿಯ Devil ಎನ್ನುವಂತಹ ಹೆಸರಿನಲ್ಲಿ, ಅದನ್ನು ಬಳಸಿಕೊಂಡು ಬಂದಿದ್ದಾರೆadu manuṣyarige keṭṭaddannu māḍuva śaktigaḷu ondu rītiya Devil ennuvantaha hesarinalli, adannu baḷasikoṇḍu bandiddāreThey are not devils who may harm humans. ಆದರೆ ಭೂತಗಳು ನಂಬಿದವರಿಗೆ ಒಳಿತನ್ನು ಮಾಡುವಂತಹ ನಂಬದವರಿಗೆ ಕೆಡುಕನ್ನು ಮಾಡವಂತಹ ಒಂದು ರೀತಿಯ ದೈವಿಕ ಶಕ್ತಿಗಳುādare bhūtagaḷu nambidavarige oḷitannu māḍuvantaha nambadavarige keḍukannu māḍavantaha ondu rītiya daivika śaktigaḷuBut demons are a kind of divine spirits who do good to believers and no harm to non-believers. Divine Spirit ಎನ್ನುವಂತಹ ಅರ್ಥದಲ್ಲಿ ನಾವು ಭೂತಗಳನ್ನು ನೋಡಿಕೊಂಡು ಬಂದಿದ್ದೇವೆDivine Spirit ennuvantaha arthadalli nāvu bhūtagaḷannu nōḍikoṇḍu bandiddēveWe have been refering Bhootas as divine spirit ಸಾಮಾನ್ಯವಾಗಿ ಭೂತಗಳನ್ನು ಅಲೌಕಿಕ ಲೋಕದ ಶಕ್ತಿಗಳು ಎಂಬುದಾಗಿ ತಿಳಿಯುತ್ತೆsāmānyavāgi bhūtagaḷannu alaukika lōkada śaktigaḷu embudāgi tiḷiyutteWe consider demons in general as forces of the unseen world. ಅಲೌಕಿಕ ಲೋಕದ ಶಕ್ತಿಗಳು ಅಂದರೆ, ಅದು ಒಂದು ನಮಗೆ ಕಣ್ಣಿಗೆ ಕಾಣದಂತಹ ಒಂದು ಲೋಕದ ಶಕ್ತಿಗಳು,alaukika lōkada śaktigaḷu andare, adu ondu namage kaṇṇige kāṇadantaha ondu lōkada śaktigaḷu,Forces of the unseen world are forces not seen by our eyes. ಹಾಗಾಗಿ ಅದನ್ನು ಮಾಯಾಲೋಕದ ಶಕ್ತಿಗಳು, ಭೂತಗಳನ್ನು ಮಾಯಾ ಎಂಬುದಾಗಿ ನಾವು ಕರೆಯುತ್ತೇವೆ.hāgāgi adannu māyālōkada śaktigaḷu, bhūtagaḷannu māyā embudāgi nāvu kareyuttēve.Thus, we call them forces of mayaloka, demons, maya etc. ಹಾಗಾಗಿ ನಾವು ಲೌಕಿಕದ ಜನರು, ಅಲೌಕಿಕ ಲೋಕದ ಶಕ್ತಿಗಳನ್ನುhāgāgi nāvu laukikada janaru, alaukika lōkada śaktigaḷannuWe, the people of the physical world attribute to ಒಂದು ರೀತಿಯ ಆರಾಧನಾ ಸಂದರ್ಭದಲ್ಲಿ ಮನುಷ್ಯನ ಮೂಲಕ ಪ್ರಕಟವಾಗುವುದಕ್ಕೆondu rītiya ārādhanā sandarbhadalli manuṣyana mūlaka prakaṭavāguvudakkeof forces of non physical world to express through humans during certain worship festivals. ನಾವು ಮಾಯದಿಂದ ಜೋಗಕ್ಕೆ ಬರುವುದು ಎಂಬುದಾಗಿ ಹೇಳಿ,nāvu māyadinda jōgakke baruvudu embudāgi hēḷi,‘moving from maya to Joga’ ಈ ಆರಾಧನೆಯನ್ನು ಒಂದು ನಿಗದಿತವಾದಂತಹ ಸ್ಥಳ, ಕಾಲ ಮತ್ತು ಸಂದರ್ಭದಲ್ಲಿ ನಡೆಸುವುದೇī ārādhaneyannu ondu nigaditavādantaha sthaḷa, kāla mattu sandarbhadalli naḍesuvudēPerforming this worship at a definite place, time and occasion can be called ಆ ಭೂತಾರಾಧನೆ ಎಂಬುದಾಗಿ ನಾವು ಹೇಳಬಹುದು.ā bhūtārādhane embudāgi nāvu hēḷabahudu.demon worship or Bhutharadhane. ಭೂತಗಳ ಬಗೆಗೆ ಅಧ್ಯಯನ ನಡೆಸಿರುವಂತಹ ವಿದ್ವಾಂಸರು, ಭೂತಗಳನ್ನು ಸುಮಾರು ಬಗೆಗೆ ವರ್ಗೀಕರಿಸಿದ್ದಾರೆ.bhūtagaḷa bagege adhyayana naḍesiruvantaha vidvāṁsaru, bhūtagaḷannu sumāru bagege vargīkarisiddāre.Bhuthas or demons are classified variously by scholars who have done research on demons. ಬಹಳ ಮುಖ್ಯವಾಗಿ, ಪ್ರಾಣಿಗಳು ಭೂತಗಳಾಗಿ, ಆರಾಧನೆಗೊಳ್ಳುವಂತಹ ವರ್ಗೀಕರಣ.bahaḷa mukhyavāgi, prāṇigaḷu bhūtagaḷāgi, ārādhanegoḷḷuvantaha vargīkaraṇa.Most important is the classification in which animals are worshipped as Bhuthas or demons. ಬಹಳ ಮುಖ್ಯವಾಗಿ ಇಲ್ಲಿ ಹಂದಿ, ಹುಲಿ, ಕೋಣ ಮತ್ತು ಮಂಗbahaḷa mukhyavāgi illi handi, huli, kōṇa mattu maṅgaMost importantly, we have been worshipping swine, tiger, bison and monkey ಇವುಗಳನ್ನು ಪಂಜುರ್ಲಿ, ಪಿಲಿ ಚಾಮುಂಡಿ, ಮೈಸಂದಾಯ ಅಥವಾ ನಂದಿಕೋಣ, ಮತ್ತು ಹನುಮಂತivugaḷannu pañjurli, pili cāmuṇḍi, maisandāya athavā nandikōṇa, mattu hanumantaas Panjurli, Pili Chamundi, Mysandaya or Nandikona and Hanumantha. ಈ ರೀತಿಯಲ್ಲಿ ಒಂದು ಆರಾಧನೆ ಮಾಡಿಕೊಂಡು ಬರುತ್ತೇವೆ.ī rītiyalli ondu ārādhane māḍikoṇḍu baruttēve.We have been worshipping like this ಎರಡನೇ ವರ್ಗ ಮನುಷ್ಯರು ಆತ್ಮಹತ್ಯೆ ಅಥವಾ ಕೊಲೆಯ ಮೂಲಕ ಅವರು ಸತ್ತು ಭೂತಗಳಾಗಿರುವಂತಹ ಒಂದು ವರ್ಣeraḍanē varga manuṣyaru ātmahatye athavā koleya mūlaka avaru sattu bhūtagaḷāgiruvantaha ondu varṇaWhen a person commits suicide or is killed, he becomes a demon, forming the second category. ಬಹಳ ವಿಶೇಷವಾಗಿ ಕೋಟಿ-ಚೆನ್ನಯ್ಯ, ಕಲ್ಕುಡ, ಕಲ್ಲುರ್ಟಿ ಇಂತಹ ಮುಂತಾದ ಹೆಸರುಗಳನ್ನು ಅವರು ಹೇಳಬಹುದು.bahaḷa viśēṣavāgi kōṭi-cennayya, kalkuḍa, kallurṭi intaha muntāda hesarugaḷannu avaru hēḷabahudu.Especially names like Koti-chennaiah, Kalkudka, Kallurti etc. can be quoted. ಪುರಾಣ ಲೋಕದ ಭೂತಗಳು ಎನ್ನುವಂತಹ ವರ್ಗೀಕರಣ.purāṇa lōkada bhūtagaḷu ennuvantaha vargīkaraṇa.It is a class belonging to mythology. ಅದರಲ್ಲಿ ಬಹಳ ಮುಖ್ಯವಾಗಿ ನಾವು ಜುಮಾದಿ, ಲೆಕ್ಕಿಸಿರಿ, ಈ ರೀತಿಯ ಭೂತಗಳನ್ನು ನಾವು ಕಾಣಬಹುದು.adaralli bahaḷa mukhyavāgi nāvu jumādi, lekkisiri, ī rītiya bhūtagaḷannu nāvu kāṇabahudu.We can see very importantly, demons like Jumadi, Lekkasiri etc. ಇನ್ನು ಮುಂದಕ್ಕೆ ಹೋದರೆ ದಲಿತ ಭೂತಗಳ ಒಂದು ವರ್ಗ,innu mundakke hōdare dalita bhūtagaḷa ondu varga,If we go further, ವಿಶೇಷವಾಗಿ, ತನ್ನಿಮಾನಿಗ, ಕೊರಗ ತನಿಯ, ಕೋಡ್ದಬ್ಬು ಮುಂತಾದ ದೈವಗಳ ಹೆಸರುviśēṣavāgi, tannimāniga, koraga taniya, kōḍdabbu muntāda daivagaḷa hesaruthere is dalit demon class especially Thannimaniga, Koraga Thaniya, Koddabbu etc. ಸ್ತ್ರೀ ಭೂತಗಳಿದ್ದಾವೆ. ಸತ್ಯದೇವತೆ, ಉಳ್ಳಾಲ್ದಿ ಮುಂತಾದ ಭೂತಗಳನ್ನು ಸ್ತ್ರೀಭೂತಗಳಾಗಿ ವರ್ಗೀಕರಿಸಿstrī bhūtagaḷiddāve. satyadēvate, uḷḷāldi muntāda bhūtagaḷannu strībhūtagaḷāgi vargīkarisiWho are actually feminine demons. Sanjedevatha, Ullaldi etc. demons are also categorized as feminine demons. ಹೀಗೆ ಬೇರೆ ಬೇರೆ ಜನರು ಅವರ ಅನುಕೂಲಕ್ಕೆ ತಕ್ಕ ಹಾಗೆ ಭೂತಗಳನ್ನು ವರ್ಗೀಕರಣವನ್ನು ಮಾಡಿಕೊಂಡಿದ್ದಾರೆ.hīge bēre bēre janaru avara anukūlakke takka hāge bhūtagaḷannu vargīkaraṇavannu māḍikoṇḍiddāre.Thus, people have categorized demons into various groups as per their convenience. ಭೂತಗಳು ಎಷ್ಟಿವೆ ಎನ್ನುವುದರ ಬಗೆಗೆ, ಖಚಿತವಾದ ಮಾಹಿತಗಳು ನಮ್ಮಲ್ಲಿಲ್ಲ.bhūtagaḷu eṣṭive ennuvudara bagege, khacitavāda māhitagaḷu nammallilla.There is no precise data with us about the exact number of Bhootas. ಆರಂಭಿಕ ಕಾಲದಲ್ಲಿ 100ಕ್ಕಿಂತಲೂ ಅಧಿಕ ಭೂತ ಇವೆ, ಎಂಬುದಾಗಿ ನಾವು ತಿಳಿದಿದ್ದೆವು,ārambhika kāladalli 100kkintalū adhika bhūta ive, embudāgi nāvu tiḷididdevu,We had learnt earlier that there are more than 100 demons. ಆನಂತರ 360ಕ್ಕಿಂತಲೂ ಹೆಚ್ಚು ಭೂತಗಳಿವೆ ಎನ್ನುವುದರ ಪಟ್ಟಿಯನ್ನು ನಾವು ಸಿದ್ದ ಮಾಡಿದೆವು.ānantara 360kkintalū heccu bhūtagaḷive ennuvudara paṭṭiyannu nāvu sidda māḍidevu.Then, we prepared a list of more than 360 demons. 500ಕ್ಕಿಂತಲೂ ಅಧಿಕ ಭೂತಗಳಿವೆ ಎಂಬುದಾಗಿ, ನಮಗೆ ಆನಂತರದ ಅಧ್ಯಯನದಲ್ಲಿ ತಿಳಿದು ಬಂತು.500kkintalū adhika bhūtagaḷive embudāgi, namage ānantarada adhyayanadalli tiḷidu bantu.Later on it was decided that there are more than 500 bhootas through research ಆದರೆ, ಖಚಿತವಾಗಿ ಹೇಳುವುದಾದರೆ, ತುಳುವಿನಲ್ಲಿ ಸಾರಾಮಾನ್ಯ ಭೂತೊಲು ಎನ್ನುವಂತಹ ಶಬ್ದ ಬಂದಿರುವುದರಿಂದādare, khacitavāgi hēḷuvudādare, tuḷuvinalli sārāmānya bhūtolu ennuvantaha śabda bandiruvudarindaBut to be precise, because there is a mention of "Saramanya Bhutholu." 1000ಕ್ಕಿಂತಲೂ ಅಧಿಕ ಭೂತ ಇದೆ ಎಂಬುದಾಗಿ ನಾವು ತಿಳಿಯಬಹುದು.1000kkintalū adhika bhūta ide embudāgi nāvu tiḷiyabahudu.in Tulunadu there are more than one thousand demons ತುಳುನಾಡಿನಲ್ಲಿ ಆರಾಧನೆಗೊಳ್ಳುವಂತಹ ಪ್ರಮುಖವಾದ ಭೂತಗಳನ್ನು ಹೆಸರಿಸುವುದಾದರೆ,tuḷunāḍinalli ārādhanegoḷḷuvantaha pramukhavāda bhūtagaḷannu hesarisuvudādare,To name a few prominent demons worshipped in Tulunadu we can state the names like ಪಂಜುರ್ಲಿ, ಪಿಲಿಚಾಮುಂಡಿ, ಮೈಸಂದಾಯ, ಕೋಡ್ದಬ್ಬು, ಕೋಟಿ-ಚೆನ್ನಯ್ಯ, ಅಬ್ಬಗ ಧಾರಾಗ, ಸಿರಿpañjurli, pilicāmuṇḍi, maisandāya, kōḍdabbu, kōṭi-cennayya, abbaga dhārāga, siriPanjurli, Pilichamundi, Mysandaya, Koddabbu, Koti Chennaiah, Abbaga Dharaga, Siri ಮುಂತಾದ ಹೆಸರುಗಳನ್ನು ನಾವು ಹೆಸರಿಸಬಹುದು.muntāda hesarugaḷannu nāvu hesarisabahudu.etc. ಇವುಗಳಲ್ಲಿ ಅವಳಿ ದೈವಗಳಿದ್ದಾವೆ.ivugaḷalli avaḷi daivagaḷiddāve.There are twin demons among these demons. ಬಹಳ ಮುಖ್ಯವಾಗಿ ಕೋಡ್ದಬ್ಬು, ತನ್ನಿಮಾನಿಗ, ಕಾಂತಾಬಾರೆ-ಬುದಬಾರೆ, ಅಬ್ಬಗ-ದಾರಗ, ಸೊನ್ನೆ-ಗಿಂಡೆ ಇತ್ಯಾದಿ ಹೆಸರುಗಳನ್ನ ನಾವು ಹೇಳಬಹುದು.bahaḷa mukhyavāgi kōḍdabbu, tannimāniga, kāntābāre-budabāre, abbaga-dāraga, sonne-giṇḍe ityādi hesarugaḷanna nāvu hēḷabahudu.Very importantly, Koddabbu, Thannimaniga, Kanthabare – Budabare, Abbaga-Daraga, Sonne-Gindeetal can be cited. ತ್ರಿವಳಿಗಳಾಗಿ ಆರಾಧನೆಗಳಿರುವಂತಹ ಕೆಲವು ದೈವಗಳನ್ನು ಹೆಸರಿಸುವುದಾದರೆ,trivaḷigaḷāgi ārādhanegaḷiruvantaha kelavu daivagaḷannu hesarisuvudādare,Triplet demons being worshipped are ಕೋಡ್ದಬ್ಬು, ಕೋಟಿ-ಚೆನ್ನಯ್ಯ ಮತ್ತು ಕಿನ್ನಿದಾರು ಮುಂತಾದ ಹೆಸರುಗಳನ್ನು ಕೂಡಾ ನಾವು ಹೇಳಬಹುದು.kōḍdabbu, kōṭi-cennayya mattu kinnidāru muntāda hesarugaḷannu kūḍā nāvu hēḷabahudu.Koddabbu, Kotichennaiah and Kinnidaru etc. ತುಳುವಿನಲ್ಲಿ ಬಹಳಷ್ಟು ಮೌಖಿಕ ಮಹಾಕಾವ್ಯಗಳಿದ್ದಾವೆ.tuḷuvinalli bahaḷaṣṭu maukhika mahākāvyagaḷiddāve.There are a number of oral epics in Tulu. ಭೂತಾರಾಧನೆಗೆ ಸಂಬಂಧಪಟ್ಟ ಹಾಗೆ ಅದರ ಸಾಹಿತ್ಯಿಕ ಭಾಗವಾದಂತಹ ಮೌಖಿಕ ಕಾವ್ಯಗಳನ್ನbhūtārādhanege sambandhapaṭṭa hāge adara sāhityika bhāgavādantaha maukhika kāvyagaḷannaLiterary Part of demon worship is the oral epics. ನಾವು ಸಂಧಿ ಅಥವಾ ಪಾಡ್ದನಗಳು ಎಂಬುದಾಗಿ ನಾವು ಕರೆಯುತ್ತೇವೆ.nāvu sandhi athavā pāḍdanagaḷu embudāgi nāvu kareyuttēve.We call them Sandhi or PaDdanas. ಈ ಪಾಡ್ದನಗಳು ವಿಶೇಷವಾಗಿ, ಭೂತಗಳ ಹುಟ್ಟು ಬೆಳವಣಿಗೆ, ಪ್ರಸರಣ ಮತ್ತು ಕಾರಣಿಕಗಳನ್ನು ಹೇಳುವಂತಹ ಒಂದು ಕಾವ್ಯಗಳು.ī pāḍdanagaḷu viśēṣavāgi, bhūtagaḷa huṭṭu beḷavaṇige, prasaraṇa mattu kāraṇikagaḷannu hēḷuvantaha ondu kāvyagaḷu.These pad danas narrate especially birth, growth of demons, their extent and influences. ವಿಶೇಷವಾಗಿ ಇದನ್ನು ಭೂತಾರಾಧನೆಯ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಾರ್ಥನಾ ರೂಪದಲ್ಲಿ ಹೇಳುವುದರಿಂದ ಅದಕ್ಕೆ ಪಾಡ್ದನ ಎನ್ನುವಂತಹ ಹೆಸರು ಕೂಡಾ ಬಂದಿದೆ.viśēṣavāgi idannu bhūtārādhaneya bēre bēre sandarbhagaḷalli prārthanā rūpadalli hēḷuvudarinda adakke pāḍdana ennuvantaha hesaru kūḍā bandide.It has got the name Paddana because it is sung on various occasions of demon worship as a prayer. ಅಥವಾ ಹಾಡು ಅಥವಾ ಪಾಡ್-ಹಾಡು ಎನ್ನುವುದರಿಂದಲೂ ಕೂಡಾ ಪಾಡ್ದನ ಎಂಬ ಹೆಸರು ಬಂದಿದೆ ಅಂತಹ ತಿಳಿದುಕೊಳ್ಳಬಹುದು.athavā hāḍu athavā pāḍ-hāḍu ennuvudarindalū kūḍā pāḍdana emba hesaru bandide antaha tiḷidukoḷḷabahudu.We can also understand that pad means singing and hence the word pad dana is derived. ಸಂದಿ ಎನ್ನುವಂತಹದ್ದು ಪಾಡ್ದನಕ್ಕಿಂತ ಸ್ವಲ್ಪ ಕಿರಿದಾದಂತಹ ಒಂದು ಹಾಡಿನ ರೀತಿ.sandi ennuvantahaddu pāḍdanakkinta svalpa kiridādantaha ondu hāḍina rīti.Sandi is a smaller version of the song when compared to Pad dana. ಒಂದು ಸುದೀರ್ಘವಾದ ಪಾಡ್ದನದಲ್ಲಿ ಅನೇಕ ಸಣ್ಣ ಸಣ್ಣ ಸಂದಿಗಳಿರುವುದರಿಂದ ಅದನ್ನು ನಾವು ಸಂದಿ ಎಂಬುದಾಗಿ ಕರೆಯುತ್ತೇವೆ.ondu sudīrghavāda pāḍdanadalli anēka saṇṇa saṇṇa sandigaḷiruvudarinda adannu nāvu sandi embudāgi kareyuttēve.There are several small sandis in a long pad dana. ಇದಲ್ಲದೆ, ತುಳುವಿನಲ್ಲಿ ಎರಡು ಮಹಾಕಾವ್ಯಗಳಿವೆ.idallade, tuḷuvinalli eraḍu mahākāvyagaḷive.Besides, there are two epics in Tulu – Kotichennaiah and Siri. ಒಂದು ಕೋಟಿ ಚೆನ್ನಯ್ಯ ಮತ್ತು ಸಿರಿ.ಅದು ದೀರ್ಘತೆಯ ಸ್ಥಿತಿಯಿಂದ ಮಹಾಕಾವ್ಯದ ಸಾಲಿಗೆ ನಾವು ಸೇರಿಸಿಕೊಳ್ಳುತ್ತೇವೆ.ondu kōṭi cennayya mattu siri.adu dīrghateya sthitiyinda mahākāvyada sālige nāvu sērisikoḷḷuttēve.It is taken as epics from the long duration point of view. ಕೋಟಿ ಚೆನ್ನಯ್ಯರ ಸಂದಿ ಸುಮಾರು 25 ಗಂಟೆಗಳಿಗಿಂತ ಹೆಚ್ಚು ಕಾಲ ಹಾಡಬಹುದಾದಂತಹkōṭi cennayyara sandi sumāru 25 gaṇṭegaḷiginta heccu kāla hāḍabahudādantahaSandi of Koti Chennaiah can be sung over more than 25 hours. ಒಂದು ಸಂದಿ. ಸಿರಿ ಸಂದಿ ಕೂಡ 20-25 ಗಂಟೆ ಹಾಡಬಹುದಾದಂತಹ ಒಂದು ಹಾಡಾಗಿರುವುದರಿಂದ ಇವೆರಡನ್ನೂ ನಾವು ಮಹಾಕಾವ್ಯಗಳ ಸಾಲಿಗೆ ಸೇರಿಸಿಕೊಂಡಿದ್ದೇವೆ.ondu sandi. siri sandi kūḍa 20-25 gaṇṭe hāḍabahudādantaha ondu hāḍāgiruvudarinda iveraḍannū nāvu mahākāvyagaḷa sālige sērisikoṇḍiddēve.Sandi of Siri can also be sung for 20 to 25 hours and hence both are taken as great epics.
Word Transliteration Meaning
ಮೇಲ್ಭಾಗmēlbhāgaSurface
ಸ್ವಲ್ಪsvalpaLittle
ಕೆಳಗಡೆkeḷagaḍeDownward
ಮನುಷ್ಯmanuṣyaHuman
ನಂಬಿಕೆnambikeBelief
ಒಳಿತುoḷituGoodness
ಶಕ್ತಿśaktiEnergy
ಅಲೌಕಿಕalaukikaSupernatural
ಲೋಕlōkaWorld
ಕಣ್ಣುkaṇṇuEye
ವರ್ಗೀಕರಿಸಿvargīkarisiClassify
ಪ್ರಾಣಿprāṇiAnimal
ಹಂದಿhandiPig
ಹುಲಿhuliTiger
ಕೋಣkōṇaBuffalo
ಮಂಗmaṅgaMonkey
ಆತ್ಮಹತ್ಯೆātmahatyeSuicide
ಕೊಲೆkoleMurder
ಸಾವುsāvuDeath
ಪುರಾಣpurāṇaMyth
ಮೌಖಿಕmaukhikaOral
ಮಹಾಕಾವ್ಯmahākāvyaEpic
ಸಾಹಿತ್ಯsāhityaLiterature
ಕಾವ್ಯkāvyaPoetry
ಸಣ್ಣsaṇṇaSmall
ಎರಡುeraḍuTwo
2525Twenty five

Negative Suffixes

Kannada has negative markers, negative constructions, adjectives, adverbs and the prohibitive mood.

There are separate negative constructions to indicate non-existence and to deny something.

1. ತುಳುನಾಡಿನಲ್ಲಿ ಭೂತಾರಾಧನೆ ಇದೆ / ಭೂತಾರಾಧನೆ ಇಲ್ಲ
2. ಅಲ್ಲಿ ಭೂತದ ಮುಖವಾಡಗಳು ಇವೆ / ಮುಖವಾಡಗಳು ಇಲ್ಲ
3. ತುಳುವಿನಲ್ಲಿ ಎರಡು ಮಹಾಕಾವ್ಯಗಳಿವೆ / ಎರಡು ಮಹಾ ಕಾವ್ಯಗಳಿಲ್ಲ.
4. ಬೀದರ ಮತ್ತು ಗುಲಬರ್ಗಾದಲ್ಲಿ ಬೀರಪ್ಪನ ಆರಾಧನೆ ಇದೆ/ ಆರಾಧನೆ ಇಲ್ಲ
5. ಮಾಯದಿಂದ ಜೋಗಕ್ಕೆ ಬರುತ್ತವೆ / ಬರುವುದಿಲ್ಲ.
6. ಅಲ್ಲಿ ಭೂತದ ಗುಡಿ ಇದೆ / ಭೂತದ ಗುಡಿ ಇಲ್ಲ.
7. ಸಂದಿ ಎಂದು ಕರೆಯುತ್ತೇವೆ / ಕರೆಯುವುದಿಲ್ಲ.
8. ಮೈಸೂರು ಭಾಗದಲ್ಲಿ ಮಾದೇಶ್ವರನಿದ್ದಾನೆ / ಮಾದೇಶ್ವರನಿಲ್ಲ.
9. ಸಿರಿ ಜಾತ್ರೆಗೆ ಹೋಗಿದ್ದೇನೆ / ಜಾತ್ರೆಗೆ ಹೋಗಿಲ್ಲ.
10. ಪಾಡ್ದನ ಹಾಡಿದ್ದಾರೆ / ಪಾಡ್ದನ ಹಾಡಿಲ್ಲ.
11. ಭೂತಾರಾಧನೆಗೆ ಹೋಗಿದ್ದೇನೆ / ಭೂತಾರಾಧನೆಗೆ ಹೋಗಿಲ್ಲ.
12. ನಾನು ಇವತ್ತು ಜುಂಜಪ್ಪನ ಜಾತ್ರೆಗೆ ಹೋಗುತ್ತೇನೆ/ ಹೋಗುವುದಿಲ್ಲ
13. ನಾಳೆ ನಾಯಕನ ಹಟ್ಟಿ ಜಾತ್ರೆ ಇದೆ/ ಜಾತ್ರೆ ಇಲ್ಲ.
14. ಜನಪದ ಹಾಡು ಸೊಗಸಾಗಿದೆ / ಸೊಗಸಾಗಿಲ್ಲ.
15. ಒಗಟು ಹೇಳಲು ಬರುತ್ತದೆ / ಬರುವುದಿಲ್ಲ.
16. ಒಂದು ಗಾದೆ ಹೇಳು / ಗಾದೆ ಹೇಳುವುದಿಲ್ಲ.

The negative imperative or prohibitive is formed by adding i and bēḍa (bēḍi in the plural).

1. ಅವುಗಳನ್ನು ನಂಬ ಬೇಕು / ನಂಬ ಬೇಡ
2. ಅಲ್ಲಿಗೆ ಹೋಗಬೇಕು / ಅಲ್ಲಿಗೆ ಹೋಗ ಬೇಡಿ
3. ರೆಕಾರ್ಡು ಮಾಡಿರಿ / ರೆಕಾರ್ಡು ಮಾಡಬೇಡಿರಿ
4. ಗುಡಿಗೆ ಬಾ / ಗುಡಿಗೆ ಬರಬೇಡ

1. Translate into English

ಭಾರತದ ಅನೇಕ ಆರಾಧನಾ ಪರಂಪರೆಗಳಲ್ಲಿ 'ಭೂತಾರಾಧನೆ' ಕೂಡ ಒಂದು. ಇದನ್ನು 'ದೈವಾರಾಧನೆ' ಎಂದೂ ಕರೆಯುತ್ತಾರೆ . ಇದು ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಜನಪ್ರಿಯವಾಗಿದೆ. ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹಲವು ಬಗೆಯ ದೈವಗಳಿವೆ . ಭೂತಗಳ ಒಟ್ಟು ಸಂಖ್ಯೆಯು ಸಾವಿರವನ್ನೂ ಮೀರಿದೆ.

2. Translate into Kannada

būta kōla is a ritual folk dance. This is very popular in coastal Karnataka. Bhuta dance is very beautiful. Bhutas are worshiped by Tulu speaking people. Jumadi, Panjurli, Kalkuḍa, Chāmundi, Bobbariya are few popular Bhutas.

3. Collect names of 10 Bhutas

Send your completed homework by email to klcjnu@gmail.com