Autobiography of an Artist

Transcription
Transliteration
Translation
ಚಿತ್ರಕಲೆ ಅನ್ನೋದು ಅದೊಂದು ಜೀವನದ್ದು ಒಂದು Part ಅದು. ಸಂಗೀತ ಇರ್ಬಹುದು; ನೃತ್ಯ ಇರ್ಬಹುದು, ನಾಟಕ ಇರ್ಬಹುದು.citrakale annōdu adondu jīvanaddu ondu Part adu. saṅgīta irbahudu; nṛtya irbahudu, nāṭaka irbahudu.Art is a part of life. It could be music, may be dance or drama. ನಾವೆಲ್ಲ ಅಷ್ಟೇನೆ, ನಾವು ಹೆಚ್ಚು ಹೆಚ್ಚು ಎಷ್ಟು ಅದನ್ನು ಅನುಭವಿಸ್ತಾ ಹೋಗ್ತೀವೋ ಎಷ್ಟೆಷ್ಟು ಅಭ್ಯಾಸ ಮಾಡ್ತಾ ಹೋಗ್ತೀವಿ,nāvella aṣṭēne, nāvu heccu heccu eṣṭu adannu anubhavistā hōgtīvō eṣṭeṣṭu abhyāsa māḍtā hōgtīvi,As much as we experience it, as much as we practice it, ಎಷ್ಟೆಷಟು ಅಭ್ಯಾಸ ಮಾಡ್ತಾ ಹೋಗ್ತಿವಿ, ಎಷ್ಟೆಷ್ಟು ಕಲೀತಾ ಹೋಗ್ತೀವೋ, ಅಷ್ಟು ಅದು ವಿಶಾಲವಾಗಿ ಹೋಗುತ್ತೆ.eṣṭeṣaṭu abhyāsa māḍtā hōgtivi, eṣṭeṣṭu kalītā hōgtīvō, aṣṭu adu viśālavāgi hōgutte.as much as we learn it, so many expanses it gets. ಆ ವಿಶಾಲತನವನ್ನು ನಾವು ಕಂಡ್ಕೊಂಡಿದ್ದು, ನಮ್ಮ ಕಾವಾಗ Collegeಗೆ ಸೇರಿದ್ಮೇಲೆ.ā viśālatanavannu nāvu kaṇḍkoṇḍiddu, namma kāvāga Collegege sēridmēle.We realised that expanse when we joined our CAVA College ಅಲ್ಲಿ ಗೊತ್ತಾಯಿತು ಚಿತ್ರ ಅಂತಂದ್ರೆ ಏನು? Line ಅಂದ್ರೆ ಏನು, Color ಅಂದ್ರೆ ಏನು, Form ಅಂದ್ರೆ ಏನು, Texture ಅಂತಂದ್ರೆ ಏನು.alli gottāyitu citra antandre ēnu? Line andre ēnu, Color andre ēnu, Form andre ēnu, Texture antandre ēnu.There we learnt, what is a painting? What is plain, what is colour, what is form, what is texture? Etc. ಅಂದ್ರೆ ಇದರ ಭಾಷೆ ಅಲ್ಲಿಂದಾನೆ ಸುರುವಾಗೋದು. ರೇಖೆಗಳ ಮೂಲಕ,andre idara bhāṣe allindāne suruvāgōdu. rēkhegaḷa mūlaka,That means, its language starts from there-through lines. ಈಗ ನಾವು ರೇಖಾ ಚಿತ್ರ ಅಂತ ಹೇಳ್ತೀವಿ. ರೇಖಾ ಚಿತ್ರ ಅಂದ್ರೆ ಅವತ್ತಿನ ದಿವಸಕ್ಕೆ ಅದೊಂದು Key sketch ಅಂತ ಹೇಳೋವ್ರು.īga nāvu rēkhā citra anta hēḷtīvi. rēkhā citra andre avattina divasakke adondu Key sketch anta hēḷōvru.Now, we call it drawing. Drawing was called, inthose days as key sketch. ಯಾಕಂದ್ರೆ Painting ಮಾಡೋಕ್ಕಿಂತ ಮುಂಚೆ, ಏನಪ್ಪ ಒಂದು Plan ಮಾಡ್ಕೊಂಡು ಮಾಡೋದು ಅಂತ.yākandre Painting māḍōkkinta muñce, ēnappa ondu Plan māḍkoṇḍu māḍōdu anta.Because, before paintings a plan was drawn. ಆದ್ರೆ ಚಿತ್ರ ಅದು Plan ಮಾಡ್ಕೊಂಡು ಮಾಡುವಂತಾದ್ದಲ್ಲ.ādre citra adu Plan māḍkoṇḍu māḍuvantāddalla.But, a picture is not a thing to be planned ಚಿತ್ರ್ರ ಏನು ಅಂತಂದ್ರೆ, ನಮ್ಮ ಭಾವನೆ ಏನು ಭಾವನೆ ಸ್ಪುರಿಸುತ್ತೋ ಅದನ್ನು ಅದೇ ರೀತಿಯಲ್ಲಿ ವ್ಯಕ್ತಿ ಪಡಿಸುವಂಥಾದ್ದೇ ಚಿತ್ರ.citrra ēnu antandre, namma bhāvane ēnu bhāvane spurisuttō adannu adē rītiyalli vyakti paḍisuvanthāddē citra.A picture or painting is one which happens spontaneously directly from the mind according to the emotions or feelings. ಅದು ಆ Timeನಲ್ಲಿ ಹಾಗೇನೇ ವ್ಯಕ್ತ ಪಡಿಸೋದಾದ್ರೆ, ಅಷ್ಟೇ Fresh ಆಗಿರುತ್ತೆ.adu ā Timenalli hāgēnē vyakta paḍisōdādre, aṣṭē Fresh āgirutte.If it is expressed on the spur of the moment is remains fresh. ಹಂಗಂತ ಅಂದ್ಬಿಟ್ಟು ಎಲ್ಲಾರೂ ಅಷ್ಟೇ Instinctive ಆಗರ್ತಾರೆ ಅಂತೇನಿಲ್ಲ.haṅganta andbiṭṭu ellārū aṣṭē Instinctive āgartāre antēnilla.It doesn’t mean that everyone is so instinctive in expression. ಕೆಲವು, ಒಬ್ಬೊಬ್ಬ, ಪ್ರತಿಯೊಬ್ಬ ವ್ಯಕ್ತಿಯೂ ಅವನ ವ್ಯಕ್ತಿತ್ವಕ್ಕೆ ತಕ್ನ ಹಾಗೆ ಅವನಿರ್ತಾನೆ.kelavu, obbobba, pratiyobba vyaktiyū avana vyaktitvakke takna hāge avanirtāne.Every person has got his own personality ಕೆಲವ್ರು ತುಂಬಾ Instinctive ಆಗಿರ್ತಾರೆ ಕೆಲವ್ರು ತುಂಬಾ Planned ಆಗಿರ್ತಾರೆ.kelavru tumbā Instinctive āgirtāre kelavru tumbā Planned āgirtāre.Some are very instinctive. Some are very well planned and organised ಅವರು ಅವರ ಕೆಲಸ ಮಾಡುವಾಗ ಅಷ್ಟೆ ಪ್ಲ್ಯಾನ್ ಹಾಕ್ಕೊಂಡೇ ಮಾಡ್ತಾರೆ.avaru avara kelasa māḍuvāga aṣṭe plyān hākkoṇḍē māḍtāre.They do their works per a well laid out plan ಇನ್ನು ಕೆಲವರು ಅದನ್ನು ಒಂದು 5-6 workಗಳನ್ನು ಮಾಡಿದ ಮೇಲೆ Final ಆಗಿ.innu kelavaru adannu ondu 5-6 workgaḷannu māḍida mēle Final āgi. ಇನ್ನೊಂದು Workನ್ನು ಹ್ಯಂಗೆ ಮಾಡ್‍ಬಹುದು ಆ ತರಹ ಬರೀಯೋವ್ರೂ ಇರ್ತಾರೆ.innondu Worknnu hyaṅge māḍ‍bahudu ā taraha barīyōvrū irtāre.Some people finalise their next work after doing 5 or 6 works ಇದೆಲ್ಲ ನನಗೆ ಗೊತ್ತಾಗಿದ್ದು... ಅಲ್ಲಿಗೆ ಹೋದ್ಮೇಲೆ.idella nanage gottāgiddu... allige hōdmēle.I learnt about all these aspects after going there ಆ ಚಿತ್ರಗಳನ್ನು ಮಾಡುವಾಗ ನಾವು ಇಲ್ಲಿದ್ದ, ಹಿಂದೆ ಪರಂ¥ರಾಗತವಾಗಿ ಕಲಿತಿರುವ.....ā citragaḷannu māḍuvāga nāvu illidda, hinde paraṁ¥rāgatavāgi kalitiruva..... ನಮ್ಮ ಚಿತ್ರಗಳನ್ನು ನಾವು ಅಲ್ಲಿ ನಮ್ಮ Class teacher ಜೊತೆ ಎಲ್ಲಾ ನಾವು Discuss ಮಾಡುವಾಗ ಅವ್ರೆಲ್ಲ ಕೂತ್ಕೊಂಡು ಕೇಳುವಾಗ,namma citragaḷannu nāvu alli namma Class teacher jote ellā nāvu Discuss māḍuvāga avrella kūtkoṇḍu kēḷuvāga,While doing those pictures we were discussing about our paintings as we have learnt traditionally with our teachers ಅವರು ಹೇಳೋರು, ನಿಜವಾಗ್ಲು ಚಿತ್ರ ಅನ್ನೋದನ್ನು ಯಾಕ್ಬರೀಬೇಕು. ಎಲ್ಲಿ ಬರೀಬೇಕು, ಇದು ಹುಟ್ಕೊಂಡಿದ್ದು ಎಲ್ಲಿಂದ,avaru hēḷōru, nijavāglu citra annōdannu yākbarībēku. elli barībēku, idu huṭkoṇḍiddu ellinda,They used to tell about why we should draw pictures and where should we draw paintings. We discussed about how it originated. ಅಂದ್ರೆ ಚಿತ್ರಾ ಅನ್ನೋದು ಹುಟ್ಕೊಂಡಿದ್ದೇಗೆ, ಮನುಷ್ಯನ ಅವನ Necessityಗೋಸ್ಕರ, ಅವನ ಒಂದು Communicationಗೋಸ್ಕರ ಹುಟ್ಕೊಂಡಿದ್ದು, ಚಿತ್ರಾ ಅನ್ನೋದು.andre citrā annōdu huṭkoṇḍiddēge, manuṣyana avana Necessitygōskara, avana ondu Communicationgōskara huṭkoṇḍiddu, citrā annōdu.Pictures originated because of the necessity of man for his communication ಆ Communication ಹೇಗೆ ಅಂತಂದ್ರೆ ನಮ್ಮ ಅನಾದಿ ಕಾಲದಲ್ಲಿ ಎಲ್ಲಾ ಮನುಷ್ಯರು,ā Communication hēge antandre namma anādi kāladalli ellā manuṣyaru, ಕಾಡು, ಕಾಡಲ್ಲಿ ವಾಸಿಸುತಿದ್ದರು, ಕಾಡಲ್ಲೆಲ್ಲಾ ವಾಸವಾಗ್ವಾಗ ಅವರು ಒಬ್ಬೊಬ್ಬರೇ ವಾಸಿಸ್ತಿದ್ರು. ಆಮೇಲೆ ಗುಂಪು ಗುಂಪಾಗಿ ವಾಸಿಸೋಕ್ಕೆ ಶುರು ಮಾಡಿದ್ರು.kāḍu, kāḍalli vāsisutiddaru, kāḍallellā vāsavāgvāga avaru obbobbarē vāsistidru. āmēle gumpu gumpāgi vāsisōkke śuru māḍidru.That communication began when our ancestors were living separately in forests during ancient times. Later, they started living in groups ಆ ಗುಂಪಿಗೆ ಅಂದ್ರೆ, ಅವೆಲ್ಲ ಊಹೆಗಳು, ಕೆಲವು ಊಹೆಗಳು ಇವೆ.ā gumpige andre, avella ūhegaḷu, kelavu ūhegaḷu ive. ಆ ಗುಂಪಿಗೆ ನಾನು ಮತ್ತೆ ಇನ್ನೊಂದ್ಕಡೆ ಇಲ್ಲಿಂದ, ಇನ್ನೊಂದು ಕಡೆ ನಾನು ಹೋಗ್ತಾ ಇದ್ದೀನಿ ಬೇಟೆಗೆ ಹೋಗ್ತಾ ಇರ್ಬಹುದು.ā gumpige nānu matte innondkaḍe illinda, innondu kaḍe nānu hōgtā iddīni bēṭege hōgtā irbahudu. ಇಲ್ಲಾಂತಂದ್ರೆ ಆ ಜಾಗಾನ ಬಿಟ್ಟು ಇನ್ನೊಂದ್ಕಡೆ ಹೋಗ್ತಾ ಇದ್ದೀನಿ ಅಂತ ಹೇಳೋದಕ್ಕೆ, ಇಲ್ಲಾ ನಾನು ಬೇಟೆಗೆ ಹೋಗ್ತಾ ಇದ್ದೀನಿ ಅಂತ ಅನ್ನೋದಕ್ಕೆ ಇರ್‍ಬಹುದು,illāntandre ā jāgāna biṭṭu innondkaḍe hōgtā iddīni anta hēḷōdakke, illā nānu bēṭege hōgtā iddīni anta annōdakke ir‍bahudu, ಇಲ್ಲಾ ಬೇಟೆ ಆಡಿ ಮುಗಿಸಿ ಬಂದು, ನಾನು ಇಂಥಾ ಬೇಟೆ ಆಡಿದೆ ಅಂತ ಹೇಳೋದಕ್ಕೆ....illā bēṭe āḍi mugisi bandu, nānu inthā bēṭe āḍide anta hēḷōdakke.... ಆತರಹ ಇರ್ಬಹುದು, ಇಲ್ಲಾ ಬೇಟೇನ್ನ ನಾನು ಆಡೋಕ್ಕೆ ಹೋಗಕ್ಕೆ ಮುಂಚೇನೇ ನಮಗೆ ಬೇಟೆ ಸಿಗುತ್ತೆ, ಇಂತಾ ಬೇಟೇನ್ನ ನಾನು ಕೊಲ್ತೀನಿ ಅನ್ನೋದು, ಇವೆಲ್ಲ ಊಹೆಗಳು.ātaraha irbahudu, illā bēṭēnna nānu āḍōkke hōgakke muñcēnē namage bēṭe sigutte, intā bēṭēnna nānu koltīni annōdu, ivella ūhegaḷu. ಈ ಚಿತ್ರಗಳನ್ನು ಅದನ್ನು ಅವರು ಬಂಡೆಗಳ ಮೇಲೆ, ಅದೂ ಒಂದು ಪ್ರಾಣಿಗಳ ರಕ್ತದಿಂದ ಆಗಿರ್ಬಹುದು, ಇಲ್ಲಾ ಮಣ್ಣಿನಿಂದ,ī citragaḷannu adannu avaru baṇḍegaḷa mēle, adū ondu prāṇigaḷa raktadinda āgirbahudu, illā maṇṇininda,It is surmised that when one was going from one group to another group or for hunting or to inform about his hunt to others he was drawing pictures on rocks with animal blood or naturally occurring different coloured soils or lime. ಅಲ್ಲೇ ಸಿಗುವ Natural resource .... ಬೇರೆ ಬೇರೆ ಕಲ್ಲರ್‍ದು, ಬಣ್ಣಗಳದ್ದು... ಮಣ್ಣಿರ್‍ಬಹುದು, ಸುಣ್ಣ ಇರ್ಬಹುದುallē siguva Natural resource .... bēre bēre kallar‍du, baṇṇagaḷaddu... maṇṇir‍bahudu, suṇṇa irbahudu ಇದನ್ನೆಲ್ಲಾ ಉಪಯೋಗಿಸ್ಕೊಂಡು ಅವರು ಅವರು ಚಿತ್ರಗಳನ್ನು ಬರ್ದಿರೋವು.idannellā upayōgiskoṇḍu avaru avaru citragaḷannu bardirōvu. ಆ ಬರ್ದಿದ್ದು, ಅವರು ಹೋದಾಗ ಇನ್ನೊಬ್ಬ ವ್ಯಕ್ತಿ ಆಗ್ಲಿ ಇನ್ನೊಂದು ಗುಂಪು ಆಗ್ಲಿ ಅದೇ ಗುಂಪಿನ ಇನ್ನೊಬ್ಬ ವ್ಯಕ್ತಿ ಬಂದು ಅಲ್ಲಿ ಕೂತ್ಕೊಂಡು ನೋಡಿದಾಗ,ā bardiddu, avaru hōdāga innobba vyakti āgli innondu gumpu āgli adē gumpina innobba vyakti bandu alli kūtkoṇḍu nōḍidāga,When another person or group came there he or they could understand through pictures. ಆ ಚಿತ್ರ ನೋಡಿದಾಗ ಅವರಿಗೆ ಅದೇನು ಗೊತ್ತಾಗೋದು,ā citra nōḍidāga avarige adēnu gottāgōdu, ಅದರಿಂದ ಈ ಚಿತ್ರಗಳು ಏನು ಹೇಳತ್ತೆ ಅಂತಂದ್ರೆ ಚಿತ್ರ ಅನ್ನೋದು ಬರೀ ಚಿತ್ರ ಅಲ್ಲ.adarinda ī citragaḷu ēnu hēḷatte antandre citra annōdu barī citra alla.They were not mere pictures but had aesthetic appeal. ನೋಡೋದಕ್ಕೆ ಸೌಂದರ್ಯದ್ದು. ದೃಷ್ಟಿಯಿಂದ ಒಂದೇ ಅಲ್ಲಾ, ಚಿತ್ರ ಅನ್ನೋದು ಒಂದು ಭಾಷೆ.nōḍōdakke saundaryaddu. dṛṣṭiyinda ondē allā, citra annōdu ondu bhāṣe.It is not only from viewing angle but also the picture itself was language. ಈ ಭಾಷೆ ನಮಗೆ ಮೊದಲು ಸುರು ಆಗಿದ್ದೇ ಈ ಭಾಷೆ.ī bhāṣe namage modalu suru āgiddē ī bhāṣe.Our language began in this way. ಈ ಭಾಷೆಗಳ ಮೂಲಕಾನೇ ನಾವು ಇವತ್ತಿನ ದಿವಸಕ್ಕೆ ನಮ್ಮ ಈ ಇತಿಹಾಸ ಎಲ್ಲವನ್ನೂ ನಾವು ಓದ್‍ಬೇಕು ಅಂತಂದ್ರೆ, .ī bhāṣegaḷa mūlakānē nāvu ivattina divasakke namma ī itihāsa ellavannū nāvu ōd‍bēku antandre, .We are able to read our history through such pictures ತುಂಬಾ ನಮಗೆ Help ಮಾಡೋದು ಇದೇ ಚಿತ್ರಗಳು ಇವತ್ತಿಗೂ ಸಹಾಯ ಮಾಡೋದುtumbā namage Help māḍōdu idē citragaḷu ivattigū sahāya māḍōduThese pictures help us in understanding man’s beginnings and we are proud of it ಚಿತ್ರ ಅಂತಂದ್ರೆ ಬರೀ ಕಲ್ಪನೆ ಅಂತಲ್ಲ. ಕಲ್ಪನೆ ಮಾಡ್ಕೊಂಡು ಚಿತ್ರ ಬರೆಯೋದು....citra antandre barī kalpane antalla. kalpane māḍkoṇḍu citra bareyōdu....Picture does not mean only imaginary ಅದು ಕಲ್ಪನೆ ಬೇಕು. ಕಲಾವಿದ ಪ್ರತಿಯೊಬ್ಬ ಕಲಾವಿದನಿಗೂನೇ ಆ.... ಯಾವುದೇ ರೀತಿಯ ಕಲಾವಿದ ಆಗಲಿ, ಅವನಿಗೆ ಕಲ್ಪನೆ ಅನ್ನೋದು ತುಂಬಾ ಇಂಪಾರ್ಟೆಂಟ್.adu kalpane bēku. kalāvida pratiyobba kalāvidanigūnē ā.... yāvudē rītiya kalāvida āgali, avanige kalpane annōdu tumbā impārṭeṇṭ.For every artist, imagination is required. Imagination is very important for every artist ಆದರೆ ಕಲ್ಪನೆ ಅನ್ನೋದು ಅದೊಂದೇ ಮುಖ್ಯ ಅಲ್ಲ., ಕಲ್ಪನೆ ಏನ್ಬೇಕಾದ್ರೂ ಮಾಡ್ಕೋಬಹುದು.ādare kalpane annōdu adondē mukhya alla., kalpane ēnbēkādrū māḍkōbahudu.But, it is not the only important thing. One can imagine anything ಆದರೆ ನಮ್ಮ ಜೀವನ ಜೊತೆಗೆ, ಜೀವನಕ್ಕೆ ಹತ್ತಿರವಾಗಿರ್ಬೇಕು ನಮ್ಮ ಕಲ್ಪನೆಗಳು.ādare namma jīvana jotege, jīvanakke hattiravāgirbēku namma kalpanegaḷu.But, our imaginations should be close to our life and living ಆಮೇಲೆ ಆ ಚಿತ್ರ ನಮ್ಮ ಸಮಾಜಕ್ಕೆ ಏನಾದ್ರೂ ಹೇಳುವಂತಾದ್ದಿರ್‍ಬೇಕು. ಇದು ಚಿತ್ರದಲ್ಲಿ ಬರೀ ಬಂದಿದ್ದಲ್ಲ. ಒಂದೇ ಕಡೆ ಬಂದಿದ್ದಲ್ಲ.āmēle ā citra namma samājakke ēnādrū hēḷuvantāddir‍bēku. idu citradalli barī bandiddalla. ondē kaḍe bandiddalla.Moreover, that picture should convey something to the society. This hasn’t come from one place. ನಮ್ಮ ಈ.... ವಾಸ್ತವವಾದ ಅನ್ನೋದು ಯಾವಾಗ ಸುರುವಾಯಿತೋ, ನಮ್ಮ ಜಗತ್ತಿನಲ್ಲಿ ವಾಸ್ತವವಾದ ಹನ್ನೊ..ಹತ್ತೊಂಬತ್ತನೇ ಶತಮಾನದಲ್ಲಿ ಸುರುವಾಯಿತು ಅದು ಒಂದು.namma ī.... vāstavavāda annōdu yāvāga suruvāyitō, namma jagattinalli vāstavavāda hanno..hattombattanē śatamānadalli suruvāyitu adu ondu.When the so called surrealism began in the world in nineteenth century ಆ ಟೈಮನಲ್ಲೇನೇ ನಾವು ಬರೀ ಯಾವುದೋ ಕಲ್ಪನೆಯಲ್ಲಿ ನಿಂತ್ಕೊಂಡು ಏನೇನೋ ಬರಿಯೋದ್ರ ಬದಲುā ṭaimanallēnē nāvu barī yāvudō kalpaneyalli nintkoṇḍu ēnēnō bariyōdra badalu ನಮಗೆ ನಿಜವಾಗ್ಲೂ ನಮ್ಮ ವಯಕ್ತಿಕವಾಗಿ ಜನ ಜೀವನದ ಜೊತೆ ಬೆರೆತು,namage nijavāglū namma vayaktikavāgi jana jīvanada jote beretu, ಜನಜೀವನದಲ್ಲಿ ಕಷ್ಟಗಳಿರ್‍ಬಹುದು, ಸುಖಗಳಿರ್‍ಬಹುದು, ಏನೇನು ಆಗ್ತಾ ಇದೆ,janajīvanadalli kaṣṭagaḷir‍bahudu, sukhagaḷir‍bahudu, ēnēnu āgtā ide,instead of drawing something under some imagination, they started drawing what they saw in reality around them in the society by mingling with the people to understand their pains and pleasures and to grasp what was going on. ಅದನ್ನೆಲ್ಲಾ ಚಿತ್ರಗಳ ಮೂಲಕ ನಾವು ವ್ಯಕ್ತ ಪಡಿಸಬೇಕು ಅನ್ನೋದು ಒಂದು ಬಂದಾಗ,adannellā citragaḷa mūlaka nāvu vyakta paḍisabēku annōdu ondu bandāga, ನಾವು ಕಣ್ಣಲ್ಲಿ ಏನು ನೊಡ್ತೀವೋ! ಅದನ್ನು ನಾವು ಚಿತ್ರ ಬರೀಬೇಕು ಅಂತ..,nāvu kaṇṇalli ēnu noḍtīvō! adannu nāvu citra barībēku anta.., ಅ... ಅದು... ಅಲ್ಲಿಂದ ಎಲ್ಲಾ ಚಿತ್ರಗಳು ಎಲ್ಲ ಅದರದೇ ಆದ ಲಕ್ಷಣಗಳೆಲ್ಲಾ ಬೇರೆ ಬೇರೆ ರೀತಿ ಆಗೋಕ್ ಶುರವಾಯ್ತದೆ...a... adu... allinda ellā citragaḷu ella adaradē āda lakṣaṇagaḷellā bēre bēre rīti āgōk śuravāytade... ಆವಾಗ ನಿಜವಾದ ಮನುಷ್ಯರುಗಳನ್ನು ಬರಿಯೋಕೆ ಸುರುಮಾಡಿದ್ರು. ಅದು ಗದ್ದೇಲಿ ಕೆಲಸ ಮಾಡ್ತಿರ್‍ಬಹುದು.āvāga nijavāda manuṣyarugaḷannu bariyōke surumāḍidru. adu gaddēli kelasa māḍtir‍bahudu.That is when they began drawing human beings Railway Stationನಲ್ಲಿ ಕಷ್ಟ ಪಟ್ಟು ದುಡೀತಾ ಇರೋರ್ ಇರ್ಬಹುದು. ಮನೆಯಲ್ಲಿ ಅ... ಅವರದೇ Family ಚಿತ್ರಗಳು ಇರ್ಬಹುದು.Railway Stationnalli kaṣṭa paṭṭu duḍītā irōr irbahudu. maneyalli a... avaradē Family citragaḷu irbahudu.That may be while working in the fields, working hard in the railway station or their own family pictures. ಈ ತರಹ ಬೇರೆ ಬೇರೆ ಚಿತ್ರಗಳೆಲ್ಲ, ಶುರುವಾದಾಗ ಮತ್ತೆ ಅಲ್ಲೂ ಅಷ್ಟೇನೇ.ī taraha bēre bēre citragaḷella, śuruvādāga matte allū aṣṭēnē.When such different paintings began different thoughts emerged ಅಲ್ಲಿಂದ ಚಿಂತನೆಗಳು ಬೇರೆ ಬೇರೆ ಶುರು ಆಯ್ತು. ಚಿತ್ರ ಅಂತಂದ್ರೆ ಚಿತ್ರ ಒಂದೇ ಅಲ್ಲ.allinda cintanegaḷu bēre bēre śuru āytu. citra antandre citra ondē alla. ಚಿತ್ರದ ಜೊತೆಗೆ...ಚಿತ್ರ ಅನ್ನೋದು ಒಟ್ಟು ಸಮಾಜದಲ್ಲಿ ನಾವೇನು ಅನುಭವಿಸ್ತೀವೋ ಏನು ನೋಡ್ತಿವೋ...ಕಾಣ್ತೀವೋ ಅದನ್ನು ಪ್ರತಿಬಿಂಬಿಸೋದು.citrada jotege...citra annōdu oṭṭu samājadalli nāvēnu anubhavistīvō ēnu nōḍtivō...kāṇtīvō adannu pratibimbisōdu.It is not a mere picture but it represents what we see and experience in the society. ಅದರ ಜೊತೆಗೇನೇ ಬದ್ಕೋದು ಅಂತ. ಆ ಇದರಲ್ಲಿ ಅದು ಬರೀ ಸೌಂದರ್ಯಕ್ಕೋಸ್ಕರ ಅಲ್ಲ ಚಿತ್ರ ಅನ್ನೋದು.adara jotegēnē badkōdu anta. ā idaralli adu barī saundaryakkōskara alla citra annōdu.It is like living with it. Picture is not meant only for aesthetics ಅದು ನಮಗೆ ಬದುಕೋದಕ್ಕೆ..... ಇರುವಂತಹ ಒಂದು ಕನ್ನಡಿ ಅಂತ ನಾನು ಹೇಳ್ತೀನಿ.adu namage badukōdakke..... iruvantaha ondu kannaḍi anta nānu hēḷtīni.I say that it is a mirror for our living.
Word Transliteration Meaning
ಚಿತ್ರಕಲೆcitrakaleFine Arts
ಸಂಗೀತsaṅgītaMusic
ನೃತ್ಯnṛtyaDance
ನಾಟಕnāṭakaDrama
ಹೆಚ್ಚುheccuMore
ಅಭ್ಯಾಸabhyāsaPractice
ಭಾಷೆbhāṣeLanguage
ಬೇಟೆbēṭeHunt
ಊಹೆūheSuspect
ಬಂಡೆbaṇḍeSmothered
ಬಣ್ಣbaṇṇaColor
ಸುಣ್ಣsuṇṇaLime
ಸೌಂದರ್ಯsaundaryaBeauty
ದೃಷ್ಟಿdṛṣṭiIn sight
ಹೆಮ್ಮೆhemmePride
ಕಲ್ಪನೆkalpaneImagination
ಕಲಾವಿದkalāvidaArtist
ವಾಸ್ತವvāstavaReality
ವ್ಯಕ್ತಪಡಿಸುvyaktapaḍisuExplain
ಕಣ್ಣುkaṇṇuEye
ಲಕ್ಷಣlakṣaṇaCharacter
ನಿಜnijaTruth
ಬರೆbareWrite
ಗದ್ದೆgaddeFarm
ಸಮಾಜsamājaSociety
ಕನ್ನಡಿkannaḍiMirror

ಹೆಚ್ಚುವರಿ ಓದಿಗೆ:

ಕರ್ನಾಟಕದ ಚಿತ್ರಕಲೆ:

ಭಾರತದ ಇತರ ಭಾಗಗಳಲ್ಲಿರುವಂತೆ ಕರ್ನಾಟಕದಲ್ಲೂ ಚಿತ್ರಕಲಾ ಸಂಪ್ರದಾಯ ಪ್ರಾಚೀನಕಾಲದಿಂದಲೂ ಬಂದಿದೆ.

ದೇವಾಲಯಗಳಲ್ಲಿ ಚಿತ್ರಕಲೆ: ಕನ್ನಡ ನಾಡಿನ ಚಿತ್ರಕಲೆಯ ಬಹುಭಾಗ ದೇವಾಲಯಗಳಿಗೆ ಸಂಬಂಧಿಸಿದೆ. ಮರದಲ್ಲಿ ದೇವಾಲಯಗಳನ್ನು ಕಟ್ಟುತ್ತಿದ್ದಾಗ ಮರಗಳಿಗೆ ಬಣ್ಣ ಹಾಕುತ್ತಿದ್ದರು. ದೇವರ ಮೂರ್ತಿ ಮತ್ತು ಉತ್ಸವ ಮೂರ್ತಿಗಳಿಗೂ ಬಣ್ಣ ಹಾಕುವ ಸಂಪ್ರದಾಯವಿತ್ತು.

ಹೊಯ್ಸಳರ ಕಾಲದಲ್ಲಿ ಶಿಲ್ಪಿಗಳು ದೇವಾಲಯದ ಸೊಬಗನ್ನು ಹೆಚ್ಚಿಸಲು ಚಿತ್ರ ಕಲಾವಿದರನ್ನು ಕರೆಯುತ್ತಿದ್ದರು. ದೇವಾಲಯದ ಭುವನೇಶ್ವರಿ, ಮತ್ತು ಹಜಾರದ ಒಳಗೋಡೆಗಳು ಚಿತ್ರಗಳಿಂದ ತುಂಬಿರುತ್ತಿದ್ದುವು. ವಿಜಯನಗರದ ಅರಸರ ಕಾಲದಲ್ಲಿ

ಚಿತ್ರಕಲೆ ಇನ್ನಷ್ಟು ಬೆಳೆಯಿತು. ಹಂಪಿಯ ಪಂಪಾವತಿ ದೇವಾಲಯದ ರಂಗಮಂಟಪದಲ್ಲಿ ಕಲ್ಯಾಣಸುಂದರ ಮತ್ತಿತ್ತರ ಚಿತ್ರಗಳಿವೆ. ಇವುಗಳನ್ನು ಇವು ತಂಜಾವೂರು ಶೈಲಿಯ ಚಿತ್ರಗಳು ಎಂದು ಕರೆದಿದ್ದಾರೆ.

ಮುಂದೆ, ಮೈಸೂರು ಅರಸರ ಕಾಲದಲ್ಲಿ ಕರ್ನಾಟಕದ ಚಿತ್ರ ಕಲೆ ಸುಂದರವಾಗಿ ಬೆಳೆಯಿತು.  ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು ವರ್ಣ ಚಿತ್ರಗಳ ಪ್ರೋತ್ಸಾಹಕರಾಗಿದ್ದರು. ೧೮ನೆಯ ಶತಮಾನದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಾಸಸ್ಥಾನವಾಗಿದ್ದ ಶ್ರೀರಂಗಪಟ್ಟಣದ ದರಿಯಾ ದೌಲತ್ ಅರಮನೆಯ ಹೊರಗೋಡೆಗಳ ಮೇಲೆ ನೂರಾರು ವರ್ಣ ಚಿತ್ರಗಳಿವೆ. ಬೆಂಗಳೂರಿನ ಟಿಪ್ಪು ಸುಲ್ತಾನನ ಅರಮನೆಯಲ್ಲೂ ೧೭೯೧ರ ಕಾಲಕ್ಕೆ ಸೇರಿದ ವರ್ಣಚಿತ್ರಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಸ್ವತಃ ರಸಿಕರು, ಮತ್ತು ಕಲಾಭಿಮಾನಿಗಳು. ಅವರ ಆಪ್ತವರ್ಗದಲ್ಲೇ ಹಲವಾರು ಚಿತ್ರಗಾರರಿದ್ದರು.

೧೮೬೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನಲ್ಲಿ ಜಗನ್ಮೋಹನ ಅರಮನೆಯನ್ನು ಕಟ್ಟಿಸಲು ಆರಂಭಿಸಿದರು. ಕಾಲಕ್ರಮೇಣ ಇದು ಸಂಸ್ಥಾನದ ಅತ್ಯುತ್ತಮ ಚಿತ್ರಶಾಲೆಯಾಗಿ ಬೆಳೆಯಿತು. ಇದರಲ್ಲಿ ೧೯ನೆಯ ಶತಮಾನಕ್ಕೆ ಸೇರಿದ ಅನೇಕ ಕಲಾಕೃತಿಗಳಿವೆ. ಇದರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಜಂಬೂಸವಾರಿ , ಹುಲಿಶಿಕಾರಿ, ವಸಂತೋತ್ಸವದ ದೃಶ್ಯ ಮೊದಲಾದುವು ಪ್ರಸಿದ್ಧವಾದ ಚಿತ್ರಗಳಾಗಿವೆ.

ನಾಲ್ವಡಿ ಕೃಷ್ಣರಾಜ ಒಡೆಯರೂ ಚಿತ್ರಕಲೆಯ ಪಕ್ಷಪಾತಿಗಳು. ಅವರ ಆಸ್ಥಾನದಲ್ಲಿ ಕೆ.ವೆಂಕಟಪ್ಪ, ಕೇಶವಯ್ಯ ಮುಂತಾದ ನಿಪುಣ ಕಲೆಗಾರರಿದ್ದರು. ಕೆ.ವೆಂಕಟಪ್ಪ ಅವರು ನೂರಾರು ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಇವುಗಳಲ್ಲಿ ನೀಲಗಿರಿಯ ದೃಶ್ಯಗಳು ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಸೇರಿವೆಯೆಂದು ಕಲಾ ವಿಮರ್ಶಕರು ಹೇಳಿದ್ದಾರೆ.

ಆಧುನಿಕ ಕಾಲದ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧ ಚಿತ್ರ ಕಲಾವಿದರಿದ್ದಾರೆ. ಇವರಲ್ಲಿ ಹಲವರು ನಾಡಿನ ಗೌರವ ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಚಿತ್ರಕಲಾಪರಿಷತ್ ಎಂಬ ಸಂಸ್ಥೆಯು ಹೊಸ ತಲೆಮಾರಿನ ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಿದೆ.

ಕೆಳಗೆ ನೀಡಿರುವ ಭಾಗವನ್ನು ಓದಿ, ಕೊನೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ಕಿನ್ನಾಳ ಕಲೆ

ಕಿನ್ನಾಳ ಎಂಬುದು ಒಂದು ಗ್ರಾಮದ ಹೆಸರು. ಅದು ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲ್ಲೆಯಲ್ಲಿದೆ. ಕಿನ್ನಾಳದ ಇತಿಹಾಸ ವಿಜಯನಗರ ಅರಸರ ಕಾಲದಷ್ಟು ಹಿಂದಿನದು. ಕಿನ್ನಾಳ ಮೊದಲು ವಿಜಯನಗರ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಅನಂತರ ಕೊಪ್ಪಳದ ನವಾಬರ ಆಡಳಿತ ಪರಿಧಿಗೆ ಬಂದಿತು. ಹೀಗಾಗಿ ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಅಲ್ಲಿನ ನಿತ್ಯ ಜೀವನದಲ್ಲಿ ಕಾಣಬಹುದು.

ಕಿನ್ನಾಳವು ತನ್ನದೇ ಆದ ಕಲೆಗೆ ಹೆಸರಾಗಿದೆ. ಆ ಕಲೆಯನ್ನು ಕಿನ್ನಾಳ ಕಲೆ ಎಂದು ಗುರುತಿಸಲಾಗಿದೆ. ಈ ಕಲೆಯು ದಖನಿ ಸುಲ್ತಾನರ ಮಿನಿಯೇಚರ್ ಶೈಲಿಯ ಅಂಶಗಳನ್ನು ಒಳಗೊಂಡಿದೆ. ಕಿನ್ನಾಳದಲ್ಲಿ ಅನೇಕ ಚಿತ್ರಗಾರರ ಕುಟುಂಬಗಳಿವೆ. ಚಿತ್ರಕಲೆ ಅವರ ಕುಲಕಸುಬೂ ಹೌದು. ಇವರು ’ಚಿತ್ರಗಾರ’ ಕುಟುಂಬದವರೆಂದೇ ಖ್ಯಾತರಾಗಿದ್ದಾರೆ. ಕಲಾತ್ಮಕ ಕಾರ್ಯಗಳ ನಿರ್ವಹಣೆ, ಚಿತ್ರರಚನೆ ಅವರ ಬದುಕಿನ ಆಧಾರವಾಗಿ, ಭಾಗವಾಗಿ ಇಂದಿಗೂ ಉಳಿದು ಬಂದಿದೆ.  ಇಂದಿನ ಚಿತ್ರಗಾರರು ಪರಂಪರೆಯ ಚಿತ್ರಗಳೊಂದಿಗೆ ಹಲವು ಹೊಸರೂಪಗಳನ್ನು ವಿನ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ. 

ಇವತ್ತು ಕಿನ್ನಾಳ ಕಲಾವಿದರು ದೇವಸ್ಥಾನಕ್ಕೆ ಬೇಕಾಗುವ ಉತ್ಸವ ಮೂರ್ತಿಗಳು, ಅವುಗಳ ವಾಹನಗಳು, ಗ್ರಾಮದೇವತೆಯ ಮರದ ಮೂರ್ತಿಗಳಿಗೆ ಬಣ್ಣ ಹಾಕುವುದು, ರಥಗಳ ಅಲಂಕಾರಿಕ ಬೊಂಬೆಗಳು, ಕಿನ್ನಾಳ ಗೌರಿಯೆಂದೇ ಪ್ರಸಿದ್ಧವಾಗಿರುವ ಕಟ್ಟಿಗೆಯ ’ಗೌರಿ’ ವಿಗ್ರಹ, ತೊಟ್ಟಿಲು, ಕಲಾತ್ಮಕ ಮಣೆಗಳು ಮೊದಲಾದುವುಗಳನ್ನು ಮಾಡುತ್ತಾರೆ. ದೇವಸ್ಥಾನದ ಗೋಡೆಗಳ ಮೇಲೆ ಪುರಾಣಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬರೆಯುತ್ತಾರೆ. ೧೯೬೨ ರಲ್ಲಿ ದಿವಂಗತ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಿನ್ನಾಳಕ್ಕೆ ಭೇಟಿ ನೀಡಿ, ಕಿನ್ನಾಳ ಕಲೆಗೆ ರಾಷ್ಟ್ರೀಯ ಮನ್ನಣೆ ತಂದು ಕೊಡಲು ಪ್ರಯತ್ನಿಸಿದ್ದರು.

ಉತ್ತರ ಬರೆಯಿರಿ:

1. ಕಿನ್ನಾಳ ಎಲ್ಲಿದೆ?
2. ಕಿನ್ನಾಳದ ಇತಿಹಾಸ ಎಷ್ಟು ಹಳೆಯದು?
3. ಕಿನ್ನಾಳವು ಯಾವುದಕ್ಕೆ ಪ್ರಸಿದ್ಧವಾಗಿದೆ?
4. ಕಿನ್ನಾಳ ಕಲೆಯು ಯಶಾವ ಅಂಶಗಳನ್ನು ಒಳಗೊಂಡಿದೆ?
5. ಕಿನ್ನಾಳಕ್ಕೆ ಭೇಟಿ ನೀಡಿದ ಪ್ರಸಿದ್ಧ ವ್ಯಕ್ತಿ ಯಾರು?
6. ಕಿನ್ನಾಳ ಕಲಾವಿದರು ಏನೇನು ಮಾಡುತ್ತಾರೆ?
7. ಗೂಗಲ್ ನಲ್ಲಿ ಕಿನ್ನಾಳ ಕಲೆಯ ಬಗ್ಗೆ ಸಿಗುವ ಮಾಹಿತಿಗಳನ್ನು ಸಂಗ್ರಹಿಸಿರಿ.
8. ಕರ್ನಾಟಕದ ಯಾವುದಾದರೂ ಒಬ್ಬರು ಪ್ರಸಿದ್ಧ ಚಿತ್ರ ಕಲಾವಿದರ ಬಗ್ಗೆ ಪ್ರಬಂಧ ಬರೆಯಿರಿ.

Send your completed homework by email to klcjnu@gmail.com